ಲೈಂಗಿಕ ಕಿರುಕುಳ ಕೇಸಲ್ಲಿ ಕೇರಳ ಮಾಜಿ ಸಿಎಂ, ಬಿಜೆಪಿಯ ಎ.ಪಿ. ಅಬ್ದುಲ್ಲಕುಟ್ಟಿಗೆ ಸಿಬಿಐ ಕ್ಲೀನ್ ಚಿಟ್

Published : Dec 28, 2022, 11:05 AM IST
ಲೈಂಗಿಕ ಕಿರುಕುಳ ಕೇಸಲ್ಲಿ ಕೇರಳ ಮಾಜಿ ಸಿಎಂ, ಬಿಜೆಪಿಯ ಎ.ಪಿ. ಅಬ್ದುಲ್ಲಕುಟ್ಟಿಗೆ ಸಿಬಿಐ ಕ್ಲೀನ್ ಚಿಟ್

ಸಾರಾಂಶ

ದೂರುದಾರರು ಆರೋಪಿಸಿದಂತೆ ಅಪರಾಧ ನಡೆದ ದಿನದಂದು ಅಂದಿನ ಮುಖ್ಯಮಂತ್ರಿ ಕ್ಲಿಫ್ ಹೌಸ್‌ನಲ್ಲಿ (ಕೇರಳ ಮುಖ್ಯಮಂತ್ರಿಯ ಅಧಿಕೃತ ನಿವಾಸ) ಹಾಜರಿರಲಿಲ್ಲ. ದೂರುದಾರರ ಹೇಳಿಕೆಗಳಲ್ಲಿ ವ್ಯತ್ಯಾಸಗಳಿವೆ ಎಂದು ಕೇಂದ್ರೀಯ ಸಂಸ್ಥೆಯ ವರದಿಯಲ್ಲಿ ಹೇಳಲಾಗಿದೆ.

ಕೇರಳದ (Kerala) ಪ್ರಮುಖ ಸೋಲಾರ್ ಹಗರಣದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ (Solar Scam Sexual Assault Case) ಕಾಂಗ್ರೆಸ್ (Congress) ಹಿರಿಯ ನಾಯಕ ಮತ್ತು ಕೇರಳದ ಮಾಜಿ ಮುಖ್ಯಮಂತ್ರಿ ಊಮ್ಮನ್‌ ಚಾಂಡಿಗೆ (Oommen Chandy) ಬುಧವಾರ ಸಿಬಿಐ (CBI) ಕ್ಲೀನ್ ಚೀಟ್ ನೀಡಿದೆ. ಕೇರಳದ ತಿರುವನಂತಪುರಂನಲ್ಲಿರುವ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ (ಸಿಜೆಎಂ)ಗೆ (Chief Judicial Magistrate) ಊಮ್ಮನ್‌ ಚಾಂಡಿ ವಿರುದ್ಧದ ಆರೋಪವನ್ನು ಸಾಬೀತುಪಡಿಸಲು ಯಾವುದೇ ಪುರಾವೆಗಳಿಲ್ಲ ಎಂದು ಕೇಂದ್ರೀಯ ತನಿಖಾ ದಳ (ಸಿಬಿಐ) ಹೇಳಿದೆ. ದೂರುದಾರರು ಆರೋಪಿಸಿದಂತೆ ಅಪರಾಧ ನಡೆದ ದಿನದಂದು ಅಂದಿನ ಮುಖ್ಯಮಂತ್ರಿ ಕ್ಲಿಫ್ ಹೌಸ್‌ನಲ್ಲಿ (Cliff House) (ಕೇರಳ ಮುಖ್ಯಮಂತ್ರಿಯ ಅಧಿಕೃತ ನಿವಾಸ) ಹಾಜರಿರಲಿಲ್ಲ. ದೂರುದಾರರ ಹೇಳಿಕೆಗಳಲ್ಲಿ ವ್ಯತ್ಯಾಸಗಳಿವೆ ಎಂದು ಕೇಂದ್ರೀಯ ಸಂಸ್ಥೆಯ ವರದಿಯಲ್ಲಿ ಹೇಳಲಾಗಿದೆ.

ಇನ್ನು, ಈ ಪ್ರಕರಣದಲ್ಲಿ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಎ.ಪಿ. ಅಬ್ದುಲ್ಲಕುಟ್ಟಿ (A.P Abdullakutty) ಅವರಿಗೂ ಸಿಬಿಐ ಕ್ಲೀನ್ ಚಿಟ್ ನೀಡಿದೆ. ಸೋಲಾರ್ ಹಗರಣದ ಪ್ರಕರಣ ಸ್ಫೋಟಗೊಂಡಾಗ ಅಬ್ದುಲ್ಲಕುಟ್ಟಿ ಕಾಂಗ್ರೆಸ್ಸಿಗರಾಗಿದ್ದರು ಮತ್ತು ಆಗಿನ ಆಡಳಿತಾರೂಢ ಯುಡಿಎಫ್ ಸರ್ಕಾರದ ಇತರ ಹಲವು ಉನ್ನತ ನಾಯಕರ ಜೊತೆಗೆ ಇವರು ಸಹ ಆರೋಪಿಯಾಗಿದ್ದರು. 

ಇದನ್ನು ಓದಿ: ಕೇರಳದ ಸೋಲಾರ್‌ ಹಗರಣ ಕೇಸ್‌: ಕಾಂಗ್ರೆಸ್‌ ಸಂಸದ ವೇಣುಗೋಪಾಲ್‌ ವಿಚಾರಣೆ ನಡೆಸಿದ ಸಿಬಿಐ 
.
ಈ ಬೆಳವಣಿಗೆಯೊಂದಿಗೆ, 2013 ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಎಲ್ಲಾ ಆರೋಪಿ ನಾಯಕರು ತಪ್ಪಿತಸ್ಥರಲ್ಲ ಎಂದು ಸಿಬಿಐ ತೀರ್ಪು ನೀಡಿದೆ. ಈ ಹಿಂದೆ ನವೆಂಬರ್‌ನಲ್ಲಿ ಕಾಂಗ್ರೆಸ್ ಲೋಕಸಭಾ ಸಂಸದ ಅಡೂರ್ ಪ್ರಕಾಶ್ ಅವರಿಗೂ ಸಿಬಿಐ ಕ್ಲೀನ್ ಚಿಟ್ ನೀಡಿತ್ತು. ಅಡೂರ್ ಪ್ರಕಾಶ್ ಅವರು ಪತ್ತನಂತಿಟ್ಟ ಜಿಲ್ಲೆಯ ಪ್ರಮದಮ್ ಕ್ರೀಡಾಂಗಣದಲ್ಲಿ ದೂರುದಾರರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿತ್ತು. ಅಲ್ಲದೆ, ಅವರು ದೂರುದಾರರನ್ನು ಬೆಂಗಳೂರಿಗೆ ಆಹ್ವಾನಿಸಿ ವಿಮಾನ ಟಿಕೆಟ್ ಕಳುಹಿಸಿದ್ದರು ಎಂದೂ ವರದಿಯಾಗಿತ್ತು.

ಆದರೆ, ಕಾಂಗ್ರೆಸ್ ನಾಯಕನ ವಿರುದ್ಧ ಮಾಡಿರುವ ಯಾವುದೇ ಆರೋಪಗಳನ್ನು ಬೆಂಬಲಿಸಲು ಯಾವುದೇ ಸಾಕ್ಷಿಗಳು, ವೈಜ್ಞಾನಿಕ ಪುರಾವೆಗಳು ಅಥವಾ ಸಾಂದರ್ಭಿಕ ಪುರಾವೆಗಳಿಲ್ಲ ಎಂದೂ ಸಿಬಿಐ ವರದಿ ಹೇಳಿದೆ. ದೂರಿನಲ್ಲಿ ಯಾವುದೇ ಸಾಕ್ಷ್ಯಾಧಾರಗಳಿಲ್ಲದೆ ಆಧಾರ ರಹಿತ ಆರೋಪಗಳನ್ನು ಮಾಡಲಾಗಿದೆ ಎಂದು ತನಿಖಾ ಸಂಸ್ಥೆಯ ವರದಿ ತಿಳಿಸಿದೆ. ಈ ಹಿಂದೆ ಮಾಜಿ ಶಾಸಕ ಹಾಗೂ ಹಾಲಿ ಸಂಸದೆ ಹೈಬಿ ಈಡನ್‌ಗೂ ಸಿಬಿಐ ಕ್ಲೀನ್ ಚಿಟ್ ನೀಡಿತ್ತು.

ಇದನ್ನೂ ಓದಿ: ಲೈಂಗಿಕ ಕಿರುಕುಳ ಕೇಸಲ್ಲಿ ಚಾಂಡಿ, ವೇಣುಗೋಪಾಲ್‌ಗೆ ತನಿಖೆ ಬಿಸಿ!

ಕೇರಳ ರಾಜ್ಯ ಪೊಲೀಸರಿಂದ ತನಿಖೆಯನ್ನು ವಹಿಸಿಕೊಂಡ 15 ತಿಂಗಳ ನಂತರ ಸಿಬಿಐ ಅಂತಿಮ ವರದಿಯನ್ನು ಸಲ್ಲಿಸಿದೆ. ವಿಧಾನಸಭೆ ಚುನಾವಣೆಗೆ ಮುನ್ನ ಎಲ್‌ಡಿಎಫ್ ಸರ್ಕಾರ ಈ ಪ್ರಕರಣವನ್ನು ಕೇಂದ್ರ ಏಜೆನ್ಸಿಗೆ ಹಸ್ತಾಂತರಿಸಿತ್ತು. ದೂರುದಾರರು ಕೇರಳವನ್ನು ಬೆಚ್ಚಿಬೀಳಿಸಿದ ಬಹುಕೋಟಿ ಸೋಲಾರ್ ಪ್ಯಾನಲ್ ಹಗರಣದ ಆರೋಪಿಯಾಗಿದ್ದಾರೆ. 2012 ರಲ್ಲಿ ಕಾಂಗ್ರೆಸ್‌ನ ಹಲವಾರು ರಾಜ್ಯ ನಾಯಕರು ತನ್ನನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಅವರು ಆರೋಪಿಸಿದ್ದರು. ಮಹಿಳೆಯ ದೂರಿನ ಆಧಾರದ ಮೇಲೆ ತನಿಖೆ ಎದುರಿಸುತ್ತಿರುವ ನಾಯಕರಲ್ಲಿ ಮಾಜಿ ಮುಖ್ಯಮಂತ್ರಿ ಊಮ್ಮನ್ ಚಾಂಡಿ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಸೇರಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಾಬ್ರಿ ಮಸೀದಿಗೆ ಅಡಿಗಲ್ಲು ವಿವಾದ ಬೆನ್ನಲ್ಲೇ ಬಂಗಾಳದಲ್ಲಿ 5 ಲಕ್ಷ ಹಿಂದೂಗಳಿಂದ ಭಗವದ್ಗೀತೆ ಪಠಣ
ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?