ದಕ್ಷಿಣ ಭಾರತದಲ್ಲಿ ನಾಗರಿಕತೆ ಕುರುಹು, ವಯಸ್ಕ ಅಸ್ತಿಪಂಜರ ಪತ್ತೆ!

By Suvarna NewsFirst Published Aug 13, 2020, 5:26 PM IST
Highlights

ತಮಿಳುನಾಡಿನ ಮಧುರೈ ಕೀಲಾಡಿಯಲ್ಲಿ ನಾಗರಿಕತೆಯ ಹುಡುಕಾಟ/ ಉತ್ಖನನದ ವೇಳೆ  ಪತ್ತೆಯಾದ ಅಸ್ತಿಪಂಜರ/ ಇದೇ ಮೊದಲ ಸಾರಿ ವಯಸ್ಕ ಅಸ್ತಿಒಂಜರ ಪತ್ತೆ

ಮಧುರೈ(ಆ. 13)  ಪ್ಯಾರಿಸ್ ನ ಹೃದಯಭಾಗದ ಕಟ್ಟಡವೊಂದರಲ್ಲಿ ಅಸ್ತಿಪಂಜರ ಪತ್ತೆಯಾಗಿದ್ದು ಸುದ್ದಿಯಾಗಿತ್ತು. ಇದೀಗ  ಕೊಂಥಗೈನ ಕೀಲಾಡಿ ಬಳಿ ಪುರಾತತ್ವಜ್ಞರೊಬ್ಬರರಿಗೆ  ಆರು ಅಡಿ ಉದ್ದದ ಮಾನವನ ಅಸ್ತಿಪಂಜರ ದೊರೆತಿದೆ.

ಕೀಲಾಡಿ ನಾಗರೀಕತೆಯ ಸ್ಮಶಾನ ಇದು ಆಗಿರಬಹುದು ಎಂಬ ಅಭಿಪ್ರಾಯಕ್ಕೂ ಬರಲಾಗಿದೆ.  ಈ ವರ್ಷದ  ಮಾರ್ಚ್ ನಿಂದ ಉತ್ಖನನ ನಡೆಯುತ್ತಿದೆ.  ಆರನೇ ಹಂತದ ಉತ್ಖನನದ ವೇಳೆ ಅಸ್ತಿಪಂಜರ ಪತ್ತೆಯಾಗಿದೆ.

ಪ್ಯಾರಿಸ್ ನಲ್ಲಿ ಪತ್ತೆಯಾಗಿದ್ದ ಅಸ್ತಿಪಂಜರ ತೆರೆದಿಟ್ಟ ಕತೆ

ತಮಿಳುನಾಡಿನ ಪುರಾತತ್ವ ಇಲಾಖೆ ಡೆಪ್ಯೂಟಿ ಡೈರೆಕ್ಟರ್  ಈ ಬಗ್ಗೆ ಹೇಳಿಕೆ ನೀಡಿದ್ದು ಇದು ಪತ್ತೆಯಾದ ಮೊದಲ ವಯಸ್ಕ ಅಸ್ತಿಪಂಜರ ಎಂದು ತಿಳಿಸಿದ್ದಾರೆ.

ಅಸ್ತಿಪಂಜರದ ಲಿಂಗ ಯಾವುದು ಎಂಬುದು ಗೊತ್ತಾಗಿಲ್ಲ. ಸ್ಯಾಂಪಲ್ ಸಂಗ್ರಹ ಮಾಡಿ ಹೆಚ್ಚಿನ ವಿವರಕ್ಕೆ ಮಧುರೈ ಕಾಮ್ ರಾಜ್ ಯುನಿವರ್ಸಟಿಗೆ  ಕಳುಹಿಸಿಕೊಡಲಾಗಿದೆ ಎಂದು ತಿಳಿಸಿದ್ದಾರೆ.

ತಮಿಳುನಾಡಿನ ಶಿವಗಂಗಾ ಜಿಲ್ಲೆಯ ಪಳ್ಳಿಸಂತೈ ತಿಡಾಲ್‌ನಲ್ಲಿ ಭೂಮಿ ಅಗೆದಂತೆ ಒಂದರ ಕೆಳಗೊಂದು ಕಟ್ಟಡ ಪತ್ತೆಯಾಗುತ್ತಿದ್ದು, ಪುರಾತನ ನಾಗರಿಕತೆಯ ದೊಡ್ಡ ನಗರ ಕೇಂದ್ರದ ಕುರುಹು ಲಭ್ಯವಾಗಿತ್ತು.

ಪುರಾತತ್ವ ಇಲಾಖೆಯ ಬೆಂಗಳೂರು ವಿಭಾಗ ಕೀಲಾಡಿ ಗ್ರಾಮದಲ್ಲಿ ಉತ್ಖನನ ಆರಂಭಿಸಿದ್ದು, ಹರಪ್ಪ-ಮೆಹಂಜೋದಾರೋದಂಥ ನಾಗರಿಕತೆ ಇಲ್ಲಿದ್ದ ಬಗ್ಗೆ ಸಾಕ್ಷ್ಯಗಳು ಪತ್ತೆಯಾಗಿದ್ದವು. ಸುಸಜ್ಜಿತ ಕಟ್ಟಡಗಳ ನಗರ ಕೇಂದ್ರ ಹಲವು ಸೌಕರ್ಯಗಳನ್ನು ಹೊಂದಿದ್ದವು ಎನ್ನಲು ಸಾಕಷ್ಟು ಪುರಾವೆಗಳು ಲಭ್ಯವಾಗಿದ್ದವು. ಇದಾದ ಮೇಲೆ ಇದೀಗ ವಯಸ್ಕ ವ್ಯಕ್ತಿಯ ಅಸ್ತಿಪಂಜರ ಪತ್ತೆಯಾಗಿದೆ .

 

click me!