ಮನೆಯ ಟರೇಸ್ ಮೇಲೆ ಒಂದಷ್ಟು ಆಟಿಕೆಗಳ ಜೊತೆ ಮಗು ಆಟವಾಡುತ್ತಿತ್ತು. ಅಚಾನಕ್ಕಾಗಿ ಮಗು ಆಟಿಕೆ ಎಂದು ಹಾವನ್ನು ಕಚ್ಚಿದೆ. ಘಟನೆ ಬೆನ್ನಲ್ಲೇ ಪಕ್ಕದಲ್ಲಿದ್ದ ತಾಯಿ ಆಘಾತಗೊಂಡಿದ್ದಾಳೆ. ಆಸ್ಪತ್ರೆ ದಾಖಲಿಸಿದ ಮುಗುವಿಗೆ ಏನಾಯ್ತು? ಫಲಿತಾಂಶ ಎಲ್ಲರನ್ನೂ ಅಚ್ಚರಿಗೊಳಿಸಿದೆ.
ಪಾಟ್ನಾ(ಆ.21) ಅಚ್ಚರಿಯ ಘಟನೆಯೊಂದು ಬಿಹಾರದ ಗಯಾದಲ್ಲಿ ನಡೆದಿದೆ. ಮನೆಯ ಮೇಲೆ ಟರೇಸ್‌ನಲ್ಲಿ ತಾಯಿ ತನ್ನ ಕೆಲಸದಲ್ಲಿ ಮಗ್ನಳಾಗಿದ್ದರೆ, 1 ವರ್ಷದ ಮಗು ಅಲ್ಲೆ ಆಟವಾಡುತ್ತಿತ್ತು. ಮಗು ಆಟವಾಡಲು ಕೆಲ ಆಟಿಕೆಗಳನ್ನು ನೀಡಲಾಗಿತ್ತು. ಮಗುು ಆಟಿಕೆಗಳನ್ನು ಎಸೆಯುತ್ತಾ, ಅದರಲ್ಲೇ ಆಟವಾಡುತ್ತಿತ್ತು. ಆಟಿಕೆಗಳ ನಡುವೆ ಹಾವೊಂದು ಅವಿತು ಕುಳಿತಿತ್ತು. ತನ್ನ ಆಟಿಕೆ ಎಂದು ಹಾವನ್ನು ಕೈಗೆತ್ತಿಕೊಂಡ ಮಗು ಕಚ್ಚಿದೆ. ಇತ್ತ ಒಂದೆರಡು ಕ್ಷಣದಲ್ಲೇ ಮಗು ಜೋರಾಗಿ ಚೀರಾಡಲು ಆರಂಭಿಸಿದೆ. ಮಗುವನ್ನು ಗಮನಿಸಿದ ತಾಯಿಗೆ ಆಘಾತವಾಗಿದೆ. ಮಗುವಿನ ಕೈಯಲ್ಲಿ ಹಾವು, ಮುಖ ಸೇರಿದಂತೆ ಕೆಲ ಭಾಗದಲ್ಲಿ ರಕ್ತದ ಕಲೆ ನೋಡಿ ತಾಯಿ ಗಾಬರಿಯಾಗಿದ್ದಾಳೆ. ತಕ್ಷಣವೇ ಮಗುವನ್ನು ಎತ್ತಿಕೊಂಡು ಆಸ್ಪತ್ರೆ ದಾಖಲಿಸಿದ್ದಾಳೆ. ತಪಾಸಣೆ ನಡೆಸಿದ ವೈದ್ಯರು ಮಗು ಆರೋಗ್ಯವಾಗಿದೆ ಎಂದಿದ್ದಾರೆ. ಆದರೆ ಮಗು ಕಚ್ಚಿದ ಹಾವು ಸತ್ತಿದೆ.
ತಾಯಿ ತನ್ನ ಮಗುವಿನೊಂದಿಗೆ ಟರೇಸ್ ಮೇಲೆ ತೆರಳಿದ್ದಾರೆ. ಬಳಿಕ ತಾಯಿ ಕೆಲಸ ಮಾಡುತ್ತಿದ್ದರೆ, ಮಗು ಆಟವಾಡುತ್ತಾ ಮಗ್ನವಾಗಿದೆ. ಆದರೆ ಮಗುವಿನ ಕಿರುಚಾಟದಿಂದ ತಾಯಿ ನೋಡಿದಾಗ ಎದೆ ಬಡಿತ ಹೆಚ್ಚಾಗಿದೆ. ಮಗುವಿನ ಕೈಯಲ್ಲಿ ಹಾವು. ಹಾವು ಕಚ್ಚಿದ ಬಳಿಕ ಚೀರಾಡಲು ಆರಂಭಿಸಿದೆ.
ಬ್ಯಾಂಕ್‌ಗೆ ಬಂದ ಹಾವನ್ನು ಬರಿಗೈಯಲ್ಲಿ ಹಿಡಿದ ಉರಗತಜ್ಞನ ನೋಡಿ ಬೆಚ್ಚಿದ ನೌಕರರು!
ಆಸ್ಪತ್ರೆಯಲ್ಲಿ ತಪಾಸಣೆ ವೇಳೆ ವೈದ್ಯರಿಗೂ ಅಚ್ಚರಿಯಾಗಿದೆ. ಕಾರಣ ಮಗುವಿನ ದೇಹದಲ್ಲಿ ಯಾವುದೇ ವಿಷ ಸೇರಿಕೊಂಡಿರಲಿಲ್ಲ. ಇತ್ತ ಮಗುವಿಗೆ ಯಾವುದೇ ಗಾಯಗಳು ಆಗಿಲ್ಲ. ಆದರೆ ಮಗು ಕಚ್ಚಿದ ಹಾವು ಕೆಲವೇ ಕ್ಷಣದಲ್ಲಿ ಮೃತಪಟ್ಟಿದೆ. ಹಾವಿನ ತಪಾಸಣೆ ನಡೆಸಿದ ವೈದ್ಯರು ಇದು ವಿಷಪೂರಿತ ಹಾವಲ್ಲ ಎಂದಿದ್ದಾರೆ. ಆಧರೂ ಮಗು ಕಚ್ಚಿದ ಗಾಯಗಿಂದ ಹಾವು ಮೃತಪಟ್ಟಿದ್ದು ಹೇಗೆ ಎಂಬುದು ವೈದ್ಯರಿಗೂ ಅಚ್ಚರಿಯಾಗಿದೆ. ಸಾಮಾನ್ಯವಾಗಿ ಸಣ್ಣ ಗಾಯಗಳಿಂದ ಹಾವು ಸೇರಿದಂತೆ ಯಾವುದೇ ಪ್ರಾಣಿಗಳು ಸಾಯುವುದಿಲ್ಲ. ಇತರ ಪ್ರಾಣಿಗಳ ದಾಳಿ ಸೇರಿದಂತೆ ಈ ರೀತಿಯ ದಾಳಿಯಿಂದ ಆಗುವ ಗಾಯದಿಂದ ಪ್ರಾಣಿಗಳು ಸಾಯುವ ಸಾಧ್ಯತೆ ಕಡಿಮೆ ಎಂದು ವೈದ್ಯರು ಹೇಳಿದ್ದಾರೆ.
ಆದರೆ ಮನುಷ್ಯನ ಹಲ್ಲು ಇತರರಿಗೆ ವಿಷ. ಅದರಲ್ಲೂ ಕೆಲ ಪ್ರಾಣಿಳಿಗೆ ತೀವ್ರ ಸಮಸ್ಯ ತಂದೊಡ್ಡಲಿದೆ ಎಂದು ವೈದ್ಯರು ಹೇಳಿದ್ದಾರೆ. ಮಗುವಿಗೆ ಯಾವುದೇ ಸಮಸ್ಯೆಯಾಗಿಲ್ಲ. ಹಾವು ತಿರುಗಿ ಕಚ್ಚುವ ಮೊದಲೇ ಮಗು ಒಂದಲ್ಲ, ಮೂರು ಮಾರಿ ಹಾವಿಗೆ ಕಚ್ಚಿದೆ. ಇದರಿಂದ ಹಾವು ಅಸ್ವಸ್ಥಗೊಂಡಿದೆ. ಹೀಗಾಗಿ ತಿರುಗಿ ಕಚ್ಚುವ ಪ್ರಯತ್ನ ಮಾಡಿಲ್ಲ.
ಶ್ರೀಶೈಲಂನಲ್ಲಿ ಶಿವಲಿಂಗಕ್ಕೆ ನಾಗರ ಹಾವೇ ಕಾವಲು,ಮೊಬೈಲ್‌ನಲ್ಲಿ ಸೆರೆಯಾದ ಸಾಕ್ಷಾತ್ ಶಿವನ ದರ್ಶನ!