ಫೆಂಗಲ್ ಚಂಡಮಾರುತದಿಂದ ದಕ್ಷಿಣದ ಕೆಲ ರೈಲು ಸೇವೆ ರದ್ದು, ಇಲ್ಲಿದೆ ಪರಿಷ್ಕೃತ ವೇಳಾಪಟ್ಟಿ!

By Chethan Kumar  |  First Published Dec 1, 2024, 4:31 PM IST

ಫೆಂಗಲ್ ಚಂಡಮಾರುತದಿಂದ ಬೆಂಗಳೂರು ಮತ್ತಷ್ಟು ಕೂಲ್ ಕೂಲ್ ಆಗಿದೆ. ಕರ್ನಾಟಕದ ಹಲೆವೆಡೆ ಮೋಡ ಕವಿಡ ವಾತಾವರಣ, ತುಂತುರು ಮಳೆಯಾಗುತ್ತಿದೆ. ಇತ್ತ ತಮಿಳುನಾಡು-ಪಾಂಡಿಚೇರಿಯಲ್ಲಿ ಪ್ರವಾಹ ಸೃಷ್ಟಿಯಾಗಿದೆ. ಇದರ ಪರಿಣಾಮ ಕೆಲ ರೈಲು ಸೇವೆ ರದ್ದಾಗಿದೆ.
 


ನವದೆಹಲಿ(ಡಿ.01) ಫೆಂಗಲ್ ಚಂಡಮಾರುತ ಅಬ್ಬರ ಹೆಚ್ಚಾಗಿದೆ. ತಮಿಳುನಾಡು-ಪಾಂಡಿಚೇರಿ ಸೇರದಂತೆ ಕೆಲ ರಾಜ್ಯಗಳಲ್ಲಿ ಫೆಂಗಲ್ ಚಂಡಮಾರುತ ಭಾರಿ ಮಳೆಯನ್ನೇ ಸೃಷ್ಟಿಸಿದೆ. ಇದರ ಪರಿಣಾಮ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗಿದೆ. ಫೆಂಗಲ್ ಚಂಡಮಾರುತ ಮಳೆ ಬೆಂಗಳೂರಿನಲ್ಲಿ ಪರಿಣಾಮ ಬೀರಿದೆ. ತುಂತುರು ಮಳೆಯಾಗುತ್ತಿರುವ ಕಾರಣ ಬೆಂಗಳೂರು ಮತ್ತಷ್ಟು ತಂಪಾಗಿದೆ. ಬಿಸಿಲು ಕಾಣದಾಗಿದೆ. ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ತುಂತುರು ಮಳೆಯಾಗಿದೆ. ಇತ್ತ ಕರಾವಳಿ ತೀರ ಪ್ರದೇಶದ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವಣರವಿದೆ. ಫೆಂಗಲ್ ಚಂಡಮಾರುತದಿಂದ ದಕ್ಷಿಣ ರೈಲ್ವೇ ಕೆಲ ರೈಲು ಸೇವೆ ರದ್ದು ಮಾಡಿದೆ. ಕೆಲ  ರೈಲುಗಳ ಮಾರ್ಗ ಬದಲಾಯಿಸಲಾಗಿದೆ. ಪ್ರಯಾಣಕ್ಕೂ ಮುನ್ನ ಪರಿಷ್ಕೃತ ವೇಳಾಪಟ್ಟಿ ತಿಳಿದುಕೊಳ್ಳಿ.

ತಮಿಳುನಾಡಿನ ಹಲವು ಭಾಗಗಳಲ್ಲಿ ಮಳೆಯಾಗುತ್ತಿದೆ. ಇತ್ತ ಪಾಂಡಿಚೇರಿಯಲ್ಲೂ ಭಾರಿ ಮಳೆಯಾಗುತ್ತಿದೆ. ಪ್ರಮುಖವಾಗಿ ಚೆನ್ನೈ, ಪಾಂಡಿಚೇರಿ ಮೂಲಕ ಹಾದು ಹೋಗುವ, ಹೊರಡುವ ರೈಲುಗಳು ರದ್ದಾಗಿದೆ. ಕೆಲ ರೈಲುಗಳ ಮಾರ್ಗ ಬದಲಾವಣೆಯಾಗಿದೆ. ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್- ಜೋಲರಪೆಟೈ ಯೆಲಗಿರಿ ಎಕ್ಸ್‌ಪ್ರೆಸ್(ರೈಲು ಸಂಖ್ಯೆ 16089) ಸಂಪೂರ್ಣ ರದ್ದಾಗಿದೆ. ಈ ರೈಲು ಮುಂದಿನ ಸೂಚನೆ ವರೆಗೆ ಸೇವೆ ನೀಡುವುದಿಲ್ಲ. 

Tap to resize

Latest Videos

ಬೆಂಗಳೂರು ರೈಲು ನಿಲ್ದಾಣಗಳಲ್ಲಿ ಟಿಕೆಟ್ ಖರೀದಿ ಇನ್ನು ಸುಲಭ, ನೀವಿದ್ದಲ್ಲೇ ಸಿಗುತ್ತೆ ಟೆಕೆಟ್!

ಗೋರಖಪುರ-ತಿರುವನಂತಪುರಂ ನಾರ್ತ್(ಕೊಚುವೆಲಿ) ರಾಪ್ತಿಸಾಗರ್ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 12511) ಈಗಾಗಲೇ ಗೋರಖಪುರದಿಂದ ಹೊರಟಿದೆ. ಆದರೆ ಈ ರೈಲನ್ನು ಕೊರಕ್ಕುಪೇಟೆ ಹಾಗೂ ಪೆರಂಬೂರು ಮಾರ್ಗವಾಗಿ ಬದಲಿಸಲಾಗಿದೆ. ಈ ರೈಲು ಎಂಜಿಆರ್ ಚೆನ್ನೈ ರೈಲು ನಿಲ್ದಾಣದಲ್ಲಿ ನಿಲುಗಡೆ ಇರುವುದಿಲ್ಲ. ಪೆರಂಬೂರು ಹಾಗೂ ಕೊರಕ್ಕುಪೇಟೆ ನಿಲ್ದಾಣಲ್ಲಿ ನಿಲುಗಡೆಯಾಗಲಿದೆ. 

ಧನಬಾದ್-ಆಲಪುಝಾ ಎಕ್ಸ್‌‌ಪ್ರೆಸ್ ರೈಲು (ರೈಲು ಸಂಖ್ಯೆ 13351) ಮಾರ್ಗವನ್ನೂ ಬದಲಿಸಲಾಗಿದೆ. ಈ ರೈಲು ಎಂಜಿಆರ್ ಚೆನ್ನೈ ನಿಲ್ದಾಣದಲ್ಲಿ ನಿಲುಗಡೆ ಇರುವುದಿಲ್ಲ. ಕೊರಕ್ಕುಪೇಟೆ ಹಾಗೂ ಪೆರಂಬೂರು ರೈಲು ನಿಲ್ದಾಣದಲ್ಲಿ ನಿಲುಗಡೆ ಮಾಡಲಾಗುತ್ತದೆ. ರೈಲು ಪ್ರಯಾಣಿಕರು ಪ್ರಯಾಣಕ್ಕೂ ಮುನ್ನ ರೈಲು ಮಾರ್ಗದಲ್ಲಿನ ಬದಲಾವಣೆ, ರೈಲು ಸೇವೆಗಳ ರದ್ದು ಕುರಿತು ಅರಿತುಕೊಂಡು ಪ್ರಯಾಣಿಸಲು ದಕ್ಷಿಣ ರೈಲ್ವೈ ಸೂಚಿಸಿದೆ.

ಫೆಂಗಲ್ ಚೆಂಡಮಾರುತದಿಂದ ಹಲವೆಡೆ ಭಾರಿ ಮಳೆಯಾಗುತ್ತಿದೆ. ಹೀಗಾಗಿ ಸುರಕ್ಷತಾ ಕ್ರಮವಾಗಿ ರೈಲು ಸೇವೆಗಳನ್ನು ರದ್ದು ಮಾಡಲಾಗಿದೆ. ಜೊತೆಗೆ ಮಾರ್ಗ ಬದಲಾವಣೆ ಮಾಡಲಾಗಿದೆ. ಹೀಗಾಗಿ ಪ್ರಯಾಣಿಕರು ಸಹಕರಿಸಬೇಕಾಗಾಗಿ ಮನವಿ ಮಾಡಲಾಗಿದೆ. ಇತ್ತ ಹವಾಮಾನ ಇಲಾಖೆ ಜನರಿಗೆ ಫೆಂಗಲ್ ಚಂಡಮಾರುತ ಎಚ್ಚರಿಕೆ ನೀಡಲಾಗಿದೆ. ಫೆಂಗಲ್ ಚಂಡಮಾರುತ ಮತ್ತಷ್ಟು ಹಾನಿ ಮಾಡುವ ಸಾಧ್ಯತೆ ಇದೆ. ತಮಿಳುನಾಡು ಹಾಗೂ ಪಾಂಡಿಚೇರಿ ತೀರ ಪ್ರದೇಶಕ್ಕೆ 70 ರಿಂದ 80 ಕಿ.ಮೀ ವೇಗದಲ್ಲಿ ಅಪ್ಪಳಿಸುವ ಸಾಧ್ಯತೆ ಇದೆ. ತೀರ ಪ್ರದೇಶಕ್ಕೆ ಆಗಮಿಸುತ್ತಿದ್ದಂತೆ ಇದರ ವೇಗ 90 ಕಿ.ಮೀಗೆ ಹೆಚ್ಚಾಗಲಿದೆ ಎಂದು ಎಚ್ಚರಿಸಲಾಗಿದೆ. ಫೆಂಗಲ್ ಅಬ್ಬರ ಚೆನ್ನೈ ಮೆಟ್ರೋ ರೈಲು ಸಂಚಾರಕ್ಕೂ ಅಡ್ಡಿಯಾಗಿದೆ. ಭಾರಿ ಮಳೆಯಿಂ ಕಾರಪಕ್ಕಂ ಮೆಟ್ರೋ ಹಳಿ ಹಾಗೂ ನಿಲ್ದಾಣದ ಬಳಿ ನೀರು ತುಂಬಿಕೊಂಡಿದೆ. ಹಲವು ಮೆಟ್ರೋ ಸೇವೆಗಳೂ ಅಡ್ಡಿಯಾಗಿದೆ.

ಕಾಶ್ಮೀರ ಪ್ರವಾಸಕ್ಕೆ ಬೇಕಿಲ್ಲ ಹೆಚ್ಚು ಸಮಯ, ಶೀಘ್ರದಲ್ಲೇ ದೆಹಲಿ-ಕಾಶ್ಮೀರ ವಂದೇ ಭಾರತ್ ರೈಲು!

ಕರ್ನಾಟಕದಲ್ಲೂ ಫೆಂಗಲ್ ಚಂಡಮಾರುತ ಪರಿಣಾಮ ಬೀರಿದೆ. ಕೆಲ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಇನ್ನು ಬೆಂಗಳೂರು ಹಾಗೂ ಸುತ್ತ ಮುತ್ತ ತುಂತುರ ಮಳೆಯಾಗುತ್ತಿದೆ. ನಗರದಲ್ಲಿ ಬಿಸಿಲು ಕಾಣದ ಕೆಲ ದಿನಗಳಾಗಿವೆ. ಜೊತೆಗೆ ಚಳಿ ಹೆಚ್ಚಾಗಿದೆ. ವಾತಾವರಣ ತಂಪಾಗಿದ್ದು,ಹಳೇ ಬೆಂಗಳೂರು ನೆನಪಿಸಿಸುವಂತಿದೆ ಎಂದು ಹಲವರು ಕಮೆಂಟ್ ಮಾಡಿದ್ದಾರೆ. ರಾತ್ರಿಯಿಡಿ ತುಂತುರು ಮಳೆ ಸುರಿದಿದ್ದು, ಇದೀಗ ಮಧ್ಯಾಹ್ನ ಬಳಿಕ ಬೆಂಗಳೂರಿನ ಕೆಲ ಭಾಗದಲ್ಲಿ ಮತ್ತೆ ಮಳೆ ಆರಂಭಗೊಂಡಿದೆ. 

click me!