ಕೆಲವರಿಂದ ನನಗೆ ಪ್ರಜಾಪ್ರಭುತ್ವದ ಪಾಠ ಹೇಳುವ ಪ್ರಯತ್ನ; ರಾಹುಲ್ ಗಾಂಧಿ ತಿವಿದ ಮೋದಿ!

By Suvarna NewsFirst Published Dec 26, 2020, 6:42 PM IST
Highlights

ಮೋದಿ ವಿರುದ್ಧ ಧ್ವನಿ ಎತ್ತಿದರಿಗೆ ಭಯೋತ್ಪಾದಕ ಪಟ್ಟ ನೀಡಲಾಗುತ್ತಿದೆ ಎಂಬ ರಾಹುಲ್ ಗಾಂಧಿ ಹೇಳಿಕೆಗೆ ಪ್ರಧಾನಿ ಮೋದಿ ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್ ಪ್ರಜಾಪ್ರಭುತ್ವದ ವೈಖರಿ ಕುರಿತು ಉದಾಹರಣೆಯೊಂದಿಗೆ ಮೋದಿ, ರಾಹುಲ್‌ ತಿವಿದಿದ್ದಾರೆ.

ನವದೆಹಲಿ(ಡಿ.26):  ರೈತರ ಪ್ರತಿಭಟನೆ ಜೊತೆ ಧ್ವನಿಗೂಡಿಸಿರುವ ಕಾಂಗ್ರೆಸ್ ಪ್ರದಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸುತ್ತಿದೆ. ಇತ್ತೀಚೆಗೆ ರಾಹುಲ್ ಗಾಂಧಿ, ಮೋದಿ ವಿರುದ್ಧ ಮಾತನಾಡುವವರನ್ನು ಉಗ್ರ ಹಣೆಪಟ್ಟಿ ನೀಡಲಾಗುತ್ತಿದೆ ಎಂದಿದ್ದರು. ರಾಹುಲ್ ಗಾಂಧಿ ಟೀಕೆಗೆ, ಮೋದಿ ತಿರೇಗೇಟು ನೀಡಿದ್ದಾರೆ.

ಕೀಳು ರಾಜಕೀಯಕ್ಕೆ ರೈತರ ಬಲಿಕೊಡಬೇಡಿ; ದೀದಿ ಸೇರಿದಂತೆ ವಿಪಕ್ಷಗಳ ವಿರುದ್ಧ ಮೋದಿ ಗುಡುಗು!

ಜಮ್ಮು ಮತ್ತು ಕಾಶ್ಮೀರ ನಿವಾಸಿಗಳಿಗೆ ಪಿಎಂ ಜಯ್ ಶೆಹತ್ ಆಯುಷ್ಮಾನ್ ಭಾರತ್ ಯೋಜನೆ ಉದ್ಘಾಟಿಸಿದ ಮೋದಿ ಟೀಕೆಗೆ ಉತ್ತರಿಸಿದರು. ದೆಹಲಿಯಲ್ಲಿರುವ ಕೆಲವರು ಅವರ ಕಾಲಬುಡದಲ್ಲಿ ಪ್ರಜಾಪ್ರಭುತ್ವ ಕೊಳೆತುಹೋಗಿದ್ದರೂ, ನನಗೆ ಪ್ರಜಾಪ್ರಭುತ್ವದ ಪಾಠ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ರಾಹುಲ್ ಗಾಂಧಿಯನ್ನು ತಿವಿದಿದ್ದಾರೆ.

ನೇತಾಜಿ 125ನೇ ಜನ್ಮದಿನಾಚರಣೆ; ಉನ್ನತ ಮಟ್ಟದ ಸಮಿತಿ ರಚಿಸಿದ ಕೇಂದ್ರ ಸರ್ಕಾರ !

ಜಮ್ಮ ಮತ್ತು ಕಾಶ್ಮೀರದಲ್ಲಿ ಡಿಡಿಸಿ ಚುನಾವಣೆ ಶಾಂತಿಯುತವಾಗಿ ನಡೆದಿದೆ. ಜನರು ಮತದಾನದಲ್ಲಿ ಪಾಲ್ಗೊಳ್ಳುವ ಮೂಲಕ ಭಾರತಕ್ಕೆ ಹೆಮ್ಮೆ ತಂದಿದ್ದಾರೆ. ಆದರೆ ಕೇಂದ್ರದಲ್ಲಿ ಕಾಂಗ್ರೆಸ್ ಆಡಳಿತಿದ್ದ ವೇಳೆ, ಪುದುಚೇರಿಯಲ್ಲಿ ಸುಪ್ರೀಂ ಕೋರ್ಟ್ ಆದೇಶವಿದ್ದರೂ, ಕಾಂಗ್ರೆಸ್ ಮುನ್ಸಿಪಲ್ ಹಾಗೂ ಪಂಚಾಯತ್ ಚುನಾವಣೆ ನಡೆಸಿಲ್ಲ. ಇದು ಯಾವ ಪ್ರಜಾಪ್ರಭುತ್ವ ಎಂದು ಮೋದಿ ಪ್ರಶ್ನಿಸಿದ್ದಾರೆ.

ಪ್ರದಾನಿ ಮೋದಿ ವಿರುದ್ಧ ಮಾತನಾಡುವವರನ್ನು ಉಗ್ರರೆಂಬಂತೆ ನೋಡಲಾಗುತ್ತಿದೆ. ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಕೂಡ ಮೋದಿ ವಿರುದ್ಧ ಮಾತನಾಡಿದರೆ ಉಗ್ರ ಹಣೆಪಟ್ಟಿ ಕಟ್ಟಲಾಗುತ್ತೆ ಎಂದು ರಾಹುಲ್ ಗಾಂಧಿ ಮೋದಿ ವಿರುದ್ಧ ಆರೋಪ ಮಾಡಿದ್ದಾರೆ.

click me!