ಒಂದೇ ದಿನ 93 ಸಾವಿರ ಕೇಸ್..! ಕೊರೋನಾ ಸಂಬಂಧ ಮೋದಿ ಮಹತ್ವದ ಸಭೆ

By Suvarna News  |  First Published Apr 4, 2021, 12:21 PM IST

ಭಾರತದಲ್ಲಿ ಕೊರೋನಾ ಎರಡನೇ ಅಲೆ ವೇಗ ಹೆಚ್ಚಳ | ಬರೀ 24 ಗಂಟೆಯಲ್ಲಿ 93ಕ್ಕೂ ಹೆಚ್ಚು ಕೇಸ್ | ಅಪಾಯದ ಮುನ್ಸೂಚನೆ | ಮೋದಿ ಮಹತ್ವದ ಸಭೆ


ದೆಹಲಿ(ಎ.04): ಕೊರೋನವೈರಸ್ (ಕೋವಿಡ್ -19) ಸಂಬಂಧಿತ ಸಮಸ್ಯೆಗಳು ಮತ್ತು ವ್ಯಾಕ್ಸಿನೇಷನ್ ಪ್ರಕ್ರಿಯೆಯನ್ನು ಪರಿಶೀಲಿಸಲು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹಿರಿಯ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ.

ಸಭೆಯಲ್ಲಿ ಭಾಗವಹಿಸುವ ಹಿರಿಯ ಅಧಿಕಾರಿಗಳಲ್ಲಿ ಕ್ಯಾಬಿನೆಟ್ ಕಾರ್ಯದರ್ಶಿ ರಾಜೀವ್ ಗೌಬಾ ಸೇರಿದ್ದಾರೆ. ಪ್ರಧಾನ ಮಂತ್ರಿ ಪ್ರಧಾನ ಕಾರ್ಯದರ್ಶಿ ಪ್ರಮೋದ್ ಕುಮಾರ್ ಮಿಶ್ರಾ; ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಮತ್ತು ಎನ್ಐಟಿಐ ಆಯೋಗ್ ಸದಸ್ಯ ಡಾ.ವಿನೋದ್ ಪಾಲ್ ಭಾಗವಹಿಸಿದ್ದರು.

Latest Videos

undefined

ಕೊರೋನಾ ಅಟ್ಟಹಾಸ: '20 ವರ್ಷ ಮೇಲ್ಪಟ್ಟ ರೋಗಿಗಳಿಗೆಲ್ಲ ಲಸಿಕೆ ನೀಡಿ'

ಭಾರತದಲ್ಲಿ ಕಳೆದ 24 ಗಂಟೆಯಲ್ಲಿ 93,249 ಹೊಸ ಕೋವಿಡ್ -19 ಪ್ರಕರಣಗಳು ವರದಿಯಾಗಿದೆ. ಇದು ಕಳೆದ ವರ್ಷ ಸೆಪ್ಟೆಂಬರ್ 19 ರ ನಂತರ ಏಕದಿನ ಸಂಖ್ಯೆಯಲ್ಲಿ ಕಂಡುಬಂದ ಅತಿದೊಡ್ಡ ಏರಿಕೆಯಾಗಿದೆ.

ದೇಶದ ಒಟ್ಟು ಪ್ರಕರಣಗಳ ಮೊತ್ತ ಈಗ 12.48 ಮಿಲಿಯನ್ ಗಡಿ ದಾಟಿದೆ. ಸಚಿವಾಲಯದ ಡ್ಯಾಶ್‌ಬೋರ್ಡ್‌ಗಳಲ್ಲಿ ಬೆಳಗ್ಗೆ 8 ಗಂಟೆಗೆ 12,485,509 ಪ್ರಕರಣಗಳನ್ನು ದಾಖಲಿಸಿವೆ. 513 ಹೊಸ ಕೋವಿಡ್ -19 ಕೇಸು ದಾಖಲಾಗಿದ್ದು ಸಾವಿನ ಸಂಖ್ಯೆ 164,623 ಕ್ಕೆ ಏರಿದೆ. ಆರೋಗ್ಯ ಸಚಿವಾಲಯದ ಪ್ರಕಾರ, ಕೋವಿಡ್ -19 ವಿರುದ್ಧ ದೇಶಾದ್ಯಂತ ಒಟ್ಟು 7,59,79,651 ಜನರಿಗೆ ಲಸಿಕೆ ನೀಡಲಾಗಿದೆ.

"

ಜಾನ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಜಾಗತಿಕ ಕೋವಿಡ್ -19 ಟ್ರ್ಯಾಕರ್ ಪ್ರಕಾರ, ಭಾರತವು ಕೊರೋನಾದಿಂದ ಬಳಲುತ್ತಿರುವ ಮೂರನೇ ರಾಷ್ಟ್ರವಾಗಿದೆ. ಭಾರತದಲ್ಲಿ ವರದಿಯಾಗುತ್ತಿರುವ ಹೊಸ ಪ್ರಕರಣಗಳ ಸಂಖ್ಯೆ ಇತರ ದೇಶಗಳಿಗಿಂತ ಹೆಚ್ಚಾಗಿದ್ದು ಇದು ಅಮೆರಿಕದ ಹೊಸ ಸೋಂಕುಗಳ ಸಂಖ್ಯೆಗಿಂತ ಹೆಚ್ಚಾಗಿದೆ. ಎರಡನೇ ಅಲೆಯ ಮಧ್ಯೆ ವಿಶ್ವದಲ್ಲಿ ಅತ್ಯಂತ ಕೆಟ್ಟದಾಗಿ ಕೊರೋನಾದಿಂದ ತತ್ತರಿಸಿದ ಬ್ರೆಜಿಲ್ ಅನ್ನು ಹಿಂದಿಕ್ಕಿ ಹೋಗುವಂತಿದೆ ಭಾರತದ ಕೊರೋನಾ ಪ್ರಕರಣಗಳ ಸಂಖ್ಯೆ.

ಮಹಾರಾಷ್ಟ್ರ, ಕರ್ನಾಟಕ, ಛತ್ತೀಸ್‌ಗಡ, ದೆಹಲಿ, ತಮಿಳುನಾಡು, ಉತ್ತರ ಪ್ರದೇಶ, ಪಂಜಾಬ್ ಮತ್ತು ಮಧ್ಯಪ್ರದೇಶ ಸೇರಿದಂತೆ ಎಂಟು ರಾಜ್ಯಗಳಲ್ಲಿ ಕೋವಿಡ್ -19 ರ ದಿನಿತ್ಯದ ಪ್ರಕರಣಗಳಲ್ಲಿ ತೀವ್ರ ಏರಿಕೆ ಕಂಡಿದೆ ಎಂದು ಆರೋಗ್ಯ ಸಚಿವಾಲಯ ಶನಿವಾರ ತಿಳಿಸಿತ್ತು.

click me!