
ಮುಂಬೈ(ಜು.16) ದೃಷ್ಟಿ ದೋಷ ಸೇರಿದಂತೆ ಇತರ ಕೆಲ ಅಂಗಾಂಗ ವೈಕಲ್ಯದ ನಕಲಿ ದಾಖಲೆ ಸೃಷ್ಟಿಸಿ ನಾಗರಿಕ ಸೇವೆ(ಐಎಎಸ್)ಗೆ ಆಯ್ಕೆಯಾದ ಆರೋಪ ಹೊತ್ತಿರುವ ಪೂಜಾ ಖೇಡ್ಕರ್‌ಗೆ ಮತ್ತೊಂದು ಹಿನ್ನಡೆಯಾಗಿದೆ. ಐಎಎಸ್ ಅಧಿಕಾರಿಗಳ ತರಬೇತಿ ಪಡೆಯುತ್ತಿದ್ದ ಪೂಜಾ ಖೇಡ್ಕರ್ ಅವರ ಟ್ರೈನಿಂಗ್‌ಗೆ ತಡೆ ನೀಡಲಾಗಿದೆ. ಈ ಕುರಿತು ಮಹಾರಾಷ್ಟ್ರ ಮುಖ್ಯ ಕಾರ್ಯದರ್ಶಿ ನಿತಿನ್ ಗಡ್ರೆ ಆದೇಶ ಹೊರಡಿಸಿದ್ದಾರೆ. ಮುಸೋರಿಯ ಲಾಲ್ ಬಹುದ್ದೂರ್ ಶಾಸ್ತ್ರಿ ರಾಷ್ಟ್ರೀಯ ನಾಗರೀಕ ಸೇವಾ ತರಬೇತಿ ಕೇಂದ್ರದಿಂದ ಪೂಜಾ ಖೇಡ್ಕರ್ ಅವರನ್ನು ಬಿಡುಗಡೆ ಮಾಡಲಾಗಿದೆ.
ಮಾನಸಿಕ ದೌರ್ಬಲ್ಯ, ದೃಷ್ಠಿ ದೋಷ ಜೊತೆಗೆ ಹಿಂದುಳಿದ ವರ್ಗಕ್ಕೆ ಸೇರಿದ ನಕಲಿ ದಾಖಲೆ ಪತ್ರಗಳನ್ನು ಸೃಷ್ಟಿಸಿ ಪೂಜಾ ಖೇಡ್ಕರ್ ನಾಗರೀಕ ಸೇವೆಗೆ ಆಯ್ಕೆಯಾಗಿದ್ದರು ಅನ್ನೋ ಆರೋಪ ಗಂಬೀರವಾಗುತ್ತಿದ್ದಂತೆ ಮಹಾರಾಷ್ಟ್ರ ಸರ್ಕಾರ ಈ ಆದೇಶ ಹೊರಡಿಸಿದೆ. ಈ ಪ್ರಕರಣ ಕುರಿತು ತನಿಖೆಗೆ ಆದೇಶಿಸಲಾಗಿದೆ. ಗಂಭೀರ ಆರೋಪಗಳು ಕೇಳಿಬಂದಿರುವ ಕಾರಣ ಪೂಜಾ ಖೇಡ್ಕರ್ ತರಬೇತಿಯನ್ನು ತಡೆ ಹಿಡಿಯಲಾಗಿದೆ ಎಂದು ಚೀಫ್ ಸೆಕ್ರಟರಿ ಹೇಳಿದ್ದಾರೆ.
ಗನ್ ಹಿಡಿದು ರೈತರನ್ನು ಬೆದರಿಸಿದ್ದ ಐಎಎಸ್ ಪೂಜಾ ತಾಯಿ ನಾಪತ್ತೆ
ತರಬೇತಿ ಹಂತದಲ್ಲಿ ಖಾಸಗಿ ಆಡಿ ಕಾರಿನ ಮೇಲೆ ಕೆಂಪು ಬಣ್ಣದ ಸೈರನ್ ಅಳವಡಿಸಿಕೊಂಡು ನಿಯಮ ಉಲ್ಲಂಘನೆ ಮಾಡಿದ ಆರೋಪದ ಮೇಲೆ ಪುಣೆಯ ಉಪ ಜಿಲ್ಲಾಧಿಕಾರಿ ಪೂಜಾ ಖೇಡ್ಕರ್ ವರ್ಗಾವಣೆ ಮಾಡಲಾಗಿತ್ತು. ಈ ಪ್ರಕರಣದಿಂದ ಪೂಜಾ ಖೇಡ್ಕರ್ ಒಂದೊಂದೆ ಅಕ್ರಮಗಳು ಬಯಲಿಗೆ ಬಂದಿದೆ.ಸೈರನ್ ಲೈಟ್ ಕಾರಿನಿಂದ ಆರಂಭಗೊಂಡ ಪೂಜಾ ಅಕ್ರಮಗಳ ಸರಮಾಲೆ ಇದೀಗ ನಕಲಿ ದಾಖಲೆ ಸೃಷ್ಟಿ ಸೇರಿದಂತೆ ಇತರ ಕೆಲ ಆರೋಪಗಳು ಪೂಜಾ ಮೇಲೆ ಕೇಳಿಬಂದಿದೆ.
2022ರಲ್ಲಿ ಪೂಜಾ ಖೇಡ್ಕರ್ ಅಂಗವೈಕಲ್ಯದ ನಕಲಿ ದಾಖಲೆ ಪಡೆಯಲು ಅರ್ಜಿ ಸಲ್ಲಿಸಿರುವ ಮಾಹಿತಿಯೂ ಬಹಿರಂಗವಾಗಿದೆ. 2022ರ ಆಗಸ್ಟ್ 23ರಂದು ಅಂಗವೈಕಲ್ಯ ಧೃಡೀಕರಣ ಪತ್ರಕ್ಕಾಗಿ ವೈದ್ಯರಿಗೆ ಅರ್ಜಿ ಸಲ್ಲಿಸಿದ್ದರು. ಇದನ್ನು ತಿರಸ್ಕರಿಸಿದ ಪುಣೆಯ ಔಂಧ್ ಆಸ್ಪತ್ರೆ, ‘2022ರ ಅಕ್ಟೋಬರ್ 11ರಂದು ಲೋಕೋಮೋಟರ್ (ಕೈಕಾಲು ಚಲನೆಗೆ ಅಡ್ಡಿಮಾಡುವ) ತಪಾಸಣೆ ನಡೆಸಲಾಗಿದ್ದು, ನಿಮ್ಮ ಪರವಾಗಿ ಅಂಗವೈಕಲ್ಯ ಧೃಡೀಕರಣ ಪತ್ರ ನೀಡಲು ಸಾಧ್ಯವಿಲ್ಲ ಎಂದು ಹೇಳಲು ವಿಷಾದಿಸುತ್ತೇವೆ’ ಎಂದು ಹೇಳಿತ್ತು . ಇದೀಗ ಪೂಜಾ ಖೇಡ್ಕರ್ ಒಂದೊಂದೆ ಪ್ರಕರಣಗಳು ಹೊರಬರುತ್ತಿದೆ. ಇದೇ ವೇಳೆ ತಾನು ತಪ್ಪತಸ್ಥೆ ಅಲ್ಲ ಎಂದು ಪೂಜಾ ಹೇಳಿದ್ದಾರೆ.
ನನ್ನ ಮಗಳ ವಿರುದ್ಧ ಪಿತೂರಿ: ಟ್ರೈನಿ ಐಎಎಸ್ ಅಧಿಕಾರಿ ಉದ್ಧಟತನವನ್ನ ಸಮರ್ಥಿಸಿಕೊಂಡ ತಂದೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ