ಕೇರಳದಲ್ಲಿ ಅರಳಿದ ಒಂದೇ ಒಂದು ಕಮಲ ಮತ್ತೆ ಮುದುಡುತ್ತಾ: ಸುರೇಶ್ ಗೋಪಿ ಅಭಿಮಾನಿಗಳು ಹೇಳ್ತಿರೋದೇನು?

By Anusha KbFirst Published Jun 10, 2024, 2:26 PM IST
Highlights

ನಿನ್ನೆ ನಡೆದ ಪ್ರಧಾನಿ ನರೇಂದ್ರ ಮೋದಿ ಹಾಗೂ ಸಚಿವರ ಪ್ರಮಾಣ ವಚನ ಸಮಾರಂಭದಲ್ಲಿ ಸುರೇಶ್ ಗೋಪಿ ಕೂಡ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಆದರೆ ಈಗ ಅವರು ಪ್ರಧಾನಿ ಮೋದಿ ಸಂಪುಟಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂಬ ಊಹಾಪೋಹಾಗಳು ಹರಿದಾಡುತ್ತಿವೆ. 

ತ್ರಿಶ್ಯೂರ್: ಮಲೆಯಾಳಂ ಸಿನಿಮಾ ನಟ ಸುರೇಶ್ ಗೋಪಿ, ಅವರು ಕೇರಳದ ತ್ರಿಶೂರ್ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಸಂಸತ್ ಪ್ರವೇಶಿಸುವ ಮೂಲಕ ಇತಿಹಾಸ ಬರೆದವರು. ಕೇರಳದಲ್ಲಿ ಬಿಜೆಪಿಗೆ ಸಿಕ್ಕಿದ ಏಕೈಕ ಲೋಕಸಭಾ ಸೀಟು ಇವರದ್ದು, ಈ ಹಿನ್ನೆಲೆಯಲ್ಲಿ ನಿನ್ನೆ ನಡೆದ ಪ್ರಧಾನಿ ನರೇಂದ್ರ ಮೋದಿ ಹಾಗೂ ಸಚಿವರ ಪ್ರಮಾಣ ವಚನ ಸಮಾರಂಭದಲ್ಲಿ ಸುರೇಶ್ ಗೋಪಿ ಕೂಡ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಆದರೆ ಈಗ ಅವರು ಪ್ರಧಾನಿ ಮೋದಿ ಸಂಪುಟಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂಬ ಊಹಾಪೋಹಾಗಳು ಹರಿದಾಡುತ್ತಿವೆ. ತಮ್ಮ ಬ್ಯುಸಿಯಾದ ಸಿನಿಮಾ ಕೆಲಸಗಳಿಂದಾಗಿ ಅವರು ಮೋದಿ ಸಂಪುಟಕ್ಕೆ ರಾಜೀನಾಮೆ ನೀಡುತ್ತಾರೆ ಎಂದು ವರದಿಗಳು ಹರಿದಾಡುತ್ತಿವೆ. 

ಆದರೆ ನಟನಿಗೆ ಆಪ್ತವಾದ ಮೂಲಗಳು ಹೇಳುವ ಪ್ರಕಾರ, ಸುರೇಶ್ ಗೋಪಿಯವರು ಮೋದಿ ಸಚಿವ ಸಂಪುಟದಲ್ಲಿ ಸಂಪುಟ ದರ್ಜೆಯ ಸಚಿವ ಸ್ಥಾನ ನೀಡದೇ ಇರುವುದರಿಂದ ಬೇಸರಗೊಂಡಿದ್ದಾರೆ. ಅವರು ಈ ಬಗ್ಗೆ ತಮ್ಮ ಅಸಮಾಧಾನವನ್ನು ಪಕ್ಷದ ನಾಯಕರಿಗೂ ತಿಳಿಸಿದ್ದಾರೆ. ಜೊತೆಗೆ ಅವರು ತಾನು ಸಂಸದನಾಗಿ ತ್ರಿಶೂರ್‌ನಲ್ಲಿ ಜನರಿಗಾಗಿ ಕೆಲಸ ಮಾಡುವುದಾಗಿ ಬಿಜೆಪಿ ನಾಯಕರಿಗೆ ತಿಳಿಸಿದ್ದಾರೆ ಎಂದು ವರದಿ ಆಗಿದೆ. ಆದರೆ  ಆದರೆ, ತ್ರಿಶೂರ್‌ನಲ್ಲಿರುವ ಅವರ ಚುನಾವಣಾ ಏಜೆಂಟ್‌ಗಳಿಗೆ ಅಂತಹ ಯಾವುದೇ ಬೆಳವಣಿಗೆಗಳ ಬಗ್ಗೆ ತಿಳಿದಿಲ್ಲ.

Latest Videos

ದೇವರ ನಾಡಿನಲ್ಲಿ ಕಮಲ ಅರಳಿಸಿದ ಸುರೇಶ್ ಗೋಪಿಗೆ ಸಂಪುಟದಲ್ಲಿ ಸಿಕ್ತು ಸ್ಥಾನ

ಸುರೇಶ್ ಗೋಪಿ ಕೇರಳದಿಂದ ಸಂಸತ್‌ ಚುನಾವಣೆಯಲ್ಲಿ ಗೆದ್ದ ಮೊದಲ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಗೋಪಿ ಅವರ ಬೆಂಬಲಿಗರು ಹೇಳುವ ಪ್ರಕಾರ ಅವರಿಗೆ ಸಂಪುಟ ದರ್ಜೆಯ ಸಚಿವರನ್ನಾಗಿ ಮಾಡಲಾಗುವುದು ಎಂದು ಹೇಳಿ ಕೇವಲ ರಾಜ್ಯ ಖಾತೆಯನ್ನು ನೀಡಿದ್ದಾರೆ ಎಂದು ಹೇಳಿಕೊಳ್ಳುತ್ತಿದ್ದಾರೆ.

ಭಾನುವಾರದಂದು ಪ್ರಧಾನಿ ಮೋದಿಯವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸುವಂತೆ ಪ್ರಧಾನಿ ಸಚಿವಾಲಯದಿಮದ ನಟ ಸುರೇಶ್ ಗೋಪಿಗೆ ಕರೆ ಬಂದಾಗ ಗೋಪಿ ಬೆಂಬಲಿಗರು ಖುಷಿಯಿಂದ ಸಂಭ್ರಮಾಚರಣೆ ನಡೆಸಿದ್ದರು ಹಾಗೂ ಅವರಿಗೆ ಕ್ಯಾಬಿನೆಟ್ ದರ್ಜೆಯ ಸಚಿವ ಸ್ಥಾನ ನೀಡುತ್ತಾರೆ ಎಂದೇ ಭಾವಿಸಿದ್ದರು.

ಅವರಿಗೆ ಕ್ಯಾಬಿನೆಟ್ ದರ್ಜೆ ನೀಡಲಾಗುತ್ತದೆ ಜೊತೆಗೆ ಅವರ ಬಿಡುವಿಲ್ಲದ ಸಿನಿಮಾ ಶೆಡ್ಯೂಲ್‌ಗಳಲ್ಲಿ ಭಾಗಿಯಾಗಲು ಅವಕಾಶ ನೀಡಲಾಗುತ್ತದೆ ಎಂಬ ಭರವಸೆಯ ಬಳಿಕವಷ್ಟೇ ಸುರೇಶ್ ಗೋಪಿ ಸಚಿವ ಸಂಪುಟ ಸೇರಲು ಮುಂದಾಗಿದ್ದರು ಎಂದು ಅವರ ಅಭಿಮಾನಿಗಳು ಹೇಳಿದ್ದಾರೆ. ಆದರೆ ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಲು ರಾಜ್ಯ ಬಿಜೆಪಿ ಅಧ್ಯಕ್ಷ ಕೆ.ಸುರೇಂದ್ರನ್ ನಿರಾಕರಿಸಿದ್ದಾರೆ.

ಗರ್ಭಿಣಿ ಮಹಿಳೆಯ ಹೊಟ್ಟೆ ಮುಟ್ಟಿದ ಬಿಜೆಪಿ ಅಭ್ಯರ್ಥಿ: ವಿಡಿಯೋ ವೈರಲ್!

ಇನ್ನು ಈ ಬೆಳವಣಿಗೆ ಬಗ್ಗೆ ಸುರೇಶ್ ಗೋಪಿ ಪ್ರತಿಕ್ರಿಯಿಸಿದ್ದು, ನಾನು ಪಕ್ಷದಿಂದ ಏನನ್ನೂ ಕೇಳಿಲ್ಲ, ನನಗೆ ಈ ಹುದ್ದೆ ಅಗತ್ಯವಿಲ್ಲ ಎಂದು ನಾನು ಮೊದಲೇ ಹೇಳಿದ್ದೆ.  ನಾನು ಶೀಘ್ರದಲ್ಲೇ ಹುದ್ದೆಯಿಂದ ಬಿಡುಗಡೆಗೊಳ್ಳುತ್ತೇನೆ ಎಂದು ನಾನು ಭಾವಿಸಿದ್ದೇನೆ. ತ್ರಿಶೂರ್ ಮತದಾರರಿಗೆ ಇದರಿಂದ ಯಾವುದೇ ತೊಂದರೆ ಇಲ್ಲ. ಅದು ಅವರಿಗೆ ಗೊತ್ತಿದೆ ಮತ್ತು ಸಂಸದನಾಗಿ ನಾನು ಅವರಿಗಾಗಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತೇನೆ. ನಾನು ಯಾವುದೇ ಬೆಲೆ ತೆತ್ತಾದರೂ ನನ್ನ ಸಿನಿಮಾ ಮಾಡಲೇಬೇಕು. ಅದರಿಂದ ನಾನು ಸಮಾಧಾನಗೊಳ್ಳುತ್ತೇನೆ ಎಂದು ನನಗೆ ತಿಳಿದಿದೆ ಅದಕ್ಕಾಗಿಯೇ ನಾನು ಈ ಬಗ್ಗೆ ಹೇಳುತ್ತಿದ್ದೇನೆ. ಆದರೆ ಅವರೇ ಅದನ್ನು ನಿರ್ಧರಿಸಲಿ ಎಂದು ಸುರೇಶ್ ಗೋಪಿ ಈ ರಾಜಕೀಯ ಬೆಳವಣಿಗೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದಾರೆ. 

click me!