4 ದಿನದಲ್ಲಿ 13 ಲಕ್ಷ ಕೇಸ್‌, 10,000 ಸಾವು

By Kannadaprabha NewsFirst Published Apr 26, 2021, 10:59 AM IST
Highlights

ದೇಶದಲ್ಲಿ ಕೊರೋನಾ ಮಹಾಮಾರಿ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಕೊರೋನಾದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆಯೂ ಕೂಡ ಅತ್ಯಧಿಕವಾಗಿದೆ. 

ನವದೆಹಲಿ (ಏ.26): ಕೊರೋನಾ ವೈರಸ್‌ನ 2ನೇ ಅಲೆಗೆ ತತ್ತರಿಸಿರುವ ಭಾರತದಲ್ಲಿ ಭಾನುವಾರ ದಾಖಲೆಯ 3,49,691 ಮಂದಿಯಲ್ಲಿ ಹೊಸದಾಗಿ ಸೋಂಕು ಕಾಣಿಸಿಕೊಂಡಿದೆ. ಅಲ್ಲದೆ ನಿನ್ನೆ ಒಂದೇ ದಿನ 2767 ಮಂದಿಗೆ ವೈರಸ್‌ಗೆ ಬಲಿಯಾಗಿದ್ದಾರೆ. ಇದು ದಿನವೊಂದರಲ್ಲಿ ದಾಖಲಾದ ಸಾವು ಮತ್ತು ಕೇಸ್‌ ಎರಡರಲ್ಲೂ ಈವರೆಗಿನ ಗರಿಷ್ಠವಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆಯ ವರದಿ ತಿಳಿಸಿದೆ.

ಇದರೊಂದಿಗೆ ದೇಶದಲ್ಲಿ ಸತತ 4ನೇ ದಿನವೂ 3 ಲಕ್ಷಕ್ಕಿಂತ ಹೆಚ್ಚು ಪ್ರಕರಣಗಳು ದೃಢಪಟ್ಟಂತೆ ಆಗಿದೆ. ಕೇವಲ 4 ದಿನಗಳ ಅವಧಿಯಲ್ಲಿ ದೇಶದಲ್ಲಿ 13.44 ಲಕ್ಷ ಜನರು ಸೋಂಕಿಗೆ ತುತ್ತಾಗಿದ್ದರೆ, 9758 ಜನರು ಸೋಂಕಿಗೆ ಬಲಿಯಾಗಿದ್ದಾರೆ.

ಗಾಳಿಯಲ್ಲಿ ಹರಡುತ್ತೆ ಕೊರೊನಾ ವೈರಸ್, ವಿಜ್ಞಾನಿಗಳು ಕೊಟ್ರು 10 ಸಾಕ್ಷಿ! ...

ಇನ್ನು ಒಟ್ಟು ಸೋಂಕಿತರ ಸಂಖ್ಯೆ 1.69 ಕೋಟಿಯಾಗಿದ್ದು, ಈ ಪೈಕಿ 26.82 ಲಕ್ಷ ಮಂದಿ ಸಕ್ರಿಯ ಸೋಂಕಿತರಾಗಿದ್ದಾರೆ. ಅಂದರೆ ಒಟ್ಟಾರೆ ಸೋಂಕಿತರ ಪೈಕಿ ಶೇ.15.82ರಷ್ಟುಮಂದಿಯಲ್ಲಿ ವೈರಸ್‌ ಸಕ್ರಿಯವಾಗಿದೆ.

 ಇನ್ನು ಶನಿವಾರವಷ್ಟೇ ಶೇ.84.4 ಇದ್ದ ಕೊರೋನಾದಿಂದ ಗುಣಮುಖರಾದವರ ರಾಷ್ಟ್ರೀಯ ಪ್ರಮಾಣ ಭಾನುವಾರ ಶೇ.83.05ಕ್ಕೆ ಕುಸಿದಿದೆ. ಅಲ್ಲದೆ ದೇಶದಲ್ಲಿ ಕೊರೋನಾದಿಂದ ಸಾವಿಗೀಡಾದ ಶೇ.70ಕ್ಕಿಂತ ಹೆಚ್ಚು ಮಂದಿಯಲ್ಲಿ ಒಂದಕ್ಕಿಂತ ಹೆಚ್ಚು ಕಾಯಿಲೆಗಳಿದ್ದವು ಎಂದು ಆರೋಗ್ಯ ಇಲಾಖೆ ತಿಳಿಸಿದೆ.

click me!