ವಿಮಾನದಲ್ಲಿ ಕಿತ್ತಾಡಿದ ಸ್ಮೃತಿ ಇರಾನಿ ಹಾಗೂ ಕೈ ನಾಯಕಿ : ವಿಡಿಯೋ ವೈರಲ್

Published : Apr 10, 2022, 07:32 PM IST
ವಿಮಾನದಲ್ಲಿ ಕಿತ್ತಾಡಿದ ಸ್ಮೃತಿ ಇರಾನಿ ಹಾಗೂ ಕೈ ನಾಯಕಿ : ವಿಡಿಯೋ ವೈರಲ್

ಸಾರಾಂಶ

ಪೆಟ್ರೋಲ್‌ ಡಿಸೇಲ್‌, ಗ್ಯಾಸ್‌ ಬೆಲೆ ಏರಿಕೆ ಬಗ್ಗೆ ಕೈ ನಾಯಕಿ ಅಸಮಾಧಾನ ಸ್ಟೌವ್‌ ಹಾಗೂ ಗ್ಯಾಸ್ ಇಲ್ಲದೆ ಬಿಹು ಶುಭಾಶಯ ಎಂದ ನೆಟ್ಟಾ ಡಿಸೋಜ ಸುಳ್ಳು ಹೇಳಬೇಡಿ ಎಂದ ಸ್ಮೃತಿ ಇರಾನಿ

ನವದೆಹಲಿ: ಭಾನುವಾರ ದೆಹಲಿ-ಗುವಾಹಟಿ ವಿಮಾನದಲ್ಲಿ ಹಣದುಬ್ಬರ ವಿಚಾರವಾಗಿ ಕೇಂದ್ರ ಸಚಿವೆ ಸ್ಮೃತಿ ಇರಾನಿ (Union minister Smriti Irani ) ಹಾಗೂ  ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ನೆಟ್ಟಾ ಡಿಸೋಜಾ ಅವರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ವೀಡಿಯೊದಲ್ಲಿ, ಕಾಣಿಸುವಂತೆ ಇವರಿಬ್ಬರು ಒಂದೇ ವಿಮಾನದಲ್ಲಿ ಪ್ರಯಾಣಿಸುತ್ತಿದ್ದು, ನೆಟ್ಟಾ ಡಿಸೋಜಾ ಅವರು, 'ಒಲೆಗಳಿಲ್ಲದೆ, ಗ್ಯಾಸ್ ಇಲ್ಲದೆ, ಜೊತೆಗೆ ದರ ಏರಿಕೆಯೊಂದಿಗೆ ಬಿಹು ಶುಭಾಶಯಗಳು' ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಇರಾನಿ, 'ಮೇಡಂ ದಯವಿಟ್ಟು ಸುಳ್ಳು ಹೇಳಬೇಡಿ. ನೀವು ದುರುಪಯೋಗ ಮಾಡುತ್ತಿದ್ದೀರಿ ಎಂದು ಪ್ರತಿಕ್ರಿಯಿಸಿದ್ದಾರೆ.

ಎಲ್‌ಪಿಜಿ ಬೆಲೆ ಏರಿಕೆಯ ಬಗ್ಗೆ ಕಾಂಗ್ರೆಸ್ ನಾಯಕಿ ನೆಟ್ಟಾ, ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರನ್ನು ಕೇಳಿದರು ಈ ವೇಳೆ ಕೇಂದ್ರವು ವಿವಿಧ ಕಲ್ಯಾಣ ಕಾರ್ಯಕ್ರಮಗಳ ಮೂಲಕ ಬಡವರಿಗೆ ಸಹಾಯ ಮಾಡುತ್ತಿದೆ ಎಂದು ಇರಾನಿ ಹೇಳಿದರು. ಕಾಂಗ್ರೆಸ್ ನಾಯಕಿಯ ವ್ಯಂಗ್ಯಕ್ಕೆ ಪ್ರತಿಕ್ರಿಯೆಯಾಗಿ ಸ್ಮೃತಿ ಇರಾನಿ, ಸರ್ಕಾರವು ದೇಶವಾಸಿಗಳಿಗೆ ಉಚಿತ ಪಡಿತರವನ್ನು ನೀಡುತ್ತಿದೆ. 1.83 ಶತಕೋಟಿ ಜನರಿಗೆ ಉಚಿತ ಲಸಿಕೆಗಳನ್ನು ನೀಡುತ್ತಿದೆ ಎಂದು 1:11 ನಿಮಿಷಗಳ ವೀಡಿಯೊದಲ್ಲಿ ಹೇಳುವುದನ್ನು ಕೇಳಬಹುದು. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ (social media) ವೈರಲ್ ( viral) ಆಗಿದೆ.

ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ (Mahila Congress president) ನೆಟ್ಟಾ ಡಿಸೋಜಾ ( Netta D’Souza) ಅವರು ಸಚಿವರೊಂದಿಗಿನ ತಮ್ಮ ಸಂಭಾಷಣೆಯ ವೀಡಿಯೊ ಸಂಕಲನವನ್ನು ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಮೋದಿ ಸಂಪುಟದ ಸಚಿವೆ  @smritiirani ಜೀ ಅವರು ಗುವಾಹಟಿಗೆ (Guwahati) ಹೋಗುವಾಗ ನಮಗೆ ಎದುರಾದರು. LPG ಯ ಅಸಹನೀಯವಾದ ಬೆಲೆ ಏರಿಕೆಯ ಬಗ್ಗೆ ಕೇಳಿದಾಗ, ಅವರು ಲಸಿಕೆಗಳು (vaccines), ಉಚಿತ ಪಡಿತರ (free ration) ಮತ್ತು ಬಡವರನ್ನೂ ದೂಷಿಸಿದರು. ಸಾಮಾನ್ಯ ಜನರ ದುಃಖಕ್ಕೆ ಅವರು ಹೇಗೆ ಪ್ರತಿಕ್ರಿಯಿಸಿದಳು ಎಂಬುದರ ಕುರಿತು ಈ ವೀಡಿಯೊ  ನೋಡಿ ಎಂದು ಬರೆದು ಕಾಂಗ್ರೆಸ್ ನಾಯಕಿ ನೆಟ್ಟ ಡಿಸೋಜ ಈ ವಿಡಿಯೋವನ್ನು ಪೋಸ್ಟ್‌ ಮಾಡಿದ್ದಾರೆ. 

ವೀಡಿಯೊದಲ್ಲಿ, ಡಿಸೋಜಾ ಅವರು, 'ಒಲೆಗಳಿಲ್ಲದೆ, ಗ್ಯಾಸ್ ಇಲ್ಲದೆ, ಬೆಲೆ ಏರಿಕೆಯೊಮದಿಗೆ ಬಿಹು ಶುಭಾಶಯಗಳು ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಸಚಿವೆ ಇರಾನಿ, 'ಮೇಡಂ ದಯವಿಟ್ಟು ಸುಳ್ಳು ಹೇಳಬೇಡಿ ನೀವು ದುರುಪಯೋಗ ಮಾಡುತ್ತಿದ್ದೀರಿ' ಎಂದು ಪ್ರತಿಕ್ರಿಯಿಸಿದ್ದಾರೆ.

Price List: 110 ರ ಗಡಿ ದಾಟಿದ ಪೆಟ್ರೋಲ್, ಶತಕದತ್ತ ಡಿಸೇಲ್, ಜೇಬು ಸುಡುತ್ತಿದೆ ಬೆಲೆ ಏರಿಕೆ

ಸ್ಮೃತಿ ಇರಾನಿ (Smriti Irani) ರಾಜಕೀಯ ಸೇರಿದ ಬಳಿಕ ವರ್ಕ್ಔಟ್ ಮಾಡಲು ಸಮಯವಿಲ್ಲದ್ದಕ್ಕೋ, ಅನಿಯಮಿತ ಸಮಯದ ಊಟ ಉಪಾಹಾರಗಳ ಕಾರಣವೋ ಏನೋ, ಸಾಕಷ್ಟು ದಪ್ಪಗಾಗಿದ್ದರು. ಆದರೆ ಈಗ ತಮ್ಮ ದೇಹದ ಬಗ್ಗೆ ಕಾಳಜಿ ತೆಗೆದುಕೊಳ್ಳಲು ಸಾಕಷ್ಟು ಸಮಯ ದೊರೆತಂತಿದೆ. ಇತ್ತೀಚೆಗೆ ಅವರು ತಮ್ಮ ಪ್ರೊಫೈಲ್ ಪಿಕ್ (Profile pic) ಚೇಂಜ್ ಮಾಡಿಕೊಂಡಾಗ ಎಲ್ಲರೂ ಹುಬ್ಬೇರಿಸಿದ್ದರು. ಯಾಕೆಂದರೆ ದಪ್ಪಗಿದ್ದ ಸ್ಮೃತಿ ಬಳುಕುವ ಬಳ್ಳಿಯಂತಾಗಿದ್ದರು. ಅದನ್ನು ನೋಡಿ ಅವರ ಬಹುಕಾಲದ ಫ್ರೆಂಡ್ ಏಕ್ತಾ ಕಪೂರ್ (Ektha Kapoor) ಸೇರಿದಂತೆ ಹಲವರು ಅಚ್ಚರಿ, ಮೆಚ್ಚುಗೆ ವ್ಯಕ್ತಪಡಿಸಿದ್ದರು.

BJP Leaders ಫೋಟೋ ತೆಗೆದಿದ್ದು ನಾನು, ಕ್ರೆಡಿಟ್ ಕಸಿದ ಸುದ್ಧಿ ಸಂಸ್ಥೆ ಕಾಲೆಳೆದ ಸ್ಮೃತಿ ಇರಾನಿ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!