
ಶಿಮ್ಲಾ: ಡಿ.8ರಂದು ಪ್ರಕಟವಾಗುವ ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣಾ ಫಲಿತಾಂಶದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳು ಬಹುಮತಕ್ಕೆ ಅಗತ್ಯವಾದ 35 ಸ್ಥಾನ ಗೆಲ್ಲುವ ಬಗ್ಗೆ ಚುನಾವಣೋತ್ತರ ಸಮೀಕ್ಷೆಗಳು ಅನುಮಾನ ವ್ಯಕ್ತಪಡಿಸಿದ ಬೆನ್ನಲ್ಲೇ, ಪಕ್ಷೇತರ ಅಭ್ಯರ್ಥಿಗಳ ಕಡೆ ಎಲ್ಲರ ಚಿತ್ತ ತಿರುಗಿದೆ. 68 ಸ್ಥಾನ ಹೊಂದಿರುವ ಹಿಮಾಚಲದಲ್ಲಿ ಬಿಜೆಪಿ 24-41, ಕಾಂಗ್ರೆಸ್ 20-40 ಸ್ಥಾನ ಗೆಲ್ಲಬಹುದು ಎಂದು ಸಮೀಕ್ಷೆಗಳು ಹೇಳಿವೆ. ಬಹುಮತಕ್ಕೆ 35 ಸ್ಥಾನದ ಅಗತ್ಯವಿದೆ. ಒಂದು ವೇಳೆ ಬಹುಮತ ಬರದೇ ಹೋದರೇ ಪಕ್ಷೇತರರೇ ಹೊಸ ಸರ್ಕಾರ ರಚನೆಯಲ್ಲಿ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ಹೀಗಾಗಿ ಬಂಡಾಯವಾಗಿ ಸ್ಪರ್ಧಿಸಿದವರು, ಪಕ್ಷೇತರರಾಗಿ ನಿಂತು ಗೆಲ್ಲುವ ಸಾಧ್ಯತೆ ಇರುವ ಪಕ್ಷೇತರ ಅಭ್ಯರ್ಥಿಗಳಿಗೆ ಗಾಳ ಹಾಕಲು ಈಗಾಗಲೇ ಬಿಜೆಪಿ ಮತ್ತು ಕಾಂಗ್ರೆಸ್ ಯತ್ನ ಆರಂಭಿಸಿವೆ.
ಈ ಬಾರಿ 91 ಪಕ್ಷೇತರ ಅಭ್ಯರ್ಥಿಗಳು ಕಣಕ್ಕೆ ಇಳಿದಿದ್ದು, ಈ ಪೈಕಿ ಕನಿಷ್ಠ 10-12 ಜನರು ಬಿಜೆಪಿ -ಕಾಂಗ್ರೆಸ್ ಟಿಕೆಟ್ ಸಿಗದೇ ಬಂಡಾಯವಾಗಿ ಕಣಕ್ಕೆ ಇಳಿದವರಾಗಿದ್ದಾರೆ. ಈ ಪೈಕಿ ಕೆ.ಎಲ್. ಠಾಕೂರ್, ಮನೋಹರ್ ಧಿಮನ್, ರಾಮ್ ಸಿಂಗ್(Ram singh), ಹೋಶಿಯಾರ್ ಸಿಂಗ್ (hoshiyar singh), ಇಂದು ವರ್ಮಾ, ಸಂಜಯ್ ಪ್ರಶೇರ್ ಗೆಲ್ಲುವ ಸಾಧ್ಯತೆ ಎನ್ನಲಾಗುತ್ತಿದೆ. ಹೀಗಾಗಿ ಈ ಅಭ್ಯರ್ಥಿಗಳ ಮನೆಗೆ ಈಗಾಗಲೇ ಬಿಜೆಪಿ ಮತ್ತು ಕಾಂಗ್ರೆಸ್ ತಮ್ಮ ದೂತರನ್ನು ಕಳುಹಿಸಿ, ಅಗತ್ಯ ಬಿದ್ದರೆ ಬೆಂಬಲ ಕೇಳುವ ಪ್ರಯತ್ನ ಮಾಡಿವೆ ಎಂದು ಮೂಲಗಳು ತಿಳಿಸಿವೆ.
ಸಮೀಕ್ಷಾ ವರದಿ: ಗುಜರಾತ್‌ನಲ್ಲಿ ಕಮಲ, ಅತಂತ್ರದಲ್ಲಿ ಹಿಮಾಚಲ, ದೆಹಲಿಯಲ್ಲಿ ಆಪ್ ಕಿಲ ಕಿಲ!
ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ಬಂಡಾಯ ಅಭ್ಯರ್ಥಿ (BJP rebel candidate) ಕೆ.ಎಲ್.ಠಾಕೂರ್ (K.L Thakur) ಮತ್ತು ಮನೋಹರ್ ಧಿಮನ್ (Manohar dhiman) ‘ಎರಡೂ ಪಕ್ಷಗಳು ನಮ್ಮನ್ನು ಸಂಪರ್ಕಿಸಿವೆ. ಆದರೆ ಫಲಿತಾಂಶ ಪ್ರಕಟ ಆಗುವವರೆಗೂ ನಾವು ನಮ್ಮ ಅವಕಾಶಗಳನ್ನು ಮುಕ್ತವಾಗಿರಿಸಿಕೊಳ್ಳಲಿದ್ದೇವೆ ಎಂದಿದ್ದಾರೆ. ಇನ್ನೋರ್ವ ಅಭ್ಯರ್ಥಿ ರಾಮ್‌ಸಿಂಗ್ ಕೂಡಾ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಚುನಾವಣೋತ್ತರ ಸಮೀಕ್ಷೆ; ಗುಜರಾತ್, ಹಿಮಾಚಲ ಗೆದ್ದು MCD ಅಧಿಕಾರ ಕಳೆದುಕೊಂಡ ಮೋದಿ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ