
ನವದೆಹಲಿ(ಮೇ.14): ಇಡೀ ವಿಶ್ವವೇ ಕೊರೋನಾ ವೈರಸ್ ವಿರುದ್ಧ ಹೋರಾಡುತ್ತಿದೆ. ಆರೋಗ್ಯ ತುರ್ತು ಪರಿಸ್ಥಿತಿ ಎದುರಾಗಿದೆ. ಆಯಾ ದೇಶಗಳು ತಮ್ಮ ತಮ್ಮ ದೇಶದ ಜನರನ್ನು ರಕ್ಷಿಸಿಕೊಳ್ಳಲು ಶಕ್ತಿ ಮೀರಿ ಪ್ರಯತ್ನಿಸುತ್ತಿದೆ. ಆದರೆ ಕೆಲವರು ಭಾರತದೊಳಗೆ ಭಯೋತ್ಪಾದನೆ ಹರಡುವುದರಲ್ಲಿ ಬ್ಯುಸಿಯಾಗಿದ್ದಾರೆ ಎಂದು ಭಾರತದ ವಿದೇಶಾಂಗ ಇಲಾಖೆ ಕಾರ್ಯದರ್ಶಿ ಜೈಶಂಕರ್ ಹೇಳಿದ್ದಾರೆ
'ಈಗಲೇ ನಮ್ಮ ಜಾಗ ಬಿಟ್ಟು ಹೊರಡಿ' ಕುತಂತ್ರಿ ಪಾಕ್‌ಗೆ ಭಾರತ ಕೊನೆ ಸಂದೇಶ
ಶಾಂಘೈ ವಿದೇಶಾಂಗ ಸಚಿವರ ವಿಡಿಯೋ ಕಾನ್ಫೆರೆನ್ಸ್‌ನಲ್ಲಿ ಪಾಲ್ಗೊಂಡ ಜೈಶಂಕರ್, ಪಾಕಿಸ್ತಾನ ವಿರುದ್ಧ ಗುಡುಗಿದ್ದಾರೆ. ಪಾಕಿಸ್ತಾನದಲ್ಲಿರುಲ ಹಲವು ನಕಲಿ ಖಾತೆಗಳ ಮೂಲಕ ಭಾರತದ ಸಮುದಾಯವನ್ನು ಒಡೆಯುವ ಪ್ರಯತ್ನ ನಡೆಯುತ್ತಿದೆ. ಇನ್ನು ಪಾಕಿಸ್ತಾನದ ಕುಮ್ಮಕ್ಕಿನಿಂದ ಕಾಶ್ಮೀರದಲ್ಲಿನ ಭಯೋತ್ಪಾದನ ಚಟುವಟಿಕೆಗೆಳು ನಡೆಯುತ್ತಿದೆ ಎಂದರು. ಈ ವೇಳೆ ಪಾಕಿಸ್ತಾನ ವಿದೇಶಾಂಗ ಸಚಿವ ಶಾ ಮೊಹಮ್ಮದ್ ಖುರೇಶಿ ಹಾಜರಿದ್ದರು.
ಕೂಡಲೇ ಕುಲಭೂಷಣ್ ಜಾಧವ್ ಬಿಡುಗಡೆ ಮಾಡಿ: ಜೈಶಂಕರ್ ಗುಡುಗು!.
ಭಾರತ ಕೊರೋನಾ ವಿರುದ್ಧ ಹೋರಾಡುತ್ತಿದೆ. ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇದರ ಜೊತೆಗೆ ಆರ್ಥಿಕತೆ ಚೇತರಿಕೆಗೆ ಕ್ರಮ ಕೈಗೊಳ್ಳಲಾಗಿದೆ. ಆದರೆ ಕೆಲ ದೇಶ ಕೊರೋನಾ ವಿರುದ್ಧ ಹೋರಾಡಿ ದೇಶವನ್ನು ರಕ್ಷಿಸಿಕೊಳ್ಳುವ ಬದಲು ಭಯೋತ್ಪಾದನೆಯನ್ನೇ ಮೂಲ ಮಂತ್ರವನ್ನಾಗಿಸಿದೆ ಎಂದು ಪಾಕಿಸ್ತಾನ ಕಪಾಳ ಮೋಕ್ಷ ಮಾಡಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಪಾಕಿಸ್ತಾನ ವಿದೇಶಾಂಗ ಸಚಿವ ಶಾ ಮೊಹಮ್ಮದ್ ಖುರೇಶಿ, ಯಾವುದೇ ದೇಶವನ್ನು ನಿಂದಿಸಲು, ದೂಷಿಸಲು ಭಯೋತ್ವಾದನೆ, ಇಸ್ಲಾಮೋಫೋಬಿಯಾವನ್ನು ರಾಜಕೀಯವಾಗಿ ಬಳಸಿ ಒಂದು ದೇಶವನ್ನು ದೂಷಿಸಲಾಗುತ್ತಿದೆ. ಈ ಕುರಿತು ಸಭೆಯ ಸದಸ್ಯರಿಗೆ ಕರೆ ಮಾಡಿ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದೇನೆ ಎಂದು ಟ್ವಿಟರ್‌ನಲ್ಲಿ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ