ಪಂಜಾಬ್ ಸರ್ಕಾರ ವ್ಯರ್ಥ, ಮಾಫಿಯಾ ವಿರುದ್ಧ ಯೋಗಿ ನಡೆ ಮೆಚ್ಚಿದ ಮೂಸೆವಾಲ ತಂದೆ!

By Suvarna NewsFirst Published Mar 21, 2023, 4:19 PM IST
Highlights

ಮಾಫಿಯಾ ವಿರುದ್ಧ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಕಾರ್ಯಾಚರಣೆಯನ್ನು ಸಿಧು ಮೂಸೆವಾಲ ತಂದೆ ಮೆಚ್ಚಿಕೊಂಡಿದ್ದಾರೆ. ಪಂಜಾಬ್ ಸರ್ಕಾರ ಮಾಫಿಯಾ ವಿರುದ್ಧ ಏನೂ ಮಾಡಲಿಲ್ಲ. ಆದರೆ ಯುಪಿ ಸಿಎಂ ಧೈರ್ಯದಿಂದ ಮಾಫಿಯಾ ಮಟ್ಟ ಹಾಕುತ್ತಿದ್ದಾರೆ ಎಂದಿದ್ದಾರೆ. ಮೂಸೆವಾಲ ತಂದೆ ಯೋಗಿ ಆಡಳಿತ ಹಾಗೂ ಆಪ್ ಸರ್ಕಾರದ ಪಂಜಾಬ್ ಆಡಳಿತ ಕುರಿತು ಮಹತ್ವದ ಮಾಹಿತಿ ಬಿಚ್ಚಿಟ್ಟಿದ್ದಾರೆ.

ಲಖನೌ(ಮಾ.21):ಪಂಜಾಬ್ ಗಾಯಕ, ಕಾಂಗ್ರೆಸ್ ನಾಯಕ ಸಿಧು ಮೂಸೆವಾಲ ಹತ್ಯೆಯಾಗಿ ಒಂದು ವರ್ಷ ಕಳೆದಿದೆ. ಇದೀಗ ಪಂಜಾಬ್‌ನಲ್ಲಿ ಗ್ಯಾಂಗ್‌ಸ್ಟರ್, ಮಾಫಿಯಾಗಳ ಅಡ್ಡೆಯಾಗಿ ಹೋಗಿದೆ. ಈ ಕುರಿತು ಸಿಧು ಮೂಸವಾಲ ತಂದೆ ಬಲ್ಕೌರ್ ಸಿಂಗ್ ಅಸಧಾನ ವ್ಯಕ್ತಪಡಿಸಿದ್ದಾರೆ. ಮಾಫಿಯಾ ಡಾನ್, ಗೂಂಡಾಗಳು ನಮ್ಮ ಮನೆಗೆ ನುಗ್ಗಿದ್ದಾರೆ. ಆದರೆ ಪಂಜಾಬ್ ಆಪ್ ಸರ್ಕಾರ ಏನೂ ಮಾಡಲಿಲ್ಲ. ಆದರೆ ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಮಾಫಿಯಾ ವಿರುದ್ಧ ನಡೆಸುತ್ತಿರುವ ಕಾರ್ಯಾಚರಣೆಯನ್ನು ಮೆಚ್ಚಿಕೊಂಡಿದ್ದಾರೆ.  ಕ್ರಿಮಿನಲ್ಸ್, ಮಾಫಿಯಾ, ಗೂಂಡಾಗಳ ವಿರುದ್ದ ಯೋಗಿ ಆದಿತ್ಯನಾಥ್ ಕಠಿಣ ಕ್ರಮ ಕೈಗೊಳ್ಳುತ್ತಿದ್ದಾರೆ. ಈ ಮೂಲಕ ರಾಜ್ಯವನ್ನು ಮಾಫಿಯಾ ಕೈಯಿಂದ ರಕ್ಷಿಸುತ್ತಿದ್ದಾರೆ. ಆದರೆ ಪಂಜಾಬ್ ಸರ್ಕಾರ ಏನೂ ಮಾಡಿಲ್ಲ. ಮಾಫಿಯಾ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಉತ್ತರ ಪ್ರದೇಶದಲ್ಲಿ ಆಯೋಜಿಸಿದ ಕಾರ್ಯಕ್ರಮ ಒಂದರಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಲೋಕಸಭಾ ಚುನಾವಣೆ ವೇಳೆ ಸಿಎಂ ಯೋಗಿ ಆದಿತ್ಯನಾಥ್ ಮಾಫಿಯಾ ಮಟ್ಟಹಾಕುವುದಾಗಿ ಹೇಳಿದ್ದರು. ಯುಪಿ ಜನತೆ ಯೋಗಿಗೆ ಮತ ನೀಡಿದ್ದಾರೆ. ಇದರ ಪರಿಣಾಮ ಯೋಗಿ ಆದಿತ್ಯನಾಥ್ ಮಾಫಿಯಾ ವಿರುದ್ಧ ಯಾವ ರೀತಿ ಕ್ರಮ ಕೈಗೊಂಡಿದ್ದಾರೆ ಅನ್ನೋದು ದೇಶ ನೋಡಿದೆ. ಎನ್‌ಕೌಂಟರ್ ಸೇರಿದಂತೆ ಕಠಿಣ ಕ್ರಮಗಳ ಮೂಲಕ ಮಾಫಿಯಾ ಮಟ್ಟಹಾಕುತ್ತಿದ್ದಾರೆ. ಆದರೆ ಪಂಜಾಬ್‌ನಲ್ಲಿರುವ ಆಪ್ ಸರ್ಕಾರ ಏನು ಮಾಡುತ್ತಿದೆ. ಪಂಜಾಬ್‌ನಲ್ಲಿ ಸದ್ಯ ಮಾಫಿಯಾ, ಗೂಂಡಾಗಳ ಅಬ್ಬರ ಹೆಚ್ಚಾಗಿದೆ. ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಬಲ್ಕೌರ್ ಸಿಂಗ್ ಹೇಳಿದ್ದಾರೆ.

 

Operation Amritpal: '80 ಸಾವಿರ ಪೊಲೀಸರಿದ್ದೀರಿ ಒಬ್ಬನನ್ನು ಹಿಡಿಯೋಕೆ ಆಗಲ್ವಾ?' ಹೈಕೋರ್ಟ್‌ ಛೀಮಾರಿ!

ಸದ್ಯ ಪಂಜಾಬ್ ಪರಿಸ್ಥಿತಿ ಹೇಗಿದೆ? ಮಾಫಿಯಾ ,ಗ್ಯಾಂಗ್‌ಸ್ಟಾರ್ಸ್ ರಾಜಾರೋಷವಾಗಿ ತಿರುಗಾಡುತ್ತಿದ್ದಾರೆ. ಗುಂಡಿನ ಸದ್ದು ಕೇಳಿಸುತ್ತಿದೆ. ನಮ್ಮ ಮನೆಗೆ ಗೂಂಡಾಗಳು ನುಗ್ಗಿದ್ದರು. ಪುತ್ರನನ್ನು ಹಾಡಹಗಲೇ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಪಂಜಾಬ್ ಅಂತಾರಾಷ್ಟ್ರೀಯ ಗಡಿ ಹೊಂದಿರುವ ರಾಜ್ಯ. ಆದರೆ ಗೂಂಡಾಗಳು,ಮಾಫಿಯಾದವರು ಶಸ್ತ್ರಾಸ್ತ್ರ ಹಿಡಿದು ತಿರುಗಾಡುತ್ತಿದ್ದಾರೆ. ಯಾರೂ ತಡೆಯುತ್ತಿಲ್ಲ. ತಾವು ಟಾರ್ಗೆಟ್ ಮಾಡಿದವರನ್ನು ಹತ್ಯೆ ಮಾಡುತ್ತಿದ್ದಾರೆ ಎಂದು ಬಲ್ಕೌರ್ ಸಿಂಗ್ ಹೇಳಿದ್ದಾರೆ.

ಮೇ.29, 2022ರಲ್ಲಿ ಮಾನ್ಸ ಜಿಲ್ಲೆಯಲ್ಲಿ ಸಿಧೂ ಮೂಸೆವಾಲನನ್ನು ಹತ್ಯೆ ಮಾಡಲಾಗಿದೆ. ಲಾರೆನ್ಸ್ ಬಿಶ್ಣೋಯ್, ಗೋಲ್ಡ್ ಬ್ರಾರ್ ಹಾಗೂ ಜಗ್ಗು ಭಗವಾನ್‌ಪುರಿಯಾ ಈ ಹತ್ಯೆಯ ಹಿಂದಿನ ಆರೋಪಿಗಳು ಎಂದು ಪೊಲೀಸರು ಹೇಳಿದ್ದಾರೆ. ಲಾರೆನ್ಸ್ ಬಿಶ್ಣೋಯ್ ಗ್ಯಾಂಗ್ ಸದಸ್ಯರು ಪಂಜಾಬ್‌ನಲ್ಲಿ ಯಾವುದೇ ಆತಂಕವಿಲ್ಲದೆ ಶಸ್ತ್ರಾಸ್ತ್ರ ಹಿಡಿದು ತಿರುಗಾಡುತ್ತಿದ್ದಾರೆ. ಲಾರೆನ್ಸ್ ಮಾತಿನಂತೆ ಹತ್ಯೆ ಮಾಡುತ್ತಿದ್ದಾರೆ. ಪೊಲೀಸರು, ಪಂಜಾಬ ಸರ್ಕಾರ ಕೈಕಟ್ಟಿ ಕುಳಿತಿದೆ ಎಂದು ಬಲ್ಕೌರ್ ಸಿಂಗ್ ಆರೋಪಿಸಿದ್ದಾರೆ.

 

ಜೈಲಲ್ಲೇ ಗ್ಯಾಂಗ್‌ವಾರ್‌, ಗಾಯಕ ಸಿಧು ಮೂಸೆವಾಲಾ ಕೊಲೆ ಆರೋಪ ಹೊತ್ತಿದ್ದ ಇಬ್ಬರ ಕಥೆ ಫಿನಿಶ್‌!

ಇತ್ತೀಚೆಗೆ ಸಿಧು ಮೂಸೆವಾಲ ಹತ್ಯೆ ಆರೋಪಿಗಳು, ಡೇರಾ ಸಚ್ಚಾ ಸೌದಾದ ಅನುಯಾಯಿಯಾಗಿದ್ದ ಪ್ರದೀಪ್‌ ಸಿಂಗ್‌ ಎನ್ನುವ ವ್ಯಕ್ತಿಯನ್ನು ಹತ್ಯೆ ಮಾಡಿದ್ದರು. ಐವರು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಮೇ ತಿಂಗಳಲ್ಲಿ ಪಂಜಾಬಿ ಗಾಯಕ ಸಿಧು ಮೂಸೇವಾಲಾ ಹತ್ಯೆಗೈದ ಗ್ಯಾಂಗಸ್ಟರ್‌ ಗೋಲ್ಡಿ ಬ್ರಾರ್‌ ಸಾಮಾಜಿಕ ಜಾಲತಾಣದಲ್ಲಿ ಈ ಹತ್ಯೆ ಹಿಂದೆ ತನ್ನ ಕೈವಾಡವಿದೆ ಎಂದು ಘೋಷಿಸಿದ್ದ. ಬೈಕ್‌ ಮೇಲೆ ಬಂದಿದ್ದ ದುಷ್ಕರ್ಮಿಗಳು 2015ರಲ್ಲಿ ದೇವನಿಂದನೆ ಪ್ರಕರಣದ ಆರೋಪಿಯೂ ಆಗಿದ್ದ ಪ್ರದೀಪ್‌ ಸಿಂಗ್‌ನ ಅಂಗಡಿಯೊಳಗೆ ನುಗ್ಗಿ ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ಈ ದೃಶ್ಯಗಳು ಸಿಸಿಟೀವಿಯಲ್ಲಿ ಸೆರೆಯಾಗಿವೆ.

click me!