Gujarat Election ಬಿಜೆಪಿಯಿಂದ ಹಣ ಪಡೆದು ಆಪ್‌ಗಾಗಿ ಕೆಲಸ ಮಾಡಿ, ಕೇಸರಿ ಕಾರ್ಯಕರ್ತರಿಗೆ ಕೇಜ್ರಿ ಟಿಪ್ಸ್!

By Suvarna NewsFirst Published Sep 3, 2022, 6:23 PM IST
Highlights

ಕೇಂದ್ರದ ವಿರುದ್ದ ಸತತ ವಾಗ್ದಾಳಿ ನಡೆಸುತ್ತಿರುವ ಆಮ್ ಆದ್ಮಿ ಪಾರ್ಟಿ ಹಾಗೂ ಅರವಿಂದ್ ಕೇಜ್ರಿವಾಲ್, ಶತಾಯಗತಾಯ ಗುಜರಾತ್‌ ಚುನಾವಣೆಯಲ್ಲಿ ಹೊಸ ಇತಿಹಾಸ ರಚಿಸಿ ತಿರುಗೇಟು ನೀಡುವ ಲೆಕ್ಕಾಚಾರದಲ್ಲಿದೆ. ಇದಕ್ಕಾಗಿ ಮೇಲಿಂದ ಮೇಲೆ ಗುಜರಾತ್‌ನಲ್ಲಿ ಸಭೆ, ರ್ಯಾಲಿ ಆಯೋಜಿಸುತ್ತಿದ್ದಾರೆ. ಇದೀಗ ಗುಜರಾತ್‌ನ ಬಿಜೆಪಿ ಕಾರ್ಯಕರ್ತರಿಗೆ ಹೊಸ ಟಿಪ್ಸ್ ನೀಡಿದ್ದಾರೆ.

ಗುಜರಾತ್(ಸೆ.03):  ಗಜುರಾತ್ ವಿಧಾನಸಭಾ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಆಮ್ ಆದ್ಮಿ ಪಾರ್ಟಿ, ಮೋದಿ ನಾಡಲ್ಲಿ ಆಪ್ ಧ್ವಜ ಹಾರಿಸಲು ಶತಾಯಗತಾಯ ಪ್ರಯತ್ನ ಮಾಡುತ್ತಿದ್ದಾರೆ. ಗುಜರಾತ್‌ನಲ್ಲಿ ಸತತ ಸಭೆ, ಸಮಾವೇಶ, ರ್ಯಾಲಿಗಳನ್ನು ಆಯೋಜಿಸುತ್ತಿದ್ದಾರೆ. ಬಿಜೆಪಿ  ನಾಯಕರು ಆಮ್ ಆದ್ಮಿ ಪಕ್ಷಕ್ಕೆ ಬರುವ ಅಗತ್ಯವಿಲ್ಲ. ಆದರೆ ಬಿಜೆಪಿ ಕಾರ್ಯಕರ್ತರು ಆಮ್ ಆದ್ಮಿಗಾಗಿ ಕೆಲಸ ಮಾಡಬೇಕು ಎಂದು ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ಇದಕ್ಕಾಗಿ ಟಿಪ್ಸ್ ಒಂದನ್ನೂ ನೀಡಿದ್ದಾರೆ. ಬಿಜೆಪಿ ಕಾರ್ಯಕರ್ತರು ಬಿಜೆಪಿ ಪಕ್ಷದಿಂದ ಹಣ ಪಡೆದು ಆಮ್ ಆದ್ಮಿಗಾಗಿ ಕೆಲಸ ಮಾಡಿ ಎಂದಿದ್ದಾರೆ. ಕಳೆದ ಹಲವು ವರ್ಷಗಳಿಂದ ಗುಜರಾತ್‌ನಲ್ಲಿ ಬಿಜಪಿ ಕಾರ್ಯಕರ್ತರು ತಳಮಟ್ಟದಲ್ಲಿ ಕೆಲಸ ಮಾಡಿದ್ದಾರೆ. ಆದರೆ ಅವರನ್ನು ಬಿಜೆಪಿ ಕಡೆಗಣಿಸಿದೆ. ಹೀಗಾಗಿ  ಬಿಜೆಪಿ ಕಾರ್ಯಕರ್ತರು ಆಮ್ ಆದ್ಮಿ ಪಕ್ಷ ಸೇರಿಕೊಳ್ಳಿ ಎಂದಿದ್ದಾರೆ. 

ಆಮ್ ಆದ್ಮಿ(AAP) ಪಕ್ಷದ ಕಾರ್ಯಕರ್ತರನ್ನೇ ಸಚಿವರನ್ನಾಗಿಸುತ್ತದೆ. ಕಾರ್ಯಕರ್ತರಿಗೆ(Party Workers) ಉತ್ತಮ ಅವಕಾಶ, ಸ್ಥಾನ ಮಾನ ನೀಡುತ್ತದೆ. ಗುಜರಾತ್‌ ಬಿಜೆಪಿ(Gujarat BJP) ಕಾರ್ಯಕರ್ತರಿಗೆ ಇದುವರೆಗೆ ಯಾವುದೇ ಸ್ಥಾನಮಾನ ಕೇಸರಿ ಪಾರ್ಟಿ ನೀಡಿಲ್ಲ ಎಂದು ಕೇಜ್ರಿವಾಲ್ ಹೇಳಿದ್ದಾರೆ. ಆಮ್ ಆದ್ಮಿಗೆ(Aam Admi Party) ಬಿಜೆಪಿ ನಾಯಕರು ಬರುವುದು ಬೇಡ. ಅವರಿಗೆ ನಮ್ಮ ಪಕ್ಷದಲ್ಲಿ ಅವಕಾಶವಿಲ್ಲ. ಆದರೆ ಕಾರ್ಯಕರ್ತರಿಗೆ ಅವಕಾಶವಿದೆ ಎಂದು ಅರವಿಂದ್ ಕೇಜ್ರಿವಾಲ್(Arvind Kejriwal) ಗುಜರಾತ್‌ನಲ್ಲಿ ಹೇಳಿದ್ದಾರೆ.

Latest Videos

Gujarat Polls: ‘’ಸಿಸೋಡಿಯಾ ಮೇಲೆ ಸಿಬಿಐ ರೇಡ್‌ನಿಂದ ಎಎಪಿ ಮತಗಳಿಕೆ 4% ಹೆಚ್ಚಳ'

ಕಾರ್ಯಕರ್ತರಿಗೆ ಬಿಜೆಪಿ ಹಣ ಹಂಚಿಕೆ ಮಾಡುತ್ತದೆ. ಚುನಾವಣೆ(Gujarat Election) ಸಂದರ್ಭದಲ್ಲಿ ಅಪಾರ ಹಣ ಸುರಿದು ಗೆಲುವು ದಕ್ಕಿಸಿಕೊಳ್ಳುತ್ತದೆ. ಬಳಿಕ ಕಾರ್ಯಕರ್ತರನ್ನು ಬಿಜೆಪಿ ಮರೆತು ಬಿಡುತ್ತದೆ. ನಮ್ಮಲ್ಲಿ ಕಾರ್ಯಕರ್ತರಿಗೆ ಉತ್ತಮ ಸ್ಥಾನಮಾನ ನೀಡುತ್ತೇವೆ ಎಂದು ಕೇಜ್ರಿವಾಲ್ ಹೇಳಿದ್ದಾರೆ. ಗುಜರಾತ್‌ನಲ್ಲಿ ಆಮ್ ಆದ್ಮಿ ಅಧಿಕಾರಕ್ಕೆ ಬಂದರೆ ದಿನದ 24 ಗಂಟೆ ಉಚಿತ ವಿದ್ಯುತ್(Free Electricity) ನೀಡುತ್ತೇವೆ ಎಂದು ಕೇಜ್ರಿ ಘೋಷಿಸಿದ್ದಾರೆ. ಅತ್ಯುತ್ತಮ ಶಿಕ್ಷಣ(Free Education), ಅತ್ಯುತ್ತಮ ಶಾಲೆ ನಿರ್ಮಾಣ ಮಾಡುತ್ತೇವೆ. ಪ್ರತಿ ಮಕ್ಕಳಿಗೆ ಶಿಕ್ಷಣ ಸಿಗುವಂತೆ ಮಾಡುತ್ತೇವೆ. ಉಚಿತ ಆರೋಗ್ಯ ಸೇವೆಯನ್ನು ನೀಡಲಾಗುತ್ತದೆ. ಮಹಿಳೆಯರಿಗೆ ತಿಂಗಳಿಗೆ 1,000 ರೂಪಾಯಿ ನೀಡುತ್ತೇವೆ ಎಂದು ಅರವಿಂದ್ ಕೇಜ್ರಿವಾಲ್ ಘೋಷಿಸುತ್ತೇವೆ. 

ಬಿಜೆಪಿ ಕಾರ್ಯಕರ್ತರು ಬಿಜೆಪಿ ಜೊತೆಗಿರುವುದಕ್ಕೆ ಕಾರಣವೇ ಇಲ್ಲ. ಕಾರಣ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಸೋಲು ಕಾಣಲಿದೆ. ಆಮ್ ಆದ್ಮಿ ಪಾರ್ಟಿ ಅಧಿಕಾರಕ್ಕೇರಲಿದೆ. ಹೀಗಾಗಿ ಕಾರ್ಯಕರ್ತರು ಆಪ್ ಸೇರಿಕೊಳ್ಳಿ ಎಂದು ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

ಅಧಿಕಾರದ 'ಅಮಲು' ನಿಮಗೂ ತಟ್ಟಿತಲ್ಲ..! ಕೇಜ್ರಿವಾಲ್‌ ಸರ್ಕಾರದ ಮದ್ಯನೀತಿಯ ಬಗ್ಗೆ ಅಣ್ಣಾ ಹಜಾರೆ ಭಾವುಕ ಪತ್ರ!

ಗುಜರಾತ್‌ನಲ್ಲಿ ಅಧಿಕಾರಕ್ಕೆ ಬಂದರೆ ಕೃಷಿ ಸಾಲ ಮನ್ನಾ: ಕೇಜ್ರಿ ಭರವಸೆ
ಮುಂಬರುವ ಚುನಾವಣೆಯಲ್ಲಿ ಗುಜರಾತ್‌ನಲ್ಲಿ ಅಧಿಕಾರಕ್ಕೆ ಬಂದರೆ ಕೃಷಿ ಸಾಲ ಮನ್ನಾ ಮಾಡುವುದಾಗಿ ಆಮ್‌ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್‌ ಶುಕ್ರವಾರ ದ್ವಾರಕಾದಲ್ಲಿ ಮತ್ತೊಂದು ಚುನಾವಣಾ ಪೂರ್ವ ಭರವಸೆ ನೀಡಿದ್ದಾರೆ. ರೈತರನ್ನು ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ನಡೆಸಿದ ಸಮೀಕ್ಷೆಯಿಂದ ರೈತರು ಅತೃಪ್ತರಾಗಿರುವ ಹಿನ್ನೆಲೆಯಲ್ಲಿ ಮತ್ತೊಮ್ಮೆ ಭೂಮಿ ಸಮೀಕ್ಷೆ ನಡೆಸಲಾಗುವುದು. ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಘೋಷಿಸಿದ್ದರೂ ಸಹ ಅವು ಆ ಬೆಲೆಗೆ ಮಾರಾಟವಾಗುತ್ತಿಲ್ಲ. ಆದರೆ ಸರ್ಕಾರ ಆ ಬೆಲೆಗೆ ಉತ್ಪನ್ನಗಳನ್ನು ಖರೀದಿಸುತ್ತದೆ ಎಂದು ಭರವಸೆ ನೀಡುತ್ತೇನೆ. ಗುಜರಾತ್‌ನ ರೈತರು ರಾತ್ರಿಯ ವೇಳೆ ವಿದ್ಯುತ್‌ ಸಂಪರ್ಕ ಪಡೆದುಕೊಳ್ಳುತ್ತಿದ್ದಾರೆ. ಆದರೆ ಆಪ್‌ ಸರ್ಕಾರ ಬೆಳಿಗ್ಗೆ ವೇಳೆಯಲ್ಲಿ ವಿದ್ಯುತ್‌ ನೀಡಲಿದೆ. ಬೆಳೆ ನಷ್ಟವಾದರೆ ರೈತರಿಗೆ ಪ್ರತಿ ಎಕರೆಗೆ 20 ಸಾವಿರ ರು. ಪರಿಹಾರ ನೀಡಲಾಗುವುದು ಎಂದು ಅವರು ಹೇಳಿದರು.

click me!