ಒಂದು ಬೀಡಿಯ ಕತೆ: ಕಿಡಿ ತಾಕಿಸಿ ಉಫ್ ಎಂದ ಬೆನ್ನಲ್ಲೇ ಅಂಗಡಿ, ವಾಹನ ಎಲ್ಲಾ ಸುಟ್ಟು ಭಸ್ಮ!

By Chethan Kumar  |  First Published Aug 21, 2024, 6:30 PM IST

ಶಾಪ್ ಮುಂದೆ ನಿಂತು ಬೀಡಿಗೆ ಕಿಡಿ ತಾಕಿಸಿ ಉಫ್ ಎಂದ ಬೆನ್ನಲ್ಲೇ ಇಡೀ ಆವರಣದಲ್ಲೇ ಬೆಂಕಿ ಕಾಣಿಸಿಕೊಂಡಿದೆ. ಅಂಗಡಿ ಹೊತ್ತಿ ಉರಿದಿದೆ. ನಿಲ್ಲಿಸಿದ್ದ ವಾಹನಗಳು ಬೆಂಕಿಗೆ ಆಹುತಿಯಾಗಿದೆ. ಇದರ ನಡುವೆ ಬೇಡಿ ಸೇದಿದ ಆತ ಏನಾದ?
 


ಹೈದರಾಬಾದ್(ಆ.21) ಆರೋಗ್ಯಕ್ಕೆ ಹಾನಿ ಎಂದು ಸ್ಪಷ್ಟವಾಗಿ ಬರೆದಿದ್ದರೂ, ಬೀಡಿ ಸಿಗರೇಟು ಸೇದುವ ಹವ್ಯಾಸಿಗಳು ಆತಂಕ ಪಟ್ಟವರಲ್ಲ. ಹೀಗೆ ಎಂದಿನಂತೆ ವ್ಯಕ್ತಿಯೊಬ್ಬರು ರಸ್ತೆ ಬದಿಯ ಅಂಗಡಿ ಮುಂದೆ ನಿಂತುಕೊಂಡು ಮತ್ತೊಬ್ಬರ ಜೊತೆ ಮಾತನಾಡುತ್ತಾ, ಬೀಡಿ ಸೇದಲು ಮುಂದಾಗಿದ್ದಾರೆ. ಬೆಂಕಿ ಪೊಟ್ಟಣ ತೆಗೆದು ಬೀಡಿಗೆ ಬೆಂಕಿ ಕಿಡಿ ತಾಕಿಸಿದ್ದಾರೆ. ಇಷ್ಟೇ ನೋಡಿ. ಒಂದೇ ಸಮನೆಗೆ ಬೆಂಕಿ ಹೊತ್ತಿಕೊಂಡಿದೆ. ಕ್ಷಣಾರ್ಧದಲ್ಲೇ ಬೆಂಕಿ ಕೆನ್ನಾಲಗಿ ಅಂಗಡಿ ಮುಂಗಟ್ಟಿಗೆ ಹರಡಿದೆ. ಬೈಕ್, ಸ್ಕೂಟರ್ ಸೇರಿದಂತೆ ಎಲ್ಲಾ ವಾಹನಗಳಿಗೂ ತಟ್ಟಿ ಭಸ್ಮವಾದ ಘಟನೆ ಆಂಧ್ರ ಪ್ರದೇಶದ ಅನಂತಪುರದಲ್ಲಿ ನಡೆದಿದೆ.

ಕಲ್ಯಾಣದುರ್ಗಂ ಪಟ್ಟಣದ ಬೀದಿಯಲ್ಲಿ ಈ  ಘಟನೆ ನಡೆದಿದೆ. ಈ ರಸ್ತೆಯಲ್ಲೇ ವ್ಯಕ್ತಿಯೊಬ್ಬರು 5 ಲೀಟರ್ ಪೆಟ್ರೋಲ್‌ನ್ನು ಕ್ಯಾನ್ ಮೂಲಕ ತುಂಬಿ ಸಾಗಿಸಿದ್ದರು. ಇದೇ ಬೀದಿಯ ಬದಿಯಲ್ಲಿ ಬೈಕ್ ನಿಲ್ಲಿಸಿ ಬೇರೆ ವಸ್ತುಗಳನ್ನೂ ಖರೀದಿಸಿದ್ದರು. ಆದರೆ ಕ್ಯಾನ್‌ನಲ್ಲಿನ ಪೆಟ್ರೋಲ್ ರಸ್ತೆಯಲ್ಲಿ ಚೆಲ್ಲಿದೆ. ಪಾರ್ಕ್ ಮಾಡಿದ್ದ ಸ್ಥಳದಲ್ಲೂ ಪೆಟ್ರೋಲ್ ಚೆಲ್ಲಿದೆ. ಪೆಟ್ರೋಲ್ ಚೆಲ್ಲಿದ ಮರುಕ್ಷಣದಲ್ಲೇ ಒಣಗಿ ಹೋಗಿದೆ. 

Latest Videos

undefined

ಹಸೀನಾ ಮಾತ್ರವಲ್ಲ ಕಿಡಿಗೇಡಿಗಳು ಬಾಂಗ್ಲಾ ಯಶಸ್ವಿ ನಾಯಕ ಮುಶ್ರಫೆ ಮನೆಯನ್ನೂ ಬಿಡಲಿಲ್ಲ!

ಇದೇ ಪೆಟ್ರೋಲ್ ಚೆಲ್ಲಿದ ಪಕ್ಕದಲ್ಲೇ ನಿಂತುಕೊಂಡ ವ್ಯಕ್ತಿಗಳಿಬ್ಬರು ಇದರ ಅರಿವೇ ಇಲ್ಲದೆ ಬೀಡಿ ಸೇದಲು ಮುಂದಾಗಿದ್ದಾರೆ. ಬೀಡಿ ತೆಗೆದು ಬಾಯಿಗಿಟ್ಟು, ಬೆಂಕಿ ಕಡ್ಡಿ ಮೂಲಕ ಬೆಂಕಿ ತಾಕಿಸಿದ ಬೆನ್ನಲ್ಲೇ ಈ ಬೆಂಕಿ ರಸ್ತೆಯಲ್ಲಿ ಚೆಲ್ಲಿ ಒಣಗಿ ಹೋಗಿದ್ದ ಪೆಟ್ರೋಲ್‌ಗೂ ಅಂಟಿಕೊಂಡಿದೆ. ಒಂದೇ ಸಮನೆ ಹೊತ್ತಿ ಉರಿಯಲು ಆರಂಂಭಿಸಿದೆ. 

ಬೆಂಕಿಯ ಕೆನ್ನಾಲ ಧಗಧಗಿಸುತ್ತಿದ್ದಂತೆ ಇಬ್ಬರು ವ್ಯಕ್ತಿಗಳು ಸ್ಥಳದಿಂದ ಓಡಿದ್ದಾರೆ. ಇತ್ತ ಬೆಂಕಿಯ ಜ್ವಾಲೆ ಇದೀ ಬೀದಿಗೆ ಆವರಿಸಿದೆ. ಹಲಲು ಅಂಗಡಿಗಳು ಸುಟ್ಟು ಭಸ್ಮವಾಗಿದೆ. ಅಂಗಡಿ ಮುಂಭಾಗದ ರಸ್ತೆಯಲ್ಲಿ ನಿಲ್ಲಿಸಿದ್ದ ವಾಹನಗಳಿಗೂ ಬೆಂಕಿ ಹೊತ್ತಿಕೊಂಡು ಉರಿದಿದೆ. ತಕ್ಷಣವೇ ಸ್ಥಳೀಯರು ಅಂಗಡಿಯಲ್ಲಿಟ್ಟಿದ್ದ ಬೆಂಕಿ ನಂದಿಸುವ ಅಗ್ನಿಶಾಮಕ ಹಾಗೂ ನೀರು ಬಳಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.

ಆದರ ಘಟನೆಯಲ್ಲಿ ಒಂದು ಅಂಗಡಿ ಸಂಪೂರ್ಣ ಭಸ್ಮವಾಗಿದೆ. ಮತ್ತೊಂದು ಅಂಗಡಿ ಭಾಗಶಃ ಹೊತ್ತಿ ಉರಿದಿದೆ.ಅದೃಷ್ಟವಶಾತ್ ಎರಡೂ ಅಂಗಡಿಗಳು ಬಾಗಿಲು ಮುಚ್ಚಿತ್ತು.ಹೀಗಾಗಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಇದರ ಜೊತೆಗೆ ಹಲವು ಬೈಕ್ ಹಾಗೂ ಸ್ಕೂಟರ್ ಹೊತ್ತಿ ಉರಿದಿದೆ. ಅಗ್ನಿಶಾಮಕದಳ ಸ್ಥಳಕ್ಕೆ ಧಾವಿಸಿದೆ. ಇತ್ತ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

 

A Man Ignites Beedi with Petrol Spill, Sparks Blaze in Anantapur-Kalyanadurgam

A man carrying petrol in a can accidentally dropped it, causing the fuel to spill onto the road. Unaware of the spill, another individual lit a beedi, which ignited the petrol and triggered a fire. pic.twitter.com/vJFm03fpTl

— 4tv News Channel (@4tvhyd)

 

ಕೊರ್ಬಾ ಎಕ್ಸ್‌ಪ್ರೆಸ್‌ಗೆ ಬೆಂಕಿ, 4 ಎಸಿ ಬೋಗಿಗಳು ಆಹುತಿ; ನಿಲ್ದಾಣದಿಂದ ಎದ್ನೋ ಬಿದ್ನೋ ಅಂತ ಓಡಿದ ಜನರು
 

click me!