Parliament ಮೇಲೆ ಖಲಿಸ್ತಾನಿ ಧ್ವಜ ಹಾರಿಸಿದರೆ ₹93 ಲಕ್ಷ : ಪ್ರತ್ಯೇಕತಾವಾದಿ ಸಂಘಟನೆಯ ಆಫರ್‌!

By Kannadaprabha News  |  First Published Nov 23, 2021, 8:02 AM IST

*ರೈತರಿಗೆ ಪ್ರತ್ಯೇಕತಾವಾದಿ ಸಂಘಟನೆಯ ಆಫರ್‌
*ನ.29ರಂದು ಸಂಸತ್ತಿಗೆ ಮುತ್ತಿಗೆ ಹಾಕಲೂ ಕರೆ
*ಅಮೆರಿಕ ಮೂಲದ ‘ಸಿಖ್‌ ಫಾರ್‌ ಜಸ್ಟೀಸ್‌’ ಸಂಘಟನೆ
*ಸಿಖ್ಖರಿಗೆ ಪ್ರತ್ಯೇಕ ಖಲಿಸ್ತಾನ್‌ ರಾಜ್ಯ ಸ್ಥಾಪನೆ ಉದ್ದೇಶ 
*ಸಂಘಟನೆಯ ಹಲವರನ್ನು ಉಗ್ರರೆಂದು ಘೋಷಿಸಿರುವ ಸರ್ಕಾರ  


ಜಿನೆವಾ(ನ.23): ಕಳೆದ ಜ.26ರಂದು ಕೃಷಿ ಕಾಯ್ದೆ ವಿರೋಧಿ (Farm Bills Protest) ರೈತ ಹೋರಾಟದ ವೇಳೆ ಕೆಂಪುಕೋಟೆಯ (Red Fort) ಮೇಲಿನ ದಾಳಿಯಲ್ಲಿ ಪ್ರಮುಖ ಪಾತ್ರ ವಹಿಸಿತ್ತು ಎನ್ನಲಾದ ಪ್ರತ್ಯೇಕ ಖಲಿಸ್ತಾನ (Khalistan) ಪರ ಸಂಘಟನೆಯಾದ ಸಿಖ್‌ ಫಾರ್‌ ಜಸ್ಟೀಸ್‌(Sikhs for Justice) ಇದೀಗ ಸಂಸತ್‌ ಭವನಕ್ಕೆ (Parliamnet) ಮುತ್ತಿಗೆ ಹಾಕುವಂತೆ ರೈತರಿಗೆ ಕರೆಕೊಟ್ಟಿದೆ. ಅಲ್ಲದೆ ನ.29ರಿಂದ ಆರಂಭವಾಗುವ ಚಳಿಗಾಲದ ಅಧಿವೇಶನದ (Winter Session) ಅವಧಿಯಲ್ಲಿ ಸಂಸತ್‌ ಭವನದ ಮೇಲೆ ಖಲಿಸ್ತಾನ ಧ್ವಜವನ್ನು ಹಾರಿಸಿದವರಿಗೆ 93 ಲಕ್ಷ ರು.(1.25 ಲಕ್ಷ ಡಾಲರ್‌) ಬಹುಮಾನ ನೀಡುವುದಾಗಿ ಘೋಷಿಸಿದೆ.

ಜಿನೆವಾದಿಂದ ವಿಡಿಯೋ ಹೇಳಿಕೆ ಬಿಡುಗಡೆ!

Tap to resize

Latest Videos

ಈ ಕುರಿತು ಜಿನೆವಾದಿಂದ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಗುರ್‌ಪಾವಂತ್‌ ಸಿಂಗ್‌ ಪನ್ನೂನ್‌ (Gurpatwant Singh Pannun), ‘ಭಾರತದ ಸ್ವಾತಂತ್ರ್ಯಕ್ಕೆ ನಡೆದ ಹೋರಾಟದ ವೇಳೆ ಭಗತ್‌ಸಿಂಗ್‌ ಸಂಸತ್‌ ಮೇಲೆ ಬಾಂಬ್‌ ದಾಳಿ ನಡೆಸಿದ್ದರು. ಇದೀಗ ಪಂಜಾಬ್‌ನ ಸ್ವಾತಂತ್ರ್ಯಕ್ಕಾಗಿ ರೈತರು ಸಂಸತ್‌ ಭವನದ ಮೇಲೆ ಖಲಿಸ್ತಾನಿ ಧ್ವಜ ಹಾರಿಸುವಂತೆ ಕರೆ ಕೊಡುತ್ತಿದ್ದೇವೆ’ ಎಂದು ಹೇಳಿದ್ದಾನೆ. ಜೊತೆಗೆ ಸಂಸತ್‌ ಅಧಿವೇಶನದ ಮೊದಲ ದಿನ ಸಂಸತ್ತಿಗೆ ಮುತ್ತಿಗೆ ಹಾಕಲು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗುವಂತೆ ರೈತ ಸಮುದಾಯಕ್ಕೆ ಕರೆ ಕೊಟ್ಟಿದ್ದಾನೆ.

Assembly Elections| 'ಮೂರೂ ಕೃಷಿ ಕಾನೂನು ಹಿಂಪಡೆದರೂ ಯುಪಿ, ಪಂಜಾಬ್‌ನಲ್ಲಿ ಬಿಜೆಪಿಗೆ ಸೋಲು'

ಜ.26ರಂದು ರೈತರ ಪ್ರತಿಭಟನೆ ವೇಳೆ, ಗುಂಪೊಂದು ಕೆಂಪುಕೋಟೆಯ ಮೇಲೆ ದಾಳಿ ನಡೆಸಿತ್ತು. ಜೊತೆಗೆ ಅಲ್ಲಿ ರಾಷ್ಟ್ರಧ್ವಜ ಹಾರಿಸುವ ಕಂಬದ ಮೇಲೆ ಸಿಖ್‌ ನಿಶಾನ್‌ ಸಾಹೀಬ್‌ನ ಧ್ವಜ ಹಾರಿಸಿದ್ದರು. ಈ ಬಗ್ಗೆ ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.

ಯಾವುದಿದು ಸಂಘಟನೆ?

*ಅಮೆರಿಕ ಮೂಲದ ‘ಸಿಖ್‌ ಫಾರ್‌ ಜಸ್ಟೀಸ್‌’ ಸಂಘಟನೆ ಇದು

*ಸಿಖ್ಖರಿಗೆ ಪ್ರತ್ಯೇಕ ಖಲಿಸ್ತಾನ್‌ ರಾಜ್ಯ ಸ್ಥಾಪನೆ ಉದ್ದೇಶ ಹೊಂದಿದೆ

*ಈ ಸಂಘಟನೆಯ ಹಲವರನ್ನು ಸರ್ಕಾರ ಉಗ್ರರೆಂದು ಘೋಷಿಸಿದೆ

'ಹಾಗೇ ಸುಮ್ಮನೆ ರೈತರು ಮನೆಗೆ ಹೋಗಲ್ಲ, ಇನ್ನೂ ಅನೇಕ ಸಮಸ್ಯೆಗಳು ಬಗೆಹರಿಯಬೇಕಿದೆ'

ಕೇಂದ್ರದ ಮೂರು ಕೃಷಿ ಮಸೂದೆಗಳ (Farm Laws) ವಿರುದ್ಧ ನಡೆಯುತ್ತಿರುವ ಆಂದೋಲನದಲ್ಲಿ ರೈತರನ್ನು ಮುನ್ನಡೆಸಿದ ನಾಯಕರಲ್ಲಿ ಭಾರತೀಯ ಕಿಸಾನ್ ಯೂನಿಯನ್ ನಾಯಕ ರಾಕೇಶ್ ಟಿಕಾಯತ್ (Bharatiya Kisan Union leader Rakesh Tikait) ಕೂಡ ಸೇರಿದ್ದಾರೆ. 51ರ ವರ್ಷದ ರೈತ ನಾಯಕ, ಪ್ರಧಾನಿ ಮೋದಿಯವರು ಕೃಷಿ ಕಾನೂನನ್ನು ವಾಪಸು ಮಾಡುವುದಾಗಿ ಘೋಷಿಸಿದ ನಂತರವೂ ರೈತರು ಮನೆಗೆ ಹಿಂದಿರುಗಲ್ಲ ಎಂದು ಹೇಳುವ ಮೂಲಕ ಸರ್ಕಾರವನ್ನು ಅಚ್ಚರಿಗೊಳಿಸಿದ್ದರು. 

Farm Laws Repeal: ಕೃಷಿ ಕಾಯ್ದೆ ರದ್ದು ನಿರ್ಧಾರ ಸರಿ, ಮೋದಿ ಸರ್ಕಾರ ರೈತಪರ : ಸಮಿಕ್ಷೇ!

ಸಂಸತ್ತಿನಲ್ಲಿ ಕನಿಷ್ಠ ಬೆಂಬಲ ಬೆಲೆ (MSP) ಕಾನೂನನ್ನು ತರುವಂತೆ ಸರ್ಕಾರವನ್ನು ಒತ್ತಾಯಿಸಲು ಟಿಕಾಯತ್ ಧೃಡವಾಗಿ ನಿರ್ಧರಿಸಿದ್ದಾರೆ . ಇಷ್ಟೇ ಅಲ್ಲದೇ, ಇನ್ನೂ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ರೈತರ ಗಮನ ನೆಟ್ಟಿದೆ. ಹೀಗಿರುವಾಗ ಲಕ್ನೋದಲ್ಲಿ ಕಿಸಾನ್ ಮಹಾಪಂಚಾಯತ್ (Kisan Mahapanchayat) ನಡುವೆ ಏಷ್ಯಾನೆಟ್ ನ್ಯೂಸ್‌ (Asianet News) ಜೊತೆ ಮಾತನಾಡಿದ ರೈತ ನಾಯಕ ರಾಕೇಶ್ ಟಿಕಾಯತ್ ತಮ್ಮ ಮುಂದಿನ ಯೋಜನೆಗಳ ಬಗ್ಗೆ ತಿಳಿಸಿದ್ದಾರೆ.

ಪ್ರಧಾನಿ ಮನವಿಯ ನಂತರ 32 ರೈತ ಸಂಘಟನೆಗಳು ಮುಷ್ಕರ ಅಂತ್ಯಗೊಳಿಸುತ್ತವೆಯೇ?

ನಾವು ಈ ರೀತಿ ಹಿಂತಿರುಗುವುದಿಲ್ಲ. ರೈತರ ಮೇಲಿನ ಪ್ರಕರಣಗಳನ್ನು ಅಂತ್ಯಗೊಳಿಸುವಂತಹ ಇತರ ಸಮಸ್ಯೆಗಳು ನಮ್ಮ ಮುಂದಿವೆ. ಆಂದೋಲನದ ಸಮಯದಲ್ಲಿ ಸಂಭವಿಸಿದ ರೈತರ ಸಾವಿನ ಬಗ್ಗೆ ನಮಗೆ ಉತ್ತರ ಬೇಕು. ಎಂಎಸ್‌ಪಿ ಪ್ರಶ್ನೆ ಇನ್ನೂ ಬಾಕಿ ಇದೆ. ಗಮನಹರಿಸಬೇಕಾದ ಇನ್ನೂ ಅನೇಕ ಸಮಸ್ಯೆಗಳಿವೆ. ಇದೆಲ್ಲವನ್ನೂ ಸರ್ಕಾರ ಚರ್ಚಿಸಲಿ. ಇವುಗಳ ಬಗ್ಗೆ ಕಾಳಜಿ ವಹಿಸದವರೆಗೆ ನಾವು ಪ್ರತಿಭಟನಾ ಸ್ಥಳದಲ್ಲಿ ನಿಲ್ಲುತ್ತೇವೆ ಎಂದು ಟಿಕಾಯತ್ ಹೇಳಿದ್ದಾರೆ

click me!