India Omicron Case: ಭಾರತದಲ್ಲಿ 4ನೇ ಓಮಿಕ್ರಾನ್ ಕೇಸ್ ಪತ್ತೆ, ಮುಂಬೈ ಅಲರ್ಟ್!

By Suvarna News  |  First Published Dec 4, 2021, 8:34 PM IST
  • ಕರ್ನಾಟಕ, ಗುಜರಾತ್ ಬಳಿಕ ಮಹಾರಾಷ್ಟ್ರದಲ್ಲಿ ಓಮಿಕ್ರಾನ್ ಕೇಸ್
  • ಸೌತ್ ಆಫ್ರಿಕಾದಿಂದ ಮುಂಬೈ ಬಂದ ವ್ಯಕ್ತಿಗೆ ಓಮಿಕ್ರಾನ್ 
  • ಮಹಾರಾಷ್ಟ್ರ ಅಲರ್ಟ್, ರೂಪಾಂತರಿ ಹರಡದಂತೆ ಕ್ರಮ
     

ಮುಂಬೈ(ಡಿ.04): ಭಾರತದಲ್ಲಿ ಓಮಿಕ್ರಾನ್(India Omicron case) ರೂಪಾಂತರಿ ವೈರಸ್ ಆಟ ಶುರುಮಾಡಿದೆ. ಎರಡು ಪ್ರಕರಣ ಪತ್ತೆಯಾಗಿ ಆತಂಕ ಹೆಚ್ಚಿಸಿದ ಓಮಿಕ್ರಾನ್ ಇದೀಗ ಪ್ರಕರಣಗಳ ಸಂಖ್ಯೆ ನಾಲ್ಕಕ್ಕೇರಿದೆ. ಕರ್ನಾಟಕ, ಗುಜರಾತ್ ಬಳಿಕ ಇದೀಗ ಮಹಾರಾಷ್ಟ್ರದ ಮುಂಬೈ(Mumbai) ನಗರದಲ್ಲಿ ಓಮಿಕ್ರಾನ್ ಕೇಸ್ ಪತ್ತೆಯಾಗಿದೆ. ಮಹಾರಾಷ್ಟ್ರದಲ್ಲಿ(Maharastra) ಪತ್ತೆಯಾದ ಮೊದಲ ಓಮಿಕ್ರಾನ್ ಕೇಸ್ ಆಗಿದೆ. ಒಟ್ಟಾರೆ ಭಾರತದಲ್ಲಿ ಖಚಿತಗೊಂಡಿರುವ ನಾಲ್ಕನೇ ಓಮಿಕ್ರಾನ್ ಕೇಸ್ ಇದಾಗಿದೆ.

ಭಾರತದಲ್ಲಿ ಓಮಿಕ್ರಾನ್ ಆತಂಕ ಹೆಚ್ಚಾಗಿದೆ. ಕೇಂದ್ರದ ಮಾರ್ಗೂಸೂಚಿ ನಡುವೆ ಒಂದೊಂದೆ ರಾಜ್ಯಗಳು ಮತ್ತಷ್ಟು ಕಠಿಣ ನಿಯಮ ಜಾರಿಗೊಳಿಸುತ್ತಿದೆ. ಕರ್ನಾಟಕದಲ್ಲಿ(Karnataka) ಮೊದಲೆರೆಡು ಕೇಸ್ ಪತ್ತೆಯಾಗಿತ್ತು. ಇದೀಗ ಗುಜರಾತ್(Gujarat) ಹಾಗೂ ಮಹಾರಾಷ್ಟ್ರದಲ್ಲಿ ಮತ್ತೆರಡು ಪ್ರಕರಣ ಪತ್ತೆಯಾಗಿದೆ. ಇದರಿಂದ ಆತಂಕ ಹೆಚ್ಚಾಗಿದೆ. 

Latest Videos

undefined

 

India Omicron case:ಜಿಂಬಾಬ್ವೆಯಿಂದ ಮರಳಿದ ವ್ಯಕ್ತಿಗೆ ಓಮಿಕ್ರಾನ್ ದೃಢ , ಭಾರತದಲ್ಲಿ 3ನೇ ಪ್ರಕರಣ ಪತ್ತೆ!

ಸೌತ್ಆಫ್ರಿಕಾದಿಂದ(South Africa) ಮುಂಬೈಗೆ ಆಗಮಿಸಿದ 33 ವರ್ಷದ ವ್ಯಕ್ತಿಗೆ ಓಮಿಕ್ರಾನ್ ರೂಪಾಂತರಿ ವೈರಸ್ ತಗುಲಿರುವುದು ದೃಢಪಟ್ಟಿದೆ. ಸೌತ್ ಆಫ್ರಿಕಾದ ಕೇಪ್‌ಟೌನ್‌ನಿಂದ ದುಬೈ ಮಾರ್ಗವಾಗಿ ದೆಹಲಿಗೆ ಬಂದಳಿದ 33ರ ಹರೆಯದ ವ್ಯಕ್ತಿ, ದೆಹಲಿಯಿಂದ ಮುಂಬೈ ತಲುಪಿದ್ದಾರೆ. ಓಮಿಕ್ರಾನ್ ಪತ್ತೆಯಾದ ಹಿನ್ನಲೆಯಲ್ಲಿ ವ್ಯಕ್ತಿ ಮನೆ ಹಾಗೂ ಸುತ್ತಮುತ್ತ ಕಂಟೈನ್ಮೆಂಟ್ ಜೋನ್ ನಿರ್ಬಂಧ ವಿಧಿಸಲಾಗಿದೆ.

ಓಮಿಕ್ರಾನ್ ರೂಪಾಂತರಿ ವೈರಸ್ ಡೃಢಪಟ್ಟಿರುವ ವ್ಯಕ್ತಿ ಇದುವರೆಗೂ ಲಸಿಕೆ ಪಡೆದಿಲ್ಲ. ಹೀಗಾಗಿ ಆತಂಕ ಮತ್ತಷ್ಟು ಹೆಚ್ಚಾಗಿದೆ. ಈ ವ್ಯಕ್ತಿಯ ಕುಟುಂಬ ಸದಸ್ಯರು, ಮೊದಲ ಹಾಗೂ ಎರಡನೇ ಸಂಪರ್ಕಿತರನ್ನು ಪರೀಕ್ಷೆ ಮಾಡಲಾಗಿದೆ. ಇದರಲ್ಲಿ 12 ಹೈ ರಿಸ್ಕ್ ಹಾಗೂ 23  ಲೋ ರಿಸ್ಕ್ ಸಂಪರ್ಕಿತರನ್ನಾಗಿ ವಿಭಾಗ ಮಾಡಿ ಕೊರೋನಾ ಪರೀಕ್ಷೆ ಮಾಡಲಾಗಿದೆ. ಇವರೆಲ್ಲರ ವರದಿ ನಗೆಟೀವ್ ಆಗಿದೆ. ದೆಹಲಿಯಿಂದ (Delhi) ಮುಂಬೈ ಪ್ರಯಾಣಿಸಿದ ವಿಮಾನದಲ್ಲಿದ್ದ ಇತರ 25 ಸಹ ಪ್ರಯಾಣಿಕರನ್ನು ಕೊರೋನಾ ಪರೀಕ್ಷೆಗೆ ಒಳಪಡಿಸಲಾಗಿದ್ದು, ಎಲ್ಲರ ವರದಿ ನೆಗಟೀವ್ ಬಂದಿದೆ. 

Omicron Threat: ಕೊರೋನಾ ರೂಪಾಂತರಿ, ಕರ್ನಾಟಕದಲ್ಲಿ ಹೊಸ ರೂಲ್ಸ್​ ಜಾರಿ!

ಮುಂಬೈನಲ್ಲಿ ನಾಲ್ಕನೇ ಓಮಿಕ್ರಾನ್ ವೈರಸ್ ಪ್ರಕರಣ ಪತ್ತೆಯಾದ ಕಾರಣ ಇದೀಗ ಮಾರ್ಗಸೂಚಿ ಮತ್ತಷ್ಟು ಕಠಿಣಗೊಳಿಸಲು ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿದೆ. ಮಹಾರಾಷ್ಟ್ರದಲ್ಲಿ ಪತ್ತೆಯಾಗಿರುವ ಓಮಿಕ್ರಾನ್ ಕೇಸ್ ಹರಡದಂತೆ ತಡೆಯಲು ಮುಂದಾಗಿದೆ.

ಮುಂಬೈನಲ್ಲಿ ಓಮಿಕ್ರಾನ್ ಪ್ರಕರಣ ಪತ್ತೆಯಾಗುವ ಮೊದಲು ಗುಜರಾತ್‌ನ ಜಾಮಾನಗರಲ್ಲಿ ಭಾರತದ 3ನೇ ಓಮಿಕ್ರಾನ್ ವೈರಸ್ ಖಚಿತಗೊಂಡಿತ್ತು. ಜಿಂಬಾಬ್ವೆಯಿಂದ ಮರಳಿದ 72 ವರ್ಷದ ವ್ಯಕ್ತಿಗೆ ಓಮಿಕ್ರಾನ್ ತಗುಲಿರುವುದು ಖಚಿತವಾಗಿದೆ. ಗುಜರಾಜ್ ಆರೋಗ್ಯ ಸಚಿವಾಲ ಗುಜರಾತ್‌ನ ಮೊದಲ ಓಮಿಕ್ರಾನ್ ಕೇಸ್ ಖಚಿತಪಡಿಸಿದೆ. ಓಮಿಕ್ರಾನ್ ತಗುಲಿರುವ ವ್ಯಕ್ತಿಯನ್ನು ಐಸೋಲೇಶನ್‌ನಲ್ಲಿ ಇಡಲಾಗಿದೆ. ಚಿಕಿತ್ಸೆ ನೀಡಲಾಗುತ್ತಿದೆ. ಗುಜರಾತ್‌ನಲ್ಲಿ ಮೊದಲ ಕೇಸ್ ಪತ್ತೆಯಾದರ ಕಾರಣ ಹೈ ಅರ್ಟ್ ಆಗಿದೆ. ಕಟ್ಟು ನಿಟ್ಟಿನ ಕ್ರಮ ಜಾರಿಗೊಳಿಸುತ್ತಿದೆ.  ಸೋಂಕಿತರ ಮೊದಲ ಹಾಗೂ ಎರಡನೇ ಸಂಪರ್ಕಿತರ ಪತ್ತೆ ಹಚ್ಚಿ ಪರೀಕ್ಷೆ ನಡೆಸಲಾಗುತ್ತಿದೆ. 

Omicron ಆತಂಕದ ನಡುವೆ ದ. ಆಫ್ರಿಕಾದಿಂದ ಬೆಂಗಳೂರಿಗೆ ಬಂದಿದ್ದ 10 ಪ್ರಯಾಣಿಕರು ನಾಪತ್ತೆ!

ಭಾರತದಲ್ಲಿ ಮೊದಲೆರೆಡು ಪ್ರಕರಣ ದಾಖಲಾಗಿರುವುದು ಕರ್ನಾಟಕದ ಬೆಂಗಳೂರಿನಲ್ಲಿ. ಸೌತ್ ಆಫ್ರಿಕಾದಿಂದ 66 ವರ್ಷದ ವ್ಯಕಿಗೆ ನವೆಂಬರ್ 20 ರಂದು ಬೆಂಗಳೂರಿಗೆ ಆಗಮಿಸಿದ್ದರು. ವಿಮಾನ ನಿಲ್ದಾಣದಲ್ಲಿ ಇವರ ಮಾದಿರ ಸಂಗ್ರಹಿಸಿ ಜಿನೋಮ್ ಸೀಕ್ವೆನ್ಸ್‌ಗೆ ಕಳುಹಿಸಲಾಗಿತ್ತು. RT PCR ವರದಿ ನೆಗಟೀವ್ ಕಾರಣ ಈ ವ್ಯಕ್ತಿ ದುಬೈಗೆ ತೆರಳಿದ್ದಾರೆ.

ಮತ್ತೊರ್ವ 46 ವರ್ಷದ ವೈದ್ಯ ವಿದೇಶಕ್ಕೆ ಹೋಗಿಲ್ಲ, ವಿದೇಶಿಗರ ಸಂಪರ್ಕಕ್ಕೂ ಬಂದಿಲ್ಲ, ಆದರೂ ಓಮಿಕ್ರಾನ್ ವೈರಸ್ ಕಾಣಿಸಿಕೊಂಡಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇವರ ಪತ್ನಿಗೆ ಕೊರೋನಾ ಕಾಣಿಸಿಕೊಂಡಿದೆ. ಇತ್ತ ಇವರ ಸಂಪರ್ಕಿತರನ್ನು ಪರೀಕ್ಷಿಸಲಾಗಿದ್ದು ಐವರಿಗೆ ಕೊರೋನಾ ದೃಢಪಟ್ಟಿದೆ. ಇವರ ಮಾದರಿಗಳನ್ನು ಜಿನೋಮ್ ಸೀಕ್ವೆನ್ಸ್‌ಗೆ ಕಳುಹಿಸಲಾಗಿದೆ.
 

click me!