Anand Mahindra: ಭಾರತ ಆರ್ಥಿಕತೆಯಲ್ಲಿ ಬ್ರಿಟನ್‌ ಹಿಂದಿಕ್ಕಿದ್ದು ''ಕರ್ಮ ಸಿದ್ಧಾಂತದ ಫಲ'' ಎಂದ ಉದ್ಯಮಿ

By BK Ashwin  |  First Published Sep 3, 2022, 5:33 PM IST

ಬ್ರಿಟನ್‌ ಅನ್ನು ಹಿಂದಿಕ್ಕಿ ಭಾರತ ವಿಶ್ವದ 5ನೇ ಅತಿ ದೊಡ್ಡ ಆರ್ಥಿಕತೆಯಾಗಿದ್ದಕ್ಕೆ ದೇಶದ ಸ್ವಾತಂತ್ರ್ಯಕ್ಕಾಗಿ ಕಷ್ಟಪಟ್ಟು ಹೋರಾಡಿದ ಮತ್ತು ತ್ಯಾಗ ಮಾಡಿದ ಪ್ರತಿಯೊಬ್ಬ ಭಾರತೀಯನ ಹೃದಯವನ್ನು ಈ ಸುದ್ದಿ ತುಂಬುತ್ತದೆ ಎಂದು ಆನಂದ್ ಮಹೀಂದ್ರಾ ಟ್ವೀಟ್‌ ಮಾಡಿದ್ದಾರೆ. 


ಭಾರತವು (India) ಯುಕೆಯನ್ನು (UK) ಹಿಂದಿಕ್ಕಿ ವಿಶ್ವದ 5ನೇ ಅತಿ ದೊಡ್ಡ ಆರ್ಥಿಕತೆಯಾಗಿ (Worlds 5th Largest Economy) ಹೊರಹೊಮ್ಮಿದೆ. ಈ ಹಿನ್ನೆಲೆ ಸೆಪ್ಟೆಂಬರ್ 3 ರಂದು ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ ಅವರು ದೇಶವನ್ನು ಶ್ಲಾಘಿಸಿದ್ದಾರೆ. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮತ್ತು ತ್ಯಾಗ ಮಾಡಿದ ಪ್ರತಿಯೊಬ್ಬ ಭಾರತೀಯನ ಹೃದಯವನ್ನು ಈ ಸುದ್ದಿ ತುಂಬುತ್ತದೆ ಎಂದು ಅವರು ಹೇಳಿದರು. ಸೆಪ್ಟೆಂಬರ್ 2ರಂದು ಬ್ರಿಟನ್, ಭಾರತದ ಹಿಂದಿನ ಸ್ಥಾನ ಅಂದರೆ ವಿಶ್ವದ ಆರನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿತು. ಇದು, ಲಂಡನ್‌ನಲ್ಲಿ ಸರ್ಕಾರಕ್ಕೆ ಮತ್ತಷ್ಟು ಹೊಡೆತವನ್ನು ನೀಡಿದೆ. ಈಗಾಗಲೇ ಅತಿ ಹೆಚ್ಚು ಜೀವನ ವೆಚ್ಚದ (Cost of Living) ಆಘಾತವನ್ನು ಬ್ರಿಟನ್‌ ಎದುರಿಸುತ್ತಿದೆ.

ಈ ಸಂಬಂಧ ಟ್ವೀಟ್‌ ಮಾಡಿರುವ ಆನಂದ್‌ ಮಹೀಂದ್ರಾ ‘’ಕರ್ಮ ಸಿದ್ಧಾಂತದ ಫಲ. ಸ್ವಾತಂತ್ರ್ಯಕ್ಕಾಗಿ ಕಷ್ಟಪಟ್ಟು ಹೋರಾಡಿದ ಮತ್ತು ತ್ಯಾಗ ಮಾಡಿದ ಪ್ರತಿಯೊಬ್ಬ ಭಾರತೀಯನ ಹೃದಯವನ್ನು ತುಂಬುವ ಸುದ್ದಿ. ಮತ್ತು ಭಾರತವು ಅವ್ಯವಸ್ಥೆಗೆ ಇಳಿಯುತ್ತದೆ ಎಂದು ಭಾವಿಸಿದವರಿಗೆ ಮೌನವಾದ ಆದರೆ ಬಲವಾದ ಪ್ರತ್ಯುತ್ತರ. ಮೌನ ಪ್ರತಿಬಿಂಬ, ಕೃತಜ್ಞತೆಯ ಸಮಯ" ಎಂದು ಸಾಮಾಜಿಕ ಮಾಧ್ಯಮದಲ್ಲಿ ಖ್ಯಾತ ಉದ್ಯಮಿ ಬರೆದುಕೊಂಡಿದ್ದಾರೆ.

Tap to resize

Latest Videos

ಹಿರಿಯ ದಂಪತಿಯ ಧ್ವಜಾರೋಹಣ ಫೋಟೋ ಶೇರ್‌ ಮಾಡಿದ ಆನಂದ್‌ ಮಹೀಂದ್ರಾ: ಸಾಮಾಜಿಕ ಜಾಲತಾಣದಲ್ಲಿ ವೈರಲ್

ಹಿಂದಿನ ಬ್ರಿಟೀಷ್ ವಸಾಹತು ಪ್ರದೇಶಗಳಲ್ಲೊಂದಾದ ಭಾರತವು 2021 ರ ಅಂತಿಮ ಮೂರು ತಿಂಗಳಲ್ಲಿ UK ಯನ್ನು ದಾಟಿ ಐದನೇ-ದೊಡ್ಡ ಆರ್ಥಿಕತೆಯಾಯಿತು. ಈ ಲೆಕ್ಕಾಚಾರವು US ಡಾಲರ್‌ಗಳನ್ನು ಆಧರಿಸಿದೆ ಮತ್ತು ಅಂತಾರಾಷ್ಟ್ರೀಯ ಹಣಕಾಸು ನಿಧಿಯ (International Monetary Fund) GDP ಅಂಕಿಅಂಶಗಳ ಪ್ರಕಾರ ಭಾರತವು ಮೊದಲ ತ್ರೈಮಾಸಿಕದಲ್ಲಿ ತನ್ನ ಮುನ್ನಡೆಯನ್ನು ಕಾಯ್ದುಕೊಂಡಿದೆ. ಅಂತಾರಾಷ್ಟ್ರೀಯ ಶ್ರೇಯಾಂಕದಲ್ಲಿ ಯುಕೆಯ ಕುಸಿತವು ನೂತನ ಪ್ರಧಾನ ಮಂತ್ರಿಯ ಒತ್ತಡವನ್ನು ಹೆಚ್ಚಿಸಲಿದೆ. ಕನ್ಸರ್ವೇಟಿವ್ ಪಕ್ಷದ (Conservative Party) ಸದಸ್ಯರು ಸೋಮವಾರ ಬೋರಿಸ್ ಜಾನ್ಸನ್ ಅವರ ಉತ್ತರಾಧಿಕಾರಿಯನ್ನು ಆಯ್ಕೆ ಮಾಡುತ್ತಾರೆ. ರಿಷಿ ಸುನಕ್ ಅವರನ್ನು ಸೋಲಿಸಿ, ವಿದೇಶಾಂಗ ಕಾರ್ಯದರ್ಶಿ ಲಿಜ್ ಟ್ರಸ್ ಅವರು ಮುಂದಿನ ಪ್ರಧಾನಿಯಾಗುವುದು ಬಹುತೇಕ ಖಚಿತವಾಗಿದೆ. ಭಾರತದ ಆರ್ಥಿಕತೆಯು ಈ ಹಣಕಾಸು ವರ್ಷದಲ್ಲಿ 7% ಕ್ಕಿಂತ ಹೆಚ್ಚು ಬೆಳೆಯುವ ಮುನ್ಸೂಚನೆ ಇದೆ. 

ಈ ತ್ರೈಮಾಸಿಕದಲ್ಲಿ ಭಾರತೀಯ ಷೇರುಗಳ ಮೌಲ್ಯ ಹೆಚ್ಚಾಗುತ್ತಿದ್ದು, MSCI ಉದಯೋನ್ಮುಖ ಮಾರುಕಟ್ಟೆಗಳ ಸೂಚ್ಯಂಕದಲ್ಲಿ ಎರಡನೇ ಸ್ಥಾನಕ್ಕೆ ಏರಿದೆ. ಚೀನಾ ಮಾತ್ರ ಈ ಮಾರುಕಟ್ಟೆಗಳ ಸೂಚ್ಯಂಕದಲ್ಲಿ ಮೊದಲನೇ ಸ್ಥಾನದಲ್ಲಿದೆ. ಭಾರತದ ಆರ್ಥಿಕತೆಯ ಗಾತ್ರ ಮಾರ್ಚ್‌ನಲ್ಲಿ ಮುಕ್ತಾಯವಾದ ತ್ರೈಮಾಸಿಕದಲ್ಲಿ 854.7 ಬಿಲಿಯನ್‌ ಡಾಲರ್‌ಗಳಷ್ಟಿದೆ. ಅದೇ ಬ್ರಿಟನ್‌ ಆರ್ಥಿಕತೆ ಗಾತ್ರ 816 ಬಿಲಿಯನ್‌ ಡಾಲರ್‌ಗಳಿಗೆ ಕುಸಿದಿದೆ. ಈ ಲೆಕ್ಕಾಚಾರವು ಅಮೆರಿಕ ಡಾಲರ್‌ಗಳನ್ನು ಆಧರಿಸಿದೆ ಮತ್ತು ಅಂತಾರಾಷ್ಟ್ರೀಯ ಹಣಕಾಸು ನಿಧಿಯ GDP ಅಂಕಿಅಂಶಗಳನ್ನು ಒಳಗೊಂಡಿದೆ. ಬ್ಲೂಮ್‌ಬರ್ಗ್ ಟರ್ಮಿನಲ್‌ನಲ್ಲಿ IMF ಡೇಟಾಬೇಸ್ ಮತ್ತು ಐತಿಹಾಸಿಕ ವಿನಿಮಯ ದರಗಳನ್ನು ಬಳಸಿಕೊಂಡು ಈ ಲೆಕ್ಕಾಚಾರಗಳನ್ನು ಮಾಡಲಾಗಿದೆ.

ಸ್ವದೇಶಿ ಎಲೆಕ್ಟ್ರಿಕ್ ಜೀಪ್ ನಿರ್ಮಿಸಿದ ಯುವಕ: ಸಂಪರ್ಕಿಸಲು ಆನಂದ್ ಮಹೀಂದ್ರಾ ಸೂಚನೆ

ಇದಕ್ಕೂ ಮೊದಲು, ಆನಂದ್ ಮಹೀಂದ್ರಾ ಅವರು ವಿಶ್ವದ ಅತ್ಯಂತ ಐಕಾನಿಕ್ ಕಂಪನಿಗಳಲ್ಲಿ ಭಾರತೀಯ ಮೂಲದ ಸಿಇಒಗಳ ನೇಮಕವನ್ನು ಶ್ಲಾಘಿಸಿದ್ದರು.  ಸ್ಟಾರ್‌ಬಕ್ಸ್ ಕಂಪನಿಯು ತನ್ನ ಹೊಸ ಭಾರತೀಯ ಮೂಲದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮಣ್ ನರಸಿಂಹನ್ ಅವರನ್ನು ನೇಮಕ ಮಾಡಿದೆ ಎಂದು ಕಾಫಿ ದೈತ್ಯ ಗುರುವಾರ ತಿಳಿಸಿದ ನಂತರ ಅವರ ಹೇಳಿಕೆಯು ಬಂದಿದೆ. ಅಂತಾರಾಷ್ಟ್ರೀಯ ಬೋರ್ಡ್‌ರೂಮ್‌ಗಳು ಭಾರತೀಯ ಮೂಲದ ಸಿಇಒಗಳು ಬಹುತೇಕ 'ಸುರಕ್ಷಿತ' ನಾಯಕತ್ವದ ಬೆಟ್‌ಗಳಾಗಿವೆ ಎಂದು ಆನಂದ್‌ ಮಹೀಂದ್ರಾ ಬರೆದುಕೊಂಡಿದ್ದರು. 

click me!