ಜೈಪುರದ ಅಜ್ಮೀರ್ ರಸ್ತೆಯಲ್ಲಿ ಚಾಲಕ ರಹಿತ ಕಾರಿಗೆ ಬೆಂಕಿ ಹೊತ್ತಿಕೊಂಡಿದೆ. ಇದರ ಬೆನ್ನಲ್ಲಿಯೇ ಕಾರ್ ಚಲಿಸಲು ಆರಂಭಿಸಿದಾಗ ರಸ್ತೆಯಲ್ಲಿದ್ದ ಬೈಕ್ ಸವಾರರು ದಿಕ್ಕಾಪಾಲಾಗಿ ಓಡಿಹೋಗಿದ್ದಾರೆ. ಪ್ರಕರಣದಲ್ಲಿ ಯಾವುದೇ ಗಾಯದ ಬಗ್ಗೆ ವರದಿಯಾಗಿಲ್ಲ.
ನವದೆಹಲಿ (ಅ.13): ಜೈಪುರದಲ್ಲಿ ಶನಿವಾರ ಅಜ್ಮೀರ್ ರಸ್ತೆಯಲ್ಲಿ ಸುದರ್ಶನಪುರ ಪುಲಿಯಾ ಕಡೆಗೆ ಎಲಿವೇಟೆಡ್ ರಸ್ತೆಯಲ್ಲಿ ವೇಗವಾಗಿ ಚಲಿಸುತ್ತಿದ್ದಾಗ ಚಾಲಕರಹಿತ ಕಾರೊಂದು ಬೆಂಕಿಗೆ ಆಹುತಿಯಾಗಿದೆ. ನಾಟಕೀಯ ಘಟನೆಯಲ್ಲಿ ನಿಂತಿದ್ದ ಮೋಟಾರ್‌ಸೈಕಲ್‌ಗೆ ಕಾರ್ ಢಿಕ್ಕಿ ಹೊಡೆದು ನಿಂತಿದ್ದು, ಬಳಿಕ ಇಡೀ ಕಾರ್‌ಗೆ ಬೆಂಕಿ ತಗುಲಿದೆ. ಕಾರು ಚಲಿಸಲು ಆರಂಭ ಮಾಡಿದಾಗ ರಸ್ತೆಯಲ್ಲಿದ್ದ ಸವಾರರು ದಿಕ್ಕಾಪಾಲಾಗಿ ಓಡಿಹೋಗಿದ್ದಾರೆ. ಸುಡುತ್ತಿದ್ದ ಕಾರು ಕೊನೆಗೆ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದ್ದರಿಂದ ಈ ಅಪಾಯ ಮುಕ್ತಾಯ ಕಂಡಿದೆ. ಆದರೆ ಅದೃಷ್ಟವಶಾತ್, ಭಾರಿ ಟ್ರಾಫಿಕ್ ಹೊರತಾಗಿಯೂ ಯಾವುದೇ ಗಾಯಗಳು ವರದಿಯಾಗಿಲ್ಲ.
ಗಾಬರಿಯಿಂದ ಓಡಿಹೋದ ಬೈಕರ್ಸ್: ಮುಂದಾಗಬಹುದಾದ ಅಪಾಯವನ್ನು ಅಂದಾಜು ಮಾಡಿದ ಮೋಟಾರ್‌ಸೈಕ್ಲಿಸ್ಟ್‌ಹಾಗೂ ಬೈಕರ್‌ಗಳು ತಮ್ಮ ವಾಹನವನ್ನು ಅಲ್ಲಿಯೇ ಬಿಟ್ಟು ದಿಕ್ಕಾಪಾಲಾಗಿ ಓಡುತ್ತಿರುವುದು ವೈರಲ್ ಆಗಿರುವ ವಿಡಿಯೋದಲ್ಲಿ ದಾಖಲಾಗಿದೆ. ಹೆಚ್ಚಿನವರು ತಮ್ಮ ಬೈಕ್‌ಗಳನ್ನು ರಸ್ತೆಯಲ್ಲಿಯೇ ಬಿಟ್ಟು ಅಪಾಯದಿಂದ ಪಾರಾಗಲು ಓಡಿಹೋಗಿದ್ದಾರೆ.
ಮಾನಸ ಸರೋವರದ ಜರ್ನಲಿಸ್ಟ್ ಕಾಲೋನಿಯಲ್ಲಿರುವ ದಿವ್ಯ ದರ್ಶನ್ ಅಪಾರ್ಟ್‌ಮೆಂಟ್‌ನ ನಿವಾಸಿ ಜಿತೇಂದ್ರ ಜಂಗಿದ್ ಕಾರನ್ನು ಓಡಿಸುತ್ತಿದ್ದರು. ಜಿತೇಂದ್ರ ಅವರು ಎಲಿವೇಟೆಡ್ ರಸ್ತೆಯಲ್ಲಿ ಪ್ರಯಾಣ ಮಾಡುತ್ತಿದ್ದಾಗ ಕಾರ್‌ನ ಎಸಿ ಸ್ಥಳದಿಂದ ಹೊಗೆ ಬರುತ್ತಿರುವುದನ್ನು ಗಮನಿಸಿದರು. ಗಾಬರಿಗೊಂಡ ಅವರು ತಕ್ಷಣ ತನ್ನ ಸಹೋದರನ ಸಲಹೆ ಕೇಳಿದ್ದಾರೆ. ತಕ್ಷಣವೇ ಅವರು ಬಾನೆಟ್ ಅಡಿಯಲ್ಲಿ ಪರಿಶೀಲಿಸುವಂತೆ ತಿಳಿಸಿದ್ದಾರೆ. ಕಾರ್‌ನಿಂದ ಕೆಳಗೆ ಇಳಿದು ಬಾನೆಟ್ ಎತ್ತಿದಾಗ ಜಿತೇಂದ್ರ ಎಂಜಿನ್ ಹೊತ್ತಿ ಉರಿಯುತ್ತಿರುವುದನ್ನು ಕಂಡಿದ್ದಾರೆ.
ಪ್ರೀತಿ, ಸುಳ್ಳು & ಕೊಲೆ; ಅಮಾಯಕ ಭಿಕ್ಷುಕನ ಸಾವಿಗೆ ಕಾರಣವಾಯ್ತು ಯುವತಿಯ ಪರಸಂಗದ ಪ್ರೇಮದಾಟ
ಆ ಬಳಿಕ ತಕ್ಷಣವೇ ಬೆಂಕಿ ವ್ಯಾಪಿಸಿದೆ. ಕಾರ್‌ನ ಹ್ಯಾಂಡ್‌ಬ್ರೇಕ್‌ಅನ್ನು ಕೂಡ ಇದು ಡ್ಯಾಮೇಜ್ ಮಾಡಿತ್ತು. ಇದರಿಂದಾಗಿ, ಇಳಿಜಾರಿನ ಎಲಿವೇಟೆಡ್ ರೋಡ್‌ನಲ್ಲಿ ಡ್ರೈವರ್ ಇಲ್ಲದೆ ವಾಹನ ಚಲಿಸಿದೆ. ರಸ್ತೆಯ ಬಳಿಕ ವಿಭಜಕಕ್ಕೆ ಢಿಕ್ಕಿ ಹೊಡೆದು, ಪಾರ್ಕ್ ಆಗಿರುವ ಬೈಕ್‌ಗೆ ಬಡಿದ ಬಳಿಕ ಕಾರ್ ನಿಂತಿದೆ. ಕ್ಷಿಪ್ರವಾಗಿ ಬೆಂಕಿ ಹಿಡಿದ ಕಾರಣ, ಕಾರ್‌ನ ಅಸಮರ್ಪಕ ಕಾರ್ಯಗಳಿಗೆ ಸಂಬಂಧಿಸಿದ ಸಂಭಾವ್ಯ ಅಪಾಯಗಳನ್ನು ಎತ್ತಿ ತೋರಿಸಿದೆ.
ಅಗ್ನಿಶಾಮಕದಳದ ಅಧಿಕಾರಿಗಳು ಬಂದು ಬೆಂಕಿಯನ್ನು ಆರಿಸುವ ಹೊತ್ತಿಗಾಗಲೇ ಇಡೀ ಕಾರು ಸಂಪೂರ್ಣವಾಗಿ ಕರಕಲಾಗಿತ್ತು. ಹಾಗೂ ಸಂಪೂರ್ಣವಾಗಿ ನಷ್ಟವಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ತಾಜ್‌ಮಹಲ್ ಎದುರು ಮುಮ್ತಾಜ್ ಆದ ವರ್ಷಾ ಕಾವೇರಿ, ಷಹಜಹಾನ್ ಸಿಕ್ಕಿರೋ ಸೂಚನೆ ನೀಡಿದ್ರಾ?