ಮದರಸಾದಲ್ಲಿ ಲೈಂಗಿಕ ದೌರ್ಜನ್ಯ, ಬಾಲಕನ ಹ*ತ್ಯೆ; ಐವರು ಅಪ್ರಾಪ್ತರ ಬಂಧನ

Published : Sep 07, 2025, 10:40 AM IST
madrasa

ಸಾರಾಂಶ

ಮದರಸಾದಲ್ಲಿ ಬಾಲಕನೊಬ್ಬನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಅಪ್ರಾಪ್ತ ಬಾಲಕರನ್ನು ಪೊಲೀಸರು ಬಂಧಿಸಿದ್ದಾರೆ. 

ಭುವನೇಶ್ವರ: ಬಾಲಕನೋರ್ವನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಕೊ*ಲೆ ಮಾಡಿರುವ ಘಟನೆ ಒಡಿಶಾದ ನಯಾಗಢ (Nayagadh, Odisha) ಜಿಲ್ಲೆಯ ಮದರಾಸದಲ್ಲಿ (Madarasa) ನಡೆದಿದೆ. ಹ*ತ್ಯೆಯಾದ ಬಾಲಕನ ಮೇಲೆ ಆತನ ಸೀನಿಯರ್ಸ್ (Seniors) ಹಲವು ದಿನಗಳಿಂದ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದರು ಎಂದು ವರದಿಯಾಗಿದೆ. ಈ ಪ್ರಕರಣ ಸಂಬಂಧ ಐವರು ಅಪ್ರಾಪ್ತರನ್ನು ಬಂಧಿಸಲಾಗಿದೆ. ಹಿರಿಯ ವಿದ್ಯಾರ್ಥಿಗಳು ದೀರ್ಘಕಾಲದ ಲೈಂಗಿಕ ದೌರ್ಜನ್ಯಕ್ಕೆ ಒಳಪಡಿಸಿದ ನಂತರ ಕೊ*ಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಹ*ತ್ಯೆಯಾದ ಬಾಲಕ ಕಟಕ್ ಜಿಲ್ಲೆಯ ಮೂಲದವನಾಗಿದ್ದು, ನೀಲಪಲ್ಲಿಯಲ್ಲಿರುವ ಮದರಸಾದಲ್ಲಿ ಓದುತ್ತಿದ್ದನು. ಬಾಲಕನ ತಂದೆಯ ದೂರಿನ ಪ್ರಕಾರ, ಮದರಸಾ ಆವರಣದಲ್ಲಿರುವ ಪಾಳುಬಿದ್ದ ಸ್ನಾನಗೃಹದೊಳಗೆ ಕೊಂದು, ಶವವನ್ನು ಬಳಕೆ ಮಾಡದ ಸೇಫ್ಟಿ ಟ್ಯಾಂಕ್‌ನಲ್ಲಿ ಎಸೆಯಲಾಗಿತ್ತು.

ಸೀನಿಯರ್‌ಗಳಿಂದ ಹಲ್ಲೆ, ದೌರ್ಜನ್ಯ

ಆಗಸ್ಟ್ 31ರ ಮಧ್ಯಾಹ್ನ ಸುಮಾರು 1 ಗಂಟೆ ವೇಳೆ ಬಾಲಕನ ಆತನ ಇಬ್ಬರು ಸೀನಿಯರ್ ನಿರಂತರವಾಗಿ ಹಲ್ಲೆ ನಡೆಸಿದ್ದಾರೆ. ಹಲ್ಲೆ ಬಳಿಕ ಬಾಲಕ ಪ್ರಜ್ಞೆ ಕಳೆದುಕೊಂಡಿದ್ದಾನೆ. ಆತ ಸತ್ತಿದ್ದಾನೆಂದು ತಿಳಿದು ಬಾಲಕನನ್ನು ಖಾಲಿ ಸೇಫ್ಟಿ ಟ್ಯಾಂಕ್‌ಗೆ ತಳ್ಳಿದ್ದಾರೆ. ಆದ್ರೆ ಆ ರಾತ್ರಿ ಬಾಲಕ ಸೇಫ್ಟಿ ಟ್ಯಾಂಕ್‌ನಿಂದ ಹೊರಬರುವಲ್ಲಿ ಯಶಸ್ವಿಯಾಗಿದ್ದಾನೆ. ಸೆಪ್ಟೆಂಬರ್ 2ರಂದು ಇಬ್ಬರು ಸೀನಿಯರ್‌ಗಳು ಬಾಲಕನನ್ನು ಪುಸಲಾಯಿಸಿ ಮತ್ತೆ ಆ ಸ್ಥಳಕ್ಕೆ ಕರೆದುಕೊಂಡಿದ್ದಾರೆ.

ಈ ವೇಳೆ ಅಲ್ಲಿದ್ದ ಮೂವರು ಜೊತೆ ಸೇರಿ ಬಾಲಕನ ಮೇಲೆ ಮತ್ತೆ ಹಲ್ಲೆ ನಡೆಸಿದ್ದಾರೆ. ಕತ್ತು ಹಿಸುಕಿ ಕೊಂದು ಶವವನ್ನು ಬಳಸದ ಸೇಫ್ಟಿ ಟ್ಯಾಂಕ್‌ಗೆ ಹಾಕಿ ಸ್ಥಳದಿಂದ ಐವರು ಪರಾರಿಯಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಫೋರೆನ್ಸಿಕ್ ತಂಡದ ಅಧಿಕಾರಿಗಳು ಘಟನಾ ಸ್ಥಳದಲ್ಲಿನ ಸ್ಯಾಂಪಲ್ ಕಲೆಕ್ಟ್ ಮಾಡಿದ್ದು, ಪ್ರತ್ಯಕ್ಷದರ್ಶಿಗಳ ಹೇಳಿಕೆಗಳು ಬಾಲಕರ ಕೃತ್ಯವನ್ನು ದೃಢಪಡಿಸಿವೆ.

12 ರಿಂದ 15 ವಯಸ್ಸಿನ ಐವರು ಬಾಲಕರು

ಎಲ್ಲಾ ಐವರು ಅಪ್ರಾಪ್ತ ಆರೋಪಿಗಳು 12 ರಿಂದ 15 ವರ್ಷದೊಳಗಿನವರಾಗಿದ್ದಾರೆ. ಐವರ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ತಡೆಗಟ್ಟುವಿಕೆ (POCSO) ಕಾಯ್ದೆ, 2012 ಮತ್ತು ಭಾರತೀಯ ನ್ಯಾಯ ಸಂಹಿತಾ, 2023 ರ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಬಾಲಕರು ಸಹ ತಮ್ಮ ಅಪರಾಧವನ್ನು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಆಂಟಿ ತುಂಬಾ ತುಂಟಿ: ಮದುವೆಯಾಗಿ ಮೂರು ಮಕ್ಕಳಿದ್ರೂ ಅಕ್ರಮ ಸಂಬಂಧ, ಪ್ರಿಯಕರನ ಜತೆ ಎಸ್ಕೇಪ್!

ಮದರಸಾವು ಐವರು ಬಾಲಕರ ಹೆಸರುಗಳನ್ನು ತನ್ನ ಪಟ್ಟಿಯಿಂದ ತೆಗೆದುಹಾಕಿದೆ ಪೊಲೀಸರು ಮದರಸಾದಿಂದ ಬಾಲಕರಿಗೆ ಸಂಬಂಧಿಸಿದ ಜನನ ಪ್ರಮಾಣಪತ್ರಗಳನ್ನು ವಶಪಡಿಸಿಕೊಂಡಿದೆ. ಮುಂದಿನ ವಿಚಾರಣೆಗಾಗಿ ಪ್ರಕರಣವನ್ನು ಬಾಲ ನ್ಯಾಯ ಮಂಡಳಿಗೆ ವರ್ಗಾಯಿಸಲಾಗಿದೆ.

ಅಪ್ರಾಪ್ತ ಮಗಳನ್ನೇ ರೇ* ಮಾಡಿ ಗರ್ಭಿಣಿಯಾಗಿಸಿದ!

ಬೆಟ್ಟದಪುರ (ಮೈಸೂರು): ತಂದೆಯೇ ಅಪ್ರಾಪ್ತೆ ಮಗಳ ಮೇಲೆ ಅತ್ಯಾ*ರವೆಸಗಿರುವ ಘಟನೆ ಮೈಸೂರಿನ ಬೆಟ್ಟದಪುರ ಬಳಿಯ ಗ್ರಾಮವೊಂದರಲ್ಲಿ ನಡೆದಿದೆ. 8 ತಿಂಗಳ ಗರ್ಭಿಣಿಯಾಗಿರುವ ಬಾಲಕಿ ಆಸ್ಪತ್ರೆಗೆ ದಾಖಲಾದಾಗ ವೈದ್ಯರು ಪೊಲೀಸರಿಗೆ ಮಾಹಿತಿ ನೀಡಿದರು. ಈ ಬಗ್ಗೆ ಬಾಲಕಿಯನ್ನು ವಿಚಾರಿಸಿದಾಗ ತಂದೆಯೇ ಒಂದು ವರ್ಷದಿಂದ ನಿರಂತರವಾಗಿ ಲೈಂಗಿಕವಾಗಿ ಬಳಸಿಕೊಂಡಿರುವುದಾಗಿ ಹೇಳಿಕೆ ನೀಡಿದ್ದಾಳೆ. ಆರೋಪಿ ತಂದೆಯನ್ನು ಪೋಕ್ಸೋ ಕಾಯ್ದೆಯಡಿ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಬೆಟ್ಟದಪುರ ಠಾಣೆ ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಹೆಂಡ್ತಿ ಬಿಟ್ಟೋದಳೆಂದು ಅತ್ತೆಯನ್ನೇ ಹಿಂಬಾಲಿಸಿದ ಅಳಿಮಯ್ಯ, ಮಾಡಿದ್ದು ಮಾತ್ರ ಮುಠ್ಠಾಳ ಕೆಲಸ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಭಾರತದ 2 ಬಿಲಿಯನ್ ಡಾಲರ್ ಪರಮಾಣು ಜಲಾಂತರ್ಗಾಮಿ ಒಪ್ಪಂದ ಅಂತಿಮಗೊಳಿಸಿದ ಪುಟಿನ್ ಭೇಟಿ
ಸೆಂಟ್ರಲ್ ಮೆಟ್ರೋ ಮತ್ತು ಹೈಕೋರ್ಟ್ ನಿಲ್ದಾಣಗಳ ನಡುವೆ ನೀಲಿ ಮಾರ್ಗದ ಸುರಂಗದಲ್ಲಿ ಹಠಾತ್ ನಿಂತ ಮೆಟ್ರೋ ರೈಲು