ಲೈಂಗಿಕ ಆಸೆಗಳನ್ನು ಸಂಗಾತಿ ಬಳಿಯಲ್ಲದೇ ಇನ್ಯಾರ ಮುಂದೆ ಹೇಳಿಕೊಳ್ಳಬೇಕು? ಕೋರ್ಟ್ ಪ್ರಶ್ನೆ

By Mahmad Rafik  |  First Published Oct 13, 2024, 1:21 PM IST

ಲೈಂಗಿಕ ಕಾಮನೆಗಳನ್ನು ಪತ್ನಿ ಪತಿಯ ಮುಂದೆ, ಪತಿ ಪತ್ನಿಯ ಮುಂದೆ ಅಲ್ಲದೇ ಇನ್ಯಾರ ಬಳಿ ಹೇಳಿಕೊಳ್ಳಬೇಕು ಎಂದು ಪ್ರಶ್ನೆ ಮಾಡಿರುವ ನ್ಯಾಯಾಲಯ ವರದಕ್ಷಿಣೆ ಆರೋಪದ ಅರ್ಜಿಯನ್ನು ರದ್ದುಗೊಳಿಸಿದೆ.


ಪ್ರಯಾಗರಾಜ್: ಲೈಂಗಿಕ ಬಯಕೆಗಳನ್ನು ಈಡೇರಿಸಿಕೊಳ್ಳಲು ಸಂಗಾತಿ ಬಳಿ ಹೋಗದೇ ಇನ್ನೆಲ್ಲಿ ಹೋಗಬೇಕು ಎಂದು ಅಲಹಬಾದ್ ಹೈಕೋರ್ಟ್ ಪ್ರಶ್ನಿಸಿದೆ. ಈ ಪ್ರಶ್ನೆ ಮೂಲಕ ಪುರುಷನ ಹಾಗೂ ಇನ್ನಿಬ್ಬರ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ರದ್ದುಗೊಳಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ. ಈ ಪ್ರಕರಣದ ವಿಚಾರಣೆ ನಡೆಸುವ ಸಂದರ್ಭದಲ್ಲಿ ಅಲಹಬಾದ್ ಕೋರ್ಟ್ ಈ ಪ್ರಶ್ನೆಯನ್ನು ಮಾಡಿದೆ. 

ಪ್ರಾಂಜಲ್ ಶುಕ್ಲಾ ಎಂಬವರ ವಿರುದ್ಧ ವರದಕ್ಷಿಣೆ ಕಿರುಕುಳದ ಆರೋಪದಡಿಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಶುಕ್ಲಾ ಜೊತೆಗೆ ಇನ್ನಿಬ್ಬರ ಹೆಸರು ಸಹ ಆರೋಪಿಗಳ ಪಟ್ಟಿಯಲ್ಲಿತ್ತು. ವರದಕ್ಷಿಣೆ ತರುವಂತೆ ಕಿರುಕುಳ ನೀಡಿ ನಿಂದನೆ ಮಾಡುತ್ತಾರೆ. ನೀಲಿಚಿತ್ರ ವೀಕ್ಷಿಸುವಂತೆ ಒತ್ತಾಯಿಸಿ ಅಸಹಜ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುವಂತೆ ಒತ್ತಾಯಿಸುತ್ತಾರೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿತ್ತು. ಆದರೆ ಆರೋಪಗಳಿಗೆ ಯಾವುದೇ ಅಗತ್ಯ ಆಧಾರಗಳು ಇಲ್ಲದ ಕಾರಣ ನ್ಯಾಯಾಲಯ ಪ್ರಕರಣವನ್ನ ರದ್ದಗೊಳಿಸಿದೆ. 

Tap to resize

Latest Videos

ಕಾಂಡೋಮ್ ಬಳಕೆದಾರರಿಗೆ ಶಾಕಿಂಗ್ ನ್ಯೂಸ್: ಬಳಕೆಯ ಉದ್ದೇಶವೇ ಈಡೇರಲ್ಲ, ಈ 6 ವಿಷಯ ನಿಮಗೆ ಗೊತ್ತಿರಲಿ!

ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅನೀಶ್ ಕುಮಾರ್ ಗುಪ್ತಾ, ಇಲ್ಲಿಯ ಎಲ್ಲಾ ಪ್ರಾಥಮಿಕ ಆರೋಪಗಳು ಪತಿ ಮತ್ತು ಪತ್ನಿ ನಡುವಿನ ಲೈಂಗಿಕ ಸಂಬಂಧದ ಸುತ್ತವೇ ಇದೆ. ಕೆಲವು ಲೈಂಗಿಕ ಚುಟವಟಿಕೆಗಳಲ್ಲಿ ಪತ್ನಿ ಸಮ್ಮತಿ ನೀಡದಿರೋದು ದಂಪತಿ ನಡುವಿನ ವೈಮನಸ್ಸಿಗೆ ಕಾರಣವಾದಂತೆ ಕಾಣಿಸುತ್ತಿದೆ. ಎಫ್‌ಐಆರ್‌ ನಲ್ಲ ದಾಖಲಾಗಿರುವ ಆರೋಪಗಳು  ವರದಕ್ಷಿಣೆ ಕಿರುಕುಳಕ್ಕೆ ಸಂಬಂಧಿಸಿದ್ದಲ್ಲ ಎಂದು ನ್ಯಾಯಾಲಯ ಹೇಳಿದೆ. 

ದಂಪತಿ ನಡುವೆ ಲೈಂಗಿಕತೆ ವಿಚಾರದಲ್ಲಿ ಹೊಂದಾಣಿಕೆ ಇಲ್ಲದಿರುವ ಕಾರಣ ವರದಕ್ಷಿಣೆ ಕಿರುಕುಳದ ಸುಳ್ಳು ಆರೋಪ ಮಾಡಿರುವಂತೆ ಕಾಣುತ್ತಿದೆ. ಈ ಆರೋಪಗಳಿಗೆ ಆಧಾರವಿಲ್ಲ. ನಾಗರೀಕ ಸಮಾಜದಲ್ಲಿ ಪತಿಯು ತನ್ನ ಪತ್ನಿ ಬಳಿಯಲ್ಲದೇ, ಪತ್ನಿಯು ಪತಿ ಬಳಿ ಅಲ್ಲದೇ ಇನ್ಯಾರ ಮುಂದೆ ಲೈಂಗಿಕ ಬಯಕೆ ಈಡೇರಿಸುವಂತೆ ಕೇಳಬೇಕು ಎಂದು ನ್ಯಾಯಾಲಯ ಪ್ರಶ್ನಿಸಿದೆ.

ದೀರ್ಘಕಾಲದವರೆಗೆ ಮಹಿಳೆಯರು ಕನ್ಯೆಯಾಗಿ ಉಳಿದ್ರೆ ಈ ಸಮಸ್ಯೆಗೆ ಒಳಗಾಗುತ್ತಾರೆ!

click me!