ಸ್ವಾತಂತ್ರ್ಯ ದಿನದಂದು ಕೆಂಪು ಕೋಟೆ ಮೇಲೆ ಖಲಿಸ್ತಾನಿ ಧ್ವಜ ಹಾರಿಸುವ ಬೆದರಿಕೆ!

By Suvarna NewsFirst Published Aug 13, 2020, 5:31 PM IST
Highlights

ಕೊರೋನಾತಂಕ ನಡುವೆ ಸ್ವಾತ<ತ್ರ್ಯ ದಿನಾಚರಣೆಗೆ ಸಿದ್ಧತೆ| ಸ್ವಾತಂತ್ರ್ಯ ದಿನದಂದು ಕೆಂಪು ಕೋಟೆ ಮೇಲೆ ಖಲಿಸ್ತಾನಿ ಧ್ವಜ ಹಾರಿಸುವ ಬೆದರಿಕೆ| ಧ್ವಜ ಹಾರಿಸಿದವರಿಗೆ ಬಹುಮಾನ ಘೋಷಿಸಿದ ಸಂಘಟನೆ

ನವದೆಹಲಿ(ಆ.13): ಆಗಸ್ಟ್‌ 15, ಸ್ವಾತಂತ್ರ್ಯ ದಿನಕ್ಕಾಗಿ ವಿಶೇಷ ತಯಾರಿ ನಡೆಯುತ್ತಿದೆ. ಹೀಗಿರುವಾಗ ಅಮೆರಿಕದಲ್ಲಿ ಸಿಕ್ಕಾಪಟ್ಟೆ ಸಕ್ರಿಯವಾಗಿರುವ ಖಲಿಸ್ತಾನಿ ಸಂಘಟನೆ 'ಸಿಖ್ ಫಾರ್ ಜಸ್ಟೀಸ್' ಮತ್ತೊಂದು ಬಾರಿ ಭಾರತದ ವಿರುದ್ಧ ಮತ್ತೊಂದು ಪಿತೂರಿ ರಚಿಸಿದೆ. ಮಾಧ್ಯಮಗಳ ವರದಿಯನ್ನು ಗಮನಿಸಿದರೆ ಈ ಸಂಘಟನೆ ಆಗಸ್ಟ್ 15ರಂದು ಕೆಂಪು ಕೋಟೆಯ ಮೇಲೆ ಖಲಿಸ್ತಾನಿ ಧ್ವಜ ಹಾರಿಸುವವರಿಗೆ ಒಂದು ಲಕ್ಷದ 25 ಸಾವಿರ ಡಾಲರ್ ಬಹುಮಾನ ನೀಡುವುದಾಗಿ ಘೋಷಿಸಿದೆ ಎಂದು ಹೇಳಿವೆ. ಈ ಮಃಆಇತಿ ಬಿರಂಗವಾದ ಬೆನ್ನಲ್ಲೇ ದೆಹಲಿ ಪೊಲೀಸ್ ಮತ್ತಷ್ಟು ಎಚ್ಚರಿಕೆ ವಹಿಸಿದೆ.

ಯಾವ ಜಿಲ್ಲೆಯಲ್ಲಿ ಯಾರು ಧ್ವಜಾರೋಹಣ ಮಾಡ್ಬೇಕು? ಸಚಿವರ ಪಟ್ಟಿ ಪ್ರಕಟಿಸಿದ ಸರ್ಕಾರ

 'ಸಿಖ್ ಫಾರ್ ಜಸ್ಟೀಸ್'ಸ್‌ನ ಮುಖ್ಯಸ್ಥನಿಂದ ಹೇಳಿಕೆ

 'ಸಿಖ್ ಫಾರ್ ಜಸ್ಟೀಸ್' ಮುಖ್ಯಸ್ಥ ಗುರ್ಪತ್‌ವಂತ್ ಸಿಂಗ್ ಪನ್ನೂ ಹೇಳಿಕೆಯೊಂದನ್ನು ಜಾರಿಗೊಳಿಸಿ ಆಗಸ್ಟ್ 15 ರಂದಿ ಸಿಖ್ಳರಿಗೆ ಸ್ವಾತಂರ್ತ್ಯ ದಿನವಲ್ಲ. ಈ ದಿನ 1947 ರಲ್ಲಿ ನಡೆದ ವಿಭಜನೆಯನ್ನು ನೆನಪಿಸುತ್ತದೆ. ನ್ಮ ಪಾಲಿಗೆ ಯಾವುದೂ ಬದಲಾಗಿಲ್ಲ. ಬದಲಾಗಿದ್ದಾರೆಂದರೆ ಕೇವಲ ಶಾಸಕರಷ್ಟೇ ನಾವು ಈಗಲೂ ಭಾರತೀಯ ಸಂವಿಧಾನದಲ್ಲಿ ಹಿಂದೂಗಳಾಗಿ ಉಳಿದಿದ್ದೇವೆ. ಪಂಜಾಬ್‌ನ ಸಂಪನ್ಮೂಲಗಳನ್ನು ಇತರ ರಾಜ್ಯಗಳಿಗೆ ಅನ್ಯಾಯವಾಗಿ ಬಳಸಲಾಗುತ್ತಿದೆ. ನಮಗೆ ನಿಜವಾದ ಸ್ವಾತಂತ್ರ್ಯದ ಅಗತ್ಯವಿದೆ ಎಂದಿದ್ದಾರೆ.

ಇದೇ ಮೊದಲ ಬಾರಿಗೆ ನ್ಯೂಯಾರ್ಕ್ ಟೈಮ್ಸ್ ಸ್ಕ್ವೇರ್‌ನಲ್ಲಿ ಹಾರಾಡಲಿದೆ ಭಾರತದ ಧ್ವಜ!

ಕಾನೂನಿನ ಜಾಲದಲ್ಲಿ ಸಿಕ್ಕಾಕೊಂಡ 'ಸಿಖ್ ಫಾರ್ ಜಸ್ಟೀಸ್'ಸ್‌ನ ಮುಖ್ಯಸ್ಥ

ಖಲಿಸ್ತಾನಿ ಉಗ್ರ ಗುರ್ಪತ್‌ವಂತ್ ಸಿಂಗ್ ಮೇಲೆ ಕಳೆದ ಎರಡು ತಿಂಗಳಿಂದ ಕಾನೂನಿನ ಕುಣಿಕೆ ಬಿಗಿಯಾಗಲಾರಂಭಿಸಿದೆ. ಸಿಂಗ್ ಹಾಗೂ ಅವರ ಬೆಂಬಲಿಗರ ವಿರುದ್ಧ 6 FIR ದಾಖಲಾಗಿವೆ. 
 

click me!