
ಲಖನೌ (ಮಾ.01) ರುಚಿ ರುಚಿಯಾದ ಆಹಾರ ಎಷ್ಟೇ ದೂರದಲ್ಲಿದ್ದರೂ ಪ್ರಯಾಣ ಮಾಡಿ ಸವಿಯುವರ ಸಂಖ್ಯೆ ಹೆಚ್ಚು. ಸ್ವಾದ ಇಷ್ಟವಾದರೆ ಖಾಯಂ ಆಗುತ್ತಾರೆ. ಬಿರಿಯಾನಿ ಇಷ್ಟಪಡದ ಜನರಿಲ್ಲ. ಸಸ್ಯಾಹಾರ ಪ್ರಿಯರಿಗೆ ವೆಜ್ ಬಿರಿಯಾನಿಗೂ ಅದೇ ರೀತಿಯ ಬೇಡಿಕೆ ಇದೆ. ಇಲ್ಲೊಂದು ವೆಜ್ ಬಿರಿಯಾನಿ ಶಾಪ್ ಅತ್ಯಂತ ಜನಪ್ರಿಯವಾಗಿತ್ತು. ಜನರು ಕ್ಯೂ ನಿಂತು ವೆಜ್ ಬಿರಿಯಾನಿ ಸವಿದು ತೆರಳುತ್ತಿದ್ದರು. ಆದರೆ ಇದೇ ಬಿರಿಯಾನಿ ಶಾಪ್‌ನ ಫ್ರೀಜರ್ ಒಳಗೆ ಯುವಕನ ಶವವೊಂದು ಪತ್ತೆಯಾದ ಘಟನೆ ಉತ್ತರ ಪ್ರದೇಶದ ಬಕ್ಷಿ ಕಾ ತಲಾಬ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಜಿಸಿಆರ್‌ಜಿ ಕಾಲೇಜು ಗೇಟು ಬಳಿ ಇರುವ ವೆಜ್ ಬಿರಿಯಾನಿ ಶಾಪ್‌ನಲ್ಲಿ ಈ ಘಟನೆ ನಡೆದಿದೆ. ಕಳೆದ ನಾಲ್ಕು ದಿನಗಳಿಂದ ಈ ವೆಬ್ ಬಿರಿಯಾನಿ ಶಾಪ್ ಮುಚ್ಚಲಾಗಿತ್ತು. ಹೊಟೆಲ್ ಮಾಲೀಕನ ತಂದೆ ನಿಧನರಾಗಿದ್ದರು. ಹೀಗಾಗಿ ಈತ ಊರಿಗೆ ತೆರಳಿದ್ದ.ತುರ್ತು ಕಾರಣದಿಂದ ಬಿರಿಯಾನಿ ಶಾಪ್ ಮುಚ್ಚಿ ಊರಿಗೆ ತೆರಳಿದ್ದ. ವಿಧಿವಿಧಾನಗಳನ್ನು ಪೂರೈಸಿ ನಾಲ್ಕು ದಿನಗಳ ಬಳಿಕ ಬಿರಿಯಾನಿ ಹೊಟೆಲ್ ತೆರೆಯಲು ಮರಳಿದ್ದ. ಮರಳಿದ ಹೊಟೆಲ್ ಮಾಲೀಕ ಮೊದಲು ಶುಚಿಗೊಳಿಸುವ ಕಾರ್ಯ ಮಾಡಿದ್ದಾನೆ. ಬಳಿಕ ತರಕಾರಿ ಸೇರಿದಂತೆ ಇತರ ಸಾಮಾಗ್ರಿಗಳನ್ನು ತಂದಿದ್ದಾನೆ. ತರಕಾರಿಗಳನ್ನು ಕಟ್ ಮಾಡಿ ಫ್ರೀಜರ್‌ನಲ್ಲಿ ಇಡಲು ಫ್ರೀಜರ್ ಡೂರ್ ಓಪನ್ ಮಾಡುತ್ತಿದ್ದಂತೆ ಮಾಲೀಕ ಬೆಚ್ಚಿ ಬಿದ್ದಿದ್ದಾನೆ.
ಫ್ರೀಚರ್ ತೆರೆದಾಗ ಅದರೊಳಗೆ ಯುುವಕನೊಬ್ಬ ಮೃತದೇಹ ಪತ್ತೆಯಾಗಿದೆ. ಮಾಲೀಕ ಒಂದು ಕ್ಷಣ ಬೆಚ್ಚಿ ಬಿದ್ದಿದ್ದಾನೆ. ಆತಂಕದಲ್ಲೇ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಇತ್ತ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಪರಿಶೀಲನೆ ನಡೆಸಿದ್ದಾರೆ. ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ವೆಜ್ ಬಿರಿಯಾನಿ ಹೊಟೆಲ್ ಪಕ್ಕದಲ್ಲಿರುವ ಎಲ್ಲಾ ಸಿಸಿಟಿವಿ ಪರಿಶೀಲನೆ ನಡೆಸಿದ್ದಾರೆ. ಇದೇ ವೇಳೆ ಸ್ಥಳೀಯರನ್ನು ವಿಚಾರಣೆ ನಡೆಸಿದ್ದಾರೆ.
ಯುವಕನ ಹತ್ಯೆ ಮಾಡಿ ಫ್ರೀಜರ್‌ನಲ್ಲಿ ಇಡಲಾಗಿದೆಯಾ? ಈ ಘಟನೆ ನಡೆದಿದ್ದು ಹೇಗೆ, ಹೊಟೆಲ್ ಒಳಗೆ ಹತ್ಯೆಯಾಗಿದೆಯಾ ಅಥವಾ ಹೊರಗಡೆ ಹತ್ಯೆ ಮಾಡಿ ಫ್ರೀಜರ್‌ನಲ್ಲಿ ತುರುಕಲಾಗಿದೆಯಾ ಅನ್ನೋ ಹಲವು ಪ್ರಶ್ನೆಗಳು ಮೂಡಿದೆ. ಲಖನೌ ಪೊಲೀಸರು ಎಲ್ಲಾ ಆಯಾಮಗಳಿಂದ ತನಿಖೆ ನಡೆಸುತ್ತಿದ್ದಾರೆ. ಇತ್ತ ಹೊಟೆಲ್ ಮಾಲೀಕನ ಮೊಬೈಲ್ ಫೋನ್ ದಾಖಲೆಯನ್ನು ಪಡೆದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ