ಜಿಲ್ಲಾಧಿಕಾರಿ ಕಚೇರಿ ಅಲ್ಲಗಳೆದ ಬೆನ್ನಲ್ಲೇ ಬೆಡ್ ಒದಗಿಸಿದ ಸ್ಕ್ರೀನ್‌ಶಾಟ್ ಹಂಚಿಕೊಂಡ ಸೋನು ಸೂದ್!

Published : May 18, 2021, 03:18 PM ISTUpdated : May 18, 2021, 04:10 PM IST
ಜಿಲ್ಲಾಧಿಕಾರಿ ಕಚೇರಿ ಅಲ್ಲಗಳೆದ ಬೆನ್ನಲ್ಲೇ ಬೆಡ್ ಒದಗಿಸಿದ ಸ್ಕ್ರೀನ್‌ಶಾಟ್ ಹಂಚಿಕೊಂಡ ಸೋನು ಸೂದ್!

ಸಾರಾಂಶ

ಕೊರೋನಾದಿಂದ ಬಳಲುತ್ತಿರುವರಿಗೆ ನಟ ಸೋನು ಸೂದ್ ನೆರವು ಸೂದ್ ನೆರವನ್ನು ಅಲ್ಲಗೆಳೆದ ಜಿಲ್ಲಾಧಿಕಾರಿ ಕಚೇರಿಗೆ ಅಂಕಿ ಅಂಶ ನೀಡಿದ ನಟ ಸೂದ್ ಕಾರ್ಯಕ್ಕೆ ಸಲಾಂ ಹೇಳುತ್ತಿದೆ ದೇಶ

ಮುಂಬೈ(ಮೇ.18): ಕೊರೋನಾ ವೈರಸ್ ಸಂಕಷ್ಟಕ್ಕೆ ಸಿಲುಕಿದವರೂ, ಕುಟುಂಬಸ್ಥರು ಇದೀಗ ಸರ್ಕಾರಕ್ಕಿಂತ ಹೆಚ್ಚು ಬಾಲಿವುಡ್ ನಟ ಸೋನು ಸೂದ್ ನೆರವನಿನ ಭರವಸೆಯಲ್ಲಿದ್ದಾರೆ. ಅಷ್ಟರ ಮಟ್ಟಿಗೆ ಸೋನು ಸೂದ್ ನೆರವಾಗುತ್ತಿದ್ದಾರೆ. ತಮ್ಮ ಸೂದ್ ಫೌಂಡೇಷನ್ ಮೂಲಕ ದೇಶದ ಮೂಲೆ ಮೂಲೆಯಲ್ಲಿರುವ ಸೋಂಕಿತರಿಗೆ, ಬಡವರಿಗೆ, ನಿರ್ಗತಿಗರಿಗೆ ನೆರವಾಗುತ್ತಿದ್ದಾರೆ. ಹೀಗೆ ಸಂಕಷ್ಟದಲ್ಲಿದ್ದ ಸೋಂಕಿತನಿಗೆ ಬೆಡ್ ಒದಗಿಸಿದ ಸೂದ್ ಕಾರ್ಯಯವನ್ನು ಸ್ಥಳೀಯ ಜಿಲ್ಲಾಧಿಕಾರಿ ಕಚೇರಿ ಅಲ್ಲಗೆಳೆಯುವ ಪ್ರಯತ್ನ ಮಾಡಿತ್ತು. ಈ ವೇಳೆ ಸೋನು ಸೂದ್ ಬೆಡ್ ಒದಗಿಸಿದ ಅಂಕಿ ಅಂಶ ಬಿಡುಗಡೆ ಮಾಡಿ ಗೊಂದಲಕ್ಕೆ ತೆರೆಎಳೆದಿದ್ದಾರೆ.

ಚಿತ್ರದುರ್ಗದ ರೆಮ್‌ಡೆಸಿವಿರ್‌ ಟ್ವೀಟ್‌ಗೆ ಮುಂಬೈನಿಂದ ಸೋನು ಸೂದ್‌ ಸ್ಪಂದನೆ

ಸೋನು ಸೂದ್ ಕೊರೋನಾ ಸಂಕಷ್ಟ ಸಮಯದಲ್ಲಿ ತಾವೇ ಖುದ್ದು ಮೈದಾನಕ್ಕಿಳಿದು ಅಗತ್ಯವಿದ್ದರಿವೆಗೆ ನೆರವು ನೀಡುತ್ತಿದ್ದಾರೆ. ಹೀಗೆ ಬೆಡ್ ಸಿಗದೆ ಪರದಾಡುತ್ತಿರುವವರು ಕೊನೆಗೂ ಸೋನು ಸೂದ್ ಸಂಪರ್ಕಿಸಿ ಪರಿಹಾರ ಕಂಡುಕೊಳ್ಳುತ್ತಿದ್ದಾರೆ. ಹೀಗೆ ಒಡಿಶಾದ ಗಂಜಮ್ ಜಿಲ್ಲೆಯ ಸೋಂಕಿತ ಸೋನು ಸೂದ್ ನೆರವು ಬಯಸಿದ್ದಾನೆ. ಬೆಡ್ ಸಿಗದೆ ಪರದಾಡುತ್ತಿದ್ದ ಸೋಂಕಿತನಿಗೆ ಸೂದ್ ತಕ್ಷಣವೇ ಗಂಜಮ್ ಜಿಲ್ಲೆ ಬರ್ಹಮ್‌ಪುರ್ ಸಿಟಿ ಆಸ್ಪತ್ರೆಯಲ್ಲಿ ಬೆಡ್ ವ್ಯವಸ್ಛೆ ಮಾಡಿದ್ದಾರೆ.

ಕನ್ನಡಿಗನಿಗೆ ನೆರವು ಕೇಳಿದ ಭಜ್ಜಿ; ಡೋಂಟ್‌ ವರಿ ಎಂದ ಸೋನು ಸೂದ್‌..!

ಸೋನು ಸೂದ್ ಸೋಂಕಿತನಿಗೆ ಭಯಪಡುವ ಅಗತ್ಯವಿಲ್ಲ. ಗಂಜಮ್ ಸಿಟಿ ಆಸ್ಪತ್ರೆಯಲ್ಲಿ ಬೆಡ್ ವ್ಯವಸ್ಥೆಯಾಗಿದೆ ಎಂದು ಟ್ವೀಟ್ ಮೂಲಕ ಖಚಿತ ಪಡಿಸಿದ್ದಾರೆ. ಇದೇ ಟ್ವೀಟ್‌ಗೆ ಗಂಜಮ್ ಜಿಲ್ಲಾಧಿಕಾರಿ ಕಚೇರಿ ಪ್ರತಿಕ್ರಿಯೆ ನೀಡಿದೆ.  ಬೆಡ್ ವ್ಯವಸ್ಥೆ ಕುರಿತು ಸೋನ್ ಸೂದ್ ಹಾಗೂ ಸೂದ್ ಫೌಂಡೇಷನ್‌ನಿಂದ ಯಾವುದೇ ಮಾಹಿತಿಯಾಗಲಿ, ಸೂಚನೆಯಾಗಲಿ ಬಂದಿಲ್ಲ. ಮನವಿ ಮಾಡಿದ ಸೋಂಕಿತ ಹೋಮ್ ಐಸೋಲೇಶನ್‌ನಲ್ಲಿದ್ದು, ಯಾವುದೇ ಸಮಸ್ಯೆ ಇಲ್ಲ, ಬೆಡ್ ಸಮಸ್ಯೆಯೂ ಇಲ್ಲ ಎಂದು ಗಂಜಮ್ ಜಿಲ್ಲಾಧಿಕಾರಿ ಟ್ವೀಟ್ ಮಾಡಿದ್ದಾರೆ.

 

ಬೆಂಗಳೂರಲ್ಲಿ ತಡರಾತ್ರಿ 30 ರೋಗಿಗಳ ಪ್ರಾಣ ಉಳಿಸಿದ ಸೋನು ಸೂದ್ ಟ್ರಸ್ಟ್

ಜಿಲ್ಲಾಧಿಕಾರಿಗಳ ಟ್ವೀಟ್ ಬೆನ್ನಲ್ಲೇ, ಸೋನು ಸೂದ್ ಸ್ಪಷ್ಟನೆ ನೀಡಿದ್ದಾರೆ. ಸರ್, ನಾವು ಬೆಡ್‌ಗಾಗಿ ನಿಮ್ಮನ್ನು ಸಂಪರ್ಕಿಸಿಲ್ಲ. ಸೋಂಕಿತ ನಮ್ಮನ್ನು ಬೆಡ್ ಒದಗಿಸಿಕೊಡಿ ಎಂದು ಕೇಳಿಕೊಂಡಿದ್ದಾರೆ. ನಾವು ಸೋಂಕಿತನಿಗೆ ಬೆಡ್ ವ್ಯವಸ್ಥೆ ಮಾಡಿದ್ದೇವೆ. ಈ ಕುರಿತ ಸ್ಕ್ರೀನ್ ಶಾಟ್ ಇಲ್ಲಿದೆ. ನಿಮ್ಮ ಕೆಲಸ ಉತ್ತಮ ಕೆಲಸ ಮಾಡುತ್ತಿದೆ. ನಿಮ್ಮ ಕಚೇರಿಯಿಂದ ಈ ಕುರಿತು ಪರಿಶೀಲನೆ ಮಾಡಬಹುದು. ಇಲ್ಲಿ ಸಂಪರ್ಕ ಸಂಖ್ಯೆ ನೀಡಲಾಗಿದೆ. ಜೈ ಹಿಂದ್ ಎಂದು ಸೂದ್ ಪ್ರತಿಕ್ರಿಯೆ ನೀಡಿದ್ದಾರೆ.

 

ಸೂದ್ ಟ್ವೀಟ್ ಮಾಡಿದ ಬೆನ್ನಲ್ಲೇ, ಗಂಜಮ್ ಜಿಲ್ಲಾಧಿಕಾರಿ ಕಚೇರಿ ಮತ್ತೊಂದು ಸ್ಪಷ್ಟನೆ ನೀಡಿದೆ. ನಿಮ್ಮ ವ್ಯವಸ್ಥೆಯನ್ನು ವಿರೋಧಿಸುವ ಉದ್ದೇಶ ನಮ್ಮದ್ದಲ್ಲ. ಗಂಜಮ್ ತಂಡ ಸೋಂಕಿತರಿಗೆ ದಿನದ 24 ಗಂಟೆ ಕೆಲಸ ಮಾಡುತ್ತಿದೆ. ಆದರೂ ಸೋಂಕಿತರಿಗೆ ಬೆಡ್ ಸಿಕ್ಕಿಲ್ಲ ಎಂದಾದರೆ ಅದನ್ನು ಪರಿಶೀಲಿಸುವುದು, ಆ ಕುರಿತು ಗಮನ ಹರಿಸುವುದು ನಮ್ಮ ಕೆಲಸವಾಗಿದೆ. ಹೀಗಾಗಿ ನಾವು ಕೇಳಿದ್ದೇವೆ. ನೀವು ಹಾಗೂ ನಿಮ್ಮ ಸಂಸ್ಥೆ ಅತ್ಯುತ್ತಮ ಕೆಲಸ ಮಾಡುತ್ತಿದೆ ಎಂದು ಜಿಲ್ಲಾಧಿಕಾರಿ ಕಚೇರಿ ಟ್ವೀಟ್ ಮಾಡಿದೆ

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ರಣವೀರ್ ನಟನೆಯ ಧುರಂಧರ್ ಸಿನಿಮಾದ ಕತೆ ಭಾರತೀಯ ಸೇನೆಯ ಹೀರೋ ಮೇಜರ್ ಮೋಹಿತ್ ಶರ್ಮಾ ಅವರದ್ದಾ?
Dhurandhar Review: ಹಿಂದೂಗಳಿಗೆ ಪ್ರಥಮ ಶತ್ರು ಹಿಂದೂ-ಮೊಬೈಲ್‌ ಕೂಡ ನೋಡದಂತೆ ಮಾಡೋ Ranveer Singh ಸಿನಿಮಾ!