ಅಚಾನಕ್ಕಾಗಿ ಮನೆಯಿಂದ ಬೆಳ್ಳಿ ಕಳಶ ನಾಪತ್ತೆ, ಕೈಮುಗಿದು ಬೇಡಿದ ಕುಟುಂಬಕ್ಕೆ 48 ಗಂಟೆಯಲ್ಲಿ ಸಿಕ್ಕಿತು ವಸ್ತು

Published : Jul 21, 2026, 06:05 PM IST
Recovery of Missing Silver Kalash

ಸಾರಾಂಶ

ದೇವರ ಕೋಣೆಯಲ್ಲಿ ನೀರಿಡುವ ಬೆಳ್ಳಿಯ ಕಳಶ ಏಕಾಏಕಿ ನಾಪತ್ತೆಯಾಗಿತ್ತು. ಸರಿಸುಮಾರ 5 ಲಕ್ಷ ಮೌಲ್ಯದ ಬೆಳ್ಳಿ ಕಳಶಕ್ಕಾಗಿ ಕುಟುಂಬ ಕೈಮುಗಿದು ಬೇಡಿಕೊಂಡಿತ್ತು. ಹೀಗೆ ಬೇಡಿಕೊಂಡ 48 ಗಂಟೆಯಲ್ಲಿ ನಾಪತ್ತೆಯಾದ ಬೆಳ್ಳಿ ಕಳಶ ಮತ್ತೆ ಕುಟುಂಬದ ಕೈಸೇರಿದೆ.

ಇಂದೋರ್ (ಜು.21) ದೇವರ ಪೂಜೆ, ಪುನಸ್ಕಾರಗಳಲ್ಲಿ ಹೆಚ್ಚಿನ ಮುತುವರ್ಜಿ ವಹಿಸುತ್ತಿದ್ದ ಕುಟುಂಬ ದೇವರ ಕೋಣೆಯಲ್ಲಿ ಪ್ರತಿ ದಿನ ಬೆಳ್ಳಿ ಕಳಶದಲ್ಲಿ ನೀರು ಇಡುತ್ತಿತ್ತು. ತಲ ತಲಾಂತರಗಳಿಂದ ಬಂದ ಈ ಬೆಳ್ಳಿ ಕಳಶ ಕುಟುಂಬಕ್ಕೆ ಅತ್ಯಮೂಲ್ಯ ವಸ್ತುವಾಗಿತ್ತು. ಕೇವಲ ಇದರ ಬೆಲೆಯ ದೃಷ್ಟಿಯಿಂದ ಅಲ್ಲ. ಕುಟುಂಬದ ಪೂರ್ವಜರು ನೀಡಿದು ಅಮೂಲ್ಯ ಸ್ವತ್ತಾಗಿತ್ತು. ಆದರೆ ಅಚಾನಕ್ಕಾಗಿ ಈ ಬೆಳ್ಳಿಯ ಕಳಶ ಕಾಣೆಯಾಗಿತ್ತು. ಹುಡುಕಾಡಿದರೂ ಸಿಗಲಿಲ್ಲ. ಕೊನೆಗೆ ಕೈಮುಗಿದು ಬೇಡಿಕೊಂಡ ಕುಟುಂಬಕ್ಕೆ 48 ಗಂಟೆಗಳಲ್ಲಿ ಬೆಳ್ಳಿ ಕಳಶ ಮತ್ತೆ ಕೈಸೇರಿದೆ. ಇಂದೋರ್‌ ರಾಜೇಂದ್ರ ನಗರದಲ್ಲಿರುವ ಈ ಕುಟುಂಬದ ಬೆಳ್ಳಿ ಕಳಶದ ರೋಚಕ ಕತೆ ಇದೀಗ ಭಾರಿ ಸದ್ದು ಮಾಡುತ್ತಿದೆ.

ಪೂಜೆ ಮಾಡುತ್ತಿದ್ದ ಅಜ್ಜಿ ಕೈಯಿಂದ ನಾಪತ್ತೆಯಾದ ಕಳಶ

ಬೆಳ್ಳಿ ಕಳಶದಲ್ಲಿ ನೀರು ತಂದು ದೇವರ ಕೋಣೆಯಲ್ಲಿಟ್ಟು ಮನೆಯ ಹಿರಿಯವರಾದ ಅಜ್ಜಿ ಪೂಜೆ ಮಾಡುತ್ತಿದ್ದರು. ಹೀಗೆ ಪೂಜೆ ಮಾಡಿದ ಬಳಿಕ ಈ ಕಳಶ ನಾಪತ್ತೆಯಾಗಿತ್ತು. ಎಲ್ಲಾ ಕಡೆ ಹುಡುಕಿದರೂ ಸಿಗಲಿಲ್ಲ. ಅಜ್ಜಿ ದೇವರ ಕೋಣೆ ಸೇರಿದಂತೆ ಎಲ್ಲೆಡೆ ಶುಚಿ ಮಾಡಿದ್ದರು. ಶುಚಿ ಬಳಿಕ ಹಲವು ಕಸ ಕಸಕಡ್ಡಿಗಳನ್ನು ಬ್ಯಾಗ್‌ನಲ್ಲಿ ತುಂಬಿದ್ದರು. ಈ ಚೀಲದಲ್ಲಿ ಕಳಶವೂ ಹೋಗಿದೆ. ಕಸದ ಸಿಬ್ಬಂದಿಗಳು ಬಂದಾಗ ತಮ್ಮ ಮನೆಯ ಕಸಗಳನ್ನು ನೀಡಿದ್ದಾರೆ. ಈ ಕಸದ ಬ್ಯಾಗ್‌ನಲ್ಲಿ 2 ಕೆಜಿ ತೂಕದ ಬೆಳ್ಳಿಯ ಕಳಶವೂ ಕಸದ ಲಾರಿ ಸೇರಿಕೊಂಡಿದೆ.

ಸಿಬ್ಬಂದಿಗಳ ಸಂಪರ್ಕಿಸಿದ ಕುಟುಂಬ

ಕಳಶ ನಾಪತ್ತೆಯಾಗಿದೆ ಅನ್ನೋದು ಸಂಜೆ ವೇಳೆ ಕುಟುಂಬಕ್ಕೆ ಗೊತ್ತಾಗಿದೆ. ಕಳಶ ಮಿಸ್ಸಿಂಗ್ ಎಂದಾಗ ಹುಡುಕಾಟ ನಡೆಸಿದ್ದಾರೆ. ಈ ವೇಳೆ ತಾನು ಇಟ್ಟ ಕಸದ ಬ್ಯಾಗ್‌ನಲ್ಲಿ ಕಳಶವೂ ಮಿಸ್ ಆಗಿದೆ ಎಂಬುದು ಗೊತ್ತಾಗಿತೆ. ಅಷ್ಟೊತ್ತಿಗೆ ಅಂದಿನ ಇಡೀ ದಿನದ ಕಸದ ಸಂಗ್ರಹವಾಗಿ ಡಂಪಿಂಗ್ ಯರ್ಡ್‌ಗೆ ಸ್ಥಳಾಂತರ ಮಾಡಲಾಗಿದೆ. ಇತ್ತ ಕುಟುಂಬಸ್ಥರು ಸಿಬ್ಬಂದಿಗಳ ಸಂಪರ್ಕಿಸಿದಾಗ ಎಲ್ಲಾ ಕಸಗಳು ಶಿಫ್ಟ್ ಆಗಿರುವುದು ಗೊತ್ತಾಗಿದೆ. ಹೀಗಾಗಿ ಮುನ್ಸಿಪಲ್ ಕಾರ್ಪೋರೇಶನ್ ಅಧಿಕಾರಿಗಳನ್ನು ಸಂಪರ್ಕಿಸಲಾಗಿದೆ. ಇಷ್ಟೊತ್ತಿಗೆ ಮರುದಿನವಾಗಿದೆ.

ಪ್ರಾರ್ಥನೆಯಲ್ಲಿ ತೊಡಗಿದ ಅಜ್ಜಿ

ಅಧಿಕಾರಿಗಳಲ್ಲಿ ಕುಟುಂಬ ಮನವಿ ಮಾಡಿದೆ. ದಯವಿಟ್ಟು ಒಣಕಸಗಳನ್ನು ಕ್ರಶ್ ಮಾಡುವ ಮೊದಲು ಹುಡುಕಾಟ ನಡೆಸಲು ಮನವಿ ಮಾಡಿದ್ದಾರೆ. ಕಸದ ರಾಶಿ ತುಂಬಿದೆ ಇದರಲ್ಲಿ ನಿಮ್ಮ ಕಳಶ ಸಿಗುವುದು ಕಷ್ಟ ಎಂದಿದ್ದಾರೆ. ಇತ್ತ ಅಜ್ಜಿ ದೇವರ ಮೊರೆ ಹೋಗಿದ್ದಾರೆ. ಕೈಮುಗಿದು ಹೇಗಾದರು ಮಾಡಿ ಕಳಶ ಸಿಗುವಂತೆ ಮಾಡಲು ಕೈಮುಗಿದು ಬೇಡಿಕೊಂಡಿದ್ದಾರೆ.

ಹುಡುಕಾಟ ಆರಂಭಗೊಂಡಿದೆ. ಸತತ ಹುಡುಕಾಟದ ವೇಳೆ ಅಂದರೆ ಬರೋಬ್ಬರಿ 48 ಗಂಟೆಗಳ ಬಳಿಕ ಬೆಳ್ಳಿ ಕಳಶ ಪತ್ತೆಯಾಗಿದೆ. ಕುಟುಂಬಸ್ಥರು ಕಳಶದ ಫೋಟೋ, ಅದರಲ್ಲಿರುವ ಗುರುತು ಸೇರಿದಂತೆ ಹಲವು ದಾಖಲೆ ನೀಡಿದ್ದರು. ಸತತ ಹುಡುಕಾಟದ ಬಳಿಕ ಕಳಶ ಪತ್ತೆಯಾಗಿದೆ. ಈ ಕಳಶವನ್ನು ಮುನ್ಸಿಪಲ್ ಕಾರ್ಪೋರೇಶನ್ ಅಧಿಕಾರಿಗಳು ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ. ಇಂದೋರ್‌ನ ಭಾರತದ ಅತ್ಯಂತ ಕ್ಲೀನ್ ಸಿಟಿ ಎಂದೇ ಗುರುತಿಸಿಕೊಂಡಿದೆ. ಹೀಗಾಗಿ ಇಂದೋರ್‌ನಲ್ಲಿ ಪ್ರತಿ ದಿನ ಕಸ ಸಂಗ್ರಹ ಹಾಗೂ ವಿಲೇವಾರಿ ನಡೆಯುತ್ತದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Job: ಅಗ್ನಿವೀರ್‌ ಅಭ್ಯರ್ಥಿಗಳಿಗೆ ಮತ್ತೊಂದು ಗುಡ್ ನ್ಯೂಸ್‌: ಶೇ.25 ಅಲ್ಲ, ಬರೋಬ್ಬರಿ ಶೇ. 75ರಷ್ಟು ಅಭ್ಯರ್ಥಿಗಳಿಗೆ ಖಾಯಂ ಸೇವಾ ಅವಕಾಶ?
ನಗರದೊಳಗೆ ಬಂದ ಚಿರತೆ ಸೀದಾ ಮದ್ಯದಂಗಡಿಗೆ ನುಗ್ಗಿತು; ಬಾರ್‌ನಲ್ಲಿದ್ದೋರ ಎಣ್ಣೆ ಕಿಕ್ ಸರ್‌... ಅಂತಾ ಇಳಿದೋಯ್ತು!