ಮಹಾರಾಷ್ಟ್ರ: 7 ತಿಂಗಳಲ್ಲಿ 1555 ರೈತರು ಸಾವಿಗೆ ಶರಣು

By Kannadaprabha News  |  First Published Sep 22, 2023, 8:26 AM IST

ಮಹಾರಾಷ್ಟ್ರದಲ್ಲಿ ಈ ವರ್ಷದಲ್ಲಿ 1555 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಮಹಾರಾಷ್ಟ್ರ ವಿಧಾನಸಭೆ ವಿಪಕ್ಷ ನಾಯಕ ವಿಜಯ್‌ ವಡೆಟ್ಟಿವಾರ್‌  (Vijay Vadettiwar) ಮಾಹಿತಿ ನೀಡಿದ್ದಾರೆ.


ಮುಂಬೈ: ಮಹಾರಾಷ್ಟ್ರದಲ್ಲಿ ಈ ವರ್ಷದಲ್ಲಿ 1555 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಮಹಾರಾಷ್ಟ್ರ ವಿಧಾನಸಭೆ ವಿಪಕ್ಷ ನಾಯಕ ವಿಜಯ್‌ ವಡೆಟ್ಟಿವಾರ್‌  (Vijay Vadettiwar) ಮಾಹಿತಿ ನೀಡಿದ್ದಾರೆ. ಈ ಕುರಿತು ಟ್ವೀಟರ್‌ನಲ್ಲಿ ಹಂಚಿಕೊಂಡಿರುವ ಅವರು, ‘ರಾಜ್ಯದ 13 ಜಿಲ್ಲೆಗಳಲ್ಲಿ ಸರಾಸರಿಗಿಂತ ಕಡಿಮೆ ಮುಂಗಾರು (monsoon rain) ಮಳೆಯಾಗಿದೆ. ಪರಿಣಾಮ 7 ತಿಂಗಳಲ್ಲಿ 1555 ರೈತರು ಬರಗಾಲದ ಕಾರಣ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಪೈಕಿ ಜನವರಿಯಲ್ಲಿ 226, ಫೆಬ್ರವರಿಯಲ್ಲಿ 192, ಮಾರ್ಚ್‌ನಲ್ಲಿ 226, ಏಪ್ರಿಲ್‌ನಲ್ಲಿ 225, ಮೇನಲ್ಲಿ 224, ಜೂನ್‌ನಲ್ಲಿ 233 ಹಾಗೂ ಜುಲೈ ತಿಂಗಳಿನಲ್ಲಿ 229 ಜನರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಅಮರಾವತಿ ವಲಯದಲ್ಲಿ (Amravati zone)ಅತಿ ಹೆಚ್ಚು 637, ಉಳಿದಂತೆ ಔರಂಗಾಬಾದ್‌ ವಲಯದಲ್ಲಿ 584, ನಾಸಿಕ್‌ ವಲಯದಲ್ಲಿ 174, ನಾಗಪುರ ಮತ್ತು ಪುಣೆ ವಲಯದಲ್ಲಿ 144 ಮತ್ತು 16 ರೈತರು ಸಾವನ್ನಪ್ಪಿದ್ದಾರೆ.

ಆದರೆ ಸರ್ಕಾರ ಮಾತ್ರ ಕೇವಲ ಆಶ್ವಾಸನೆಗಳನ್ನು ಕೊಟ್ಟು ಕೈತೊಳೆದುಕೊಳ್ಳುತ್ತಿದೆ. ಬರ(drought) ನಿರ್ವಹಣೆಗೆ ಮತ್ತು ರೈತರ ಸಾವು ತಡೆಗೆ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಆರೋಪಿಸಿದ್ದಾರೆ.

ವಿಶ್ವದ ಫ್ಯಾಷನ್‌ ಲೋಕವನ್ನು ಆಳುತ್ತಿರುವ ಪುಟಾಣಿ ಸೂಪರ್‌ ಮಾಡೆಲ್‌ಗಳಿವರು...

Tap to resize

Latest Videos

ಅಪಘಾತ ಪರಿಹಾರ ಮೊತ್ತ 10 ಪಟ್ಟು ಹೆಚ್ಚಳ ಮಾಡಿದ ಭಾರತೀಯ ರೈಲ್ವೆ ಇಲಾಖೆ

ನವದೆಹಲಿ: ರೈಲ್ವೆ ಅಪಘಾತಗಳಲ್ಲಿ ಯಾವುದೇ ವ್ಯಕ್ತಿಗೆ ಉಂಟಾಗುವ ಗಾಯ ಅಥವಾ ಸಾವಿಗೆ ನೀಡುವ ಪರಿಹಾರದ ಮೊತ್ತವನ್ನು ರೈಲ್ವೆ ಇಲಾಖೆ (Railway Department) 10 ಪಟ್ಟು ಹೆಚ್ಚಳ ಮಾಡಿದೆ. ಈ ಹಿಂದೆ 2012 ಮತ್ತು 2013ರಲ್ಲಿ ಪರಿಹಾರದ ಮೊತ್ತ (compensation amount) ಪರಿಷ್ಕರಿಸಲಾಗಿತ್ತು. ಈ ಹಿಂದೆ ಪ್ರಯಾಣಿಕರ ಸಾವಿಗೆ ನೀಡುತ್ತಿದ್ದ ಮೊತ್ತವನ್ನು 50000 ರು.ನಿಂದ 5 ಲಕ್ಷ ರು.ಗೆ, ಗಂಭೀರವಾಗಿ ಗಾಯಗೊಂಡವರಿಗೆ 25000 ರು. ಬದಲು 2.5 ಲಕ್ಷ ರು. ಮತ್ತು ಸಾಮಾನ್ಯ ಗಾಯಗೊಂಡವರಿಗೆ 5000 ರು. ಬದಲು 50000 ರು. ನೀಡಲಾಗುವುದು. ಅಲ್ಲದೆ 30 ದಿನಕ್ಕಿಂತ ಹೆಚ್ಚಿನ ದಿನ ಆಸ್ಪತ್ರೆ ದಾಖಲಾಗಿದ್ದರೆ ನಿತ್ಯ 3000 ರು. ನೀಡಲಾಗುವುದು ಎಂದು ರೈಲ್ವೆ ಮಾಹಿತಿ ನೀಡಿದೆ.

ನಾವು ಹೇಳದ ‘ಚಂದ್ರರಹಸ್ಯ’ ಇನ್ನೂ ಇದೆ: ಇಸ್ರೋ ಅಧ್ಯಕ್ಷ ಎಸ್‌.ಸೋಮನಾಥ್‌

 

click me!