
ಅಲಿಘಡ(ಜು.16) ಮನೆಯಲ್ಲಿ ಪ್ರತಿ ದಿನ ಆಸ್ತಿಗಾಗಿ ಜಗಳ. ಹೀಗಾಗಿ ಪೊಲೀಸ್ ಠಾಣೆಗೆ ತಾಯಿ ಹಾಗೂ ಮಗ ಆಗಮಿಸಿದ್ದಾರೆ. ಕೆಲ ಹೊತ್ತಿನ ಬಳಿಕ ಪೊಲೀಸ್ ಠಾಣೆಯಿಂದ ಹೊರಬದ ತಾಯಿ ಮಗ ವಾಗ್ವಾದ ನಡೆಸಿದ್ದಾರೆ. ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚುವ ಬೆದರಿಕೆ ಹಾಕಿದ ತಾಯಿಗೆ ಮನಗೆ ಬೆಂಕಿ ಹಚ್ಚಿದ ಘಟನೆ ನಡೆದಿದೆ. ಬಳಿಕ ಈ ವಿಡಿಯೋವನ್ನು ರೆಕಾರ್ಡ್ ಮಾಡಿದ ಅತ್ಯಂತ ಹೇಯ ಘಟನೆ ಉತ್ತರ ಪ್ರದೇಶದ ಅಲಿಘಡದಲ್ಲಿ ನಡದಿದೆ.
ತಾಯಿ ಹಾಗೂ ಮಗನ ನಡುವೆ ಆಸ್ತಿಗಾಗಿ ಜಗಳ ಶುರುವಾಗಿದೆ. ಈ ಕುರಿತು ಕುಟುಂಬಸ್ಥರು ಮಧ್ಯಪ್ರವೇಶಿದರೂ ಮಗ ಆಸ್ತಿಗೆ ಪಟ್ಟು ಹಿಡಿದಿದ್ದಾನೆ. ಇರುವ ಮನೆಯನ್ನು ಮಗನ ಹೆಸರಿಗೆ ಬರೆದರೆ ತನಗೆ ಉಳಿಗಾಲವಿಲ್ಲ ಎಂದು ಅರಿತ್ತ ತಾಯಿ ಆಸ್ತಿ ಮಗನಿಗೆ ನೀಡಲು ನಿರಾಕರಿಸಿದ್ದಳು. ಹೀಗಾಗಿ ಜಗಳ ತಾರಕಕ್ಕೇರಿತ್ತು. ಕುಟುಂಬಸ್ಥರು ಮಾತುಕತೆ ನಡೆಸಿದರೂ ಪ್ರಯೋಜನವಾಗಿಲ್ಲ. ಹೀಗಾಗಿ ದೂರು ನೀಡಲಾಗಿತ್ತು.
ಹೆಚ್ಚು ವ್ಯೂವ್, ಲೈಕ್ಸ್‌ಗಾಗಿ ಹೆಲಿಕಾಪ್ಟರ್‌ನಲ್ಲಿ ಭಯಾನಕ ಸ್ಟಂಟ್- ಖ್ಯಾತ ಯುಟ್ಯೂಬರ್ ಅರೆಸ್ಟ್
ತಾಯಿ, ಮಗ ಹಾಗೂ ಕುಟುಂಬಸ್ಥರು ಖೈರ್ ಪೊಲೀಸ್ ಠಾಣೆಗೆ ಆಗಮಿಸಿದ್ದಾರೆ. ಕುಟುಂಬಸ್ಥರು ಹಾಗೂ ತಾಯಿ ಮಗ ಪೊಲೀಸ್ ಠಾಣೆಯಲ್ಲಿ ಆಸ್ತಿ ಹಂಚಿಕೆ ವಿಚಾರದ ಮಾತುಕತೆ ಆರಂಭಿಸಿದ್ದಾರೆ. ಕೆಲ ಹೊತ್ತಿನ ಬಳಿಕ ತಾಯಿ ಹಾಗೂ ಮಗ ಪೊಲೀಸ್ ಠಾಣೆಯಿಂದ ಹೊರಬಂದಿದ್ದಾರೆ. ಬಳಿಕ ಠಾಣೆಯ ಬದಿಯಲ್ಲಿ ನಿಂತು ವಾಗ್ವಾದ ಆರಂಭಿಸಿದ್ದಾರೆ.
ಈ ವೇಳೆ ತಾಯಿ ತನ್ನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚವುದಾಗಿ ಬೆದರಿಸಿದ್ದಾಳೆ. ಪೊಲೀಸರಿಗೆ ಹೇಳುವುದಾಗಿ ಮಗನ ಬೆದರಿಸಲು ನೋಡಿದ್ದಾರೆ. ಆದರೆ ಪಿತ್ತ ನೆತ್ತಿಗೇರಿದ್ದ ಮಗ ಬೆಂಕಿಯ ಕಿಡಿ ಹೊತ್ತಿಸಿದ್ದಾನೆ. ಪರಿಣಾಮ ಒಂದೇ ಸಮನೆ ಬೆಂಕಿ ಹೊತ್ತಿಕೊಂಡಿದೆ. ಕೆಲವೇ ಕ್ಷಣಗಳಲ್ಲಿ ಬೆಂಕಿ ಧಗಧನೆ ಹೊತ್ತಿ ಉರಿದಿದೆ. ಪೊಲೀಸರು ಓಡೋಡಿ ಬಂದು ಬೆಂಕಿ ನಂದಿಸುವ ಪ್ರಯತ್ನ ಮಾಡಿದ್ದಾರೆ. ಈ ಪ್ರಯತ್ನಗಳು ಕೆಲ ನಿಮಿಷಗಳ ವರೆಗೆ ನಡೆದಿದೆ.
ಠಾಣೆ ಒಳಗಿದ್ದ ಪೊಲೀಸರು ಟೇಬಲ್ ಮೇಲೆ, ಠಾಣೆಯಲ್ಲಿರುವ ಜೈಲಿನೊಳಗೆ ನೀಡವು ಬೆಡ್ ಶೀಟ್ ಹೊತ್ತು ತಂದು ಬೆಂಕಿ ನಂದಿಸಿದ್ದಾರೆ. ಆದರೆ ಅಷ್ಟರಲ್ಲಿ ಬಹುತೇಕ ದೇಹದ ಭಾಗ ಸುಟ್ಟು ಹೋಗಿದೆ. ಇತ್ತ ಲೈಟರ್ ಮೂಲಕ ಬೆಂಕಿ ಹಚ್ಚಿದ ಮಗ ಬಳಿಕ ವಿಡಿಯೋ ರೆಕಾರ್ಡ್ ಮಾಡಿ ವಿಕೃತಿ ಮೆರೆದಿದ್ದಾನೆ. ತಕ್ಷಣವೇ ಮಹಿಳೆಯನ್ನು ಪೊಲೀಸರು ಆಸ್ಪತ್ರೆ ದಾಖಲಿಸಿದ್ದಾರೆ. ಶೇಕಡಾ 40 ರಷ್ಟು ಮಹಿಳೆ ದೇಹ ಸುಟ್ಟು ಹೋಗಿದೆ. ಥಮಿಕ ತನಿಕೆಯಲ್ಲಿ ಮಗ ಬೆಂಕಿ ಹಚ್ಚುತ್ತಿರುವ ಸಿಸಿಟಿವಿ ದೃಶ್ಯಗಳನ್ನು ಪೊಲೀಸರು ಕಲೆ ಹಾಕಿದ್ದಾರೆ.
ತುಮಕೂರು: ವಸತಿ ಶಾಲೆಯಲ್ಲಿ ಬೆಂಕಿ ಅವಘಡ, ಹೊಗೆಯಿಂದ ಇಬ್ಬರು ವಿದ್ಯಾರ್ಥಿನಿಯರು ಅಸ್ವಸ್ಥ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ