ಜಾಗತಿಕ ಟಾಪ್ 20 ನಿಲ್ದಾಣ ಪಟ್ಟಿಯಲ್ಲಿ ಬೆಂಗಳೂರಿಗೆ ಸ್ಥಾನ, ದೊಡ್ಡ ಏರ್‌ಪೋರ್ಟ್‌ಗಳಲ್ಲಿ ಹೈದ್ರಾಬಾದ್ ನಿಲ್ದಾಣಕ್ಕೆ ಸ್ಥಾನ.
ನವದೆಹಲಿ(ಡಿ.28): ಸಕಾಲಕ್ಕೆ ವಿಮಾನ ಸೇವೆ ಒದಗಿಸುವ ವಿಮಾನ ನಿಲ್ದಾಣಗಳ ಪಟ್ಟಿಯಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳು ವಿಶ್ವದಲ್ಲೇ ಉತ್ತಮ ಸ್ಥಾನ ಪಡೆದುಕೊಂಡಿವೆ.
ವಿಮಾನಯಾನಗಳ ವಿಶ್ಲೇಷಣೆ ನಡೆಸುವ ಸಿರಿಯಮ್ ತನ್ನ ನವೆಂಬರ್ ತಿಂಗಳ ವರದಿಯನ್ನು ಬಿಡುಗಡೆ ಮಾಡಿದ್ದು, ಭಾರತ ನಿಲ್ದಾಣಗಳು ಈ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿವೆ. ಜಾಗತಿಕ ಸಕಾಲಕ್ಕೆ ವಿಮಾನಯಾನ ಸೇವೆ ಒದಗಿಸುವ ನಿಲ್ದಾಣಗಳ ಪಟ್ಟಿಯಲ್ಲಿ ಬೆಂಗಳೂರು 20ನೇ ಸ್ಥಾನದಲ್ಲಿದೆ. ಬೆಂಗಳೂರಿನಲ್ಲಿ ಶೇ.79.4ರಷ್ಟುಸೇವೆ ಸಕಾಲಕ್ಕೆ ನಡೆಯುತ್ತಿದೆ ಎಂದು ವರದಿ ತಿಳಿಸಿದೆ. ಶೇ.87.62ರಷ್ಟು ಸೇವೆಗಳನ್ನು ಸಕಾಲಕ್ಕೆ ಒದಗಿಸುವ ನಾರ್ವೆಯ ಓಸ್ಲೋ ವಿಮಾನ ನಿಲ್ದಾಣ ಮೊದಲ ಸ್ಥಾನದಲ್ಲಿದೆ.
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ವಿಕಲಚೇತನ ಪ್ರಯಾಣಿಕರಿಗೆ ವಿಶೇಷ ಸೇವೆ
ಇನ್ನು ದೊಡ್ಡ ವಿಮಾನ ನಿಲ್ದಾಣಗಳ ಪಟ್ಟಿಯಲ್ಲಿ ಶೇ.88.44ರಷ್ಟು ಸೇವೆಗಳನ್ನು ಸಕಾಲಕ್ಕೆ ಒದಗಿಸುವ ಮೂಲಕ ಹೈದರಾಬಾದ್ ವಿಮಾನ ನಿಲ್ದಾಣ 4ನೇ ಸ್ಥಾನದಲ್ಲಿದೆ. ಶೇ.98.95ರಷ್ಟು ಸೇವೆಗಳನ್ನು ಸಕಾಲಕ್ಕೆ ಒದಗಿಸುತ್ತಿರುವ ಒಸಾಕ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮೊದಲ ಸ್ಥಾನದಲ್ಲಿದೆ.