7 ರಾಜ್ಯದ ವಿಧಾನಸಭಾ ಉಪ ಚುನಾವಣೆಗೆ ದಿನಾಂಕ ಘೋಷಣೆ, ಜು.10ಕ್ಕೆ ಮತದಾನ!

By Chethan Kumar  |  First Published Jun 10, 2024, 1:53 PM IST

ಲೋಕಸಭಾ ಚುನಾವಣೆ ಮುಗಿದು ಇದೀಗ ಎನ್‌ಡಿಎ ಸರ್ಕಾರ ರಚನೆಯಾಗಿದೆ. ಇದರ ಬೆನ್ನಲ್ಲೇ 7 ರಾಜ್ಯದ ವಿಧಾನಸಭಾ ಉಪ ಚುನಾವಣೆ ದಿನಾಂಕ ಘೋಷಣೆಯಾಗಿದೆ. ಚನಾವಣಾ ಆಯೋಗ ಇಂದು ಸುದ್ದಿಗೋಷ್ಠಿ ನಡೆಸಿದೆ. ಜುಲೈ 10ಕ್ಕೆ ಮತದಾನ ನಡೆದರೆ, ಜುಲೈ 13ಕ್ಕೆ ಮತ ಎಣಿಕೆ ನಡೆಯಲಿದೆ.
 


ನವದೆಹಲಿ(ಜೂ.10) ಲೋಕಸಭಾ ಚುನಾವಣೆ ಫಲಿತಾಂಶ ಹೊರಬಿದ್ದ ಒಂದೇ ವಾರದಲ್ಲಿ ಎನ್‌ಡಿಎ ಸರ್ಕಾರ ರಚನೆಯಾಗಿದೆ. ಪ್ರಧಾನಿ ಮೋದಿ ಹಾಗೂ 72 ಸಚಿವರು ಪ್ರಮಾಣವಚನ ಸ್ವೀಕರಿಸಿದ್ದಾರೆ. ಲೋಕಸಮರದ ಬೆನ್ನಲ್ಲೇ ಇದೀಗ 7 ರಾಜ್ಯದ ವಿಧಾನಸಭಾ ಉಪ ಚುನಾವಣೆ ದಿನಾಂಕ ಘೋಷಣೆಯಾಗಿದೆ. ತೆರವಾಗಿರುವ  13 ವಿಧಾನಸಭಾ ಸ್ಥಾನಗಳ ಭರ್ತಿಗಾಗಿ ಇದೀಗ ಚುನಾವಣೆ ನಡೆಯಲಿದೆ. ಬಿಹಾರ, ಪಶ್ಚಿಮ ಬಂಗಾಳ, ತಮಿಳುನಾಡು, ಮಧ್ಯಪ್ರದೇಶ, ಉತ್ತರಖಂಡ, ಪಂಜಾಬ್ ಹಾಗೂ ಹಿಮಾಚಲ ಪ್ರದೇಶದ ವಿಧಾಸಭಾ ಸ್ಥಾನಗಳಿಗೆ ಉಪ ಚುನಾವಣೆ ನಡೆಯಲಿದೆ.

ಜುಲೈ 10ಕ್ಕೆ ಮತದಾನ ನಡೆಯಲಿದೆ. ಜುಲೈ 13ಕ್ಕೆ ಮತ ಏಣಿಕೆ ನಡೆಯಲಿದೆ. ಇದಕ್ಕಾಗಿ ನಾಮಪತ್ರ ಸಲ್ಲಿಸಲು ಜೂನ್ 21 ಕೊನೆಯ ದಿನವಾಗಿದೆ. ಜೂನ್ 24ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಜೂನ್ 26 ನಾಮತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ಒಟ್ಟು 13 ವಿಧಾನಸಭಾ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. 

Latest Videos

undefined

ಲೋಕಸಭಾ ಚುನಾವಣೆಯಲ್ಲಿ ಯಾವ ಪಕ್ಷ ಎಷ್ಟು ಸೀಟ್ ಗೆದ್ದಿದೆ ಗೊತ್ತಾ?

ಬಿಹಾರದ ರುಪಾಲಿ ವಿಧಾನಸಭಾ ಕ್ಷೇತ್ರದ ಶಾಸಕಿ ಭಿಮಾ ಬಾರ್ತಿ ರಾಜೀನಾಮೆ ನೀಡಿದ್ದಾರೆ. ಹೀಗಾಗಿ ರುಪಾಲಿ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯಲಿದೆ. ಇನ್ನು ಪಶ್ಚಿಮ ಬಂಗಾಳದ ರಾಯಿಗಂಜ್ ಕ್ಷೇತ್ರದ ಶಾಸಕ ಕೃಷ್ಣ ಕಲ್ಯಾಣ್, ರಾನಾಘಾಟ್ ದಕ್ಷಿಣ ಕ್ಷೇತ್ರದ ಶಾಸಕ ಮುಕುಟ ಮಣಿ ಅಧಿಕಾರಿ, ಬಾಗ್ದಾ ಎಸ್‌ಸಿ ಮೀಸಲು ಕ್ಷೇತ್ರದ ಶಾಸಕ ಬಿಸ್ವವಿಜ್ ದಾಸ್, ಮಣಿಕ್ಟಲಾ ಕ್ಷೇತ್ರದ ಶಾಸಕ ಸಾಧನ್ ಪಾಂಡೆ ರಾಜೀನಾಮೆ ನೀಡಿದ್ದಾರೆ. ಬಂಗಾಳ ಈ ಮೂರು ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಲಿದೆ. 

ತಮಿಳುನಾಡಿನ ವಿಕ್ರವಂಡಿ ಕ್ಷೇತ್ರ, ಮಧ್ಯಪ್ರದೇಶದ ಅಮವಾರವರ, ಉತ್ತರಖಂಡದ ಮಂಗಲೌರ್, ಪಂಜಾಬ್‌ನ ಪೂರ್ವ ಜಲಂಧರ್, ಹಿಮಾಚಲ ಪ್ರದೇಶದ ದೆಹ್ರಾ, ಹಮ್ರಿಪುರ್ ಹಾಗೂ ನಾಲಾಗ್ರಹ ಕ್ಷೇತ್ರಕ್ಕೂ ಉಪ ಚುನಾವಣೆ ನಡೆಯಲಿದೆ.ತೆರವಾಗಿರುವ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಜುಲೈ 15ರೊಳಗೆ ಅಂತ್ಯವಾಗಬೇಕು. ಇದಕ್ಕೆ ಪೂರಕವಾಗಿ ಚುನಾವಣಾ ಆಯೋಗ ಉಪಚುನಾವಣೆ ದಿನಾಂಕ ಘೋಷಣೆ ಮಾಡಿದೆ. 

1996ರ ಬಳಿಕ ಮೊದಲ ಬಾರಿಗೆ ಒಂದೇ ಕೂಟಕ್ಕೆ 3ನೇ ಬಾರಿಗೆ ಅಧಿಕಾರ, ಜನತೆಗೆ ಮೋದಿ ಧನ್ಯವಾದ!

ಲೋಕಸಭಾ ಚುನಾವಣೆ 7 ಹಂತದಲ್ಲಿ ನಡೆದಿತ್ತು. ಜೂನ್ 1ಕ್ಕೆ ಅಂತಿಮ ಹಂತದ ಮತದಾನ ನಡೆದಿತ್ತು. ಜೂನ್ 4 ರಂದು ಮತ ಎಣಿಕೆ ನಡೆದು ಫಲಿತಾಂಶ ಘೋಷಣೆಯಾಗಿತ್ತು. ಬಿಜೆಪಿ ಏಕಾಂಗಿಯಾಗಿ 240 ಸ್ಥಾನ ಗೆದ್ದುಕೊಂಡಿತ್ತು. ಕಾಂಗ್ರೆಸ್ 99 ಸ್ಥಾನಕ್ಕೆ ಜಿಗಿತ ಕಂಡಿತ್ತು. ಎನ್‌ಡಿಎ ಮೈತ್ರಿ ಕೂಟ ಬಹುಮತ ಪಡೆದು ಸರ್ಕಾರ ರಚನೆ ಮಾಡಿತ್ತು. 
 

click me!