ನರೇಂದ್ರ ಮೋದಿ ಅವರನ್ನು ಹಾಡಿ ಹೊಗಳಿದ ದೇವೇಗೌಡ/ ಸರಣಿ ಟ್ವೀಟ್ ಮೂಲಕ ಮೋದಿಗೆ ಅಭಿನಂದನೆ ಸಲ್ಲಿಸಿದ ಜಿಟಿಡಿ/ ಮೋದಿ ಅಭಿಯಾನ ಆತ್ಮವಿಶ್ವಾಸ ಹೆಚ್ಚಿಸಿದೆ.
ಬೆಂಗಳೂರು(ಮೇ 14) ಪ್ರಧಾನಿ ನರೇಂದ್ರ ಮೋದಿಯವರನ್ನು ದೇವೇಗೌಡ ಕೊಂಡಾಡಿದ್ದಾರೆ. ನಾವು ಹೇಳುತ್ತಿರುವುದು ಜೆಡಿಎಸ್ ನಾಯಕ ಜಿಟಿ ದೇವೇಗೌಡ ಅವರ ಬಗ್ಗೆ. ಸರಣಿ ಟ್ವೀಟ್ ಮಾಡಿರುವ ಗೌಡರು ಮೋದಿ ವಿಶೇಷ ಪ್ಯಾಕೇಜ್ ನೀಡಿರುವುದನ್ನು ಸ್ವಾಗತಿಸಿದ್ದಾರೆ.
ಸ್ವಾವಲಂಬಿ ಭಾರತದ ಸಂಕಲ್ಪವನ್ನು ಬಲಿಷ್ಠಗೊಳಿಸಲು ರೂ 20 ಲಕ್ಷ ಕೋಟಿ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಿಸಿದ ಪ್ರಧಾನಿ ನರೇಂದ್ರ ಮೋದಿ ಭಾರತೀಯ ಜನತೆಗೆ ಸಹಾಯ ಹಸ್ತವನ್ನು ನೀಡಿದ್ದಾರೆ. ಪ್ರಧಾನಿಯವರ ಈ ನಿರ್ಣಯವನ್ನು ಸ್ವಾಗತಿಸುತ್ತೇನೆ ಎಂದಿದ್ದಾರೆ.
ಆರ್ಥಿಕತೆ ಮೇಲೆತ್ತಲು ಮೋದಿ 3 ಆರ್ ಸೂತ್ರ
ಖಾದಿಯನ್ನು ಖರೀದಿಸುವಂತೆ ನಾವು ಉತ್ತೇಜನ ನೀಡಿದೆವು, ಈ ಸಣ್ಣ ಪ್ರಯತ್ನಕ್ಕೆ ದೊಡ್ಡ ಫಲ ಸಿಕ್ಕಿದೆ. ಕೊರೋನಾ ವಿರುದ್ಧ ಭಾರತ ಹೋರಾಡುತ್ತದೆ ಹೊಸ ಬದುಕನ್ನು ನಾವು ಕಟ್ಟಿಕೊಳ್ಳುತ್ತೇವೆ. ಸಮಸ್ತ ಭಾರತೀಯರಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಲು ಆತ್ಮ ನಿರ್ಭರ್ ಅಭಿಯಾನವನ್ನು ಕೇಂದ್ರ ಸರ್ಕಾರ ಪ್ರಾರಂಭ ಮಾಡಿರುವುದು ಶ್ಲಾಘನೀಯ ಎಂದಿದ್ದಾರೆ.
21ನೇ ಶತಮಾನದಲ್ಲಿ ಭವ್ಯ ಭಾರತವನ್ನು ಕಟ್ಟಲು ಹೊರಟಿರುವ ಪ್ರಧಾನಿಯವರಿಗೆ ನಮ್ಮೆಲ್ಲರ ಬೆಂಬಲವಿದೆ ಎಂದು ಜಿಟಿಡಿ ಟ್ವಿಟರ್ ಮೂಲಕ ಹೇಳಿದ್ದಾರೆ. ಜೆಡಿಎಸ್ ನಿಂದ ಜಿಟಿ ದೇವೇಗೌಡ ಒಂದು ಕಾಲು ಹೊರಗೆ ಇಟ್ಟಿದ್ದಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬಂದಿದ್ದವು. ಜೆಡಿಎಸ್ ನಾಯಕ ಕುಮಾರಸ್ವಾಮಿ ಮತ್ತು ಜಿಟಿಡಿ ನಡುವೆ ವಾಕ್ಸಮರವೂ ನಡೆದಿತ್ತು.
ಸ್ವಾವಲಂಬಿ ಭಾರತದ ಸಂಕಲ್ಪವನ್ನು ಬಲಿಷ್ಠಗೊಳಿಸಲು ರೂ 20 ಲಕ್ಷ ಕೋಟಿ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಿಸಿದ ಪ್ರಧಾನಿ ನರೇಂದ್ರ ಮೋದಿ ಭಾರತೀಯ ಜನತೆಗೆ ಸಹಾಯ ಹಸ್ತವನ್ನು ನೀಡಿದ್ದಾರೆ. ಪ್ರಧಾನಿಯವರ ಈ ನಿರ್ಣಯವನ್ನು ಸ್ವಾಗತಿಸುತ್ತೇನೆ. (1/4) pic.twitter.com/oz9kiVm7NR
— GT Devegowda (@GTDevegowda)