ಮಗನ ಸೋಲಿನ ಭವಿಷ್ಯ ನುಡಿದ ಅಪ್ಪ, ಅನಿಲ್ ಆ್ಯಂಟೋನಿ ವಿರುದ್ದ ಗೆಲುವು ನಮ್ಮದೆಂದ ಎಕೆ!

Published : Apr 09, 2024, 04:13 PM IST
ಮಗನ ಸೋಲಿನ ಭವಿಷ್ಯ ನುಡಿದ ಅಪ್ಪ, ಅನಿಲ್ ಆ್ಯಂಟೋನಿ ವಿರುದ್ದ ಗೆಲುವು ನಮ್ಮದೆಂದ ಎಕೆ!

ಸಾರಾಂಶ

ಕಾಂಗ್ರೆಸ್ ಪಕ್ಷವನ್ನೇ ಉಸಿರಾಗಿಸಿಕೊಂಡಿರುವ ಎಕೆ ಆ್ಯಂಟೊನಿ ಪುತ್ರ ಅನಿಲ್ ಆ್ಯಂಟೋನಿ ಬಿಜೆಪಿ ಸೇರಿ ಇದೀಗ ಅಭ್ಯರ್ಥಿಯಾಗಿದ್ದಾರೆ. ಆದರೆ ತಂದೆ ಎಕೆ ಆ್ಯಂಟೋನಿ ಮಗನ ಸೋಲು ಖಚಿತ ಎಂದಿದ್ದಾರೆ. ಇಷ್ಟೇ ಅಲ್ಲ ಅನಿಲ್ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಲಿದ್ದಾರೆ ಎಂದಿದ್ದಾರೆ.  

ತಿರುವನಂತಪುರಂ(ಏ.09) ಲೋಕಸಭಾ ಚುನಾವಣೆ ಈ ಬಾರಿ ಕೇರಳದಲ್ಲಿ ಭಾರಿ ಕುತೂಹಲ ಕೆರಳಿದೆ. ಕಾರಣ ಘಟಾನುಘಟಿ ನಾಯಕರು ಕಣದಲ್ಲಿದ್ದಾರೆ. ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್, ನಟ ಸುರೇಶ್ ಗೋಪಿ ಸೇರಿದಂತೆ ಪ್ರಮುಖ ನಾಯಕರು ಕಣದಲ್ಲಿದ್ದಾರೆ. ಇದರ ಜೊತೆಗೆ ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಸಚಿವ ಎಕೆ ಆ್ಯಂಟೋನಿ ಪುತ್ರ ಇದೀಗ ಬಿಜೆಪಿಯ ಅಭ್ಯರ್ಥಿ. ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಬೆನ್ನಲ್ಲೇ ಕೇರಳದಲ್ಲಿ ಕೋಲಾಹಲ ಸೃಷ್ಟಿಯಾಗಿತ್ತು. ಇದೀಗ ಭರ್ಜರಿ ಪ್ರಚಾರದಲ್ಲಿ ತೊಡಗಿರುವ ಅನಿಲ್ ಆ್ಯಂಟೋನಿ ಕುರಿತು ತಂದೆ ಎಕೆ ಅ್ಯಂಟೋನಿ ಭವಿಷ್ಯ ನುಡಿದಿದ್ದಾರೆ. ಪಟ್ಟಣಂತಿಟ್ಟದಲ್ಲಿ ಅನಿಲ್ ಆ್ಯಂಟೊನಿಗೆ ಸೋಲು ಖಚಿತ ಎಂದಿದ್ದಾರೆ. 

ಎಕೆ ಆ್ಯಂಟೋನಿ ಸುದ್ದಿಗೋಷ್ಠಿಯಲ್ಲಿ ಭವಿಷ್ಯ ನುಡಿದಿದ್ದಾರೆ. ಪಟ್ಟಣಂತಿಟ್ಟ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆ್ಯಂಟೋ ಆಂಟೊನಿ ಗೆಲುವು ಸಾಧಿಸುವುದು ಖಚಿತ.ಬಿಜೆಪಿ ಅಭ್ಯಯರ್ಥಿ ಅನಿಲ್ ಸೋಲಲಿದ್ದಾರೆ. ಕೇರಳದಲ್ಲಿ ಮತೀಯವಾದ ಪಕ್ಷಗಳಿಗೆ ಜನ ಮನ್ನಣೆ ನೀಡುವುದಿಲ್ಲ. ಕೇರಳ ಜಾತ್ಯಾತೀತ ರಾಜ್ಯ ಎಂದು ಎಕೆ ಆ್ಯಂಟೊನಿ ಹೇಳಿದ್ದಾರೆ.

ಪಾದ್ರಿ ಸೂಚನೆ, ಪ್ರಧಾನಿ ಕರೆ; ಅನಿಲ್ ಆ್ಯಂಟಿನಿ ಬಿಜೆಪಿ ಸೇರಿದ ಹಿಂದಿನ ಕಾರಣ ಬಿಚ್ಚಿಟ್ಟ ತಾಯಿ!

ನನ್ನ ಪುತ್ರ ಅನಿಲ್ ಆ್ಯಂಟೊನಿ ಬಿಜೆಪಿ ಸೇರಿಕೊಂಡಿರುವುದೇ ಮಹಾ ತಪ್ಪು. ಇದನ್ನು ನಾನು ಎಂದಿಗೂ ಒಪ್ಪಲು ಸಾಧ್ಯವಿಲ್ಲ. ನಾನು ಉಸಿರು, ಧರ್ಮ ಕಾಂಗ್ರೆಸ್. ಕಾಂಗ್ರೆಸ್ ಬಿಟ್ಟು ಬೇರೇನು ಯೋಚನೆ ಮಾಡುವುದಿಲ್ಲ. ಕೇರಳ ಕಾಂಗ್ರೆಸ್ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಹಾಗೂ ಆರ್‌ಎಸ್‌ಎಸ್ ವಿರುದ್ಧ ನಿರಂತ ಹೋರಾಡುತ್ತಲೇ ಬಂದಿದೆ. ಹೀಗಾಗಿ ಕೇರಳದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೀಡಿದ ಹೇಳಿಕೆಯನ್ನು ಜನರು ಗಂಭೀರವಾಗಿ ಪರಿಗಣಿಸುವುದಿಲ್ಲ. ಕೇರಳ ಜನರಿಗೆ ಬಿಜೆಪಿಯನ್ನು ದೂರವಿಡಬೇಕು. ಹೀಗಾಗಿ ರಾಹುಲ್ ಗಾಂಧಿ ವಿರುದ್ದ ಪಿಣರಾಯಿ ವಿಜಯನ್ ನೀಡಿದ ಹೇಳಿಕೆ ಮಹತ್ವ ಪಡೆದುಕೊಳ್ಳುವುದಿಲ್ಲ. ಬಿಜೆಪಿಯನ್ನು ದೂರವಿಡಲು ಕಾಂಗ್ರೆಸ್ ಹೋರಾಟಕ್ಕೆ ಇಂಡಿಯಾ ಒಕ್ಕೂಟದ ಬಲವಿದೆ ಎಂದು ಎಕೆ ಆ್ಯಂಟೊನಿ ಹೇಳಿದ್ದಾರೆ.

ರಾಷ್ಟ್ರೀಯ ವಿಚಾರದಲ್ಲಿ ಕಾಂಗ್ರೆಸ್ ಸ್ಪಷ್ಟ ನಿಲುವು ತೆಗೆದುಕೊಳ್ಳುತ್ತಿಲ್ಲ ಎಂದು ಪಿಣರಾಯಿ ವಿಜಯನ್ ಆರೋಪಿಸಿದ್ದರು. ಕಾಂಗ್ರೆಸ್ ಈ ದೇಶದ ನಾಗರೀಕರ ಕಾಳಜಿ ಹೊಂದಿದೆ. ದೇಶದ ಜನರ ವಿರುದ್ಧ ಯಾವುದೇ ನಿಲುವನ್ನ ಕಾಂಗ್ರೆಸ್ ವಿರೋಧಿಸಲಿದೆ. ಬಿಜೆಪಿಯ ದುರಾಡಳಿತವನ್ನು ಸಂಸತ್ತು ಹಾಗೂ ಸಂಸತ್ತಿನ ಹೊರಗಡೆ ಧೈರ್ಯಾಗಿ ಕಾಂಗ್ರೆಸ್ ಪ್ರಶ್ನಿಸಿದೆ ಎಂದು ಎಕೆ ಆ್ಯಂಟೊನಿ ಹೇಳಿದ್ದಾರೆ.

'ನಾನು ದೇಶಕ್ಕಾಗಿ ಕೆಲಸ ಮಾಡ್ತೇನೆ, ಕುಟುಂಬಕ್ಕಾಗಿ ಅಲ್ಲ..' ಟ್ರೋಲ್‌ ಮಾಡಿದ ರಾಹುಲ್‌ ಗಾಂಧಿಗೆ ಅನಿಲ್‌ ಆಂಟನಿ ತಿರುಗೇಟು!

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

UIDAI Rules: ಯಾವುದೇ ಹೋಟೆಲ್‌ನಲ್ಲಿ ಆಧಾರ್ ಕಾರ್ಡ್ ಫೋಟೋಕಾಪಿ ನೀಡೋ ಅಗತ್ಯವಿಲ್ಲ: ಈ ಹೊಸ ನಿಯಮ ತಿಳ್ಕೊಳ್ಳಿ
ತಾಯಿಯ ಜಾತಿ ಆಧಾರದಲ್ಲೇ ಮಗಳಿಗೆ ಜಾತಿ ಪ್ರಮಾಣಪತ್ರ: ಸುಪ್ರೀಂ ಮಹತ್ವದ ತೀರ್ಪು