ಕಾಶ್ಮೀರ ಮಕ್ಕಳೊಂದಿಗೆ ಭಾರತೀಯ ಸೇನೆ ಕ್ರಿಸ್ಮಸ್ ಆಚರಣೆ; ಮಕ್ಕಳಿಗೆ ಗಿಫ್ಟ್ ನೀಡಿದ ಸೇನಾ ಸಾಂತಾ!

By Suvarna NewsFirst Published Dec 26, 2020, 6:15 PM IST
Highlights

ದೇಶದಲ್ಲಿ ಕ್ರಿಸ್ಮಸ್ ಹಬ್ಬವನ್ನು ಆಚರಿಸಲಾಗಿದೆ. ಕಾಶ್ಮೀರದಲ್ಲಿ ಭಾರತೀಯ ಸೇನೆ ಸ್ಥಳೀಯ ಮಕ್ಕಳೊಂದಿಗೆ ಕ್ರಿಸ್ಮಸ್ ಆಚರಿಸಿದೆ. ಮಕ್ಕಳಿಗೆ ಸೇನಾ ಸಾಂತಾ ಹಲವು ಗಿಫ್ಟ್ ನೀಡಿದೆ. ಈ ಕುರಿತ ವಿವರ ಇಲ್ಲಿದೆ.
 

ಕಾಶ್ಮೀರ(ಡಿ.26): ಭಾರತದಲ್ಲೂ ಕ್ರಿಸ್ಮಸ್ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗಿದೆ. ವಿಶೇಷವಾಗಿ ಭಾರತೀಯ ಸೇನೆ ಕಾಶ್ಮೀರದಲ್ಲಿ ಸ್ಥಳೀಯ ಮಕ್ಕಳೊಂದಿಗೆ ಕ್ರಿಸ್ಮಸ್ ಹಬ್ಬ ಆಚರಿಸಿದೆ. ಯೋಧ ಸಾಂತಾ ಕ್ಲಾಸ್ ವೇಷ ಧರಿಸಿ ಮಕ್ಕಳಿಗೆ ಚಾಕೋಲೇಟ್ ಸೇರಿದಂತೆ ಹಲವು ಗಿಫ್ಟ್ ನೀಡಿದೆ. ಬಳಿಕ ಮಕ್ಕಳಿಗೆ ಮುಂದಿನ ಭವಿಷ್ಯದ ಕುರಿತು ಮಾಹಿತಿ ನೀಡಲಾಗಿದೆ.

ಶೋಪಿಯಾನ್ ಎನ್‌ಕೌಂಟರ್‌; ಇಬ್ಬರು ಉಗ್ರರರ ಹೊಡೆದುರುಳಿಸಿದ ಭಾರತೀಯ ಸೇನೆ!...

ಶ್ರೀನಗರದಿಂದ 65 ಕಿ.ಮೀ ದೂರದಲ್ಲಿರುವ ಲಾರ್ಕಿಪೋರಾ ವಲಯದಲ್ಲಿ ಭಾರತೀಯ ಸೇನೆ ಕ್ರಿಸ್ಮಸ್ ಹಬ್ಬ ಆಚರಿಸಿದೆ. ವೆಸು, ವೈಲು, ಗಡೋಲ್, ಬ್ರೆಂಟಿ ಸೇರಿದಂತೆ ಸ್ಥಳೀಯ ನಿವಾಸಿಗಳ ಮಕ್ಕಳಿಗೆ ಭಾರತೀಯ ಸೇನೆ ಆಹ್ವಾನ ನೀಡಿತ್ತು. ವಿಶೇಷ ಸಂಭ್ರಮದಲ್ಲಿ 19 ರಾಷ್ಟ್ರೀಯ ರೈಫಲ್ಸ್ ವಿಭಾಗದ ಗುರುವಿಂದರ್ ಸಿಂಗ್ ಸಾಂತಾ ಆಗಿ ಕಾಣಿಸಿಕೊಂಡರು.

ಉಗ್ರರ ಹೆಡೆಮುರಿ ಕಟ್ಟಲು 200 ಮೀ. ಪಾಕಿಸ್ತಾನ ಗಡಿಯೊಳಕ್ಕೆ ಪ್ರವೇಶಿಸಿದ ಭಾರತೀಯ ಸೇನೆ!

ಕ್ರಿಸ್ಮಸ್ ಆಚರಣೆಗೆ ಆಗಮಿಸಿದ ಎಲ್ಲಾ ಮಕ್ಕಳಿಗೆ ಸೇನಾ ಸಾಂತಾ ಗುರುವಿಂದರ್ ಸಿಂಗ್ ಚಾಕೋಲೆಟ್ ಸೇರದಂತೆ ಹಲವು ಗಿಫ್ಟ್ ನೀಡಿದರು.  ಸ್ಥಳೀಯರೊಂದಿಗೆ ಉತ್ತಮ ಬಾಂಧವ್ಯ ಹಾಗೂ ಮಕ್ಕಳಿಗೆ ಮುಂದಿನ ಭವಿಷ್ಯದ ಕುರಿತು ಮಾಹಿತಿ ಹಂಚಿಕೊಳ್ಳುವ  ಮೂಲಕ ಕ್ರಿಸ್ಮಸ್ ಹಬ್ಬವನ್ನು ಭಾರತೀಯ ಸೇನೆ ಉಪಯುಕ್ತವಾಗಿ ಆಚರಿಸಿತು.

click me!