ಭಾರತದಲ್ಲೇ ಉತ್ಪಾದನೆಯಾಗುತ್ತಾ Sputnik V? DCGI ಬಳಿ ಅನುಮತಿ ಕೇಳಿದ ಸೀರಂ

By Suvarna NewsFirst Published Jun 3, 2021, 2:31 PM IST
Highlights

* ಸ್ಪುಟ್ನಿಕ್ ವಿ ಉತ್ಪಾದನೆಗೆ ಅವಕಾಶ ನೀಡಲು ಅನುಮತಿ ಕೋರಿದ ಸೀರಂ

* ಲಸಿಕೆಯ ವಿಶ್ಲೇಷಣೆ ಮತ್ತು ಪರೀಕ್ಷೆಗೆ ಅನುಮೋದನೆ ನೀಡುವಂತೆಯೂ ಕಂಪನಿ ಮನವಿ

* ವಿಶ್ವದ 66 ದೇಶಗಳಲ್ಲಿ ರಿಜಿಸ್ಟರ್ ಆಗಿದೆ ಸ್ಪುಟ್ನಿಕ್

ನವದೆಹಲಿ(ಜೂ.03): ಸೀರಂ ಇನ್ಸ್ಟಿಟ್ಯೂಟ್‌ ಆಫ್‌ ಇಂಡಿಯಾ ದೇಶದಲ್ಲಿ ಕೊರೋನಾ  ಲಸಿಕೆ ,ಸ್ಪುಟ್ನಿಕ್ ವಿ ಉತ್ಪಾದನೆಗೆ ಅವಕಾಶ ನೀಡಲು ಡ್ರಗ್ ಕಂಟ್ರೋಲರ್(ಡಿಸಿಜಿಐ)ಗೆ ಅರ್ಜಿ ಸಲ್ಲಿಸಿದೆ. ಲಸಿಕೆಯ ವಿಶ್ಲೇಷಣೆ ಮತ್ತು ಪರೀಕ್ಷೆಗೆ ಅನುಮೋದನೆ ನೀಡುವಂತೆಯೂ ಕಂಪನಿ ಕೋರಿಕೆ ಸಲ್ಲಿಸಿದೆ.

ಸ್ಪುಟ್ನಿಕ್ ಲಸಿಕೆ ವಿಶ್ವದ 66 ದೇಶಗಳಲ್ಲಿ ರಿಜಿಸ್ಟರ್ ಆಗಿದೆ. ರಷ್ಯಾ ಅಭಿವೃದ್ಧಿಪಡಿಸಿರುವ ‘ಸ್ಪುಟ್ನಿಕ್ ವಿ‘ ಲಸಿಕೆಯನ್ನು ಪ್ರಸ್ತುತ ಭಾರತದಲ್ಲಿ ಹೈದರಾಬಾದ್‌ನ ಡಾ. ರೆಡ್ಡೀಸ್‌ ಲ್ಯಾಬೊರೇಟರೀಸ್‌ ತಯಾರಿಸುತ್ತಿವೆ. ಅಲ್ಲದೇ ಭಾರತ ಕೂಡಾ ದೇಶದಲ್ಲಿ ಈ ಲಸಿಕೆ ಬಳಕೆಗೆ ಏಪ್ರಿಲ್ 12 ರಂದು ಅನುಮತಿ ನೀಡಿದೆ. 

ಮೊದಲನೇ ಡೋಸ್ ಲಸಿಕೆ ಮಹತ್ವ ತೆರೆದಿಟ್ಟ ಹಿರಿಯ ಅಧಿಕಾರಿ, ಹೊಸ ಗುರಿ

‘ಜೂನ್‌ ತಿಂಗಳಲ್ಲಿ ಕೋವಿಶೀಲ್ಡ್‌ನ 10 ಕೋಟಿ ಡೋಸ್‌ಗಳನ್ನು ತಯಾರಿಸಿ ಪೂರೈಸುತ್ತೇವೆ‘ ಎಂದು ಎಸ್‌ಐಐ ಸಂಸ್ಥೆ ಸರ್ಕಾರಕ್ಕೆ ಭರವಸೆ ನೀಡಿದೆ. ಇದೇ ವೇಳೆ ಈ ಕಂಪನಿ ನೋವಾವ್ಯಾಕ್ಸ್‌ ಲಸಿಕೆಯನ್ನೂ ತಯಾರಿಸುತ್ತಿದ್ದು, ಇದಕ್ಕಾಗಿ ಅಮೆರಿಕದ ಔಷದ ನಿಯಂತ್ರಣ ಸಂಸ್ಥೆಯಿಂದ ಅನುಮತಿಯ ನಿರೀಕ್ಷೆಯಲ್ಲಿದೆ.
 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

click me!