'ಫ್ರೆಶರ್‌ಗಳು ದಿನಕ್ಕೆ 18 ಗಂಟೆ ಕೆಲ್ಸ ಮಾಡಿ..' ಎಂದಿದ್ದ ಬಾಂಬೆ ಶೇವಿಂಗ್‌ ಕಂಪನಿ ಸಿಇಒ ಕ್ಷಮೆ!

By Santosh Naik  |  First Published Sep 3, 2022, 6:27 PM IST

ನಾನು ಹೇಳಿದ್ದ ಸಲಹೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಹಾಗಿದ್ದರೂ ನಾನು ಹೇಳಿದ್ದ ಸಲಹೆಯನ್ನು ಇನ್ನೂ ಉತ್ತಮ ರೀತಿಯಲ್ಲಿ ಹೇಳಲು ಸಾಧ್ಯವಿತ್ತು ಎಂದಿರುವ ಸಿಇಒ ಶಂತನು ದೇಶಪಾಂಡೆ ಲಿಂಕ್ಡಿನ್‌ ಖಾತೆಯನ್ನು ಕೂಡ ಡಿಲೀಟ್‌ ಮಾಡಿದ್ದಾರೆ.
 


ಬೆಂಗಳೂರು (ಸೆ.3): ಕೆಲಸ ಕೇಳಿಕೊಂಡು ಬರುವ ಫ್ರೆಶರ್‌ಗಳು ಆರಂಭಿಕ4-5 ವರ್ಷಗಳ ಕಾಲವಾದರೂ, ದಿನಕ್ಕೆ 18 ಗಂಟೆಗಳ ಕಾಲ ಕೆಲಸ ಮಾಡಬೇಕು ಎಂದು ಹೇಳುವ ಮೂಲಕ ಲಿಂಕ್ಡಿನ್‌ನಲ್ಲಿ ದೊಡ್ಡ ಮಟ್ಟದ ಟೀಕೆಗೆ ಗುರಿಯಾಗಿದ್ದ ಬಾಂಬೆ ಶೇವಿಂಗ್‌ ಕಂಪನಿಯ ಸಿಇಒ ಶಂತನು ದೇಶಪಾಂಡೆ ತಮ್ಮ ಪೋಸ್ಟ್‌ಗೆ ಕ್ಷಮೆ ಕೇಳಿ ಲಿಂಕ್ಡಿನ್‌ನಲ್ಲಿ ಹೊಸ ಪೋಸ್ಟ್‌ ಹಾಕಿದ್ದಾರೆ. ಅದರೊಂದಿಗೆ ಲಿಂಕ್ಡಿನ್‌ನಲ್ಲಿ ಇದೇ ತಮ್ಮ ಕೊನೆಯ ಪೋಸ್ಟ್‌ ಎಂದು ಹೇಳಿಕೊಂಡಿದ್ದು, ವೃತ್ತಿಪರರು ಹಾಗೂ ಉದ್ಯೋಗಕಾಂಕ್ಷಿಗಳಿಗಾಗಯೇ ಇರುವ ಲಿಂಕ್ಡಿನ್‌ ಸೋಷಿಯನ್‌ ಮೀಡಿಯಾ ವೇದಿಕೆಯನ್ನು ತೊರೆಯುತ್ತಿರುವುದಾಗಿ ಹೇಳಿದ್ದಾರೆ. ಶಂತನು ದೇಶಪಾಂಡೆ ಮಾಡಿದ ಪೋಸ್ಟ್‌ ಸಾರ್ವಜನಿಕ ಕೋಲಾಹಲಕ್ಕೆ ಕಾರಣವಾಗಿತ್ತು. ಬಾಂಬೆ ಶೇವಿಂಗ್ ಕಂಪನಿ ಸಂಸ್ಥಾಪಕ ಮತ್ತು ಸಿಇಒ ಶಾಂತನು ದೇಶಪಾಂಡೆ, ಜನರ ಭಾವನೆಗಳಿಗೆ ಧಕ್ಕೆ ತಂದಿದ್ದಕ್ಕಾಗಿ ಕ್ಷಮೆಯಾಚಿಸಿದ್ದಾರೆ. ಅವರ ಸಂದೇಶವನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ ಆದರೆ ಅವರ ಪೋಸ್ಟ್ ಅನ್ನು ಉತ್ತಮ ರೀತಿಯಲ್ಲಿ ಹೇಳಬಹುದಿತ್ತು ಎಂದು ಸೇರಿಸಿದ್ದಾರೆ. ಹೊಸ ಲಿಂಕ್ಡ್‌ಇನ್ ಪೋಸ್ಟ್‌ನಲ್ಲಿ, ಬರೆದುಕೊಂಡಿರುವ ದೇಶಪಾಂಡೆ, "ಇದು ಲಿಂಕ್ಡ್‌ಇನ್‌ನಲ್ಲಿ ನನ್ನ ಕೊನೆಯ ಪೋಸ್ಟ್.  ಇಲ್ಲಿಯವರೆಗಿನ ನನ್ನ ಪ್ರಯಾಣ ಉತ್ತಮವಾಗಿತ್ತು. ನನ್ನ ಪೋಸ್ಟ್‌ನಿಂದ ನೋವಾದವರಿಗೆ, ಈ ಕುರಿತಾಗಿ ಕ್ಷಮೆಯಾಚಿಸುತ್ತೇನೆ. ಸೂಕ್ಷ್ಮ ವ್ಯತ್ಯಾಸ ಮತ್ತು ಸಂದರ್ಭದ ಅಗತ್ಯವನ್ನು ನಾನು ಗುರುತಿಸುತ್ತೇನೆ." ಅದರೊಂದಿಗೆ ಅವರು ಟಿವಿ ಚಾನೆಲ್‌ಗೆ ನೀಡಿದ ಸಂದರ್ಶನದ ವೀಡಿಯೊವನ್ನು ಪೋಸ್ಟ್‌ನೊಂದಿಗೆ ಹಂಚಿಕೊಂಡಿದ್ದಾರೆ.

"ಪ್ರತಿದಿನ 18 ಗಂಟೆಗಳನ್ನು ಕೆಲಸಕ್ಕೆ ಹಾಕಬೇಕು ಎಂದು ನಾನು ಎಲ್ಲಿಯೂ ಹೇಳಿರಲಿಲ್ಲ. ಒಂದು ಅಂಶವನ್ನು ತೀರಾ ಉತ್ಪ್ರೇಕ್ಷೆಯಲ್ಲಿ ಹೇಳುವ ವೇಳೆ, ಈ ಮಾತು ಹೊರಬಂದಿದೆ. ನಾನು ಹೇಳಿದ ಮಾತಿಗಿಂತ ಇದು ಸಂಪೂರ್ಣವಾಗಿ ತದ್ವಿರುದ್ದವಾಗಿತ್ತು ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಶಂತನು ದೇಶಪಾಂಡೆ ಅವರ ಪ್ರಕಾರ, 22 ರಿಂದ 28 ವರ್ಷದ ವಯಸ್ಸಿನವರಿಗೆ ಅವಕಾಶಗಳು ಹೆಚ್ಚಿರುತ್ತವೆ, ಜವಾಬ್ದಾರಿ ಅಥವಾ ಹೊಣೆಗಾರಿಕೆಗಳು ಕಡಿಮೆ ಇರುತ್ತವೆ. ಇದನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು. 28 ವರ್ಷವಾದ ನಂತರ, ನಿಮಗೆ ಸಮಯವೇ ಸಿಗುವುದಿಲ್ಲ. ವಾಣಿಜ್ಯ ಉದ್ದೇಶಗಳ ಕಡೆ ನಿಮ್ಮ ಕಣ್ಣು ಹೋಗುತ್ತಿರುತ್ತದೆ.  ಮದುವೆ ಆಗ್ತೀರಿ, ನಿಮ್ಮ ತಂದೆ ತಾಯಿಗಳಿಗೆ ವಯಸ್ಸಾಗುತ್ತದೆ. ಇದರ ಬೆನ್ನಲ್ಲಿಯೇ ನಿಮ್ಮ ಹೊಣೆಗಾರಿಕೆ ಆರಂಭವಾಗುತ್ತದೆ. ಆದ್ದರಿಂದ 22 ರಿಂದ 28 ವರ್ಷದ ವಯಸ್ಸು ಏನಿದೆಯಲ್ಲ. ಆ ವಯಸ್ಸಿನಲ್ಲಿಯೇ ನೀವು ನಿಮ್ಮ ಎಲ್ಲಾ ಶ್ರಮವನ್ನು ಹಾಕಬೇಕು. ಎನ್ನುವುದು ನಾನು ಹೇಳಲು ಬಯಸಿದ್ದ ವಿಚಾರವಾಗಿತ್ತು ಎಂದು ಶಂತನು ದೇಶಪಾಂಡೆ  (Shantanu Deshpande) ಬರೆದುಕೊಂಡಿದ್ದಾರೆ.

WhatsApp ನಲ್ಲಿ ಜಾಬ್‌ ಆಫರ್‌ ಸಿಕ್ಕಿದೆಯೇ..? ನೀವು ರಿಪ್ಲೈ ಮಾಡುವ ಮೊದಲು ಚೆನ್ನಾಗಿ ಯೋಚಿಸಿ..!

ಕೆಲವು ದಿನಗಳ ಹಿಂದೆ ಶಂತನು ದೇಶಪಾಂಡೆ ಹೇಳಿದ ಮಾತು ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ನಿಮ್ಮ ವೃತ್ತಿಜೀವನದ ಮೊದಲ ಆರಂಭಿಕ 4-5 ವರ್ಷಗಳಲ್ಲಿ ಕನಿಷ್ಠ 18 ಗಂಟೆಗಳ ಕಾಲ ಕೆಲಸ ಮಾಡಿ, ಸುಮ್ಮನೆ ಅಳೋದು, ಬೀಳೋದೆಲ್ಲಾ ಮಾಡಬೇಡಿ ಎಂದು ಸಲಹೆ ನೀಡಿದ್ದರು. ಆದರೆ, ಅವರ ಈ ಮಾತು ಟ್ರೋಲ್‌ಗೆ ಆಹಾರವಾಗಿತ್ತು.  'ಗುಲಾಮಗಿರಿಯನ್ನು ವೈಭವೀಕರಿಸುವುದು' ಮತ್ತು 'ವಿಷಕಾರಿ ಕೆಲಸ ಸಂಸ್ಕೃತಿ'ಯನ್ನು ಉತ್ತೇಜಿಸುವ ಕೆಲಸ ಮಾಡುತ್ತಿದ್ದೀರಿ ಎಂದು ಅವರಿಗೆ ಪ್ರತಿಕ್ರಿಯೆಗಳು ಹಾಗೂ ಟ್ರೋಲ್‌ಗಳು (Troll) ಬಂದಿದ್ದವು.
ಇನ್ನು ಲಿಂಕ್ಡಿನ್‌ಅಲ್ಲಿ (LinkedIn) ಶಂತನು ಮಾಡಿರುವ ಹೊಸ ಪೋಸ್ಟ್‌ಗೂ ಮಿಶ್ರ ಪ್ರತಿಕ್ರಿಯೆಗಳು ಬಂದಿವೆ. ಕೆಲವರು ಅವರ ಪ್ರಾಮಾಣಿಕತೆಯನ್ನು ಪ್ರಶ್ನೆ ಮಾಡಿದ್ದರೆ, ಇನ್ನೂ ಕೆಲವರು. ನೀವೀಗ ಲಿಂಕ್ಡಿನ್‌ನಲ್ಲಿ ಅಳೋ ಕೆಲಸವನ್ನು ಮಾಡಬೇಡಿ. ಜಾಸ್ತಿ ತಲೆಕೆಡಿಸಿಕೊಳ್ಳಬೇಡಿ ಎಂದು (Bombay Shaving Company ) ಬರೆದಿದ್ದಾರೆ.

Tap to resize

Latest Videos

ಗೂಗಲ್, ಮೈಕ್ರೋಸಾಫ್ಟ್‌, ಆ್ಯಪಲ್‌ನಲ್ಲಿ ಭಾರತೀಯ ಸಿಬ್ಬಂದಿಗಿಲ್ಲ ಉದ್ಯೋಗ ಕಡಿತದ ಬರೆ!

"ಅವರನ್ನು ಬಹುಪಾಲು ಜನರು ತಪ್ಪಾಗಿ ಅರ್ಥೈಸಿಕೊಂಡರೆ, ಅದು ಅವರ ಮಾತಿನ ಸಮಸ್ಯೆಯೇ ಹೊರತು ಜನರಲ್ಲ. ಅದಕ್ಕಾಗಿ ಜನರನ್ನು ದೂಷಿಸುವುದನ್ನು ನಿಲ್ಲಿಸಿ" ಎಂದು ಮತ್ತೊಬ್ಬರು ಕಾಮೆಂಟ್‌ ಮಾಡಿದ್ದಾರೆ. ಈ ನಡುವೆ, ತಮ್ಮ ಹಿಂದಿನ ಪೋಸ್ಟ್‌ನಿಂದಾಗಿ ತಮ್ಮನ್ನು ಮಾತ್ರವಲ್ಲದೆ ಅಪ್ಪ-ಅಮ್ಮನನ್ನು ಕೂಡ ಟ್ರೋಲ್‌ ಮಾಡಲಾಗುತ್ತಿದೆ ಎಂದು ಶಂತನು ದೇಶಪಾಂಡೆ ಬರೆದುಕೊಂಡಿದ್ದಾರೆ.
 

click me!