ಬದಲಾಗಿದೆ ಜಮ್ಮು ಮತ್ತು ಕಾಶ್ಮೀರ, 34 ವರ್ಷದ ಬಳಿಕ ಶಿಯಾ ಮುಸ್ಲಿಮರ ಮೊಹರಂ ಮೆರವಣಿಗೆ!

By Suvarna News  |  First Published Jul 27, 2023, 8:10 PM IST

34 ವರ್ಷಗಳ ಬಳಿಕ ಕಾಶ್ಮೀರದಲ್ಲಿ ಶಿಯಾ ಮುಸ್ಲಿಮರ ಮೊಹರಂ ಮೆರವಣಿಗೆ ನಡೆದಿದೆ. ಇದೀಗ ಕಾಶ್ಮೀರ ಸಂಪೂರ್ಣ ಬದಲಾಗಿದ್ದು, ಎಲ್ಲಾ ಸಾಂಸ್ಕೃತಿ ಕಾರ್ಯಕ್ರಮ, ಹಬ್ಬಗಳ ಆಚರಣೆ ಮರುಕಳಿಸಿದೆ. 
 


ಶ್ರೀನಗರ(ಜು.27) ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ಸ್ಥಾಪನೆಗೆ ಕೇಂದ್ರ ಸರ್ಕಾರ ನಡೆಸಿದ ಪ್ರಯತ್ನಗಳು ಅಭೂತಪೂರ್ವ ಯಶಸ್ಸು ಕಂಡಿದೆ. ಆರ್ಟಿಕಲ್ 370 ರದ್ದು ಮಾಡಿದ ಬಳಿಕ ಹಂತ ಹಂತವಾಗಿ ಕಾಶ್ಮೀರದಲ್ಲಿ ಅಭಿವೃದ್ಧಿ ಯೋಜನೆಗಳು ಜಾರಿಯಾಗಿದೆ. ಪ್ರವಾಸೋದ್ಯಮ ಅಭಿವೃದ್ಧಿಯಾಗಿದೆ. ಎಲ್ಲಕ್ಕಿಂತ ಪ್ರಮುಖವಾಗಿ ಸದಾ ಗುಂಡಿನ ಮೊರೆತ, ಕಲ್ಲು ತೂರಾಟಗಳಿಂದ ಸುದ್ದಿಯಾಗುತ್ತಿದ್ದ ಕಾಶ್ಮೀರದಲ್ಲಿ ಶಾಂತಿ ನೆಲೆಸಿದೆ. ಇದೀಗ ಬರೋಬ್ಬರಿ 3 ದಶಕಗಳ ಬಳಿಕ ಕಾಶ್ಮೀರದಲ್ಲಿ ಶಿಯಾ ಮುಸ್ಲಿಮರ ಮೊಹರಂ ಮೆರವಣಿಗೆ ನಡೆದಿದೆ. 

ಜಿ20 ಸಭೆಯನ್ನೇ ಕಾಶ್ಮೀರದಲ್ಲಿ ನಡೆಸಿದ ಕೇಂದ್ರ ಸರ್ಕಾರ ಜಗತ್ತಿಗೆ ಕಾಶ್ಮೀರದಲ್ಲಿನ ಬದಲಾವಣೆಯನ್ನು ಸಾರಿ ಹೇಳಿತ್ತು. ಇದೀಗ ಕಾಶ್ಮೀರದಲ್ಲಿ ಗುರ್ಬಜಾರ್‌ನಿಂದ ದಾಲ್‌ಗೇಟ್‌ವರೆಗೆ ಶಿಯಾ ಮುಸ್ಲಿಮರು ಮೊಹರಂ ಮೆರವಣಿಗೆ ಮಾಡಿದ್ದಾರೆ. ಶ್ರೀನಗರ ಡೆಪ್ಯೂಟಿ ಕಮಿಷನರ್ ಅಜಾಜ್ ಅಸಾದ್ ಭಾರಿ ಭಿಗಿ ಭದ್ರತೆ ಒದಗಿಸಿದ್ದರು. ಸಂಜೆ 6 ಗಂಟೆಯಿಂದ 8 ಗಂಟೆವರೆಗೆ ಮೊಹರಂ ಮೆರವಣಿಗೆಗೆ ಅವಕಾಶ ನೀಡಲಾಗಿತ್ತು. ಸಂಪೂರ್ಣ ಮೆರವಣಿಗೆ ಶಾಂತಿಯುತವಾಗಿ ಸಾಗಿದೆ ಎಂದು ಅಜಾಜ್ ಅಸಾದ್ ಹೇಳಿದ್ದಾರೆ.

Tap to resize

Latest Videos

ನೆಹರೂ ಕಾಶ್ಮೀರ ನೀತಿಯಿಂದ ಸಮಸ್ಯೆ ಡಬಲ್, ಕಾಂಗ್ರೆಸ್ ದುರಾಡಳಿತ ಬಿಚ್ಚಿಟ್ಟ ಜೈಶಂಕರ್

ಶಿಯಾ ಮುಸ್ಲಿಮ್ ಸಮುದಾಯದ 100ಕ್ಕೂ ಹೆಚ್ಚು ಮಂದಿ ಸಂಜೆ 5.30ರ ವೇಳೆಗೆ ಗುರ್ಬಜಾರ್‌ನಲ್ಲಿ ಜಮಾಯಿಸಿದ್ದರು. ಇದು 8ನೇ ದಿನದ ಮೊಹರಂ ಆಚರಣೆಯಾಗಿತ್ತು. ಇನ್ನು 10ನೇ ದಿನವೂ ಮೊಹರಂ ಮೆರವಣಿಗೆ ನಡೆಯಲಿದೆ. ಈ ಮೆರವಣಿಗೆಗೂ ಶಿಯಾ ಸಮುದಾಯದ ಅನುಮತಿಗಾಗಿ ಶ್ರೀನಗರ ಆಡಳಿತ ವಿಭಾಗಕ್ಕೆ ಅರ್ಜಿ ಹಾಕಿದೆ. 

1990ರ ದಶಕದಲ್ಲಿ ಮೊಹರಂ ಸೇರಿದಂತೆ ಹಲವು ಮೆರವಣಿಗೆ ಭಾರತ ವಿರೋಧಿ ಚಟುವಟಿಕೆಯಾಗಿ ಬದಲಾಗಿತ್ತು. ಭಾರತ ವಿರೋಧಿ ಘೋಷಣೆ, ಸೇನೆ ಮೇಲೆ ಕಲ್ಲು ತೂರಾಟ, ಪಾಕಿಸ್ತಾನ್ ಜಿಂದಾಬಾದ್ ಘೋಷಣೆಗಳು ಮೆರವಣಿಯಲ್ಲಿ ಸಾಮಾನ್ಯವಾಗಿತ್ತು. ಗುಂಡಿನ ದಾಳಿ, ಬಾಂಬ್ ಸ್ಫೋಟ ಸೇರಿದಂತೆ ಹಲವು ಅಹಿತಕರ ಘಟನೆಗಳು ನಡೆದಿದೆ. ಹೀಗಾಗಿ ಜಿಲ್ಲಾಡಳಿತ ಮೊಹರಂ ಮೆರವಣಿಗೆ ಸೇರಿದಂತೆ ಇತರ ಕೆಲ ಮೆರವಣಿಗೆಯನ್ನು ನಿಷೇಧಿಸಿತ್ತು. 

ಮೊಹರಂ ಮೆರವಣಿಗೆ ಅವಕಾಶ ಹಾಗೂ ಯಶಸ್ವಿ ಮೆರವಣಿಗೆ ಕುರಿತು ಮಾತನಾಡಿದ ಜಮ್ಮ ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಕೆ ಸಿನ್ಹ, ಕಾಶ್ಮೀರದ ಶಿಯಾ ಸಹೋದರರ ಭಾವನೆಯನ್ನು ಗೌರವಿಸಲಾಗಿದೆ. ಕಳೆದ 34 ವರ್ಷಗಳಿಂದ ನಿಷೇಧದಲ್ಲಿದ್ದ ಮೊಹರಂ ಮೆರವಣಿಗೆಗೆ ಅವಕಾಶ ನೀಡಲಾಗಿದೆ. ಕೇಂದ್ರಾಡಳಿತ ಪ್ರದೇಶ ಇದೀಗ ಶಾಂತಿಯ ನೆಲೆಯಾಗಿದೆ. ಇಲ್ಲಿ ಭಯೋತ್ವಾದಕತೆಗೆ ಅವಕಾಶವಿಲ್ಲ. ಜಮ್ಮು ಮತ್ತು ಕಾಶ್ಮೀರ ಶಾಂತಿ ಹಾಗೂ ಅಭಿವೃದ್ಧಿ ಜೊತೆಗೆ ಮುನ್ನುಗ್ಗುತ್ತಿದೆ. ಎಲ್ಲಾ ಸಮುದಾಯಗಳು, ಎಲ್ಲಾ ಜನರು ಶಾಂತಿಯಿಂದ ಜೀವನ ಸಾಗಿಸುತ್ತಿದ್ದಾರೆ. ಇದೀಗ ಕಾಶ್ಮೀರದ ಸಂಸ್ಕತಿಗಳು ಮರುಕಳಿಸುತ್ತಿದೆ ಎಂದು ಮನೋಜ್ ಕೆ ಸಿನ್ಹ ಹೇಳಿದ್ದಾರೆ.

 

ಜಮ್ಮುವಿನಲ್ಲಿ ಶೃಂಗೇರಿ ಶಾರದಾಂಬೆ ವಿಗ್ರಹಕ್ಕೆ ಶ್ರೀಗಳಿಂದ ಪ್ರತಿಷ್ಠಾಪನೆ ಪೂಜೆ

ಭಯೋತ್ಪಾದಕತೆ ಜೊತೆ ರಾಜಕೀಯ ಬೆರೆತು ಕಾಶ್ಮೀರ ಆತಂಕದ, ಭಯದ ಗೂಡಾಗಿತ್ತು. ಇದೀಗ ಪ್ರವಾಸೋದ್ಯಮ ಅಭಿವೃದ್ಧಿಯಾಗಿದೆ. ಕಾಶ್ಮೀರ ಸೌಂದರ್ಯ ಸವಿಯಲು ದೇಶ ವಿದೇಶಗಳಿಂದ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಇಲ್ಲಿನ ಸ್ಥಳೀಯ ಸಂಸ್ಕೃತಿಗಳ ಮೇಳೈಸುತ್ತಿದೆ. ಆಚರಣೆಗಳು ಮರುಕಳಿಸಿದೆ ಎಂದು ಮನೋಜ್ ಕೆ ಸಿನ್ಹ ಹೇಳಇದ್ದಾರೆ.

ಜಮ್ಮ ಮತ್ತು ಕಾಶ್ಮೀರದಲ್ಲಿ ಪ್ರಮುಖವಾಗಿ ಕಾಶ್ಮೀರಿ ಪಂಡಿತರ ಹಲವು ಆಚರಣೆಗಳು ಮನೆಯಲ್ಲಿ ಮಾತ್ರ ಸೀಮಿತವಾಗಿತ್ತು. ಹಿಂದೂಗಳ ಪೂಜೆ, ಆಚರಣೆಗಳೂ ಕಾಶ್ಮೀರದಲ್ಲಿ ಉಳಿದಿರುವ ಬೆರಳೆಣಿಕೆ ಮಂದಿ ಮರೆತಿದ್ದದ್ದರು.  ಭಯೋತ್ಪಾದಕತೆ ತೀವ್ರ ಮಟ್ಟ ತಲುಪಿದ ಕಾರಣ ಕಾಶ್ಮೀರದ ಸಂಸ್ಕೃತಿ ಕಾಣೆಯಾಗಿತ್ತು. ಇದೀಗ ಕಾಶ್ಮೀರ ಬದಲಾಗಿದೆ. 

click me!