ವೇಟಿಂಗ್ ಟಿಕೆಟ್‌ನಲ್ಲಿ ಪ್ರಯಾಣಿಸುವ ನಿಯಮಗಳು ಮತ್ತಷ್ಟು ಸ್ಟ್ರಿಕ್ಟ್- ಪ್ರಯಾಣಿಕರಿಗೆ ಶಾಕ್ ಕೊಟ್ಟ ಭಾರತೀಯ ರೈಲ್ವೆ

By Mahmad Rafik  |  First Published Sep 1, 2024, 12:22 PM IST

ವೇಟಿಂಗ್ ಟಿಕೆಟ್‌ನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಭಾರತೀಯ ರೈಲ್ವೆ ನಿಯಮಗಳನ್ನು ಬಿಗಿಗೊಳಿಸಲಿದೆ. ಸ್ಲೀಪರ್ ಕೋಚ್‌ಗಳಲ್ಲಿ ಪ್ರಯಾಣ ನಿರ್ಬಂಧ, ದಂಡ ಮತ್ತು ಇತರ ಕ್ರಮಗಳ ಬಗ್ಗೆ ತಿಳಿಯಿರಿ. ಈ ಬದಲಾವಣೆಗಳು ನಿಮ್ಮ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದನ್ನು ತಿಳಿಯಲು ಓದಿ!


ನವದೆಹಲಿ: ಭಾರತೀಯ ರೈಲ್ವೆ ಪ್ರಯಾಣಿಕರ ಹಿತಕ್ಕಾಗಿ ತನ್ನ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಮುಂದಾಗಿದೆ ಎಂದು ವರದಿಯಾಗಿದೆ. ಆದ್ರೆ ಈ ನಿಯಮದಿಂದ ವೇಟಿಂಗ್ ಟಿಕೆಟ್ ಹಿಡಿದುಕೊಂಡು ಪ್ರಯಾಣಿಸುವ ಪ್ರಯಾಣಿಕರಿಗೆ ತೊಂದರೆಯಾಗಲಿದೆ. ಆದ್ರೆ ನಿಯಮಗಳನ್ನು ಪಾಲನೆ ಮಾಡೋದು ಪ್ರಯಾಣಿಕರ ಕರ್ತವ್ಯವಾಗಿರುತ್ತದೆ. ವೇಟಿಂಗ್ ಟಿಕೆಟ್ ಹಿಡಿದು ಸ್ಲೀಪರ್ ಕೋಚ್‌ನಲ್ಲಿ ಪ್ರಯಾಣಿಸುವ ಪ್ರಯಾಣಿಕರನ್ನು ನಿರ್ಬಂಧಿಸಲು ಭಾರತೀಯ ರೈಲ್ವೆ ಮುಂದಾಗಿದೆ. ಈ ನಿಯಮ ಹಿಂದಿನಿಂದಲೂ ಜಾರಿಯಲ್ಲಿದ್ದರೂ ಸಮಪರ್ಕವಾಗಿ  ಪಾಲನೆ ಆಗುತ್ತಿರಲಿಲ್ಲ. ಇನ್ಮುಂದೆ ವೇಟಿಂಗ್ ರೈಲ್ವೆ ಟಿಕೆಟ್ ತೋರಿಸಿ ಸ್ಲೀಪರ್ ಕೋಚ್‌ನಲ್ಲಿನ ಪ್ರಯಾಣಿಸಲು ಸಾಧ್ಯವಿಲ್ಲ.

ಕನ್ಫರ್ಮ್ ಟಿಕೆಟ್ ಪಡೆದು ಪ್ರಯಾಣಿಸುವ ಪ್ರಯಾಣಿಕರಿಗೆ ಉತ್ತಮ ಸೇವೆ ನೀಡುವ ಉದ್ದೇಶದಿಂದ ಈ ನಿಯಮಗಳನ್ನು ಬಿಗಿಗೊಳಿಸಲಾಗುತ್ತಿದೆ. ಆದ್ರೆ ಪ್ರತಿನಿತ್ಯ ವೇಟಿಂಗ್ ಟಿಕೆಟ್‌ನಲ್ಲಿ ಪ್ರಯಾಣಿಸುವ ಲಕ್ಷಾಂತರ ಪ್ರಯಾಣಿಕರಿಗೆ ತೊಂದರೆಯಾಗಲಿದೆ. ಆದ್ರೆ ನಿಯಮಗಳನ್ನು ಬಿಗಿಗೊಳಿಸಲಾಗ್ತಿರುವ ಬಗ್ಗೆ ಭಾರತೀಯ ರೈಲ್ವೆಯಿಂದ ಯಾವುದೇ  ಅಧಿಕೃತ ಹೇಳಿಕೆ ಬಂದಿಲ್ಲ. 

Tap to resize

Latest Videos

ಬೆಂಗಳೂರು ಏರ್‌ಪೋರ್ಟ್‌ಗೆ ದಿನಕ್ಕಿದೆ 6 ಟ್ರೇನ್‌, ಆದ್ರೆ ಪ್ರಯಾಣ ಮಾಡೋರು ಬರೀ 30 ಜನ!

ಈ ಮೊದಲು ನಿಮ್ಮ ಬಳಿ ಸ್ಲೀಪರ್ ಕೋಚ್ ವೇಟಿಂಗ್ ಟಿಕೆಟ್ ಇದ್ರೆ ಯಾವುದಾದರೂ ಸ್ಲೀಪರ್ ಬೋಗಿಯಲ್ಲಿ ಕುಳಿತು ಪ್ರಯಾಣಿಸಬಹುದಿತ್ತು. ಇದೇ ರೀತಿ ಎಸಿ ಕೋಚ್‌ಗಳಲ್ಲಿ ನಡೆಯುತ್ತಿತ್ತು. ಆದರೆ ಮುಂದಿನ ದಿನಗಳಲ್ಲಿ ಈ ರೀತಿಯಾಗಿ ಪ್ರಯಾಣಿಸಿದ್ರೆ ಟಿಟಿಇ ನಿಮಗೆ 440 ರೂಪಾಯಿಯವರೆಗೂ ದಂಡ ವಿಧಿಸಬಹುದು. ಮುಂದಿನ ನಿಲ್ದಾಣದಲ್ಲಿ ನಿಮ್ಮನ್ನು ರೈಲಿನಿಂದ ಇಳಿಸುವ ಅಧಿಕಾರವನ್ನು ಟಿಟಿಇ ಹೊಂದಿರುತ್ತಾರೆ. ಈ ನಿಯಮ ಬ್ರಿಟಿಷರ ಕಾಲದಿಂದಲೂ ಜಾರಿಯಲ್ಲಿದರೂ ಸಮರ್ಪಕವಾಗಿ ಜಾರಿಗೆ ಬಂದಿಲ್ಲ. 

ಒಂದು ವೇಳೆ ನೀವು ಆನ್‌ಲೈನ್‌ ನಲ್ಲಿ ಟಿಕೆಟ್ ಬುಕ್ ಮಾಡಿದ್ರೆ, ಪ್ರಯಾಣ ಮುಗಿಯವರೆಗೂ ವೇಟಿಂಗ್ ತೋರಿಸುತ್ತಿದ್ದರೆ ನಿಮ್ಮ ಖಾತೆಗೆ ಟಿಕೆಟ್ ಹಣ ರೀಫಂಡ್ ಆಗುತ್ತದೆ. ನೀವು ರೈಲ್ವೆ ನಿಲ್ದಾಣದ ಕೌಂಟರ್‌ನಲ್ಲಿ ಟಿಕೆಟ್ ಖರೀದಿಸಿದ್ರೆ ಪ್ರಯಾಣ ಆರಂಭದವರೆಗೂ ಕನ್ಫರ್ಮ್ ಆಗದಿದ್ರೆ ಪ್ರಯಾಣಿಸಬಾರದು. ಆದ್ರೆ ಕೆಲವರು ಇದೇ ಟಿಕೆಟ್ ತೋರಿಸಿ ಪ್ರಯಾಣಿಸುತ್ತಾರೆ. ವೇಟಿಂಗ್ ನಲ್ಲಿದ್ದರೆ ಕೌಂಟರ್‌ಗೆ ತೆರಳಿ ನಿಮ್ಮ ಟಿಕೆಟ್ ಕ್ಯಾನ್ಸಲ್ ಮಾಡಿ ಹಣ ಹಿಂಪಡೆಯಬಹುದಾಗಿದೆ.

ಒಮ್ಮೆ ಕೆಂಪು, ಮತ್ತೊಮ್ಮೆ ನೀಲಿ , ಹಸಿರು - ರೈಲುಗಳ ಬಣ್ಣದ ಹಿಂದಿನ ಅರ್ಥ ಏನು?

click me!