ದಕ್ಷಿಣ ಭಾರತದ 17ರ ವಿದ್ಯಾರ್ಥಿಗೆ ಸಿಕ್ಕಿತು ಬರೋಬ್ಬರಿ 3.55 ಕೋಟಿ ರೂ ಐವಿ ಲೀಗ್ ಸ್ಕಾಲರ್‌ಶಿಪ್

Published : Aug 09, 2026, 04:42 PM IST
Pranav Ilango Earns Rs 3.55 Crore Scholarship

ಸಾರಾಂಶ

17ರ ವಿದ್ಯಾರ್ಥಿಯ ಮುಂದಿನ ಸಂಪೂರ್ಣ ವಿದ್ಯಾಭ್ಯಾಸದ ಖರ್ಚು ವೆಚ್ಚಕ್ಕೆ ಬರೋಬ್ಬರಿ 3.55 ಕೋಟಿ ರೂ ಸ್ಕಾಲರ್‌ಶಿಪ್ ಸಿಕ್ಕಿದೆ. ಅಮೆರಿಕದ ಪ್ರತಿಷ್ಠಿತ ಐವಿ ಲೀಗ್ ಶಿಕ್ಷಣ ಸಂಸ್ಥೆಯ ಸ್ಕಾಲರ್‌ಶಿಪ್ ವಿದ್ಯಾರ್ಥಿಯ ಭವಿಷ್ಯ ಉಜ್ವಲವಾಗಿಸಿದೆ.

ಚೆನ್ನೈ (ಆ.09) ದೇಶ ವಿದೇಶಗಳಲ್ಲಿ ವಿದ್ಯಾರ್ಥಿಗಳಿಗೆ ಹಲವು ಸ್ಕಾಲರ್‌ಶಿಫ್ ಲಭ್ಯವಿದೆ. ತಮ್ಮ ಪ್ರತಿಭೆ, ಸಾಮರ್ಥ್ಯ ಸಾಬೀತು ಪಡಿಸಿದರೆ ಮುಂದಿನ ವಿದ್ಯಾಭ್ಯಾಸ ಸಂಪೂರ್ಣ ಉಚಿತವಾಗಲಿದೆ. ಇದೀಗ ತಮಿಳುನಾಡಿನ 17 ವರ್ಷದ ವಿದ್ಯಾರ್ಥಿ ಪ್ರಣವ್ ಇಳಂಗೋ ಭರ್ಜರಿ ಜಾಕ್‌ಪಾಟ್ ಪಡೆದಿದ್ದಾರೆ. ಅಮೆರಿಕದ ಪ್ರತಿಷ್ಠಿತ ಐವಿ ಲೀಗ್ ಶಿಕ್ಷಣ ಸಂಸ್ಥೆಯ ಬ್ರೌನ್ ವಿಶ್ವವಿದ್ಯಾಲಯದಿಂದ 3.55 ಕೋಟಿ ರೂಪಾಯಿ ಸ್ಕಾಲರ್‌‌ಶಿಪ್ ಪಡೆಯುವ ಮೂಲಕ ಹೊಸ ದಾಖಲೆ ಬರೆದಿದ್ದಾನೆ. ಉನ್ನತ ಶಿಕ್ಷಣ ಪಡೆಯಲು ಪ್ರಣವ್ ಇಳಂಗೋಗೆ 3.55 ಕೋಟಿ ರೂಪಾಯಿ ಸಂಪೂರ್ಣ ವೆಚ್ಚದ ಸ್ಕಾಲರ್‌ಶಿಪ್ ನೀಡಿದೆ.

ಎಲ್ಲಾ ಖರ್ಚು ವೆಚ್ಚ ಭರಿಸಲಿದೆ ಸ್ಕಾಲರ್‌ಶಿಪ್

ಪ್ರಣವ್ ಇಳಂಗೋ ಒಟ್ಟು 3.55 ಕೋಟಿ ರೂಪಾಯಿ ಸ್ಕಾಲರ್‌ಶಿಪ್ ಪಡೆದಿದ್ದಾರೆ. ಬ್ರೌನ್ ವಿಶ್ವವಿದ್ಯಾಲಯದಲ್ಲಿ ನಾಲ್ಕು ವರ್ಷಗಳ ಪದವಿ, ವಸತಿ, ಜೀವನ ಸೇರಿದಂತೆ ಎಲ್ಲಾ ವೆಚ್ಚಗಳನ್ನು ಈ ಸ್ಕಾಲರ್‌ಶಿಪ್ ಭರಿಸಲಿದೆ. ತಮಿಳುನಾಡಿನ ಈರೋಡಿನಲ್ಲಿರುವ ಸಿಎಸ್ ಅಕಾಡೆಮಿ ವಿದ್ಯಾರ್ಥಿಯಾಗಿರುವ ಪ್ರಣವ್ ಇದೀಗ ಅಮೆರಿಕಲ್ಲಿ ಶಿಕ್ಷಣ ಮುಂದುವರಿಸಲಿದ್ದಾರೆ. ಕಳೆದ 5 ವರ್ಷಗಳಿಂದ ಸತತ ತರಬೇತಿ ಮಾರ್ಗದರ್ಶನ ಪಡೆದಿರುವ ಪ್ರಣವ್ ಇದೀಗ ಅಸಾಧ್ಯ ಸ್ಕಾಲರ್‌ಶಿಪ್ ಪಡೆದುಯವಲ್ಲಿ ಯಶಸ್ವಿಯಾಗಿದ್ದಾರೆ.

17ರ ಪೋರ ಪ್ರಣವ್ ಸತತ ಅಧ್ಯಯನ ಹಾಗೂ ಸಂಶೋಧನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಐಜಿಸಿಎಸ್ಇ (IGCSE) ಮಾಥ್ಸ್ ವಿಶಷಯದಲ್ಲಿ ವರ್ಲ್ ಟಾಪರ್ ಹಾಗೂ ಕೇಂಬ್ರಿಡ್ಡ್ ಉತ್ತಮ ಕಲಿಕಾ ಪ್ರಶಸ್ತಿ ಪಡೆದಿದ್ದಾರೆ. ಗಣಿತ ಹಾಗೂ ತಂತ್ರಜ್ಞಾನದಲ್ಲಿ ಆಸಕ್ತಿ ಹೊಂದಿರುವ ಪ್ರಣವ್ ಡೇಟಾ ಸೈನ್ಸ್ ಹಾಗೂ ಆರ್ಟಿಫೀಶಿಯಲ್ ಇಂಟಲಿಜೆನ್ಸ್ ವಿಷಯದಲ್ಲಿ ಸಂಶೋಧನೆ ನಡೆಸುತ್ತಿದ್ದಾರೆ.

ಅಮೆರಿಕದ ಬ್ರೌನ್ ವಿಶ್ವವಿದ್ಯಾಲಯದಲ್ಲಿ ಪ್ರಣವ್ ಪಬ್ಲಿಕ್ ಹೆಲ್ತ್ ಹಾಗೂ ಅಪ್ಲೈಡ್ ಮ್ಯಾಥಮ್ಯಾಟಿಕ್ಸ್ ವಿಷಯದಲ್ಲಿ ಪದವಿ ಪಡೆಯಲಿದ್ದಾರೆ. ಗಣಿತದ ಅಂಕಿ ಅಂಶ, ಡೇಟಾ ಬಳಸಿಕೊಂಡು ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಸುಧಾರಣೆ ತರುವುದು, ಸಮಸ್ಯೆಗಳಿಗೆ ಹರಿಹಾರ ಕಂಡುಕೊಳ್ಳುವ ಕುರಿತು ಅಧ್ಯಯನ ನಡೆಸಲಿದ್ದಾರೆ.

ಬ್ರೌನ್ ವಿಶ್ವವಿದ್ಯಾಲಯದ 3.55 ಕೋಟಿ ರೂಪಾಯಿ ಸ್ಕಾಲರ್‌ಶಿಪ್‌ಗೆ ಪಾತ್ರರಾಗಿರುವ ಪ್ರಣವ್ ಇಳಂಗೋ ಸಂತಸ ವ್ಯಕ್ತಪಡಿಸಿದ್ದಾರೆ. ಇದು ಅತ್ಯುತ್ತಮ ಹಾಗೂ ಅತ್ಯಂತ ಅಮೂಲ್ಯ ಅವಕಾಶವಾಗಿದೆ. ನನ್ನ ಜೀವನ, ಕರಿಯರ್ ಎಲ್ಲವನ್ನೂ ಬದಲಾಯಿಸುವ ಅವಕಾಶ ಎಂದು ನಾನು ಭಾವಿಸಿದ್ದೇನೆ. ಅತ್ಯುತ್ತಮ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆದು ಭಾರತದಲ್ಲಿ ಸೇವೆ ನೀಡಬೇಕು. ಇದಕ್ಕಾಗಿ ನಾನು ಎಲ್ಲಾ ಶ್ರಮವಹಿಸುತ್ತೇನೆ ಎಂದು ಪ್ರಣವ್ ಇಳಂಗೋ ಹೇಳಿದ್ದಾರೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Student Protest: ಜಾರ್ಖಂಡ್‌ನಲ್ಲಿಯೂ ಗೆದ್ದ ಸ್ಟೂಡೆಂಟ್‌ ಪ್ರೊಟೆಸ್ಟ್‌; ಸರ್ಕಾರದ ತಲೆಬಾಗಿಸಿದ ಬೇಡಿಕೆಗಳು ಯಾವುವು? ಇದೆಯಾ ಕರ್ನಾಟಕಕ್ಕೂ ಈ ಮಾದರಿ ಅಗತ್ಯತೆ?
ರೆಡ್ ಕಾರ್ಪೆಟ್ ಮೇಲೆ ನಟಿಗೆ ಶಾಕ್, ಸೆಲ್ಫಿ ನೆಪದಲ್ಲಿ ಬಲವಂತವಾಗಿ ಕಿಸ್ ಕೊಟ್ಟ ಮಹಿಳಾ ಅಭಿಮಾನಿ