ಮದುವೆ ಮಂಟಪಕ್ಕೆ ಮೆರವಣಿ ಹೊರಟಿತ್ತು. ಶರ್ವಾನಿ ಧರಿಸಿದ್ದ ವರ, ಆತನ ಆಪ್ತರು, ಕುಟುಂಬಸ್ಥರು ಮೆರವಣಿಗೆಯಲ್ಲಿ ಹೊರಟಿದ್ದರು. ಆದರೆ ಏಕಾಏಕಿ ಪೊಲೀಸರು ದಾಳಿ ಮಾಡಿ ವರನ ಬಂಧಿಸಿದ್ದರು. ಠಾಣೆಗೆ ಕರೆದೊಯ್ದ ಬಳಿ ದುರಂತವೆ ನಡೆದು ಹೋಗಿದೆ.
ಭೋಪಾಲ್(ಜು.16) ಮದುವೆ ಸಂಭ್ರಮದ ನಡುವೆ ವರ, ವಧು ಹಾಗೂ ಕುಟುಂಬಸ್ಥರಿಗೆ ಪೊಲೀಸರು ಶಾಕ್ ನೀಡಿದ್ದಾರೆ. ಮಂಟಪಕ್ಕೆ ದಿಬ್ಬಣದ ತೆರಳುತ್ತಿದ್ದ ವರನ ಪೊಲೀಸರು ಬಂಧಿಸಿ ಠಾಣೆಗೆ ಕರೆದೊಯ್ದಿದ್ದಾರೆ. ಸಂಜೆ 4.30ರ ವೇಳೆ ಈತ ಸೆಲ್ಫಿ ಕ್ಕಿಕ್ಲಿಸಿಕೊಂಡ ಬೆನ್ನಲ್ಲೇ ಬಂಧನವಾಗಿದೆ. ಎಷ್ಟು ಹೊತ್ತಾದರೂ ಪೊಲೀಸರು ವರ ಬಿಡಲಿಲ್ಲ. ಸ್ವಲ್ಪ ತಡವಾದರೂ ಇಂದೇ ತಾಳಿ ಕಟ್ಟಲು ಎರಡು ಕುಟುಂಬ ಒಪ್ಪಿಕೊಂಡಿತ್ತು. ಆದರೆ ತಡ ರಾತ್ರಿಯಾದರೂ ವರ ಬರಲಿಲ್ಲ. ಕೊನೆಗೆ ಪೊಲೀಸರು ಕರೆ ಮಾಡಿ ಪೊಲೀಸ್ ಕಸ್ಟಡಿಯಲ್ಲಿದ್ದ ವರನಿಗೆ ಹೃದಯಾಘಾತವಾಗಿ ಮೃತಪಟ್ಟಿದ್ದಾನೆ ಎಂದು ಮಾಹಿತಿ ನೀಡಿದ ಘಟನೆ ಮಧ್ಯಪ್ರದೇಶದ ಗುನಾದಲ್ಲಿ ನಡೆದಿದೆ. ಪೊಲೀಸ್ ಠಾಣೆ ರಣಾಂಗಣವಾಗಿದೆ.
ಬುಡಕಟ್ಟು ಪ್ರಾಧಿ ಸಮುದಾಯದ 25ರ ಹರೆಯದ ದೇವಾ ಪ್ರಾಧಿ ಮದುವೆ ದಿನವೇ ಈ ದುರಂತ ನಡದಿದೆ. ಹುಡುಗನ ಮನೆಯಿಂದ ದಿಬ್ಬಣ ಹೊರಟಿದೆ. ಸಂಭ್ರಮ, ಸಡಗರದ ದಿಬ್ಬಣ ಮದುವೆ ಮಂಟಪದ ಸಮೀಪ ಬಂದಿತ್ತು. ಇನ್ನೇನು ಮದುವೆ ಮಂಟಪ ಆವರಣ ಪ್ರವೇಶಿಸಬೇಕು ಎನ್ನುವಷ್ಟರಲ್ಲೇ ಪೊಲೀಸರು ದಿಢೀರ್ ಪ್ರತ್ಯಕ್ಷರಾಗಿದ್ದಾರೆ.
undefined
ಮೀನು, ಮಟನ್ ಯಾಕಿಲ್ಲ? ತಾಳಿ ಕಟ್ಟಿದ ಬೆನ್ನಲ್ಲೇ ವಧುವಿನ ಕಪಾಳಕ್ಕೆ ಬಾರಿಸಿದ ವರ!
ಬ್ಯಾಂಡ್ ವಾದ್ಯಗಳನ್ನು ನಿಲ್ಲಿಸಿದ್ದಾರೆ. ಬಳಿಕ ವರ ದೇವಾ ಪ್ರಾಧಿಯನ್ನು ಬಂಧಿಸಿದ್ದಾರೆ. ಇದು ಕುಟುಂಬಸ್ಥರು, ಆಪ್ತರ ಆತಂಕಕ್ಕೆ ಕಾರಣವಾಗಿತ್ತು. ಬಂಧನದ ವೇಳೆ ಭಾರಿ ಹೈಡ್ರಾಮ ನಡೆದಿತ್ತು. ನೂಕಾಟ, ತಳ್ಳಾಟ ನಡೆದಿದೆ. ಪೊಲೀಸರು ಲಾಠಿ ಚಾರ್ಜ್ ಬೆದರಿಕೆ ಹಾಕಿ ವರನ ಬಂಧಿಸಿ ಠಾಣೆಗೆ ಕರೆದೊಯ್ದಿದ್ದರು ಸಂಜೆ 4.30ರ ವೇಳೆಗೆ ಬಂಧನವಾಗಿದೆ.
ಇತ್ತ ವರನ ಬಂಧನ ಬೆನ್ನಲ್ಲೇ ವಧುವಿನ ಮೆರಣಿಗೆ ಮಂಟಪ ತಲುಪಿದೆ. ಈ ವೇಳೆ ಮಾಹಿತಿ ತಿಳಿದು ವಧು ಹಾಗೂ ಕುಟುಂಬಸ್ಥರು ಆತಂಕಗೊಂಡಿದ್ದಾರೆ. ಕುಟುಂಬಸ್ಥರು ವರ ಕೊಂಚ ತಡವಾದರೂ ತಾಳಿ ಕಟ್ಟಿ ಶಾಸ್ತ್ರ ಮುಗಿಸಲು ನಿರ್ಧರಿಸಿದ್ದಾರೆ. ಆದರೆ ರಾತ್ರಿ 9 ಗಂಟೆಯಾದರೂ ವರ ವಾಪಸ್ ಬರಲಿಲ್ಲ. ವರನ ಜೊತೆಯಲ್ಲಿ ಆತನ ಆಪ್ತ ಸಂಬಂಧಿಯನ್ನು ಬಂಧಿಸಿದ್ದರು.
ಕಳ್ಳತನ ಪ್ರಕರಣದಲ್ಲಿ ವರ ಹಾಗೂ ಆತನ ಸಂಬಂಧಿಯನ್ನು ಪೊಲೀಸರು ಬಂಧಿಸಿದ್ದರು. ಠಾಣೆಯಲ್ಲಿ ಪೊಲೀಸರ ಭಾಷೆಯಲ್ಲಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ವರನಿಗೆ ದಿಢೀರ ಎದೆ ನೋವು ಕಾಣಿಸಿಕೊಂಡಿದೆ. ತಕ್ಷಣವೇ ಪೊಲೀಸರು ಆಸ್ಪತ್ರೆ ದಾಖಲಿಸಲಾಗಿದೆ. ಆದರೆ ಪ್ರಯೋಜನವಾಗಿಲ್ಲ . ಹೃದಯಾಘಾತದಿಂದ ವರ ಮೃತಪಟ್ಟಿದ್ದಾನೆ ಎಂದು ಪೊಲೀಸರು ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ.
ಹತ್ತು ಮಕ್ಕಳ ತಂದೆಗೆ 6 ಮಕ್ಕಳ ತಾಯಿ ಜೊತೆ ಪ್ರೀತಿ, ಮಕ್ಕಳ ಮದುವೆಗೂ ಮುನ್ನ ಪರಾರಿ!