ಮಲಗೋದು ಭಾರತದಲ್ಲಿ ತಿನ್ನೋದು ಫಾರಿನ್‌ನಲ್ಲಿ: ಬಾರ್ಡರ್‌ನಲ್ಲಿರುವ ವಿಶೇಷ ಮನೆ ಇದು...!

By Suvarna News  |  First Published Sep 22, 2023, 11:55 AM IST

ಗಡಿ ಎಂದರೆ ನಮಗೆ ತಕ್ಷಣ ನೆನಪಾಗುವುದು ಭಾರತ ಪಾಕಿಸ್ತಾನ (Indo Pak Border). ಸದಾ ಸಂಘರ್ಷದಿಂದ ಕೂಡಿರುವ ಈ ಅಂತಾರಾಷ್ಟ್ರೀಯ ಗಡಿಯನ್ನು ನೋಡಿದ ಯಾರಿಗೂ ಗಡಿನಾಡು ಎಂದರೆ ನರಕವೆಂದೇ ಭಾಸವಾಗುವುದು. ಆದರೆ ಇದಕ್ಕೆ ತದ್ವಿರುದ್ಧವಾದುದು ಇಂಡೋ ಬರ್ಮಾ ಗಡಿ


ನಮ್ಮಲ್ಲಿ ರಾಜ್ಯಗಳ ಗಡಿ ಭಾಗದಲ್ಲಿಯೇ ಭಾಷೆಯ  ಕಾರಣಕ್ಕೆ ಆಗಾಗ ರಾಜ್ಯಗಳ ನಡುವೆ ಸಂಘರ್ಷ ನಡೆಯುತ್ತಲೇ ಇರುತ್ತೇವೆ. ನಮ್ಮ ಕರ್ನಾಟಕದಲ್ಲೇ ಬೆಳಗಾವಿಯಲ್ಲಿ ಕನ್ನಡ ಹಾಗೂ ಮಾರಾಠಿಗರು ಹಾವು ಮುಂಗುಸಿಗಳಂತೆ ಕಾದಾಡುತ್ತಲೇ ಇರುವುದು ಈ ಗಡಿ ಸಂಘರ್ಷಕ್ಕೊಂದು ಉತ್ತಮ ಉದಾಹರಣೆ. ಹೀಗಿರುವಾಗ ನಮ್ಮ ಭಾರತದ ಅಂತಾರಾಷ್ಟ್ರೀಯ ಗಡಿಯನ್ನು ಹಂಚಿಕೊಂಡಿರುವ ಈ ಪುಟ್ಟ ಗ್ರಾಮವೊಂದರಲ್ಲಿ ಜನ ಬಹಳ ಸಾಮರಸ್ಯದಿಂದ ಖುಷಿಯಿಂದ ಬದುಕುತ್ತಿದ್ದಾರೆ ಎಂದರೆ ನೀವು ನಂಬಲೇಬೇಕು.

ಗಡಿ ಎಂದರೆ ನಮಗೆ ತಕ್ಷಣ ನೆನಪಾಗುವುದು ಭಾರತ ಪಾಕಿಸ್ತಾನ (Indo Pak Border). ಸದಾ ಸಂಘರ್ಷದಿಂದ ಕೂಡಿರುವ ಈ ಅಂತಾರಾಷ್ಟ್ರೀಯ ಗಡಿಯನ್ನು ನೋಡಿದ ಯಾರಿಗೂ ಗಡಿನಾಡು ಎಂದರೆ ನರಕವೆಂದೇ ಭಾಸವಾಗುವುದು. ಆದರೆ ಇದಕ್ಕೆ ತದ್ವಿರುದ್ಧವಾದುದು ಇಂಡೋ ಬರ್ಮಾ ಗಡಿ( Indo Mayanmar Border). ಹೌದು ಅಂತಾರಾಷ್ಟ್ರೀಯ ಗಡಿಯಾದರೂ (International Border) ಇದನ್ನು ಗಡಿಯಾಗಿ ವಿಭಜಿಸಿಲ್ಲ, ಈ ಗಡಿಯಲ್ಲಿ ಬರುವ ಲಾಂಗ್ವಾ ಎಂಬ ಗ್ರಾಮವೊಂದು ಇತ್ತ ಭಾರತಕ್ಕೂ ಅತ್ತ ಬರ್ಮಾಕೂ ಸೇರುತ್ತದೆ. ಈ ಗ್ರಾಮದ ಜನರಿಗೆ ಎರಡು ದೇಶದ ಪೌರತ್ವವನ್ನು ನೀಡಲಾಗಿದೆ.  ಈ ಗ್ರಾಮದ ಕೆಲವು ಮನೆಗಳು ಅರ್ಧ ಬರ್ಮಾಕ್ಕೆ ಅರ್ಧ ಭಾರತಕ್ಕೆ ಸೇರುತ್ತವೆ. ಅದರಲ್ಲೂ ಇಲ್ಲಿನ ಗ್ರಾಮದ ಮುಖ್ಯಸ್ಥರ ಮನೆಯ ನಡುವೆ ಗಡಿ ರೇಖೆ ಹಾದು ಹೋಗಿದ್ದು, ಇಲ್ಲಿ ನೀವು ಅಡುಗೆ ಮನೆಗೆ ಹೋದರೆ ಮಯನ್ಮಾರ್‌ಗೆ ಹೋದಂತೆ ಬೆಡ್‌ರೂಮ್‌ಗೆ ಬಂದರೆ ಭಾರತಕ್ಕೆ ಬಂದಂತೆ...!

Tap to resize

Latest Videos

ಫ್ಯಾಷನ್‌ ಲೋಕದಲ್ಲಿ ಹವಾ ಸೃಷ್ಟಿಸಿದ ಪುಟಾಣಿ ಮಾಡೆಲ್‌ಗಳ ಸುಂದರ ಫೋಟೋಗಳು

ಹೌದು.. ಈ ಗ್ರಾಮದ ಜನರಿಗೆ ಭಾರತಕ್ಕೆ ಬರುವುದಕ್ಕಾಗಲಿ ಅಥವಾ ಬರ್ಮಾಕ್ಕೆ ಹೋಗುವುದಕ್ಕಾಗಲಿ ಯಾವುದೇ ಪಾಸ್‌ಪೋರ್ಟ್ ವೀಸಾದ ಅಗತ್ಯವಿಲ್ಲ. ನಾಗಲ್ಯಾಂಡ್ ರಾಜ್ಯದಲ್ಲಿ ಬರುವ ಈ ಲಾಂಗ್ವಾ ಗ್ರಾಮ ದಟ್ಟವಾದ ಕಾಡು ಬೆಟ್ಟ ಗುಡ್ಡಗಳಿಂದ ಆವೃತವಾದ ಹಸಿರು ತುಂಬಿರುವ ಸುಂದರವಾದ ಹಳ್ಳಿ.  ಒಂದು ಕಡೆ ದಟ್ಟ ಕಾಡಿದ್ದರೆ ಮತ್ತೊಂದು ಕಡೆ ಸುಂದರವಾದ ಕೃಷಿ ಭೂಮಿ ಇದೆ. ಕೊನ್ಯಾಕ್ ನಾಗ (Konyak naga) ಆದಿವಾಸಿಗಳ ನೆಲ ಇದಾಗಿದ್ದು ಇವರು ತಮ್ಮ ಅಪೂರ್ವವಾದ ಬೇಟೆಯಾಡುವ ಸಾಮರ್ಥ್ಯಕ್ಕೆ ಹೆಸರಾಗಿದ್ದಾರೆ. 

ನಾಗಲ್ಯಾಂಡ್‌ನ ಮೊನ್ (Mon) ಜಿಲ್ಲೆಯಲ್ಲಿ ಬರುವ ಈ ಲಾಂಗ್ವಾ ಗ್ರಾಮದಲ್ಲಿ ಒಟ್ಟು 4 ನದಿಗಳು ಹರಿಯುತ್ತಿದ್ದು, ಇದರಲ್ಲಿ ಎರಡು ನದಿಗಳು ಭಾರತಕ್ಕೆ ಹಾಗೂ ಮತ್ತೆರಡು ನದಿಗಳು ಬರ್ಮಾ ದೇಶಕ್ಕೆ ಸೇರುತ್ತವೆ. 1970ರಲ್ಲಿ ಇಲ್ಲಿ ಗಡಿರೇಖೆಯನ್ನುಸ್ಥಾಪಿಸಲಾಯಿತು. ಗಡಿರೇಖೆಯನ್ನು ಎಳೆಯುವ ವೇಳೆ ಆಗಿನ ಅಧಿಕಾರಿಗಳು ಸಮುದಾಯವನ್ನು ಒಡೆಯಲು ಬಯಸಲಿಲ್ಲ, ಹೀಗಾಗಿ ಈ ಪುಟ್ಟ ಗ್ರಾಮ ಭಾರತ ಹಾಗೂ ಮಯನ್ಮಾರ್ ಎರಡೂ ದೇಶಕ್ಕೂ ಸೇರುತ್ತದೆ. ಹೀಗಾಗಿ ಇಲ್ಲಿ ಬರ್ಮಾ ಹಾಗೂ ಹಿಂದಿ ಎರಡೂ ಭಾಷೆಗಳಲ್ಲೂ ಗಡಿ ಕಲ್ಲಿನಲ್ಲಿರುವ ಬೋರ್ಡ್‌ನಲ್ಲಿ ಬರೆಯಲಾಗಿದೆ. 

ಅಮ್ಮನ ಪ್ರೀತಿಗೆ ಸರಿಸಾಟಿ ಎಲ್ಲಿ? ಮರಿಗಳಿಗಾಗಿ ಚಿಕನ್ ಪ್ಯಾಕೇಟನ್ನೇ ಎಗರಿಸಿದ ತಾಯಿ ಬೆಕ್ಕು

ಈ ಗ್ರಾಮದ ಮುಖ್ಯಸ್ಥನ ಮನೆಯ ಮಧ್ಯೆ ಈ ಗಡಿರೇಖೆಯೂ ಹಾದು ಹೋಗಿರುವುದರಿಂದ ಆತ ಭಾರತದಲ್ಲಿ ತಿಂದು ಮಯನ್ಮಾರ್‌ನಲ್ಲಿ ಮಲಗುತ್ತಾನೆ ಎಂದು ಹಾಸ್ಯ ಮಾಡಲಾಗುತ್ತದೆ.  ನಾಗಲ್ಯಾಂಡ್‌ನ ಸಚಿವರಾದ ತೆಮ್ಜೆನ್ ಇಮ್ನಾ ಅಲಾಂಗ್ ಅವರು ಈ ಸುಂದರ ನಗರಿಯ ವೀಡಿಯೋವನ್ನು ಈ ಹಿಂದೆ ಹಂಚಿಕೊಂಡಿದ್ದರು. 

OMG | यह मेरा इंडिया

To cross the border, this person just needs to go to his bedroom.

बिलकुल ही "Sleeping in India and Eating in Myanmar" वाला दृश्य😃

⁦⁩
⁦⁩
⁦⁩ pic.twitter.com/4OnohxKUWO

— Temjen Imna Along (@AlongImna)

 

click me!