
ಮುಂಬೈ (ಜು.27): ಟಿವಿ ಧಾರವಾಹಿ ಚಿತ್ರೀಕರಣ ನಡೆಯುತ್ತಿದ್ದ ಸೆಟ್‌ಗೆ ಚಿರತೆಯೊಂದು ನುಗ್ಗಿದ ಘಟನೆ ಮುಂಬೈನ ಗೋರೇಗಾಂವ್‌ನಲ್ಲಿ ನಡೆದಿದೆ. ಈ ವೇಳೆ ಸೆಟ್‌ನಲ್ಲಿ 200ಕ್ಕೂ ಅಧಿಕ ಕಲಾವಿದರು. ಎಲ್ಲರೂ ಭಯಭೀತರಾಗಿದ್ದರು ಎನ್ನುವುದು ತಿಳಿದುಬಂದಿದೆ.ಫಿಲ್ಮ್ ಸಿಟಿಯಲ್ಲಿ ಮರಾಠಿ ಟಿವಿ ಧಾರಾವಾಹಿ 'ಸುಖ್ ಮ್ಹಣ್ಜೆ ನಕ್ಕಿ ಕೇ ಆಸ್ತಾ' ಸೆಟ್‌ನಲ್ಲಿ ಚಿರತೆ ತನ್ನ ಮರಿಯೊಂದಿಗೆ ಸಿಬ್ಬಂದಿಯ ಎದುರು ಕಾಣಿಸಿಕೊಂಡಿದೆ. ಚಿರತೆ ಕಂಡ ಬೆನ್ನಲ್ಲಿಯೇ ಇಡೀ ಸೆಟ್‌ನಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಸೆಟ್‌ಗೆ ಚಿರತೆ ನುಗ್ಗಿದ್ದ ವೇಳೆ 200ಕ್ಕೂ ಅಧಿಕ ಕಲಾವಿದರು ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಈ ಹಂತದಲ್ಲಿ ಯಾರು ಬೇಕಾದರೂ ಜೀವ ಕಳೆದುಕೊಳ್ಳುವ ಸಾಧ್ಯತೆ ಇತ್ತು ಎಂದು ಅಖಿಲ ಭಾರತೀಯ ಸಿನಿ ಕಾರ್ಮಿಕರ ಸಂಘದ ಅಧ್ಯಕ್ಷ ಸುರೇಶ್ ಶ್ಯಾಮಲಾಲ್ ಗುಪ್ತಾ ಮಾಹಿತಿ ನೀಡಿದ್ದಾರೆ. ಫಿಲಂ ಸಿಟಿಯಲ್ಲಿ ನಿತ್ಯವೂ ಚಿರತೆಗಳು ಕಾಣಿಸಿಕೊಳ್ಳುತ್ತಿದ್ದರೂ ಸರ್ಕಾರ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ ಎಂದು ಗುಪ್ತಾ ಬೇಸರ ತೋಡಿಕೊಂಡಿದ್ದಾರೆ.
ಕಳೆದ 10 ದಿನಗಳಲ್ಲಿ ಈ ಪ್ರದೇಶದಲ್ಲಿ ಚಿರತೆ ಕಾಣಿಸಿಕೊಂಡ 3 ಅಥವಾ ನಾಲ್ಕನೇ ದೃಷ್ಟಾಂತ ಇದಾಗಿದೆ. ಚಿರತೆಯ ಚಲನೆಯನ್ನಿ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಸರ್ಕಾರವಾಗಲಿ, ಅರಣ್ಯ ಇಲಾಖೆಯಾಗಲಿ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಹೇಳಿದ್ದಾರೆ.
ಡ್ರಗ್ಸ್ ಸಾಗಾಟ, ಕಳೆದ 20 ವರ್ಷದಲ್ಲಿ ಮೊದಲ ಬಾರಿಗೆ ಮಹಿಳೆಯನ್ನು ಗಲ್ಲಿಗೇರಿಸಲಿರುವ ಸಿಂಗಾಪುರ
ಚಿರತೆ ಸೆಟ್‌ಗೆ ಹೊಕ್ಕಿರುವ ಸಂದರ್ಭದಲ್ಲಿ ಸಿಬ್ಬಂದಿಯೊಬ್ಬರು ತಮ್ಮ ಕ್ಯಾಮೆರಾದಲ್ಲಿ ಅದರ ವಿಡಿಯೋ ಮಾಡಿದ್ದರು. ಈ ವಿಡಿಯೋವೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಚಿರತೆ ಸೆಟ್‌ಗೆ ಹೊಕ್ಕೆ ತಕ್ಷಣವೇ, ಸೆಟ್‌ನ ಮೇಲಿದ್ದ ಬೀಮ್‌ಗಳ ಚಿರತೆ ಹೋಗಿದೆ. ಈ ಪ್ರದೇಶದಲ್ಲಿ ಲೈಟ್ಸ್‌ಗಳು ಇರದ ಕಾರಣ ಅಲ್ಲಿ ತಿರುಗಾಟ ಮಾಡಿದೆ. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
75 ವರ್ಷದ ಮಾಜಿ ಸೈನಿಕನಿಗೆ ಸೀರಿಯಲ್ ನಟಿಯಿಂದ ಹನಿಟ್ರ್ಯಾಪ್, 11 ಲಕ್ಷ ವಂಚನೆ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ