ದೆಹಲಿ ನಗರಸಭೆ ಮತ ಎಣಿಕೆ: ಈ ಕ್ಷಣದ ಅಪ್‌ಡೇಟ್ ಇಲ್ಲಿದೆ

By Anusha Kb  |  First Published Dec 7, 2022, 9:06 AM IST

ದೆಹಲಿ ನಗರಪಾಲಿಕೆ ಚುನಾವಣೆಯ ಮತ ಎಣಿಕೆ ಕಾರ್ಯ ಭರದಿಂದ ಸಾಗಿದ್ದು, ಪ್ರಸ್ತುತ ಬಿಜೆಪಿ 10 ವಾರ್ಡ್‌ಗಳಲ್ಲಿ ಮುನ್ನಡೆ ಸಾಧಿಸಿದೆ.ಹಾಗೆಯೇ ಎಎಪಿ 99 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.


ನವದೆಹಲಿ: ದೆಹಲಿ ನಗರಪಾಲಿಕೆ ಚುನಾವಣೆಯ ಮತ ಎಣಿಕೆ ಕಾರ್ಯ ಭರದಿಂದ ಸಾಗಿದ್ದು, ಪ್ರಸ್ತುತ ಬಿಜೆಪಿ 10 ವಾರ್ಡ್‌ಗಳಲ್ಲಿ ಮುನ್ನಡೆ ಸಾಧಿಸಿದೆ.ಹಾಗೆಯೇ ಎಎಪಿ 99 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಚುನಾವಣೋತ್ತರ ಸಮೀಕ್ಷೆಗಳು ಆಮ್ ಆದ್ಮಿ ಪಾರ್ಟಿ ದೆಹಲಿ ಮುನ್ಸಿಪಲ್‌ನ ಆಡಳಿತ ಚುಕ್ಕಾಣಿ ಹಿಡಿಯಲಿದೆ ಎಂದು ತೋರಿಸಿದ್ದವು. ಆದರೆ ಇಂತಹ ಭವಿಷ್ಯಗಳು ಹಲವು ಬಾರಿ ಸುಳ್ಳಾಗಿವೆ. ಹಾಗೆಯೇ ಇಲ್ಲಿ ಸದ್ಯದ ಮಟ್ಟಿಗೆ ಕಾಂಗ್ರೆಸ್ 11 ಸ್ಥಾನದಲ್ಲಿ ಮುಂದಿದೆ. 

250 ವಾರ್ಡ್‌ಗಳ ದೆಹಲಿ ಮುನ್ಸಿಪಲ್‌ಗೆ ಡಿಸೆಂಬರ್ 4 ರಂದು ಚುನಾವಣೆ ನಡೆದಿತ್ತು. ಕಳೆದ 15 ವರ್ಷಗಳಿಂದ ದೆಹಲಿ ಪಾಲಿಕೆಯಲ್ಲಿ ಬಿಜೆಪಿ ಆಡಳಿತ ನಡೆಸುತ್ತಿದೆ. ಆದರೆ ಈ ಬಾರಿ ಭಾರೀ ಗೆಲುವಿನೊಂದಿಗೆ ಎಎಪಿ ಅಧಿಕಾರಕ್ಕೆ ಬರಲಿದೆ ಎಂದು ಚುನಾವಣೋತ್ತರ ಸಮೀಕ್ಷೆಗಳು ಭವಿಷ್ಯ ನುಡಿದ್ದಿದ್ದವು. ದೆಹಲಿಯಾದ್ಯಂತ 42 ಕೇಂದ್ರಗಳಲ್ಲಿ ಬಿಗಿ ಬಂದೋಬಸ್ತ್‌ನ ನಡುವೆ ಮತ ಎಣಿಕೆ ಕಾರ್ಯ ನಡೆಯುತ್ತಿದೆ. ಒಟ್ಟು 1349 ಅಭ್ಯರ್ಥಿಗಳ ಭವಿಷ್ಯ ಸ್ವಲ್ಪ ಹೊತ್ತಿನಲ್ಲಿ ನಿರ್ಧಾರವಾಗಲಿದೆ.

Tap to resize

Latest Videos


ದೆಹಲಿ ಮಹಾನಗರ ಪಾಲಿಕೆ ಚುನಾವಣೋತ್ತರ ಸಮೀಕ್ಷೆ, ಬಿಜೆಪಿಗೆ ಸೋಲು, ಆಪ್‌ಗೆ ಅಧಿಕಾರ!

click me!