
ನವದೆಹಲಿ: ಕೆಲವೊಮ್ಮೆ ಜನರು ತಾವು ಎಲ್ಲಿದ್ದೇವೆ ಮತ್ತು ಏನು ಮಾಡ್ತಿದ್ದೇವೆ ಎಂಬುದನ್ನೇ ಮರೆತಿರುತ್ತಾರೆ. ಸಾರ್ವಜನಿಕ ಸ್ಥಳ ಅನ್ನೋದನ್ನು ಮರೆತು ಅಸಭ್ಯವಾಗಿ ವರ್ತನೆ ಮಾಡುತ್ತಾರೆ. ಇಂತಹ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಯೂ ವೈರಲ್ ಆಗುತ್ತಿರುತ್ತವೆ. ಜೋಡಿಯೊಂದು ಭಾರತೀಯ ರೈಲ್ವೆಯನ್ನೇ ತಮ್ಮ ಒಯೋ ರೂಮ್ ಮಾಡಿಕೊಂಡಿದ್ದರು. ಸುತ್ತಲೂ ಜನರಿದ್ದರೂ ಯಾವುದಕ್ಕೂ ಕೇರ್ ಮಾಡದ ಜೋಡಿ ಅಪ್ಪಿಕೊಂಡು ಮುದ್ದಾಡಿದ್ದಾರೆ. ಈ ವಿಡಿಯೋಗೆ ನೆಟ್ಟಿಗರು ತರೇಹವಾರಿಯಾಗಿ ಕಮೆಂಟ್ ಮಾಡಿದ್ದಾರೆ.
ವೈರಲ್ ವಿಡಿಯೋದಲ್ಲಿ ಯುವಕ ಮತ್ತು ಯುವತಿ ಇಂಟಿಮೇಟ್ ಆಗುತ್ತಿರೋದು ಸ್ಪಷ್ಟವಾಗಿ ಕಾಣಿಸುತ್ತಿದೆ. ಸೈಡ್ ಲೋವರ್ ಬರ್ತ್ ಸೀಟ್‌ನಲ್ಲಿ ಯುವತಿ ಮೇಲೆ ಮಲಗಿರೋ ಯುವಕ, ರೈಲನ್ನು ತಮ್ಮ ಬೆಡ್ ರೂಮ್ ಮಾಡಿಕೊಂಡಿದ್ದಾನೆ. ಬೆಡ್‌ರೂಮ್ ಸುತ್ತ ನಾಲ್ಕು ಗೋಡೆ ಇರುತ್ತದೆ. ಆದ್ರೆ ಇಲ್ಲಿ ಎಲ್ಲವೂ ಖುಲ್ಲಂ ಖುಲ್ಲಾ ಆಗಿದೆ. ಹಾಡಹಗಲೇ ಜೋಡಿ ಮೈಮರೆತಿರೋದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಅಪರ್ ಬರ್ತ್ ಸೀಟ್‌ನಲ್ಲಿರುವ ಪ್ರಯಾಣಿಕರು, ಜೋಡಿಯ ಅಸಭ್ಯ ವರ್ತನೆಯನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದು, ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿಕೊಂಡಿದ್ದು, ಇದೀಗ ವೈರಲ್ ಆಗುತ್ತಿದೆ.
ದಿವ್ಯಾ ಕುಮಾರಿ (@divyakumaari) ಹೆಸರಿನ ಎಕ್ಸ್ ಖಾತೆಯಲ್ಲಿ ಜೋಡಿಯ ರೊಮ್ಯಾನ್ಸ್ ವಿಡಿಯೋವನ್ನು ಪೋಸ್ಟ್ ಮಾಡಿಕೊಳ್ಳಲಾಗಿದೆ. ಸೆಪ್ಟೆಂಬರ್ 6ರ ಸಂಜೆ 6.33ಕ್ಕೆ ವಿಡಿಯೋ ಅಪ್ಲೋಡ್ ಮಾಡಲಾಗಿದ್ದು, ಈವರೆಗೂ 5 ಲಕ್ಷಕ್ಕೂ ಅಧಿಕ ವ್ಯೂವ್, ನೂರಾರು ಕಮೆಂಟ್‌ಗಳು ಬಂದಿವೆ. ಈ ವಿಡಿಯೋಗೆ ಕಮೆಂಟ್ ಮಾಡಿರುವ ನೆಟ್ಟಿಗರು, ಮನೆಯಲ್ಲಿ ಇವರಿಗೆ ಟೈಮ್ ಇಲ್ಲವೇ ಅಥವಾ ಇವರನ್ನು ಸೇರಲು ಬಿಟ್ಟಿಲ್ಲವೇ ಎಂದು ಪ್ರಶ್ನೆ ಮಾಡಿದ್ದಾರೆ. ಮತ್ತೊಬ್ಬರು ಇದೆಲ್ಲಾ ಪಾಶ್ಚತ್ಯಾ ಸಂಸ್ಕೃತಿಯ ಪ್ರಭಾವ ಎಂದು ಕಮೆಂಟ್ ಮಾಡಿದ್ದಾರೆ.
ಸೈಡ್ ಲೋವರ್ ಬರ್ತ್ ಸೀಟ್‌ನಲ್ಲಿ ಯುವತಿ ಮೇಲೆ ಯುವಕ ಮಲಗಿದ್ದಾನೆ. ಯುವಕ ಆಕೆಗೆ ಕಿಸ್ ಮಾಡುತ್ತಾನೆ. ನಂತರ ಆಕೆಯನ್ನು ತಬ್ಬಿಕೊಂಡು ಮುದ್ದಿಸಲು ಆರಂಭಿಸುತ್ತಾನೆ. ಇದೇ ವೇಳೆ ಜೋಡಿ ಪಕ್ಕದಲ್ಲಿಯೇ ಯುವಕನೊಬ್ಬ ಹೋಗುತ್ತಿರೋದನ್ನು ವಿಡಿಯೋದಲ್ಲಿ ಗಮನಿಸಬಹುದಾಗಿದೆ. ಈ ಜೋಡಿ ಅಸಭ್ಯವಾಗಿ ನಡೆದುಕೊಂಡರೂ ಯಾವ ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಎಷ್ಟು ಬಾರಿ OYOಗೆ ಬಂದಿದ್ದೀನಿ, ಈಗ್ಯಾಕೆ ಶಾಕ್! ಮಧ್ಯರಾತ್ರಿ ಪ್ರೇಮಿಯನ್ನ ದಿಗ್ಭ್ರಮೆಗೊಳಿಸಿದ ಯುವತಿ
ಫೇಸ್‌ಬುಕ್, ಇನ್‌ಸ್ಟಾಗ್ರಾಂ, ಎಕ್ಸ್ ಸೇರಿದಂತೆ ಎಲ್ಲಾ ಸಾಮಾಜಿಕ ಜಾಲತಾಣದ ಪ್ಲಾಟ್‌ಫಾರಂಗಳಲ್ಲಿ ಜೋಡಿಯ ಖುಲ್ಲಂ ಖುಲ್ಲಾ ಬಿಂದಾಸ್ ರೊಮ್ಯಾಣನ್ಸ್ ವಿಡಿಯೋ ವೈರಲ್ ಆಗುತ್ತಿದೆ. ಆದ್ರೆ ಈ ವಿಡಿಯೋ ಎಲ್ಲಿಯದ್ದು ಎಂಬುದರ ಮಾಹಿತಿ ಲಭ್ಯವಾಗಿಲ್ಲ. ಯಾವ ರೈಲಿನಲ್ಲಿ ಜೋಡಿ ಈ ರೀತಿ ಅಸಭ್ಯವಾಗಿ ನಡೆದುಕೊಂಡಿದ್ದಾರೆ ಎಂಬುದರ ಬಗ್ಗೆಯೂ ಸ್ಪಷ್ಟತೆ ಇಲ್ಲ.
ಇದನ್ನೂ ಓದಿ: ಶಾಲೆಯಲ್ಲಿ ಆರಂಭವಾದ ಪ್ರೀತಿ, OYO ರೂಮ್‌ನಲ್ಲಿ ಅಂತ್ಯ; 24ರ ಶಿಕ್ಷಕ, 14ರ ಹುಡುಗಿಗೂ ಲವ್!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ