ಸರ್ಕಾರಿ ಆಸ್ತಿ ಕಬಳಿಸಿದೋರಿಗೆ ಬುಲ್ಜೋಜರ್ ಕ್ರಮದ ಬದ್ಲು ಆರತಿ ಎತ್ಬೇಕೇ: ಯೋಗಿ ಆದಿತ್ಯನಾಥ್‌ ಪ್ರಶ್ನೆ

By BK Ashwin  |  First Published Aug 1, 2023, 7:45 PM IST

ಸರ್ಕಾರಿ ಆಸ್ತಿಯನ್ನು ಅಕ್ರಮವಾಗಿ ಕಬಳಿಸಿದವರಿಗೆ ನಾನು ಆರತಿ ಎತ್ತಬೇಕೇ? ಉತ್ತರ ಪ್ರದೇಶದ ಜನರು ಅಪರಾಧಿಗಳು ಮತ್ತು ಮಾಫಿಯಾ ವಿರುದ್ಧ ಕ್ರಮ ಬಯಸುತ್ತಾರೆ ಎಂದು ಯೋಗಿ ಆದಿತ್ಯನಾಥ್‌ ಹೇಳಿದ್ದಾರೆ. 


ಲಖನೌ (ಆಗಸ್ಟ್‌ 1, 2023): ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಬುಲ್ಡೋಜರ್‌ ಬಾಬಾ ಎಂದೇ ಕರೆಯಲಾಗುತ್ತದೆ. ಇನ್ನು, ಬಿಜೆಪಿ ಸರ್ಕಾರದ ಈ ಕ್ರಮವನ್ನು ಅನೇಕರು ಪ್ರಶ್ನೆ ಮಾಡಿದ್ದು, ಟೀಕಿಸುತ್ತಿರುತ್ತಾರೆ. ಆದರೆ,  ರಾಜ್ಯದಲ್ಲಿ ಅಪರಾಧಿಗಳು ಮತ್ತು ಮಾಫಿಯಾ ವಿರುದ್ಧ ತಮ್ಮ ಸರ್ಕಾರದ ಬುಲ್ಡೋಜರ್ ಕ್ರಮವನ್ನು ಯೋಗಿ ಆದಿತ್ಯನಾಥ್‌ ಸೋಮವಾರ ಸಮರ್ಥಿಸಿಕೊಂಡಿದ್ದಾರೆ. ಅಭಿವೃದ್ಧಿಯ ಪಥದಲ್ಲಿ ಯಾರಾದರೂ ಯಾವುದೇ ಅಡೆತಡೆಗಳನ್ನು ಸೃಷ್ಟಿಸಿದರೆ, ಶೀಘ್ರದಲ್ಲೇ ಕ್ರಮ ತಗೋಬೇಕು ಎಂದೂ ಫೈರ್‌ಬ್ರ್ಯಾಂಡ್‌ ಯೋಗಿ ಆದಿತ್ಯನಾಥ್‌ ಪ್ರತಿಪಾದಿಸಿದ್ದಾರೆ.

ಖಾಸಗಿ ಮಾಧ್ಯಮವೊಂದಕ್ಕೆ ಸಂದರ್ಶನದಲ್ಲಿ ಮಾತನಾಡಿದ ಯೋಗಿ ಆದಿತ್ಯನಾಥ್‌, ರಾಜ್ಯದ ಅಭಿವೃದ್ಧಿಗೆ ಬುಲ್ಡೋಜರ್‌ಗಳು ಮತ್ತು ಆಧುನಿಕ ಯಂತ್ರಗಳ ಅಗತ್ಯವಿದೆ ಎಂದೂ ಹೇಳಿದ್ದಾರೆ. ''ಉತ್ತರ ಪ್ರದೇಶದಂತಹ ಬೃಹತ್ ರಾಜ್ಯ ಶೀಘ್ರ ಅಭಿವೃದ್ಧಿಯಾಗಬೇಕಾದರೆ ಇಂದಿನ ಕಾಲಘಟ್ಟದಲ್ಲಿ ಸಲಿಕೆ, ಗುದ್ದಲಿ ಬೇಕೇ? ಈ ಹಿಂದೆ ಯಾವುದಾದರೂ ಕಾಮಗಾರಿಗೆ ಅನುಮೋದನೆ ನೀಡಿದರೆ ಮಾಫಿಯಾಗಳು ಬಂದು ಅಕ್ರಮ ಆಸ್ತಿ ದೋಚುತ್ತಿದ್ದರು. ಹಿಂದಿನ ಸರಕಾರಗಳು ಮಾಫಿಯಾ ವಿರುದ್ಧ ಕ್ರಮ ಕೈಗೊಳ್ಳಲು ಧೈರ್ಯ ಮಾಡಲಿಲ್ಲ’’ ಎಂದೂ ಅವರು ಹೇಳಿದ್ದಾರೆ.

Tap to resize

Latest Videos

ಇದನ್ನು ಓದಿ: ಪ್ರಧಾನಿ ಮೋದಿ, ಯೋಗಿ ಆದಿತ್ಯನಾಥ್‌ ಅವರ ಆಧಾರ್‌ ಕಾರ್ಡ್‌ಗಳನ್ನೇ ತಿರುಚಿ ದುರುಪಯೋಗ ಮಾಡ್ಕೊಂಡ ಭೂಪ!

ನಿಮ್ಮ ಸರ್ಕಾರವು ಬುಲ್ಡೋಜರ್‌ಗಳಿಂದ ಅಪರಾಧಿಗಳ ಮನೆಗಳನ್ನು ಏಕೆ ಕೆಡವುತ್ತಿದೆ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಉತ್ತರ ಪ್ರದೇಶ ಸಿಎಂ, "ಸರ್ಕಾರಿ ಆಸ್ತಿಯನ್ನು ಅಕ್ರಮವಾಗಿ ಕಬಳಿಸಿದವರಿಗೆ ನಾನು ಆರತಿ ಎತ್ತಬೇಕೇ? ಉತ್ತರ ಪ್ರದೇಶದ ಜನರು ಅಪರಾಧಿಗಳು ಮತ್ತು ಮಾಫಿಯಾ ವಿರುದ್ಧ ಕ್ರಮ ಬಯಸುತ್ತಾರೆ" ಎಂದೂ ಉತ್ತರಿಸಿದರು. ಅಲ್ಲದೆ, ತಮ್ಮ ಸರ್ಕಾರವು ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದ ಅಪರಾಧಿಗಳನ್ನು ಮಾತ್ರ ಗುರಿಯಾಗಿಸಿಕೊಂಡಿದೆ ಎಂಬ ಆರೋಪವನ್ನೂ ಅವರು ತಳ್ಳಿಹಾಕಿದರು. "ಒಬ್ಬ ಒಬ್ಬ ಅಮಾಯಕ ಮುಸ್ಲಿಮನು ಬಂದು ನನಗೆ ಅನ್ಯಾಯವನ್ನು ಎದುರಿಸುತ್ತಿದ್ದೇನೆ ಎಂದು ಹೇಳಲಿ. ಹಾಗೂ, ಅವರೆಲ್ಲರಿಗೂ ನ್ಯಾಯ ಪಡೆಯಲು ನ್ಯಾಯಾಲಯವಿದೆ" ಎಂದೂ ಹೇಳಿಕೊಂಡಿದ್ದಾರೆ.

ಧರ್ಮದ ಹೊರತಾಗಿ ಕಾನೂನಿನ ಆಳ್ವಿಕೆ ಎಲ್ಲರಿಗೂ ಸಮಾನವಾಗಿದೆ ಮತ್ತು ರಾಜ್ಯದ ಜನರಿಗೆ ಭದ್ರತೆಯನ್ನು ಖಾತರಿಪಡಿಸಬೇಕು ಎಂದೂ ಯೋಗಿ ಆದಿತ್ಯನಾಥ್ ಹೇಳಿದರು.

ಇದನ್ನೂ ಓದಿ: ಬುಲ್ಡೋಜರ್‌ ಬಾಬಾ ಯೋಗಿಗೆ ಟ್ವಿಟ್ಟರ್‌ನಲ್ಲಿ 2.5 ಕೋಟಿ ಹಿಂಬಾಲಕರು: ಈ ದಾಖಲೆ ಬರೆದ ದೇಶದ ಮೊದಲ ಸಿಎಂ

'ಜನರು ದೇಶವನ್ನು ಮೊದಲು ಎತ್ತಿ ಹಿಡಿಯಬೇಕು, ಧರ್ಮವನ್ನಲ್ಲ'

ಈ ಮಧ್ಯೆ, ವಂದೇ ಮಾತರಂ ಜೊತೆಗೆ ಧರ್ಮವನ್ನು ಜೋಡಿಸುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಯೋಗಿ ಆದಿತ್ಯನಾಥ್ ಅವರು ದೇಶವನ್ನು ಸಂವಿಧಾನದ ಪ್ರಕಾರ ನಡೆಸಲಾಗುವುದು ಮತ್ತು ಯಾವುದೇ ಧರ್ಮ ಅಥವಾ ಅಭಿಪ್ರಾಯದಿಂದ ನಿರ್ದೇಶಿಸಲಾಗುವುದಿಲ್ಲ ಎಂದು ಹೇಳಿದರು. "ನಿಮ್ಮ ಧರ್ಮ ಮತ್ತು ನಿಮ್ಮ ಅಭಿಪ್ರಾಯಗಳು ನಿಮ್ಮದೇ ಆದ ರೀತಿಯಲ್ಲಿ, ನಿಮ್ಮ ಸ್ವಂತ ಮನೆಗಳಲ್ಲಿ, ನಿಮ್ಮ ಪೂಜಾ ಸ್ಥಳಗಳಲ್ಲಿ ಮತ್ತು ರಸ್ತೆಗಳಲ್ಲಿ ಸಾರ್ವಜನಿಕವಾಗಿ ಗಲಾಟೆಗಳನ್ನು ಮಾಡಬಾರದು. ಯಾರಾದರೂ ಈ ದೇಶದಲ್ಲಿ ವಾಸಿಸಬೇಕಾದರೆ, ಅವರು ಎಲ್ಲಕ್ಕಿಂತ ಹೆಚ್ಚಾಗಿ ರಾಷ್ಟ್ರವನ್ನು ಮೊದಲು ಎತ್ತಿ ಹಿಡಿಯಬೇಕು. ಅವರ ಧರ್ಮ ಅಥವಾ ಅಭಿಪ್ರಾಯವಲ್ಲ. ರಾಷ್ಟ್ರ ಮೊದಲು’’ ಎಂದೂ ಅವರು ಹೇಳಿದರು.

'ಕಳೆದ ಆರು ವರ್ಷಗಳಲ್ಲಿ ಯಾವುದೇ ಗಲಭೆ, ಕರ್ಫ್ಯೂಗಳಿಲ್ಲ'
ಇನ್ನು, ತಮ್ಮ ಹಿಂದುತ್ವದ ಚಿತ್ರಣದ ಟೀಕೆಗಳ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಯೋಗಿ ಆದಿತ್ಯನಾಥ್, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕಳೆದ ಆರು ವರ್ಷಗಳಲ್ಲಿ ಯಾವುದೇ ಗಲಭೆಗಳು ಮತ್ತು ಕರ್ಫ್ಯೂಗಳನ್ನು ವಿಧಿಸಲಾಗಿಲ್ಲ ಎಂದು ಪ್ರತಿಪಾದಿಸಿದರು. ಎಲ್ಲ ಹಬ್ಬಗಳನ್ನು ಶಾಂತಿಯುತವಾಗಿ ಆಚರಿಸಲಾಗಿದೆ ಎಂದೂ ಹೇಳಿದರು.

ಇದನ್ನೂ ಓದಿ: ‘ಶೀಘ್ರದಲ್ಲೇ ಯೋಗಿಯನ್ನು ಕೊಲ್ಲುತ್ತೇನೆ’: ಮಾಫಿಯಾಗೆ ಕೊನೆಮೊಳೆ ಹೊಡೀತಿರೋ ಯುಪಿ ಸಿಎಂಗೆ ಹತ್ಯೆ ಬೆದರಿಕೆ

ಯುಪಿಯನ್ನು ಪಶ್ಚಿಮ ಬಂಗಾಳದೊಂದಿಗೆ ಹೋಲಿಸಿದ ಯೋಗಿ, ಅಲ್ಲಿ "ತೃಣಮೂಲ ಕಾಂಗ್ರೆಸ್ (ಟಿಎಂಸಿ) ದೇಶವನ್ನು ಪಶ್ಚಿಮ ಬಂಗಾಳ ಮಾಡಲು ಬಯಸಿದೆ. ಅಲ್ಲಿ ಪರಿಸ್ಥಿತಿ ಏನೆಂದು ನಾವೆಲ್ಲರೂ ನೋಡಿದ್ದೇವೆ. ವಿರೋಧ ಪಕ್ಷದ ಕಾರ್ಯಕರ್ತರನ್ನು ಅಲ್ಲಿ ಕೊಲ್ಲಲಾಯಿತು. ಹಿಂಸಾಚಾರದಿಂದಾಗಿ ಅವರು ಅಲ್ಲಿ ಹೇಗೆ ಕಾರ್ಯನಿರ್ವಹಿಸುತ್ತಿದ್ದರು’’ ಎಂದೂ ಅವರು ಹೇಳಿದರು.

ಪ್ರತಿಯೊಬ್ಬ ವ್ಯಕ್ತಿಗೂ ಚುನಾವಣೆಯಲ್ಲಿ ಸ್ಪರ್ಧಿಸುವ ಪ್ರಜಾಸತ್ತಾತ್ಮಕ ಹಕ್ಕಿದೆ ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಎದುರಾಳಿ ಅಭ್ಯರ್ಥಿಗೆ ಚುನಾವಣೆಯಲ್ಲಿ ಗೆಲ್ಲುವ ಸಾಮರ್ಥ್ಯವಿದ್ದರೆ, ಅವನು ಅಥವಾ ಅವಳು ಗೆಲ್ಲಲು ಅರ್ಹರಾಗಿರಬೇಕು ಎಂದೂ ಅವರು ಹೇಳಿದರು.

ಇದನ್ನೂ ಓದಿ: ಪ್ರಧಾನಿ ಮೋದಿ ಮೇಲೆ ಆತ್ಮಾಹುತಿ ದಾಳಿಗೆ ಸಂಚು: ಬೆದರಿಕೆ ಪತ್ರ ಬರೆದಿದ್ದ ಆರೋಪಿ ಅರೆಸ್ಟ್‌

click me!