ದೇಶದಲ್ಲಿ 2ನೇ ಅಲೆ ಭೀಕರವಾಗಲು ಕಾರಣವೇ ಇದು

By Kannadaprabha NewsFirst Published Apr 26, 2021, 11:26 AM IST
Highlights

ಪ್ರತಿಕಾಯ ಶಕ್ತಿಯ ಕೊರತೆಯೇ ಕೊರೋನಾ ವೈರಸ್‌ ಅಲೆ ಮರು ಉದ್ಭವ ಆಗಲು ಕಾರಣ ಎಂದು ಸೀರೋ ಸಮೀಕ್ಷೆ ಹೇಳಿದೆ. ದೇಶದಲ್ಲಿ ಭಾರೀ ಪ್ರಮಾಣದಲ್ಲಿ ಕೊರೋನಾ ಮಹಾಮಾರಿ ತನ್ನ ಅಟ್ಟಹಾಸವನ್ನು ಮೆರೆಯುತ್ತಿದೆ. 

ನವದೆಹಲಿ (ಏ.26): ಜನರಲ್ಲಿ ಪ್ರತಿಕಾಯ ಶಕ್ತಿಯ ಕೊರತೆಯೇ ಕೊರೋನಾ ವೈರಸ್‌ ಅಲೆ ಮರು ಉದ್ಭವ ಆಗಲು ಕಾರಣ ಎಂದು ಸೀರೋ ಸಮೀಕ್ಷೆ ಹೇಳಿದೆ. ದೇಶದ 17 ರಾಜ್ಯಗಳು ಹಾಗೂ 2 ಕೇಂದ್ರಾಡಳಿತ ಪ್ರದೇಶಗಳಲ್ಲಿ 10,427 ಜನರ ಸಮೀಕ್ಷೆ ನಡೆಸಲಾಗಿತ್ತು.

14 ದಿನ ಕರ್ನಾಟಕ ಲಾಕ್‌ಡೌನ್: ಏನಿರುತ್ತೆ? ಏನಿರಲ್ಲ? ಇಲ್ಲಿದೆ ಮಾಹಿತಿ ...

 ಆಗ ಕೇವಲ ಶೇ.10.14 ಸೀರೋ ಪಾಸಿಟಿವಿಟಿ ಕಂಡುಬಂದಿದೆ. ಕೊರೋನಾ ಮೊದಲ ಅಲೆ 2020ರ ಸೆಪ್ಟೆಂಬರ್‌ ಸಮಯದಲ್ಲಿ ತಾರಕಕ್ಕೇರಿತ್ತು. ಬಳಿಕ ಕುಂದಿತ್ತು. ಆದರೆ ಆ ಸಮಯದಿಂದ ಈವರೆಗಿನ ಸಮಯದಲ್ಲಿ ಜನರಲ್ಲಿನ ಪ್ರತಿಕಾಯ ಶಕ್ತಿಗಳು ಕುಂದಿವೆ.

ಅತಿಹೆಚ್ಚು ಮಂದಿಗೆ ಲಸಿಕೆ: ವಿಶ್ವದಲ್ಲೇ ಭಾರತ ನಂ.3! ...

 ಹೀಗಾಗಿ 2021ರ ಮಾರ್ಚ್ ವೇಳೆಗೆ ಕೊರೋನಾ ವೈರಾಣು ಸೋಂಕಿನ ಮರು ಉದ್ಭವವಾಯಿತು ಎಂದು ಸಮೀಕ್ಷೆ ವಿವರಿಸಿದೆ. 2ನೇ ಅಲೆ ಮೊದಲು ಹೆಚ್ಚು ಸೃಷ್ಟಿಯಾಗಿದ್ದು ಮಹಾರಾಷ್ಟ್ರವಾಗಿದೆ. ನಂತರ ಇತರ ರಾಜ್ಯಗಳಿಗೂ ಹರಡಿದೆ.

click me!