22 ಯೋಧರು ಹುತಾತ್ಮ, 30 ಮಂದಿ ನಾಪತ್ತೆ; ಚತ್ತೀಸ್‌ಘಡದಲ್ಲಿ ಅತೀ ಭೀಕರ ನಕ್ಸಲ್ ದಾಳಿ!

By Suvarna NewsFirst Published Apr 4, 2021, 3:47 PM IST
Highlights

ಈ ವರ್ಷ ನಡೆದ ಅತೀ ಭೀಕರ ದಾಳಿ ಇದಾಗಿದೆ. 22 ಯೋಧರು ಹುತಾತ್ಮರಾಗಿದ್ದರೆ, 30 ಮಂದಿ ಯೋಧರು ನಾಪತ್ತೆಯಾಗಿದ್ದಾರೆ. ಚತ್ತೀಸಘಟದಲ್ಲಿ ಈ ನಕ್ಸಲ ದಾಳಿ ನಡೆದ ಬೆನ್ನಲ್ಲೇ ಅಮಿತ್ ಶಾ, ಸಭೆ ನಡೆಸಿದ್ದಾರೆ. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.

ಸುಕ್ಮಾ(ಎ.04): ಚತ್ತೀಸಘಡದ ಸುಕ್ಮಾ-ಬಿಜಾಪುರ ಅರಣ್ಯ ಪ್ರದೇಶದಲ್ಲಿ ನಡೆದ ಅತೀ ಭೀಕರ ನಕ್ಸಲ್ ದಾಳಿಗೆ 22 ಯೋಧರು ಹುತಾತ್ಮರಾಗಿದ್ದಾರೆ. ಇನ್ನು 30 ಮಂದಿ ಯೋಧರು ನಾಪತ್ತೆಯಾಗಿದ್ದಾರೆ. ನಕ್ಸಲರು ಏಕಾಏಕಿ ನಡೆಸಿದ ಗುಂಡಿನ ದಾಳಿ ವೇಳೆ 22 ಯೋಧರು ವೀರಮರಣವನ್ನಪ್ಪಿದ್ದಾರೆ.

"

ಮಾವೋಯಿಸ್ಟ್ ಜೊತೆ ಎನ್‌ಕೌಂಟರ್: 5 ಯೋಧರು ಸಾವು, 18 ಜನ ಭದ್ರತಾ ಸಿಬ್ಬಂದಿ ನಾಪತ್ತೆ

ಮಾವೋವಾದಿ ಪ್ರಾಬಲ್ಯವಿರುವ ಬಸ್ತಾರ ಪ್ರದೇಶದ ಸುಕ್ಮಾ-ಬಿಜಾಪುರ್ ಅರಣ್ಯ ಪ್ರದೇಶದಲ್ಲಿ ನಕ್ಸಲ್ ಭಾರಿ ಸಂಚು ರೂಪಿಸುತ್ತಿರುವ ಮಾಹಿತಿಯನ್ನು ಭದ್ರತಾ ಪಡೆ ಕಲೆಹಾಕಿದೆ. ನಕ್ಸಲ್ ನಿಗ್ರಹ ಪಡೆ ಹಾಗೂ CRPF ಯೋಧರು ಜಂಟಿ ಕಾರ್ಯಚರಣೆ ನಡೆಸಿದ್ದರು. ಶನಿವಾರ ಆರಂಭಗೊಂಡ ಕಾರ್ಯಚರಣೆಯಲ್ಲಿ ಭದ್ರತಾ ಪಡೆ ನಕ್ಸಲರ ಅಡುಗುತಾಣದ ಮೇಲೆ ನುಗ್ಗಿದೆ.

ಕೇರಳದಲ್ಲಿ ನಕ್ಸಲ್‌ ಚಟುವಟಿಕೆ: ಕೊಡಗಿನಲ್ಲಿ ಹೈಅಲರ್ಟ್‌

ಈ ವೇಳೆ ಗುಂಡು ಹಾಗೂ ಬಾಂಬ್ ದಾಳಿ ನಡೆಸಿದ ನಕ್ಸಲರಿಗೆ ಭದ್ರತಾ ಪಡೆ ತಿರುಗೇಟು ನೀಡಿದೆ.  ಐವರು ಯೋಧರು ಸ್ಥಳದಲ್ಲಿ ಹುತಾತ್ಮರಾಗಿದ್ದರು. ತೀವ್ರವಾಗಿ ಗಾಯಗೊಂಡ ಯೋಧರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸದ್ಯದ ಮಾಹಿತಿ ಪ್ರಕಾರ 22 ಯೋಧರು ಹುತಾತ್ಮರಾಗಿದ್ದಾರೆ. 22 ಯೋಧರು ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಘಟನೆ ಬೆನ್ನಲ್ಲೇ ಕೇಂದ್ರ ಗೃಹ ಸಚಿವ ಅಮಿತ್ ಸಾ, ಚತ್ತೀಸಘಟ ಮುಖ್ಯಮಂತ್ರಿ ಭೂಪೇಶ್ ಬಾಘೆಲ ಜೊತೆ ಮಾತುಕತೆ ನಡೆಸಿದ್ದಾರೆ. ಘಟನಾ ಸ್ಥಳಕ್ಕೆ CRPF ಡಿಜಿ ಕುಲ್ದೀಪ್ ಸಿಂಗ್‌ಗೆ ಭೇಟಿ ಮಾಡಲು ಅಮಿತ್ ಶಾ ಸೂಚಿಸಿದ್ದಾರೆ. ಇದರಂತೆ ಕುಲ್ದೀಪ್ ಸಿಂಗ್ ಸ್ಥಳಕ್ಕೆ ಧಾವಿಸಿದ್ದು, ಪರಿಶೀಲನೆ ನಡೆಸಿದ್ದಾರೆ.

click me!