ಗಣರಾಜ್ಯೋತ್ಸವ: ಮೊಹಮ್ಮದ್‌ ರಫಿಯಷ್ಟೇ ಸೊಗಸಾಗಿ ಹಾಡಿದ ಯೋಧ..

By Anusha KbFirst Published Jan 26, 2022, 6:34 PM IST
Highlights
  • ಗಣರಾಜ್ಯೋತ್ಸವದಂದು ದೇಶಭಕ್ತಿಗೀತೆ ಹಾಡಿದ ಯೋಧ
  • ಯೋಧನ ಸುಮಧುರ ಕಂಠಕ್ಕೆ ಮೆಚ್ಚುಗೆ
  • ಮೊಹಮ್ಮದ್‌ ರಫಿ ಹಾಡಿದ ಕರ್ ಚಲೇ ಹಮ್ ಫಿದಾ ಹಾಡು

ನವದೆಹಲಿ(ಜ.26): ಗಣರಾಜ್ಯೋತ್ಸವ ದಿನವಾದ ಇಂದು (ಜ.26) ಯೋಧರೊಬ್ಬರು ಹಾಡಿದ ಸಿನಿಮಾವೊಂದರ ದೇಶ ಭಕ್ತಿ ಗೀತೆ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಎಲ್ಲೆಡೆ ಯೋಧನ ಸುಮಧುರ ಧ್ವನಿಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಖ್ಯಾತ ಗಾಯಕ ಮಹಮ್ಮದ್‌ ರಫಿ ಅವರ ಕಂಠಸಿರಿಯಲ್ಲಿ ಮುದ್ರಿತಗೊಂಡ ಹಾಡು ಇದಾಗಿದ್ದು, ಯೋಧರೊಬ್ಬರೂ ಮಹಮ್ಮದ್‌ ರಫಿಯಷ್ಟೇ ಮಧುರವಾಗಿ ಈ ಹಾಡನ್ನು ಹಾಡುವ ಮೂಲಕ ಎಲ್ಲರ ಹೃದಯವನ್ನು ಭಾವುಕವಾಗಿಸಿದರು. 

ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಇಂಡೋ ಟಿಬೇಟಿಯನ್‌ ಬಾರ್ಡರ್‌ ಪೊಲೀಸ್ (ITBP) ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಯೋಧ ಹಾಡು ಹಾಡಿದ ದೃಶ್ಯದ ವಿಡಿಯೋವನ್ನು ಪೋಸ್ಟ್‌ ಮಾಡಿದ್ದು, ವೈರಲ್ ಆಗಿದೆ. ಇಂಡೋ ಟಿಬೇಟಿಯನ್‌ ಬಾರ್ಡರ್‌ ಪೊಲೀಸ್ ಪಡೆಯ ಸಿಬ್ಬಂದಿ ವಿಕ್ರಂ ಜೀತ್‌ ಸಿಂಗ್‌ (Vikram Jeet Singh) ಗಣರಾಜ್ಯೋತ್ಸವದ ಅಂಗವಾಗಿ ಈ ಹಾಡು ಹಾಡಿದ್ದಾರೆ. ಹಾಡಿನ ಕೆಲವು ಸಾಲುಗಳನ್ನು ಬರೆದು ಐಟಿಬಿಪಿ ಈ ವಿಡಿಯೋವನ್ನು ಪೋಸ್ಟ್‌ ಮಾಡಿದೆ. ಜೊತೆಗೆ ರಿಪಬ್ಲಿಕ್‌ಡೇ ಹಾಗೂ ಹಿಮವೀರ್‌ ಎಂದು ಹ್ಯಾಶ್‌ಟ್ಯಾಗ್ ನೀಡಿದೆ.

कर चले हम फिदा जानो तन साथियों,
अब तुम्हारे हवाले वतन साथियों...

Constable Vikram Jeet Singh of ITBP sings on pic.twitter.com/DhEoDnKzPR

— ITBP (@ITBP_official)

 

ಈ ವಿಡಿಯೋದಲ್ಲಿ ಸೇನಾ ಸಮವಸ್ತ್ರದಲ್ಲಿ ಇಬ್ಬರು ಯೋಧರಿದ್ದು,  ಅವರಲ್ಲಿ ಒಬ್ಬರು ಹಾಡು ಹಾಡುತ್ತಿದ್ದರೆ ಮತ್ತೊಬ್ಬರು ಗಿಟಾರ್ ನುಡಿಸುತ್ತಿದ್ದಾರೆ. 1964 ಹಿಂದಿ ಚಲನಚಿತ್ರದ  ಹಕೀಕತ್‌ (Haqeeqat)ನ ಹಾಡನ್ನು ಯೋಧ ಹಾಡುವುದನ್ನು ಕೇಳಬಹುದು.  'ಕರ್ ಚಲೇ ಹಮ್ ಫಿದಾ ಹಾಡನ್ನು ಯೋಧ ಹಾಡುತ್ತಿದ್ದು, ಕೈಫಿ ಅಜ್ಮಿ (Kaifi Azmi) ಬರೆದ ಈ ಐತಿಹಾಸಿಕ ಹಾಡನ್ನು ಮೊಹಮ್ಮದ್ ರಫಿ (Mohammed Rafi) ಹಾಡಿದ್ದಾರೆ.

ಮೊಣಕಾಲೆತ್ತರದ ಹಿಮದ ಮೇಲೆ ಯೋಧರ ವಾಲಿಬಾಲ್‌ ಆಟ

ಮೊನ್ನೆ ಮೊನ್ನೆಯಷ್ಟೇ ಭಾರತೀಯ ಯೋಧನೊಬ್ಬ ಸುರಿಯುತ್ತಿರುವ ಹಿಮಗಾಳಿಯನ್ನು ಲೆಕ್ಕಿಸದೇ ಅಚಲವಾಗಿ ನಿಂತು ದೇಶ ಕಾಯುತ್ತಿರುವ ವಿಡಿಯೋ ವೈರಲ್‌ ಆಗಿತ್ತು. ಇದೀಗ ರಾಶಿಬಿದ್ದಿರುವ ಮೊಣಕಾಲೆತ್ತರದ ಹಿಮದಲ್ಲಿ ಯೋಧರು ವಾಲಿಬಾಲ್‌ ಆಟವಾಡುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಆ ಮೈನಸ್‌ ಡಿಗ್ರಿ ಚಳಿಯಲ್ಲೂ ಯೋಧರ ಕ್ರೀಡಾಸ್ಪೂರ್ತಿಗೆ ನೆಟ್ಟಿಗರು ಭೇಷ್‌ ಎನ್ನುತ್ತಿದ್ದಾರೆ. 

ಮೈ ಕೊರೆಯುವ ಹಿಮದಲ್ಲಿ 40 ಸೆಕೆಂಡ್‌ನಲ್ಲಿ 47 ಫುಶ್‌ಅಪ್ ಹೊಡೆದ ಯೋಧ

ಪ್ರವಾಹವೇ ಬರಲಿ, ಭೂಕಂಪವಾಗಲಿ ಹೀಗೆ ಎಂಥಹದ್ದೇ ನೈಸರ್ಗಿಕ ವಿಕೋಪಗಳು ಸಂಭವಿಸಲಿ ತಕ್ಷಣವೇ ದೇಶದ ನಾಗರಿಕರ ರಕ್ಷಣೆಗೆ ಧಾವಿಸುವುದು ಭಾರತೀಯ ಸೇನೆ. ಮಳೆ, ಮೈ ಕೊರೆಯುವ ಚಳಿ, ಬಿಸಿಲೆನ್ನದೆ ದೇಶ ಕಾಯವ ಯೋಧರು ಪೋಷಕರು, ಹೆಂಡತಿ ಮಕ್ಕಳಿಂದ ದೂರವುಳಿದು ದೇಶವನ್ನು ಕಾಯಲು ತೆರಳುತ್ತಾರೆ.  ತಾವಿದ್ದಲ್ಲೇ ತಮ್ಮ ಜೊತೆ ಇರುವವರನ್ನೇ ಕುಟುಂಬವೆಂದು ತಿಳಿದು ಸಂಭ್ರಮಿಸಿ ಖುಷಿ ಪಡುವ ಸೈನಿಕರ ಮನಸ್ಥಿತಿ ಪದಗಳಿಗೆ ನಿಲುಕದ್ದು. 

ಭಾರತೀಯ ಸೇನಾ ಯೋಧರು ಸಂದರ್ಭ ಎಂತಹುದ್ದೇ ಇರಲಿ ಆ ಕ್ಷಣವನ್ನು ಉಲ್ಲಾಸಮಯಗೊಳಿಸುವುದರಲ್ಲಿ ಎತ್ತಿದ ಕೈ. ದೇಶ ಸಂಕಷ್ಟಕ್ಕೀಡಾದಾಗಲೆಲ್ಲಾ ಮುಂದೋಡಿ ಬಂದು ನೆರವಿಗೆ ಬರುವ ಭಾರತೀಯ ಯೋಧರು ತಮ್ಮ ಸಂಸ್ಕೃತಿ ಸಂಪ್ರದಾಯ ಪಾಲಿಸುವುದರ ಜೊತೆ ನೃತ್ಯಗಳನ್ನು ಮಾಡಿ ಸಂಭ್ರಮಿಸುವುದರಲ್ಲೂಅಷ್ಟೇ ಹುಶಾರು. ತಾವಿರುವ ಸ್ಥಳ ಎಂತಹದ್ದೇ ಇರಲಿ ಅಲ್ಲಿ ಉತ್ಸಾಹ ತುಂಬುವ ಯೋಧರು ಮೊನ್ನೆಯಷ್ಟೇ ಮೈನಸ್‌ಗಿಂತಲೂ ಕಡಿಮೆ ತಾಪಮಾನವಿರುವ ಹಿಮದಿಂದ ಆವೃತ್ತವಾದ ಪ್ರದೇಶದಲ್ಲಿ ಸಖತ್‌ ಆಗಿ ಖುಕುರಿ ಡಾನ್ಸ್‌ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದರು.

click me!