India Omicron case:ಜಿಂಬಾಬ್ವೆಯಿಂದ ಮರಳಿದ ವ್ಯಕ್ತಿಗೆ ಓಮಿಕ್ರಾನ್ ದೃಢ , ಭಾರತದಲ್ಲಿ 3ನೇ ಪ್ರಕರಣ ಪತ್ತೆ!

Published : Dec 04, 2021, 07:47 PM ISTUpdated : Dec 04, 2021, 07:58 PM IST
India Omicron case:ಜಿಂಬಾಬ್ವೆಯಿಂದ ಮರಳಿದ ವ್ಯಕ್ತಿಗೆ ಓಮಿಕ್ರಾನ್ ದೃಢ , ಭಾರತದಲ್ಲಿ 3ನೇ ಪ್ರಕರಣ ಪತ್ತೆ!

ಸಾರಾಂಶ

ಭಾರತದಲ್ಲಿ ಹೆಚ್ಚಾಗುತ್ತಿದೆ ಓಮಿಕ್ರಾನ್ ಆತಂಕ ಜಿಂಬಾಬ್ವೆಯಿಂದ ಮರಳಿದ ವ್ಯಕ್ತಿಗೆ ಓಮಿಕ್ರಾನ್ ಭಾರತದಲ್ಲಿ 3ನೇ ಓಮಿಕ್ರಾನ್ ಕೇಸ್ ದೃಢ

ನವದೆಹಲಿ(ಡಿ.4):  ಭಾರತದಲ್ಲಿ ಇದೀಗ ಓಮಿಕ್ರಾನ್(Omicronvirus) ಆತಂಕ ಹೆಚ್ಚಾಗುತ್ತಿದೆ. ಸೌತ್ ಆಫ್ರಿಕಾದಲ್ಲಿ(South Afria) ಪತ್ತೆಯಾದ ರೂಪಾಂತರಿ ವೈರಸ್(Mutation Virus) ಇಷ್ಟು ದಿನ ಭಾರತಕ್ಕೆ ಬಂದಿಲ್ಲ ಎಂದು ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದ ಮಂದಿಗೆ ಕರ್ನಾಟಕ(Karnatka) ಶಾಕ್ ನೀಡಿತ್ತು. ಇದೀಗ ಗುಜರಾತ್(Gujarat) ಮತ್ತೊಂದು ಶಾಕ್ ನೀಡಿದೆ. ಭಾರತದ 3ನೇ ಓಮಿಕ್ರಾನ್ ಕೇಸ್ ಗುಜರಾತ್‌ನಲ್ಲಿ ಪತ್ತೆಯಾಗಿದೆ.

ಜಿಂಬಾಬ್ವೆಯಿಂದ(Zimbabwe) ಗುಜರಾತ್‌ನ ಜಾಮಾನಗರಕ್ಕೆ ಮರಳಿದ 72 ವರ್ಷದ ವ್ಯಕ್ತಿ ಓಮಿಕ್ರಾನ್ ದೃಢಪಟ್ಟಿದೆ. ಗುಜರಾತ್ ಆರೋಗ್ಯ ಇಲಾಖೆ ಓಮಿಕ್ರಾನ್ ವೈರಸ್ ಖಚಿತಪಡಿಸಿದೆ. ಇದೀಗ ವ್ಯಕ್ತಿಯ ಮನೆ ಹಾಗೂ ಸುತ್ತಮುತ್ತ ಕಂಟೈನ್ಮೆಂಟ್ ಜೋನ್ ನಿರ್ಬಂಧ ವಿಧಿಸಲಾಗಿದೆ. ಇದೀಗ ವ್ಯಕ್ತಿಯ ಮೊದಲ ಹಾಗೂ ಎರಡನೇ ಸಂಪರ್ಕಿತರ ಪತ್ತೆ ಕಾರ್ಯ ನಡೆಯುತ್ತಿದೆ.

Omicron Guidelines: ಕರ್ನಾಟಕದಲ್ಲಿ ಒಮಿಕ್ರಾನ್ ಆತಂಕ, ಹೊಸ ಮಾರ್ಗಸೂಚಿ ಪ್ರಕಟ

ಜಿಂಬಾಬ್ವೆಯಿಂದ ಜಾಮಾನಗರಕ್ಕೆ ಮರಳಿದ ವ್ಯಕ್ತಿಯನ್ನು ವಿಮಾ ನಿಲ್ದಾಣದಲ್ಲಿ ಕೇಂದ್ರ ಸರ್ಕಾರದ ಮಾರ್ಗಸೂಚಿಯಿಂದ ಪರೀಕ್ಷೆ ನಡೆಸಲಾಗಿತ್ತು. ಬಳಿಕ ಮಾದರಿಯನ್ನು ಜಿನೋಮ್ ಸೀಕ್ವೆನ್ಸ್ ಪರೀಕ್ಷೆಗೆ ಕಳುಹಿಸಲಾಗಿತ್ತು. ಇದೀಗ ವರದಿ ಪ್ರಕಟಗೊಂಡಿದೆ. ಭಾರತದ ಮೂರನೇ ಓಮಿಕ್ರಾನ್ ಪ್ರಕರಣ ಖಚಿತಗೊಂಡಿದೆ. ಜಿನೋಮ್ ಸೀಕ್ವೆನ್ಸ್ ವರದಿ ಬರಲು ಕನಿಷ್ಟ ಒಂದು ವಾರ ಕಾಯಬೇಕು. ಈ ಹಿಂದೆ ಇದೇ ವರದಿಗೆ ಒಂದು ತಿಂಗಳು ಕಾಯಬೇಕಿತ್ತು. ಇದೀಗ ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ತ್ವರಿತಗತಿಯಲ್ಲಿ ವರದಿ ನೀಡಲಾಗುತ್ತಿದೆ.

72 ವರ್ಷದ ವ್ಯಕ್ತಿಯನ್ನು ಐಸೋಲೇಶನ್ ಮಾಡಲಾಗಿದೆ. ಚಿಕಿತ್ಸೆ ನೀಡಲಾಗುತ್ತಿದ್ದು,  ವ್ಯಕ್ತಿ ಮೇಲೆ ನಿಗಾ ಇಡಲಾಗಿದೆ. ಮೈಲ್ಡ್ ಸಿಂಪ್ಟಮ್ಸ್ ಕಾಣಿಸಿಕೊಂಡಿದೆ. ಸದ್ಯ ಯಾವುದೇ ಆತಂಕವಿಲ್ಲ. ಜನರು ಆತಂಕ ಪಡುವ ಅಗತ್ಯವಿಲ್ಲ. ಓಮಿಕ್ರಾನ್ ಹರಡದಂತೆ ಎಲ್ಲಾ ಕ್ರಮ ಕೈಗೊಳ್ಳಲಾಗಿದೆ ಎಂದು ಗುಜರಾತ್ ಆರೋಗ್ಯ ಇಲಾಖೆ ಹೇಳಿದೆ.

ಸೌತ್ ಆಫ್ರಿಕಾದಲ್ಲಿ ಪತ್ತೆಯಾದ ರೂಪಾಂತರಿ ವೈರಸ್ ಭಾರತ ಪ್ರವೇಶಿಸದಂತೆ ಕೇಂದ್ರ ಸರ್ಕಾರ ಎಲ್ಲಾ ಕ್ರಮಗಳ್ನು ಕೈಗೊಂಡಿತ್ತು. ಆದರೆ ಕರ್ನಾಟಕದ ಮೂಲಕ ಓಮಿಕ್ರಾನ್ ಭಾರತಕ್ಕೆ ಎಂಟ್ರಿಕೊಟ್ಟಿತ್ತು. ಬೆಂಗಳೂರಿನಲ್ಲಿ(Bengaluru) ಎರಡು ಓಮಿಕ್ರಾನ್ ಪ್ರಕರಣ ಪತ್ತೆಯಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ಪ್ರಕಟಿಸಿತ್ತು. ಇದು ಕರ್ನಾಟಕ ಸೇರಿ ಭಾರತವನ್ನೇ ಬೆಚ್ಚಿಬೀಳಿಸಿತ್ತು. 

Omicron Variant: ಬೆಂಗ್ಳೂರಲ್ಲಿ ಇಬ್ಬರಿಗೆ ಓಮಿಕ್ರಾನ್ ದೃಢ, ಐವರಿಗೆ ಶಂಕೆ

ಕರ್ನಾಟಕದಲ್ಲಿ ಪತ್ತೆಯಾದ ಎರಡು ಪ್ರಕರಣಗಳ ಪೈಕಿ ಓರ್ವ ಈಗಾಗಲೇ ದುಬೈ ಸೇರಿಕೊಂಡಿದ್ದಾರೆ.  ಸೌತ್ ಆಫ್ರಿಕಾದಿಂದ ಭಾರತಕ್ಕೆ ಆಗಮಿಸಿದ ವ್ಯಕ್ತಿಯನ್ನು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕೋವಿಡ್ ಪರೀಕ್ಷೆ ಮಾಡಲಾಗಿತ್ತು. ವರದಿಯನ್ನ ಜಿನೋಮ್ ಸೀಕ್ವೆನ್ಸ್ ಪರೀಕ್ಷೆಗೂ ಕಳುಹಿಸಲಾಗಿತ್ತು. ವ್ಯಕ್ತಿಗೆ ಯಾವುದೇ ರೋಗ ಲಕ್ಷಣಗಳು ಇಲ್ಲದ ಕಾರಣ ವ್ಯಕ್ತಿ, ದುಬೈಗೆ ತೆರಳಿದ್ದಾರೆ. ವ್ಯಕ್ತಿಯ ಸಂಪರ್ಕಿತರನ್ನು ಪತ್ತೆ ಹಚ್ಚಿ ಪರೀಕ್ಷೆ ನಡೆಸಲಾಗಿದೆ

ಬೆಂಗಳೂರಿನಲ್ಲಿ ದಾಖಾಲಾದ ಮತ್ತೊಂದು ಓಮಿಕ್ರಾನ್ ಪ್ರಕರಣ ವೈದ್ಯರನ್ನೇ ಅಚ್ಚರಿಗೊಳಿಸಿತ್ತು. 46 ವರ್ಷ ವೈದ್ಯರು ಯಾವುದೇ ಪ್ರವಾಸದ ದಾಖಲೆ ಹೊಂದಿಲ್ಲ. ಯಾವ ವಿದೇಶಿಗರ ಸಂಪರ್ಕಕ್ಕೂ ಬಂದಿಲ್ಲ. ಆದರೂ ಓಮಿಕ್ರಾನ್ ಕಾಣಿಸಿಕೊಂಡಿದೆ. ಬೊಮ್ಮನಹಳ್ಳಿಯ ವೈದ್ಯರ ಮನೆ ಹಾಗೂ ಸುತ್ತಮುತ್ತ ಮೈಕ್ರೋಕಂಟೈನ್ಮೆಂಟ್ ಜೋನ್ ಆಗಿ ಪರಿವರ್ತಿಸಲಾಗಿದೆ. ಇತ್ತ ವೈದ್ಯರ ಪತ್ನಿಗೆ ಕೊರೋನಾ ವೈರಸ್ ದೃಢಪಟ್ಟಿದೆ. ಹೀಗಾಗಿ ಇಬ್ಬರು ಆಸ್ಪತ್ರೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕರ್ನಾಟಕದಲ್ಲಿ ಓಮಿಕ್ರಾನ ಪ್ರಕರಣ ದಾಖಲಾದ ಕಾರಣ ಮಾರ್ಗಸೂಚಿ ಬದಲಿಸಲಾಗಿದೆ. ಮತ್ತಷ್ಟು ಕಠಿಣ ನಿಯಮ ಜಾರಿಗೆ ತರಲಾಗಿದೆ. ಸಿನಿಮಾ ಥಿಯೇಟರ್, ಮಾಲ್‌ಗೆ ತೆರಳಲು ಎರಡು ಡೋಸ್ ಕಡ್ಡಾಯ ಮಾಡಲಾಗಿದೆ. ಶಾಲೆಗೆ ಮಕ್ಕಳನ್ನು ಕಳುಹಿಸಲು ಪೋಷಕರಿಗೂ ಎರಡು ಡೋಸ್ ಕಡ್ಡಾಯ ಮಾಡಲಾಗಿದೆ. ಇನ್ನು ಮಾಸ್ಕ್ ಕಡ್ಡಾಯ, ಸಾಮಾಜಿಕ ಅಂತರ ಪಾಲನೆಗೆ ಕಟ್ಟು ನಿಟ್ಟಿನ ನಿಯಮ ಜಾರಿಗೊಳಿಸಲಾಗಿದೆ. ಮದುವೆ ಸಮಾರಂಭಗಳಿಗೆ 500ಕ್ಕಿಂತ ಹೆಚ್ಚಿನ ಜನ ಸೇರುವಂತಿಲ್ಲ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇಂಡಿಗೋ ವಿಮಾನ ರದ್ದಾಗಿ ಪರದಾಡುತ್ತಿರುವ ಪ್ರಯಾಣಿಕರ ನೆರವಿಗೆ ಧಾವಿಸಿದ ಭಾರತೀಯ ರೈಲ್ವೆ
ಅಫೀಸ್‌ ಸಮಯ ಬಳಿಕ ಕರೆ-ಇಮೇಲ್ ಮಾಡಂಗಿಲ್ಲ, ಡಿಸ್‌ಕನೆಕ್ಟ್ ಬಿಲ್ ಲೋಕಸಭೆಯಲ್ಲಿ ಮಂಡನೆ