
ಇನ್ಬನಿಧಿ. ತಮಿಳುನಾಡು ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿರೋ ಹೆಸರು. ಇನ್ಬನಿಧಿ ಎಂದುಬಿಟ್ರೆ ತಕ್ಷಣಕ್ಕೆ ಅರ್ಥ ಆಗಲ್ಲ ಬಿಡಿ. ಇನ್ಬನಿಧಿ, ಮಾಜಿ ಸಿಎಂ ಕರುಣಾನಿಧಿ ಮರಿ ಮಗ, ಹಾಲಿ ಸಿಎಂ ಸ್ಟಾಲಿನ್ ಮೊಮ್ಮಗ, ನಟ- ಸಚಿವ ಉದಯನಿಧಿಯ ಮಗ.
ದೊಡ್ಡ ಸ್ಟಾರ್ ಕುಟುಂಬ, ಇಡೀ ತಮಿಳುನಾಡು ರಾಜಕೀಯವನ್ನೇ ಗಿರಿಗಿಟ್ಲೆಯಂತೆ ಆಡಿಸ್ತಿರೋ ಡಿಎಂಕೆ ವಂಶದ ಕುಡಿ ಇನ್ಬನಿಧಿ. ಈಗ ಈತನೇ ಡಿಎಂಕೆ ಪಾಲಿಗೆ ಕಂಟಕವಾಗುವ ಎಲ್ಲ ಲಕ್ಷಣ ಕಾಣ್ತಿದೆ. ಅದಕ್ಕೆ ಕಾರಣ, ಇನ್ಬನಿಧಿ ಲವ್ವಿಡಬ್ಬಿ. ಅಷ್ಟೇ ಆಗಿದ್ರೆ ಪರವಾಗಿರಲಿಲ್ಲ, ಆದ್ರೆ, ಗೆಳತಿ ಜತೆಗಿನ ಇನ್ಭನಿಧಿ ಫೋಟೋಗಳೂ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಡಿಎಂಕೆ ಪಾರ್ಟಿಯೊಳಗೆ ಬಿರುಗಾಳಿ ಎಬ್ಬಿಸಿವೆ. ಕಳೆದ ಜನವರಿಯಿಂದ ತಮಿಳುನಾಡಿನಲ್ಲಿ ಸ್ಟಾಲಿನ ಮೊಮ್ಮಗನದ್ದೇ ಸುದ್ದಿ. ಗೆಳತಿ ಸಹನಾ ಜತೆಗಿನ ಇನ್ಬನಿಧಿ ಫೋಟೋಗಳು ವೈರಲ್ ಆಗಿರೋದು ಆಡಳಿತಾರೂಢ ಡಿಎಂಕೆಗೆ ನುಂಗಲಾರದ ಬಿಸಿತುಪ್ಪವಾಗಿದೆ.
ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ ಸತ್ತಿದ್ದು ಮೋದಿ ಟಾರ್ಚರ್‌ನಿಂದ ಎಂದ ನಟ
ಮಗನ ಫೋಟೋದಿಂದ ಭಾರೀ ಮುಜುಗರಕ್ಕೀಡಾಗಿದ್ದ ಸಚಿವ, ನಟ ಉದಯನಿಧಿ ಸ್ಟಾಲಿನ್ ಎರಡು ತಿಂಗಳ ಬಳಿಕ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ‘ಮಗನಿಗೆ 18 ವರ್ಷ ತುಂಬಿದೆ. ಅದು ಅವನ ವೈಯಕ್ತಿಕ ವಿಚಾರ’ ಎಂದಷ್ಟೇ ಹೇಳಿ ಮಾಧ್ಯಮಗಳಿಂದ ಬಚಾವ್ ಆಗಿದ್ದಾರೆ. ‘ವಯಸ್ಸಿಗೆ ಬಂದ ವ್ಯಕ್ತಿಯ ವೈಯಕ್ತಿಕ ಜೀವನದಲ್ಲಿ ಮಧ್ಯಪ್ರವೇಶಿಸಲು ನನಗೆ ಕೆಲವು ನಿರ್ಬಂಧಗಳಿವೆ’ ಎಂದು ಉದಯನಿಧಿ ಹೇಳಿದ್ದಾರೆ. ಮಗನ ಫೋಟೋ ವೈರಲ್ ಆಗಿರುವ ಪತ್ನಿ ಕೃತಿಕಾ ಜತೆ ಚರ್ಚಿಸಿದ್ದು, ಅದನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದೂ ಉದಯನಿಧಿ ಹೇಳಿದ್ದಾರೆ. ಇತ್ತ ಉದಯನಿಧಿ ಪತ್ನಿ ಕೃತಿಕಾ ಟ್ವೀಟ್ ಮಾಡಿದ್ದು, ‘ಪ್ರೀತಿಗೆ, ಅದರ ಅಭಿವ್ಯಕ್ತಿಗೆ ಯಾವುದೇ ನಿಷೇಧವಿಲ್ಲ’ ಎಂದು ಹೇಳುವ ಮೂಲಕ ಮಗನ ಲವ್ವಿಡವ್ವಿ ಸಮರ್ಥನೆ ಮಾಡಿಕೊಂಡಿದ್ದಾರೆ.
ನಮ್ಮ ರಾಜ್ಯಪಾಲ ಬಿಹಾರಿಗಳ ರೀತಿ ಪಾನಿಪೂರಿ ಮಾರೋಕ್ಕೆ ಲಾಯಕ್ಕು ಎಂದ ಡಿಎಂಕೆ ನಾಯಕ!
2022ರಲ್ಲಿ ಡಿಎಂಕೆ ಕ್ಯಾಬಿನೆಟ್ ಸೇರಿದ ಉದಯನಿಧಿ ಸ್ಟಾಲಿನ್, ಕ್ರೀಡೆ ಮತ್ತು ಯುವಜನ ಖಾತೆ ಸಚಿವ ಸ್ಥಾನ ಗಿಟ್ಟಿಸಿದ್ರು. 1989 ರಲ್ಲಿ ಶಾಸಕರಾದ ಸಿಎಂ ಸ್ಟಾಲಿನ್ 2006 ರಲ್ಲಿ ತಮ್ಮ ತಂದೆ ಎಂ ಕರುಣಾನಿಧಿ ಅವರ ಸಂಪುಟಕ್ಕೆ ಸೇರ್ಪಡೆಗೊಂಡರು. ಆದರೆ 2021 ರ ವಿಧಾನಸಭಾ ಚುನಾವಣೆಯಲ್ಲಿ ಡಿಎಂಕೆಯ ಯುವ ಕುಡಿ ಉದಯಾನಿಧಿ ರಾಜಕೀಯಕ್ಕೆ ಎಂಟ್ರಿ ಕೊಟ್ಟು, ಒಂದೇ ವರ್ಷದಲ್ಲಿ ಮಂತ್ರಿಯಾಗಿಯೂಬಿಟ್ಟರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ