ಹಾವುಗಳನ್ನು ಕಂಡ್ರೆ ಜನರು ದೂರ ಓಡಿ ಹೋಗುತ್ತಾರೆ. ಆದ್ರೆ ಇಲ್ಲೋರ್ವ ಯುವತಿ ಯಾವುದೇ ಸುರಕ್ಷಾ ಸಾಧನಗಳನ್ನು ಬಳಸದೇ ಬರಿಗೈಯಲ್ಲಿಯೇ ಹಾವನ್ನು ಹಿಡಿಯುತ್ತಾಳೆ. ಯುವತಿಯ ಹಾವು ರಕ್ಷಣೆ ಮಾಡುವ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ.
ಮಳೆಗಾಲದಲ್ಲಿ ಹಾವುಗಳ ಹಾವಳಿ ಹೆಚ್ಚಿರುತ್ತದೆ. ಅದರಲ್ಲೂ ಗ್ರಾಮೀಣ ಭಾಗ, ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿರುವ ಜನವಸತಿ ಪ್ರದೇಶದಲ್ಲಿ ಹಾವುಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುತ್ತವೆ. ಹಾವುಗಳನ್ನು ಕಂಡಕೂಡಲೇ ಅವುಗಳನ್ನು ಕೊಲ್ಲಲು ಜನರು ಮುಂದಾಗುತ್ತಾರೆ. ಆದ್ರೆ ನಾವು ಏನು ಮಾಡದಿದ್ದರೆ ಹಾವುಗಳು ತಮ್ಮಪಾಡಿಗೆ ತಾವು ಹೋಗುತ್ತಿರುತ್ತವೆ. ಒಂದು ವೇಳೆ ಮನೆಯೊಳಗೆ ಅಥವಾ ಇನ್ನಿತರ ಯಾವುದೇ ಪ್ರದೇಶದಲ್ಲಿ ಹಾವುಗಳು ಸಿಲುಕಿದ್ದರೆ, ಕೂಡಲೇ ಉರಗ ತಜ್ಞರು ಅಥವಾ ರಕ್ಷಕರಿಗೆ ಮಾಹಿತಿ ನೀಡಬೇಕು. ಉರಗ ತಜ್ಞರು ಬಂದು ಹಾವುಗಳನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಬಿಡುತ್ತಾರೆ.
ಇದೀಗ ಸೋಶಿಯಲ್ ಮೀಡಿಯಾದಲ್ಲಿ ಯುವತಿ ಹಾವನ್ನು ರಕ್ಷಣೆ ಮಾಡುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಯುವತಿ ತುಂಬಾ ಚಾಕಚಕ್ಯತೆಯಿಂದ ಹಾವು ರಕ್ಷಣೆ ಮಾಡಿರೋದನ್ನು ವಿಡಿಯೋದಲ್ಲಿ ಗಮನಿಸಬಹುದು. ಯುವತಿ ಸೀರೆ ಧರಿಸಿರುವ ಕಾರಣದಿಂದಲೇ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಮಿಂಚಿನಂತೆ ಶೇರ್ ಆಗುತ್ತಿದೆ. ನೆಟ್ಟಿಗರು ಯುವತಿಯ ಧೈರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
undefined
ಯುವತಿಯ ಹೆಸರು ಸೈಬಾ ಆಗಿದ್ದು, ಇನ್‌ಸ್ಟಾಗ್ರಾಂನಲ್ಲಿ 1.6 ಮಿಲಿಯನ್ ಫಾಲೋವರ್ಸ್ ಹೊಂದಿದ್ದರು. ಇನ್‌ಸ್ಟಾಗ್ರಾಂನಲ್ಲಿ ಐದು ದಿನಗಳ ಹಿಂದೆ ಹಾವು ರಕ್ಷಣೆ ಮಾಡಿರುವ ವಿಡಿಯೋವನ್ನು ಅಪ್ಲೋಡ್ ಮಾಡಿಕೊಂಡಿದ್ದಾರೆ. 14 ಲಕ್ಷಕ್ಕೂ ಅಧಿಕ ವ್ಯೂವ್, 9 ಸಾವಿರಕ್ಕೂ ಹೆಚ್ಚು ಕಮೆಂಟ್‌ಗಳು ಬಂದಿವೆ. ಯಾವುದೇ ಸುರಕ್ಷಾ ಸಾಧನಗಳನ್ನು ಬಳಸದೇ ಬರಿಗೈಯಲ್ಲಿ ಹಾವು ಹಿಡಿದಿರೋದಕ್ಕೆ ನೆಟ್ಟಿಗರು ಎಚ್ಚರಿಕೆಯಿಂದಿರುವಂತೆ ಸಲಹೆ ನೀಡಿದ್ದಾರೆ.
ಜಡೆ ತಾಗಿಸಿದ್ರೆ ಕೂದಲು ಉದ್ದ ಆಗುತ್ತೆ ಅಂತ ನಂಬುವ ಈ ಹಾವಿನ ವಿಶೇಷತೆ ಏನು?
ಈ ರೀಲ್ ಅನ್ನು ಕೇವಲ ಮಾಹಿತಿ, ಶೈಕ್ಷಣಿಕ ಮತ್ತು ಸಾರ್ವಜನಿಕ ಜಾಗೃತಿ ಉದ್ದೇಶಗಳಿಗಾಗಿ ಮಾಡಲಾಗಿದೆ. ಯಾರೂ ಮನೆಯಲ್ಲಿ ಈ ರೀತಿ ಪ್ರಯತ್ನಿಸಬಾರದು. ಎಲ್ಲಾ ಚಟುವಟಿಕೆಗಳನ್ನು ಕಟ್ಟುನಿಟ್ಟಾದ ಮೇಲ್ವಿಚಾರಣೆಯಲ್ಲಿ ಮತ್ತು ಸರ್ಕಾರದ ನಿಯಮಗಳಿಗೆ ಅನುಸಾರವಾಗಿ ನಡೆಸಲಾಗಿದೆ. ದಯವಿಟ್ಟು ಈ ಸಾಹಸಕ್ಕೆ ಮುಂದಾಗಬೇಡಿ ಎಂದು ಯುವತಿ ಸೈಬಾ ಮನವಿ ಮಾಡಿಕೊಂಡಿದ್ದಾಳೆ.
ಸೈಬಾ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಆಗಿದ್ದು, ಟ್ರೆಂಡಿಂಗ್ ಹಾಡುಗಳಿಗೆ ರೀಲ್ಸ್ ಮಾಡುತ್ತಿರುತ್ತಾಳೆ. ಇನ್‌ಸ್ಟಾ ಬಯೋದಲ್ಲಿ ಹೆಸರು ಸೈಬಾ, ಅದು ಸಹ ಹಾಳಾಗಿದೆ ಎಂದು ಬರೆದುಕೊಂಡಿದ್ದಾಳೆ. ಇನ್‌ಸ್ಟಾಗ್ರಾಂನಲ್ಲಿ ಹಾವುಗಳನ್ನು ರಕ್ಷಣೆ ಮಾಡಿ ಅವುಗಳ ಜೊತೆ ರೀಲ್ಸ್ ಮಾಡುವ ಸೈಬಾ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಫೇಮಸ್.
ಟಾಯ್ಲೆಟ್ ಕಮೋಡ್‌ನಲ್ಲಿ ಹಾವು, ಕಾಣಿಸಿದ್ದು ಮೂರು, ಸಿಕ್ಕಿದ್ದು ಎರಡು... ಶೌಚಾಲಯದೊಳಗೆ ಹೋಗಲು ಫುಲ್ ಭಯ!