ಸಸ್ಯಾಹಾರಿಗಳು, ಧೂಮಪಾನಿಗಳಲ್ಲಿ ಕೊರೋನಾ ಕಮ್ಮಿ

By Kannadaprabha NewsFirst Published Apr 26, 2021, 11:49 AM IST
Highlights

ಸೀರೋ ಸಮೀಕ್ಷೆಯಲ್ಲಿ ಧೂಮಪಾನಿಗಳು ಹಾಗೂ ಸಸ್ಯಾಹಾರಿಗಳ ಮೇಲೆ ಕೊರೋನಾ ವೈರಸ್‌ ಕಡಿಮೆ ಪ್ರಭಾವ ಬೀರಿದೆ ಎಂಬ ಅಂಶ ಕಂಡುಬಂದಿದೆ. 10,427 ಜನರ ರಕ್ತ ಪರೀಕ್ಷೆ ನಡೆಸಿ ಈ ಸಮೀಕ್ಷೆ ಕೈಗೊಂಡಿತ್ತು

ನವದೆಹಲಿ (ಏ.26): ಧೂಮಪಾನಿಗಳಿಗೆ ಕೊರೋನಾ ವೈರಸ್‌ ಅಂಟುವ ಸಾಧ್ಯತೆ ಅಧಿಕ ಎಂದು ಈ ಮುನ್ನ ಹೇಳಲಾಗುತ್ತಿತ್ತು. ಆದರೆ ಈಗ ನಡೆಸಲಾದ ಸೀರೋ ಸಮೀಕ್ಷೆಯಲ್ಲಿ ಧೂಮಪಾನಿಗಳು ಹಾಗೂ ಸಸ್ಯಾಹಾರಿಗಳ ಮೇಲೆ ಕೊರೋನಾ ವೈರಸ್‌ ಕಡಿಮೆ ಪ್ರಭಾವ ಬೀರಿದೆ ಎಂಬ ಅಂಶ ಕಂಡುಬಂದಿದೆ. ದೇಶದ ವಿವಿಧ ಭಾಗಗಳಲ್ಲಿ 10,427 ಜನರ ರಕ್ತ ಪರೀಕ್ಷೆ ನಡೆಸಿ ವೈಜ್ಞಾನಿಕ ಹಾಗೂ ಔದ್ಯಮಿಕ ಸಂಶೋಧನಾ ಪರಿಷತ್ತು ಈ ಸಮೀಕ್ಷೆ ಕೈಗೊಂಡಿತ್ತು. ಈ ವೇಳೆ ಧೂಮಪಾನಿಗಳು ಹಾಗೂ ಸಸ್ಯಾಹಾರಿಗಳಲ್ಲಿ ಸೋಂಕು ಕಡಿಮೆ ಎಂದು ಕಂಡುಬಂದಿದೆ.

ದೇಶದಲ್ಲಿ 2ನೇ ಅಲೆ ಭೀಕರವಾಗಲು ಕಾರಣವೇ ಇದು ...

ಧೂಮಪಾನಿಗಳಲ್ಲಿ ಧೂಮದಿಂದ ದೇಹದಲ್ಲಿ ಸೃಷ್ಟಿಆಗುವ ಲೋಳೆಯು ವೈರಾಣುವಿಗೆ ತಡೆಗೋಡೆ ಆಗಿರಬಹುದು. ಹಾಗೆಯೇ ಸಸ್ಯಾಹಾರದಲ್ಲಿ ಇರುವ ನಾರಿನ ಸಾಮರ್ಥ್ಯವು, ಕೋವಿಡ್‌ ಪ್ರತಿಕಾಯ ಶಕ್ತಿ ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ ಎಂದು ಸಮೀಕ್ಷೆ ಹೇಳಿದೆ.

ಇನ್ನು ಒ ರಕ್ತದ ಗುಂಪಿನವರಲ್ಲಿ ಸೋಂಕು ಕಡಿಮೆ ಇದೆ. ಆದರೆ ಬಿ ಹಾಗೂ ಎಬಿ ರಕ್ತ ಕಣದವರಲ್ಲಿ ಸೋಂಕು ಅಧಿಕವಾಗಿದೆ ಎಂದು ಗೊತ್ತಾಗಿದೆ.

click me!